Murder: ಅವನು ಸೂಸೈಡ್ ಮಾಡ್ಕೊಂಡ, ಇವಳನ್ನು ಸುಟ್ಟೇ ಬಿಟ್ಟರು! Valentines Day ಸಮಯದಲ್ಲೇ ದುರಂತ ಅಂತ್ಯ

ಪ್ರೇಮಿಗಳ ದಿನದ ಈ ಹೊತ್ತಿನಲ್ಲೇ ಇದು ನಿಜಕ್ಕೂ ದುರಂತ ಪ್ರೇಮಕಥೆ. ಪ್ರೀತಿಗೆ ಇಲ್ಲದ ಆಸ್ತಿ-ಅಂತಸ್ತು, ಜಾತಿ-ಧರ್ಮ ಅವರ ಮನೆಯವರಿಗಿತ್ತು. ಮನೆ ಮಾನ ಕಳೆದಿದ್ದಾಳೆ ಅಂತ ತಿಳಿದುಕೊಂಡ ಹೆತ್ತವರು ವಿಲನ್ ಆಗಿಬಿಟ್ರು. ಮುಂದಾಗಿದ್ದು ಮಾತ್ರ ಘೋರ ಘಟನೆ. ಇದು ಯಾವ ಸಿನಿಮಾ ಕಥೆಗೂ ಕಡಿಮೆ ಇಲ್ಲದ ದುರಂತ ಪ್ರೇಮ ಕಥೆ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಉತ್ತರ ಪ್ರದೇಶ: ಹೌದು ಇಡೀ ಜಗತ್ತೇ ವ್ಯಾಲೆಂಟೈನ್ಸ್ ಡೇ (Valentines Day) ಗುಂಗಲ್ಲಿ ಮುಳುಗಿದೆ. ಇಡೀ ಪ್ರಪಂಚವೆಲ್ಲ(World)  ಪ್ರೇಮಲೋಕದಂತೆ (Love World) ಕಂಗೊಳಿಸುತ್ತಿದೆ. ಆದ್ರೆ ಅಲ್ಲಿ ಮಾತ್ರ ಮರ್ಯಾದೆಗೆ ಅಂಜಿ ಪ್ರೀತಿಯೊಂದು (Love) ಅಂತ್ಯವಾಗಿದೆ. ಎರಡು ಬೇರೆ ಬೇರೆ ಜಾತಿ ಜಾತಿಗಳ (Caste) ಯುವಕ-ಯುವತಿಯ ಮಧ್ಯೆ ಪ್ರೀತಿ ಬೆಳೆದಿದೆ. ಆದರೆ ಇದಕ್ಕೆ ಮನೆಯವರೇ ವಿಲನ್ (Villain) ಆಗಿದ್ದಾರೆ. ಮಕ್ಕಳು ನಮ್ಮ ಮನೆತನದ ಘನತೆ, ಗೌರವ, ಮಾನ, ಮರ್ಯಾದೆಯಲ್ಲ ತೆಗೆಯುತ್ತಾ ಇದ್ದಾರೆ ಅಂತ ವಿರೋಧಿಸಿದ್ದಾರೆ. ಸಾಲದ್ದಕ್ಕೆ ಇಡೀ ಜಗತ್ತೇ ಬೆಚ್ಚಿ ಬೀಳುವ ರೀತಿಯಲ್ಲಿ ಅವರಿಬ್ಬರ ಪ್ರೀತಿಗೆ ಅಂತ್ಯ (End) ಹಾಡಿದ್ದಾರೆ.

ಘಟನೆ ನಡೆದಿದ್ದು ಎಲ್ಲಿ?

ಉತ್ತರ ಪ್ರದೇಶ ರಾಜ್ಯದ ಮುಜಾಫರ್‌ನಗರದ ಭೌರಾಕಲಾನ್ ಎಂಬ ಗ್ರಾಮದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಇಲ್ಲಿ ನಡೆದ ಘಟನೆ ಕಂಡು ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ. ಮನುಷ್ಯರು ಎಷ್ಟು ಕ್ರೂರಿಯಾಗಿರಬಹುದು ಅಂತ ಚರ್ಚೆ ಮಾಡುತ್ತಿದ್ದಾರೆ. ಅವರು ಮನುಷ್ಯರಲ್ಲ ರಾಕ್ಷಸರು ಅಂತ ಶಾಪ ಹಾಕುತ್ತಿದ್ದಾರೆ.

ಆ ಊರ ಚೆಲುವ, ಈ ಊರ ಚೆಲುವೆ

ಹೌದು ಇಂದು ಎರಡು ಗ್ರಾಮಗಳ ಯುವಕ ಹಾಗೂ ಯುವತಿ ಮಧ್ಯೆ ಉಂಟಾದ ದುರಂತ ಪ್ರೇಮದ ಕಥೆ. ಕೋಮಲ ಕುಮಾರಿ ಎಂಬ ಯುವತಿ, ಶಗುನ್ ಕುಮಾರ್ ಎಂಬ ಯುವಕನನ್ನು ಪ್ರೀತಿಸುತ್ತಾ ಇದ್ದಳು. ಆದರೆ ಅವರಿಬ್ಬರು ಬೇರೆ ಬೇರೆ ಜಾತಿಯವರು. ಆದ್ರೆ ಪ್ರೀತಿಗೆ ಜಾತಿ ಯಾವ ಲೆಕ್ಕ ಹೇಳಿ? ಹಾಗಂದುಕೊಂಡೇ ಅವರಿಬ್ಬರು ಪ್ರೇಮ ಲೋಕದಲ್ಲಿ ವಿಹರಿಸುತ್ತಾ ಇದ್ದರು.

ಇದನ್ನು ಓದಿ: Crime News: ಪತ್ನಿಯನ್ನೇ ಕೊಂದು ಪೊಲೀಸರಿಗೆ ಶರಣಾದ ಪತಿ! ಬರ್ಬರ ಹತ್ಯೆಗೆ ಕಾರಣವೇನು?

ಪ್ರೇಮಿಗಳಿಗೆ ಹೆತ್ತವರೇ ವಿಲನ್ ಆಗಿಬಿಟ್ಟರು

ಯುವಕ ಹಾಗೂ ಯುವತಿಯ ಪ್ರೇಮ ವಿಚಾರ ಸಹಜವಾಗೇ ಮನೆಯವರಿಗೆ ಗೊತ್ತಾಗಿದೆ. ಇದಕ್ಕೆ ಯುವತಿ ಕೋಮಲ ಮನೆಯಲ್ಲಿ ಭಾರೀ ಗಲಾಟೆಯೇ ನಡೆದಿದೆ. ಆತ ಬೇರೆ ಜಾತಿಯವನು, ಆತನ್ನು ಪ್ತೀತಿ ಮಾಡುವುದೇ ಅಪರಾಧ ಅಂತ ಹೇಳಿದ್ದಾರೆ. ಆತನೊಂದಿಗೆ ಮತ್ತೆ ಕಾಣಿಸಿಕೊಳ್ಳದಂತೆ, ಅವನೊಂದಿಗೆ ಓಡಾಡದಂತೆ ವಾರ್ನ್ ಮಾಡಿದ್ದಾರೆ.

ಊರು ಬಿಟ್ಟು ಓಡಿ ಹೋಗಿದ್ದ ಪ್ರೇಮಿಗಳು

ಮನೆಯವರ ವಿರೋಧ ಎದುರಾಗುತ್ತಿದ್ದಂತೆಯೇ ಪ್ರೇಮಿಗಳು ಕಂಗಾಲಾಗಿದ್ದಾರೆ. ಬೇರೆ ದಾರಿ ಕಾಣದೇ ಊರು ಬಿಟ್ಟು ಓಡಿ ಹೋಗಿದ್ದಾರೆ. ಸ್ವಲ್ಪ ದಿನಗಳ ಕಾಲ ಮನೆಯವರಿಗೆ ಗೊತ್ತಾಗದಂತೆ ಇದ್ದಾರೆ. ಅದಾದ ಬಳಿಕ ಕಳೆದ ವಾರ ಯುವತಿ ಒಬ್ಬಳೇ ಊರಿಗೆ ವಾಪಸ್ಸಾಗಿದ್ದಾಳೆ. ಅಷ್ಟರಲ್ಲಾಗಲೇ ಅವರಿಬ್ಬರ ಪ್ರೇಮ ವಿಚಾರ ಊರಿಗೆಲ್ಲ ಗೊತ್ತಾಗಿ, ಕೋಮಲ ಕುಮಾರಿ ಮನೆಯವರು ಮತ್ತಷ್ಟು ಆಕ್ರೋಶಗೊಂಡಿದ್ದರು.

ಆತ್ಮಹತ್ಯೆಗೆ ಶರಣಾಗಿದ್ದ ಯುವಕ

ಇನ್ನೊಂದು ಆಘಾತಕಾರಿ ವಿಚಾರ ಅಂದರೆ ಅಷ್ಟರಲ್ಲಾಗಲೇ ಯುವಕ ಶಗುನ್ ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದ ಎನ್ನಲಾಗಿದೆ. ಆದರೆ ಆತ ಸೂಸೈಡ್ ಮಾಡಿಕೊಂಡಿದ್ದು ಯಾಕೆ ಅಂತ ಗೊತ್ತೇ ಆಗಿಲ್ಲ.

ಇದನ್ನೂ ಓದಿ: Murder Case: ಐದು ಕೊಲೆ ಮಾಡಿದ್ದ MBA, MA ಪದವೀಧರರು.. ಕೊನೆಗೆ ಸಿಕ್ಕಿಬಿದ್ದಿದ್ದೇ ರೋಚಕ!

ಮಗಳನ್ನು ಸುಟ್ಟು ಕೊಂದರಾ ಹೆತ್ತವರು?

ಇಷ್ಟೆಲ್ಲಾ ವಿಚಾರ ಊರಿನಲ್ಲೆಲ್ಲಾ ಗೊತ್ತಾಗಿದೆ. ಇದರಿಂದ ವ್ಯಗ್ರರಾದ ಕೋಮಲ ಕುಮಾರಿ ಮನೆಯವರು, ಇದಕ್ಕೆಲ್ಲ ಅಂತ್ಯ ಹಾಡಬೇಕು ಅಂತ ನಿಶ್ಚಯಿಸಿದ್ದಾರೆ. ಯುವತಿಯ ಚಿಕ್ಕಪ್ಪ, ತಾಯಿ ಸೇರಿದಂತೆ, ಮನೆಯವರೆಲ್ಲ ಖತರ್ನಾಕ್ ಪ್ಲಾನ್ ಮಾಡಿದ್ದಾರೆ.

ಕಬ್ಬಿನ ಗದ್ದೆಯಲ್ಲಿ ಸಿಕ್ಕಿತು ಯುುವತಿಯ ಶವ

ಇದೀಗ ಕೋಮಲ ಕುಮಾರಿ ಶವ ಅವರದ್ದೇ ಕಬ್ಬಿನ ಗದ್ದೆಯಲ್ಲಿ ಸಿಕ್ಕಿದೆ. ಅದೂ ಕೋಮಲ ಶವ ಸಂಪೂರ್ಣ ಸುಟ್ಟಿರುವ ರೀತಿಯಲ್ಲಿ ಪತ್ತೆಯಾಗಿದೆ. ಆಕೆಯನ್ನು ಕೊಲೆ ಮಾಡಿ, ಬಳಿಕ ಸಾಕ್ಷ್ಯ ನಾಶ ಮಾಡಲು ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.  ಸದ್ಯ ಯುವತಿಯ ಚಿಕ್ಕಪ್ಪ, ತಾಯಿ ಸೇರಿದಂತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಇದೀಗ ತನಿಖೆ ನಡೆಯುತ್ತಿದ್ದು, ಘಟನೆ ಬಗ್ಗೆ ತಿಳಿದ ಜನರೆಲ್ಲ ಬೆಚ್ಚಿ ಬಿದ್ದಿದ್ದಾರೆ.
First published: