• Home
  • »
  • News
  • »
  • national-international
  • »
  • Murder: ನಾನ್‌ ವೆಜ್‌ ಮಾಡಿಲ್ಲ ಅಂತ ಪತ್ನಿಗೆ ಹೊಡೆದ ಪತಿ! ಗಂಡ ಹೆಂಡತಿ ಜಗಳ ಬಿಡಿಸಲು ಬಂದವನಿಗೆ ಸಾವೇ ಗತಿ!

Murder: ನಾನ್‌ ವೆಜ್‌ ಮಾಡಿಲ್ಲ ಅಂತ ಪತ್ನಿಗೆ ಹೊಡೆದ ಪತಿ! ಗಂಡ ಹೆಂಡತಿ ಜಗಳ ಬಿಡಿಸಲು ಬಂದವನಿಗೆ ಸಾವೇ ಗತಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವ್ಯಕ್ತಿಯೊಬ್ಬ ತನ್ನ ಮತ್ತು ಅವನ ಹೆಂಡತಿಯ ನಡುವಿನ ಜಗಳದಲ್ಲಿ ಮಧ್ಯಪ್ರವೇಶಿಸಿದ ತನ್ನ ನೆರೆ ಮನೆಯ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾನೆ. ಕುರಿ ಮಾಂಸ ಬೇಯಿಸುವ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆ ನಡೆದಿದೆ.

  • Share this:

ಭೋಪಾಲ್, ಮಧ್ಯಪ್ರದೇಶ: ಗಂಡ ಹೆಂಡತಿ ಜಗಳದಲ್ಲಿ (husband and wife quarrel) ಕೂಸು ಬಡವಾಯ್ತು ಅಂತಾರೆ. ಆದರೆ ಇಲ್ಲಿ ಗಂಡ ಹೆಂಡತಿ ಜಗಳದಲ್ಲಿ ಮೂರನೇ ವ್ಯಕ್ತಿಯೊಬ್ಬ (third person) ಕೊಲೆಯಾಗಿ (murder) ಹೋಗಿದ್ದಾನೆ. ಮಧ್ಯಪ್ರದೇಶದ (Madhya Pradesh) ರಾಜಧಾನಿ ಭೋಪಾಲ್ (Bhopal) ಸಮೀಪದ ಊರಿನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬ ನಾನ್ ವೆಜ್‌ ಅಡುಗೆ (Non veg) ಮಾಡಿಲ್ಲ ಅಂತ ಹೆಂಡತಿಯನ್ನು ಬೀದಿಯಲ್ಲಿ ಎಳೆದುಕೊಂಡು ಬಂದು ಥಳಿಸಿದ್ದಾನೆ. ಈ ವೇಳೆ ಪಕ್ಕದ ಮನೆಯವನೊಬ್ಬ ಬಂದು ಗಂಡ ಹೆಂಡತಿ ಜಗಳ ಬಿಡಿಸಲು ಪ್ರಯತ್ನಿಸಿದ್ದಾನೆ. ಈಗ ಜಗಳ ವಿಕೋಪಕ್ಕೆ ಹೋಗಿದೆ. ಕೊನೆಗೆ ಜಗಳ ಬಿಡಿಸಲು ಬಂದ ವ್ಯಕ್ತಿಯನ್ನೇ ಈ ಗಂಡ ಹೊಡೆದು ಕೊಂದಿದ್ದಾನೆ!


ಕುರಿ ಮಾಂಸದ ಅಡುಗೆ ವಿಚಾರಕ್ಕೆ ಗಂಡ ಹೆಂಡತಿ ಜಗಳ


ಮಧ್ಯಪ್ರದೇಶದ ಭೋಪಾಲ್‌ನಲ್ಲಿ ವ್ಯಕ್ತಿಯೊಬ್ಬ ತನ್ನ ಮತ್ತು ಅವನ ಹೆಂಡತಿಯ ನಡುವಿನ ಜಗಳದಲ್ಲಿ ಮಧ್ಯಪ್ರವೇಶಿಸಿದ ತನ್ನ ನೆರೆ ಮನೆಯ ವ್ಯಕ್ತಿಯನ್ನು ಹೊಡೆದು ಕೊಂದಿದ್ದಾನೆ. ಕುರಿ ಮಾಂಸ ಬೇಯಿಸುವ ವಿಚಾರಕ್ಕೆ ಗಂಡ ಹೆಂಡತಿ ನಡುವೆ ಗಲಾಟೆ ನಡೆದಿದೆ. ಈ ವೇಳೆ ಜಗಳ ಬಿಡಿಸಲು ಬಂದ ಮೂರನೇ ವ್ಯಕ್ತಿ ಕೊಲೆಯಾಗಿದ್ದಾನೆ.


ಹೆಂಡತಿಯನ್ನು ಎಳೆದು ತಂದು ಹೊಡೆದ ಗಂಡ


ಕೊಲೆ ಮಾಡಿದ ವ್ಯಕ್ತಿಯನ್ನು ಪಪ್ಪು ಎಂದು ಗುರುತಿಸಲಾಗಿದ್ದು, ಬಿಲ್ಲು ಎಂಬಾತನೇ ಕೊಲೆಯಾದ ದುರ್ದೈವಿ. ಪಪ್ಪು ಕುರಿಯ ಮಾಂಸದ ಅಡುಗೆ ಮಾಡು ಅಂತ ತನ್ನ ಹೆಂಡತಿಗೆ ಹೇಳಿದ್ದ. ಆದರೆ ಆಕೆ ಅಂದು ವಿಶೇಷ ಪೂಜೆ ಇದೆ ಅಂತ ಮಾಂಸದ ಅಡುಗೆ ಮಾಡಿರಲಿಲ್ಲ. ಸಂಜೆ ಮರಳಿ ಬಂದ ಪಪ್ಪು ಮಾಂಸದ ಅಡುಗೆ ಮಾಡಿಲ್ಲ ಅಂತ ಹೆಂಡತಿ ಜೊತೆ ಜಗಳ ತೆಗೆದು, ಬೀದಿಗೆ ಅವಳನ್ನು ಎಳೆದುಕೊಂಡು ಬಂದು, ಹೊಡೆದಿದ್ದಾನೆ.


ಇದನ್ನೂ ಓದಿ: Karva Chauth Viral Video: ಪ್ರೇಯಸಿ ಜೊತೆ ಕರ್ವಾ ಚೌತ್ ಶಾಪಿಂಗ್, ಬೀದಿಯಲ್ಲೇ ಗಂಡನ ಗ್ರಹಚಾರ ಬಿಡಿಸಿದ ಪತ್ನಿ! ವೈರಲ್ ವಿಡಿಯೋ ಇಲ್ಲಿದೆ ನೋಡಿ


ಗಂಡ ಹೆಂಡತಿ ಜಗಳ ಬಿಡಿಸಲು ಬಂದ ಮೂರನೇ ವ್ಯಕ್ತಿ


ಪಪ್ಪು ಹಾಗೂ ಆತನ ಹೆಂಡತಿಯ ನಡುವಿನ ಜಗಳವನ್ನು ತಡೆಯಲು ನೆರೆಮನೆ ನಿವಾಸಿ ಬಿಲ್ಲು ಎಂಬಾತ ಪ್ರಯತ್ನಿಸಿದ್ದಾನೆ. ಗಲಾಟೆಯನ್ನು ಕೇಳಿದ ಬಿಲ್ಲು ಜಗಳ ಬಿಡಿಸಲು ಹೋಗಿ, ಇಬ್ಬರಿಗೂ ಬುದ್ಧಿವಾದ ಹೇಳಿದ್ದಾನೆ. ಕೊನೆಗೆ  ಸಮಸ್ಯೆಯನ್ನು ಇತ್ಯರ್ಥಪಡಿಸಿ ತನ್ನ ಮನೆಗೆ ಹಿಂದಿರುಗಿದ್ದಾನೆ. ಆದರೆ, ಬಳಿಕ ಪಪ್ಪು ಮನೆಗೆ ತೆರಳಿ ಆತನನ್ನು ಹೊಡೆದು ಕೊಂದಿದ್ದಾನೆ.


ಕೋಪದ ಭರದಲ್ಲಿ ಹೊಡೆದು ಕೊಂದ ವ್ಯಕ್ತಿ


ಕೋಪದ ಭರದಲ್ಲಿ ಆರೋಪಿ ಆತನ ಆತನ ತೆರಳಿ ಆತನನ್ನು ಹೊಡೆದು ಕೊಂದಿದ್ದಾನೆ. ಆರೋಪಿಯು ಆತನ ತಲೆಯ ಹಿಂಭಾಗಕ್ಕೆ ಭಾರವಾದ ಕೋಲಿನಿಂದ ಹೊಡೆದಿದ್ದಾವೆ. ಆತ ನೆಲದ ಮೇಲೆ ಬಿದ್ದಾಗ ಅವನ ಮುಖಕ್ಕೆ ಮತ್ತೊಂದು ಪೆಟ್ಟು ನೀಡಿದ್ದಾನೆ. ಅಷ್ಟರಲ್ಲಿ ಶಬ್ದ ಕೇಳಿ ಅಕ್ಕಪಕ್ಕದವರು ಜಮಾಯಿಸಿದ ನಂತರ ಪಪ್ಪು ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಿಲ್ಲು ಅವರನ್ನು ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.


ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!


ಆರೋಪಿ ಪಪ್ಪು ವಿರುದ್ಧ ಪ್ರಕರಣ ದಾಖಲು


ಬಿಲ್ಲು ಸಾವಿನ ನಂತರ ಪತ್ನಿ ನೀಡಿದ ಹೇಳಿಕೆಯ ಆಧಾರದ ಮೇಲೆ ಪೊಲೀಸರು ಪಪ್ಪು ವಿರುದ್ಧ ದೂರು ದಾಖಲಿಸಿದ್ದಾರೆ. ಇನ್ನು ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ ಪಪ್ಪುವನ್ನು ಪೊಲೀಸರು ಬಂಧಿಸಿದ್ದಾರೆ.

Published by:Annappa Achari
First published: