ಮಹಾತ್ಮ ಗಾಂಧಿ ಹುಡುಕಾಡುತ್ತಿದ್ದ ಸತ್ಯವೇ ಹಿಂದುತ್ವ: ಮೋಹನ್​ ಭಾಗವತ್


Updated:March 20, 2018, 12:01 PM IST
ಮಹಾತ್ಮ ಗಾಂಧಿ ಹುಡುಕಾಡುತ್ತಿದ್ದ ಸತ್ಯವೇ ಹಿಂದುತ್ವ: ಮೋಹನ್​ ಭಾಗವತ್
ಮೋಹನ್​ ಭಾಗವತ್​​
  • Share this:
ಇರಾಂ ಆಘಾ, ನ್ಯೂಸ್ 18 ಕನ್ನಡ

ನವದೆಹಲಿ(ಮಾ.20): ಮಹಾತ್ಮ ಗಾಂಧಿ ‘ಸತ್ಯದ ಸ್ಥಿರ ಹುಡುಕಾಟದಲ್ಲಿರುವುದಾಗಿ‘ ಯಾವಾಗಲೂ ಹೇಳುತ್ತಿದ್ದರು. ಆ ಸತ್ಯವೇ ಹಿಂದುತ್ವ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ತಿಳಿಸಿದ್ದಾರೆ. ಆರ್ ಎಸ್ಎಸ್‘ನ ಮುಖವಾಣಿಗಳಾದ 'ಅರ್ಗನೈಸರ್' ಹಾಗೂ ಪಾಂಚಜನ್ಯಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಮೂಲ ಹಿಂದುತ್ವ ಹಾಗೂ ಅಕ್ರಮಣಕಾರಿ ಹಿಂದುತ್ವ ಕುರಿತು ಉತ್ತರಿಸಿದ ಅವರು, ಹಿಂದುತ್ವ ಎಂದರೆ ಒಂದೇ. ಅದು ಏನು ಮಾಡುತ್ತದೋ ಅದರ ಅರ್ಥವೂ ಅದೇ ಆಗಿರುತ್ತದೆ ಎಂದಿದ್ದಾರೆ.

ಇತ್ತೀಚೆಗೆ ಮೀರತ್ನಲ್ಲಿ ನಡೆದ ರಾಷ್ಟ್ರೋದ್ಯಯ ಸಂಘಮ್​ನಲ್ಲಿಯೂ ಇದೇ ವಿಷಯವನ್ನು ಅವರು ವಿವರಿಸಿದ್ದರು. ಹಿಂದೂಗಳು ಹೆಚ್ಚು ಮೂಲಭೂತವಾದಿಗಳಾಗಿದ್ದರೆ, ಅದರು ಅಷ್ಟೇ ಉದಾರವಾದಿಗಳೂ ಆಗಿರುತ್ತರೆಂದು ಅದರ ಅರ್ಥ ಎಂದಿದ್ದಾರೆ. ಇದನ್ನೇ ಮುಂದುವರೆಸಿ ಮಾತನಾಡಿರುವ ಭಾಗವತ್ ಭಾಗವತ್ ಮಹಾತ್ಮ ಗಾಂಧಿಯವರೂ ಮೂಲಭೂತವಾದಿ(ಕಟ್ಟರ್) ಹಿಂದೂ. ಗಾಂಧೀಜಿಯವರು ತಮ್ಮ ಹರಿಜನ್ ಪತ್ರಿಕೆಯಲ್ಲಿ ಬರೆದ ಲೇಖನವೊಂದು ಅವರೊಬ್ಬ ‘ಕಟ್ಟರ್ ಸನಾತನಿ ಹಿಂದೂ‘ ಎಂಬ ಅರ್ಥ ನೀಡುತ್ತದೆ. ಆದರೆ ಈಗ ಹಿಂದುತ್ವ ಅಳವಡಿಸಿಕೊಂಡು ಅದನ್ನು ಪಾಲಿಸುವುದು ಪ್ರತಿಯೊಬ್ಬನ ವೈಯುಕ್ತಿಕ ನಿರ್ಧಾರವಾಗಿದೆ ಎಂದಿದ್ದಾರೆ.

ಹಿಂದುತ್ವದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. "ಇತರರು ಹಿಂದುತ್ವವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಹೀಗಅಗಿ ನೀವು ನೀಡುತ್ತಿರುವ ವಿವರಣೆ ಹಾಗೂ ಪಅಲಿಸುತ್ತಿರುವ ಹಿಂದುತ್ವ ಸರಿ" ಎಂದು ನೀವು ಭಾವಿಸಬಹುದು. ಆದರೆ ನಮ್ಮ ಹಿಂದೂತ್ವ ಅವರ ಹಿಂದುತ್ವ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಸಮಾಜ ಈ ಬಗ್ಗೆ ಒಮ್ಮತವಾಗಿ ಕರೆ ನೀಡಬೇಕು. ಅದು ಈಗ ಆಗುತ್ತಿದೆ. ಹಿಂದೂತ್ವ ಏನು ಎಂಬುದರ ಕುರಿತು ಸಮಾಜದಲ್ಲಿ ಹೆಚ್ಚಿನ ಜನಕ್ಕೆ ಈಗ ಒಮ್ಮತದ ಜಾಗೃತಿ ಇದೆ ಎಂದರು.
ಹಿಂದುತ್ವದ ಕುರಿತು ವಿವರಿಸಿದ ಅವರು, ಹಿಂದುತ್ವ ಎನ್ನುವುದು ಮೌಲ್ಯಗಳ ಜೋಡಣೆಯಾಗಿದ್ದು. ಇದು ಸತ್ಯ, ಅಹಿಂಸೆ, ಬ್ರಹ್ಮಚಾರ್ಯ, ಸರ್ವಶಕ್ತನಿಗೆ ಶರಣಾಗುವುದು ಎಲ್ಲವನ್ನು ಒಳಗೊಂಡಿದೆ ಎಂದಿದ್ದಾರೆ.
ಮಹಾತ್ಮ ಗಾಂಧಿ ಮತ್ತು ಇತರ ರಾಷ್ಟ್ರೀಯ ನಾಯಕರು ತಿಳಿಸಿರುವಂತೆ ಅವರು ಯಾವ ಸತ್ಯದ ಹುಡುಕಾಟದಲ್ಲಿದ್ದರೋ ಅದುವೇ ಹಿಂದುತ್ವ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
First published: March 20, 2018, 12:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading