• Home
  • »
  • News
  • »
  • national-international
  • »
  • Tirupati: ತಿರುಪತಿಯಲ್ಲಿ ಪ್ರಸಾದದ ಬೆಲೆ ₹500ಕ್ಕೆ ಏರಿಕೆ! ಯಾವುದಕ್ಕೆ ಎಷ್ಟು ಬೆಲೆ ನಿಗದಿ ಮಾಡಿದೆ ಟಿಟಿಡಿ?

Tirupati: ತಿರುಪತಿಯಲ್ಲಿ ಪ್ರಸಾದದ ಬೆಲೆ ₹500ಕ್ಕೆ ಏರಿಕೆ! ಯಾವುದಕ್ಕೆ ಎಷ್ಟು ಬೆಲೆ ನಿಗದಿ ಮಾಡಿದೆ ಟಿಟಿಡಿ?

ತಿರುಪತಿ ವೆಂಕಟೇಶ್ವರ ಸನ್ನಿಧಿ

ತಿರುಪತಿ ವೆಂಕಟೇಶ್ವರ ಸನ್ನಿಧಿ

ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (TTD) ತಿರುಮಲ ದೇವಸ್ಥಾನದಲ್ಲಿ ತನ್ನ ಜಿಲೇಬಿ ಪ್ರಸಾದದ ಬೆಲೆಯನ್ನು 100 ರಿಂದ 500 ರೂಗೆ ಏರಿಕೆ ಮಾಡಿದೆ.

  • Share this:

ತಿರುಪತಿ (ಫೆ.23): ತಿರುಮಲ ತಿರುಪತಿ ದೇವಸ್ಥಾನ (Tirumala Tirupati Temple) ಪ್ರಸಾದ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ತಿರುಪತಿ ಪ್ರಸಾದವನ್ನು (Prasada) ಜನರು ಕೇಳಿ ಪಡೆದು ತಿನ್ನುತ್ತಾರೆ. ಯಾರೇ ತಿರುಪತಿಗೆ ಹೋದ್ರು ನಮಗೂ ಪ್ರಸಾದ ತನ್ನಿ ಅಂತ ಹಲವರು ದುಡ್ಡು ಕೊಟ್ಟು ಕಳುಹಿಸ್ತಾರೆ. ಇಷ್ಟೆ ಅಲ್ಲದೇ ತಿರುಪತಿ ಪ್ರಸಾದ ಹೊರರಾಜ್ಯಗಳು ರವಾನೆ ಆಗುತ್ತೆ. ಕೊರೊನಾ ಸಮಯದಲ್ಲಿ ಆನ್​ಲೈನ್​ (Online) ಮೂಲಕ ಜನರು ಅರ್ಚನೆ, ಅಭಿಷೇಕ ಮಾಡಿದ್ರೆ ಅವರಿಗೂ ಪ್ರಸಾದವನ್ನು ಕಳುಹಿಸಲಾಗುತ್ತೆ. ತಿರುಪತಿ ಲಡ್ಡು ಪ್ರಸಾದ (Laddu Prasada) ತುಂಬಾ ವಿಶೇಷವಾದ ರುಚಿ ಹೊಂದಿದೆ. ತಿರುಪತಿಗೆ ಬಂದ ಪ್ರತಿ ಭಕ್ತರು ಲಡ್ಡು ತೆಗೆದುಕೊಂಡೇ ಹೋಗೋದು. ಟಿಟಿಡಿ ಲಡ್ಡು ಪ್ರಸಾದ ಬೆಲೆಯನ್ನು ಏರಿಕೆ ಮಾಡಿಲ್ಲ. ಜಿಲೇಬಿ (Jilebi) ಪ್ರಸಾದದ ಬೆಲೆಯನ್ನು ಹೆಚ್ಚಿಸಿದೆ. 100 ರೂಪಾಯಿ ಇದ್ದ ಜಿಲೇಬಿ ಬೆಲೆ 500 ರೂಪಾಯಿಗೆ ಏರಿಕೆಯಾಗಿದೆ.


ಜಿಲೇಬಿ ಪ್ರಸಾದದ ಬೆಲೆ 500ಕ್ಕೆ ಏರಿಕೆ


ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (TTD) ತಿರುಮಲ ದೇವಸ್ಥಾನದಲ್ಲಿ ತನ್ನ ಜಿಲೇಬಿ ಪ್ರಸಾದದ ಬೆಲೆಯನ್ನು 100 ರಿಂದ 500 ರೂಗೆ ಏರಿಕೆ ಮಾಡಿದ್ದು ದೇವಸ್ಥಾನದಲ್ಲಿ ಆರ್ಜಿತ ಸೇವೆ ಮತ್ತೆ ಬರುವಾಗ ಪರಿಷ್ಕೃತ ಬೆಲೆ ಜಾರಿಗೆ ಬರಲಿದೆ. ಆದಾಗ್ಯೂ, ಈ ಗುರುವಾರ ವಿಶೇಷ ಪ್ರಸಾದವನ್ನು ತೆರೆದ ಕೌಂಟರ್‌ಗಳಿಂದ ಭಕ್ತರಿಗೆ ವಿತರಿಸಲಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಪ್ರಸಾದವನ್ನು ತಯಾರಿಸಲು, ತಿರುಮಲ ದೇವಾಲಯದ ಒಳಗಿನ ಪಾಡಿ ಪೋಟುನಿಂದ ದೇವಾಲಯದ ಹೊರಗೆ ಹೊಸದಾಗಿ ನಿರ್ಮಿಸಲಾದ ಬೂಂದಿ ಕಿಚನ್​​ಗೆ ಬದಲಾಯಿಸಲಾಗುತ್ತದೆ.


ಇದನ್ನೂ ಓದಿ: TTD: ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಬರೋಬ್ಬರಿ 9.2ಕೋಟಿ ರೂ ದಾನ ಮಾಡಿದ ಮಹಿಳೆ; ಕಾರಣ ಇದು!


ಮಧ್ಯವರ್ತಿಗಳು ಮಾರಾಟಕ್ಕೆ ಬ್ರೇಕ್​


ತಿರುಪತಿಯಲ್ಲಿ ಮಧ್ಯವರ್ತಿಗಳು ಕಾಳ ದಂಧೆ ಹೆಚ್ಚಾಗಿದೆ. ಒಂದು ಸೆಟ್​ ಪ್ರಸಾದವನ್ನು ಅಧಿಕ ಬೆಲೆಗೆ ಮಾರಾಟ ಮಾಡಿದ್ದಾರೆ. ಇದನ್ನು ತಡೆಯಲು ಟಿಟಿಡಿ ಮುಂದಾಗಿದೆ. ಜೂನ್ 2021 ರಲ್ಲಿ, ಟಿಟಿಡಿ ಆಡಳಿತದ ಉನ್ನತಾಧಿಕಾರಿಗಳು ಟ್ರಸ್ಟ್ ಬೋರ್ಡ್‌ಗೆ ಪ್ರಸ್ತುತ 100ಕ್ಕೆ ಮಾರಾಟವಾಗುತ್ತಿರುವ ಜಿಲೇಬಿ ಮತ್ತು ಥೆಂಥೋಲವನ್ನು 2000ಕ್ಕೆ ಮಾರುವಂತೆ ಪ್ರಸ್ತಾಪವಿರಿಸಿದ್ದರು. ಜಿಲೇಬಿ ಮತ್ತು ಥೆಂಥೋಲ ಸೆಟ್ ತಯಾರಿಸಲು ಟಿಟಿಡಿ ಮಾಡಿದ ವೆಚ್ಚ ₹147.50 ಆಗಿದೆ.


ಟ್ರಸ್ಟ್ ಬೋರ್ಡ್ ವಿವರವಾದ ಚರ್ಚೆಯನ್ನು ನಡೆಸಿತು ಮತ್ತು ಬೆಲೆಯನ್ನು 500 ರೂ.ಗೆ ಹೆಚ್ಚಿಸಲು ನಿರ್ಧರಿಸಿತು. ಬೆಲೆ ಏರಿಕೆಯಿಂದಾಗಿ ಟಿಟಿಡಿ ಶೇ 239 ರಷ್ಟು ಹೆಚ್ಚುವರಿ ಲಾಭವನ್ನು ಪಡೆಯುತ್ತದೆ.  ಆಂಧ್ರಪ್ರದೇಶದ ಸಾರ್ವಜನಿಕ ಖಾತೆಗಳ ಸಮಿತಿಯ ಅಧ್ಯಕ್ಷ ಪಯ್ಯವುಲ ಕೇಶವ್ ಅವರು ಟಿಟಿಡಿ ಟ್ರಸ್ಟ್ ಬೋರ್ಡ್ ಕಾಳದಂಧೆ ನಿಲ್ಲಿಸುವ ಉದ್ದೇಶದಿಂದ ಐದು ಪಟ್ಟು ಹೆಚ್ಚಿಸಿದ್ದಾರೆ ಎಂದು ಹೇಳಿದರು.


ಇದನ್ನೂ ಓದಿ: Tirupati: ತಿರುಪತಿ ದೇಗುಲದ ಆವರಣದಲ್ಲಿ ಸಿಗಲ್ಲ ಊಟ, ತಿಂಡಿ, ಕಾಫಿ, ಟಿಟಿಡಿ ಹೊಸ ರೂಲ್ಸ್ ಏನು ಗೊತ್ತಾ​!?


ಸಬ್ಸಿಡಿ ದರದಲ್ಲಿ ಪ್ರಸಾದ ನೀಡಲಾಗುತ್ತೆ


ಟಿಟಿಡಿ ವಿಶ್ವದ ಅತ್ಯಂತ ಗೌರವಾನ್ವಿತ ಹಿಂದೂ ಧಾರ್ವಿುಕ ಸಂಸ್ಥೆಗಳಲ್ಲಿ ಒಂದಾಗಿದೆ, ಇದು ಸಬ್ಸಿಡಿ ದರದಲ್ಲಿ ಅಥವಾ ಕನಿಷ್ಠ ವೆಚ್ಚದ ಆಧಾರದ ಮೇಲೆ ಪ್ರಸಾದವನ್ನು ನೀಡಬೇಕು. ಆದರೆ ಇಲ್ಲಿ ಟಿಟಿಡಿ ಜಿಲೇಬಿ-ಥೆಂಥೋಲವನ್ನು ಮಾರಾಟ ಮಾಡುವ ಮೂಲಕ ಶೇ 239 ಲಾಭ ಗಳಿಸಲು ಪ್ರಯತ್ನಿಸುತ್ತಿದೆ. ಪ್ರಸಾದವು ಅದರ ತಯಾರಿಕೆಯ ವೆಚ್ಚಕ್ಕಿಂತ ಹೆಚ್ಚು, ಇದು ಅತ್ಯಂತ ಆಕ್ಷೇಪಾರ್ಹವಾಗಿದೆ, ”ಎಂದು ಟಿಡಿಪಿ ಶಾಸಕ ಹೇಳಿದರು.


ಟಿಟಿಡಿ ಟ್ರಸ್ಟ್‌ನ ಮಾಜಿ ಸದಸ್ಯ ಜಿ ಭಾನುಪ್ರಕಾಶ್ ರೆಡ್ಡಿ ಕೂಡ ಬೆಲೆ ಏರಿಕೆ ತಪ್ಪು ಎಂದಿದ್ದಾರೆ ಭಕ್ತರಿಗೆ ಸಬ್ಸಿಡಿ ದರದಲ್ಲಿ ಪ್ರಸಾದವನ್ನು ಯಾವಾಗಲೂ ನೀಡಬೇಕು ಆದರೆ ಇಲ್ಲಿ ಟಿಟಿಡಿ ಹೆಚ್ಚಿನ ಬೇಡಿಕೆ ಇದೆ ಎಂಬ ಕಾರಣಕ್ಕೆ ಭಕ್ತರನ್ನು ಸುಲಿಗೆ ಮಾಡುತ್ತಿದೆ, ಇದು ಆಕ್ಷೇಪಾರ್ಹವಾಗಿದೆ”ಎಂದು ಹೇಳಿದರು. ತಿರುಮಲ ತಿರುಪತಿ ದೇವಸ್ಥಾನ ಆಡಳಿತ ಮಂಡಳಿ (TTD) ತಿರುಮಲ ದೇವಸ್ಥಾನದಲ್ಲಿ ತನ್ನ ಜಿಲೇಬಿ ಪ್ರಸಾದದ ಬೆಲೆಯನ್ನು 100 ರಿಂದ 500 ರೂಗೆ ಏರಿಕೆ ಮಾಡಿದ್ದು ಭಕ್ತರಿಗೂ ಹೊರೆಯಾಗಲಿದೆ.

Published by:Pavana HS
First published: