Burqa: ತಾಲಿಬಾನ್​ಗಳು ಮರಳುತ್ತಿದ್ದಂತೆ ಅಫ್ಘಾನ್​ನಲ್ಲಿ ಗಗನಕ್ಕೇರಿದ ಬುರ್ಖಾ ಬೆಲೆ!

ಬುರ್ಖಾ

ಬುರ್ಖಾ

ಮಹಿಳೆಯರಿಗೆ ತಮ್ಮ ಕನಿಷ್ಟ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ

  • Share this:

20 ವರ್ಷಗಳ ಬಳಿಕ ಮತ್ತೆ ತಾಲಿಬಾನ್​ ಅಫ್ಘಾನ್​ ವಶಕ್ಕೆ ಪಡೆದಿದೆ. ಈ ಬಾರಿ ಶಾಂತಿಯ ಭರವಸೆ ನೀಡಿ ತಾಲಿಬಾನ್​ ಅಧಿಕಾರವನ್ನು ವಶಕ್ಕೆ ಪಡೆದಿದ್ದು, ಜನರ ಜೀವನ ಮಟ್ಟ ಸುಧಾರಿಸಿ ಹೊಸ ಯುಗ ಆರಂಭ ಮಾಡುವುದಾಗಿ ಹೇಳಿದೆ. ಆದರೆ, ಜನರ ಮನಸ್ಸಿನಲ್ಲಿ ಮಾತ್ರ ತಾಲಿಬಾನ್​ನ ಕ್ರೂರ ಆಡಳಿತದ ಕರಾಳ ನೆನಪು ಇನ್ನು ಹಸಿಯಾಗಿದೆ. ಇದೇ ಕಾರಣಕ್ಕೆ ಅಪ್ಘಾನ್​ ಜನರು ದೇಶ ತೊರೆಯಲು ಮುಂದಾಗಿದ್ದಾರೆ. ಅದರಲ್ಲೂ ಮಹಿಳೆಯರಿಗೆ ತಮ್ಮ ಕನಿಷ್ಟ ನಾಗರಿಕ ಹಕ್ಕುಗಳನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ ಅನೇಕ ಹೋರಾಟದಲ್ಲಿ ಪಡೆದ ಈ ಹಕ್ಕನ್ನು ತಾಲಿಬಾನ್​ಗಳು ಕಸಿದುಕೊಳ್ಳುವ ಭೀತಿ ಎದುರಾಗಿದೆ.


ಇಸ್ಲಾಂ ಸಂಪ್ರದಾಯವಾದಿಗಳ ಭಯ ಈಗ ದೇಶದಲ್ಲಿ ಹೆಚ್ಚಾಗಿದ್ದು, ಮಹಿಳೆಯರು ಬುರ್ಖಾ ಖರೀದಿಗೆ ಮುಗಿಬಿದ್ದಿದ್ದಾರೆ. ಇದೇ ಹಿನ್ನಲೆ ಬುರ್ಖಾ ಬೆಲೆ ಹತ್ತು ಪಟ್ಟು ಹೆಚ್ಚಾಗಿ ಗಗನ ಮುಖಿಯಾಗಿದೆ.


ಈ ಹಿಂದೆ ತಾಲಿಬಾನ್​ ಆಡಳಿತದ ವೇಳೆ ಕೂಡ ಮಹಿಳೆಯರು ತಮ್ಮ ದೇಹವನ್ನು ಸಂಪೂರ್ಣವಾಗಿ ಖುರ್ಖಾದಿಂದ ಮುಚ್ಚಿಕೊಳ್ಳಬೇಕಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ವಯೋ ವೃದ್ಧರವರೆಗೆ ಬುರ್ಖಾ ಧರಿಸುವುದು ಕಡ್ಡಾಯವಾಗಿತ್ತು. ಮಹಿಳೆಯರು ಶಾಲೆ, ಕೆಲಸ, ಪುರಷ ಸಂಬಂಧಿಕರ ಮನೆಗೆ ಹೋಗುವುದನ್ನು ನಿರ್ಬಂಧಿಸಲಾಗಿತ್ತು
ಈಗ ಮತ್ತೆ ತಾಲಿಬಾನ್​ಗಳು ಅಧಿಕಾರ ಹಿಡಿದಿದ್ದು, ಯುವ ಜನತೆಯಲ್ಲಿನ ಆಧುನಿಯ ಪ್ರಜಾಪ್ರಭುತ್ವ ರಾಜ್ಯ ನಿರ್ಮಿಸುವ ಆಶಯ ಹೊರಡು ಹೋಗಿದೆ, ಈ ಹಿನ್ನಲೆ ಮತ್ತೆ ಮಹಿಳೆಯರು ಬುರ್ಖಾ ಸಂಪ್ರದಾಯಕ್ಕೆ ಮರಳುತ್ತಿದ್ದಾರೆ. ಕಾಬೂಲ್​ನಲ್ಲಿ ಬುರ್ಖಾ ಬೆಲೆ ಏರಿಕೆ ಕಂಡಿದೆ.


ಈ ಕುರಿತು ಮಾತನಾಡಿರುವ ಕಾಬೂಲ್​ನ ಮಹಿಳೆಯೊಬ್ಬರು, ಮನೆಯಲ್ಲಿ ಒಂದು ಅಥವಾ ಎರಡು ಬುರ್ಖಾ ಇದೆ, ಇದನ್ನು ನಾನು, ನನ್ನ ಸಹೋದರಿ ಮತ್ತು ಅಮ್ಮ ಹಂಚಿಕೊಳ್ಳುತ್ತಿದ್ದೇವು. ಆದರೆ, ಈಗ ಪರಿಸ್ಥಿತಿ ಬದಲಾಗಿದ್ದು, ಬುರ್ಖಾ ಖರೀದಿಗೆ ಮುಂದಾಗಿದ್ದೇವೆ. ಒಂದು ವೇಳೆ ನಮಗೆ ಬುರ್ಖಾ ಸಿಗದಿದ್ದಾರೆ. ಬೆಡ್​ ಶೀಟ್​ ಅಥವಾ ದೊಡ್ಡದಾದ ಬಟ್ಟೆಯಿಂದ ದೊಡ್ಡ ಸ್ಕರ್ಫ್​ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ ಎಂದು ಸಿಎನ್​ಎನ್​ ವರದಿ ಮಾಡಿದೆ.


ಇದನ್ನು ಓದಿ: ರಾಹುಲ್​ ನನ್ನ ಮಗ; ಕಾಂಗ್ರೆಸ್​ ನಾಯಕನ ಕೈ ಹಿಡಿದು ಭಾವುಕರಾದ ನರ್ಸ್​ ರಾಜಮ್ಮ


ಆದರೆ, ಈ ಬಾರಿ ತಾಲಿಬಾನ್​ಗಳು ಮಹಿಳೆಯರಿಗೆ ಶಿಕ್ಷಣ ನೀಡುವ ಭರವಸೆ ನೀಡಿದ್ದಾರೆ. ಸ್ಥಳೀಯ ಕಮಾಂಡರ್‌ಗಳು ಮತ್ತು ಸಮುದಾಯಗಳನ್ನು ಅವಲಂಬಿಸಿ ನಿಯಮಗಳು ಬದಲಾಗುತ್ತವೆ ಎಂದು ತಿಳಿಸಿದ್ದಾರೆ.


ಅಫ್ಘಾನಿಸ್ತಾನದ ಹೆರಾತ್‌ನಲ್ಲಿ ಸ್ಥಳೀಯ ಎನ್‌ಜಿಒವೊಂದರಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಪದವೀಧರ ಮಹಿಳೆಯೊಬ್ಬರು ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಉದ್ವಿಘ್ನ ಪರಿಸ್ಥಿತಿ ಕಾರಣದಿಂದ ವಾರಗಳಿಂದ ಮನೆ ಬಿಟ್ಟು ಹೋಗಿಲ್ಲ ಎಂದಿದ್ದಾರೆ. ಅಷ್ಟೇ ಅಲ್ಲದೇ ನಾನು ತಾಲಿಬಾನ್​ ಹೋರಾಟಗಾರರನ್ನು ಎದುರಿಸಲು ಸಾಧ್ಯವಿಲ್ಲ. ನನಗೆ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಮಹಿಳೆಯರು ಮತ್ತು ಹೆಣ್ಣು ಮಕ್ಕಳ ಬಗ್ಗೆ ಅವರಿಗೆ ಇರುವ ಅಭಿಪ್ರಾಯವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಅವರು ಇಂದಿಗೂ ಮಹಿಳೆಯರು ಮನೆಯಲ್ಲಿಯೇ ಇರಬೇಕು ಎಂದು ಬಯಸುತ್ತಾರೆ ಎಂದಿದ್ದಾರೆ ಎಂದು ಎಪಿ ವರದಿ ಮಾಡಿದೆ.


ಇದೇ ವೇಳೆ ಅವರು ತಾವು ಬುರ್ಖಾವನ್ನು ಧರಿಸಲು ಇಚ್ಛಿಸುವುದಿಲ್ಲ. ಅದೇನಾದರೂ ಆಗಲಿ ನಾನು ನನ್ನ ಹಕ್ಕಿಗೆ ಹೋರಾಡುತ್ತೇವೆ ಎಂದಿದ್ದಾರೆ.


ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

top videos
    First published: