• Home
 • »
 • News
 • »
 • national-international
 • »
 • Taliban: ಜನಪದ ಗಾಯಕನನ್ನು ಕೊಂದ ತಾಲಿಬಾನ್​ ಉಗ್ರರು; ಮಹಿಳಾ ಪತ್ರಕರ್ತರಿಗೂ ನಿಷೇಧ

Taliban: ಜನಪದ ಗಾಯಕನನ್ನು ಕೊಂದ ತಾಲಿಬಾನ್​ ಉಗ್ರರು; ಮಹಿಳಾ ಪತ್ರಕರ್ತರಿಗೂ ನಿಷೇಧ

ತಾಲಿಬಾನ್ ಉಗ್ರರು

ತಾಲಿಬಾನ್ ಉಗ್ರರು

“ನಾವು ಮತ್ತೆ ನಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತೇವೆ ಮತ್ತು 20 ವರ್ಷಗಳಷ್ಟು ಹಿಂದಕ್ಕೆ ಪ್ರಯಾಣಿಸುತ್ತೇವೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ 20 ವರ್ಷಗಳ ಹೋರಾಟದ ನಂತರ, ನಾವು ಮತ್ತೆ ಬುರ್ಖಾ ತೊಟ್ಟುಕೊಂಡೆ ಜೀವನ ನಡೆಸ ಬೇಕಾದ ಅನಿವಾರ್ಯತೆಗೆ ಬಂದು ನಿಂತಿದ್ದೇವೆ.

ಮುಂದೆ ಓದಿ ...
 • Share this:

  ತಾಲಿಬಾನ್ ಉಗ್ರಗಾಮಿ ಅಫಘಾನಿಸ್ತಾನದ ಜಾನಪದ ಗಾಯಕನನ್ನು ಪ್ರಕ್ಷುಬ್ಧ ವಾತಾವರಣವಿದ್ದ ಪರ್ವತ ಪ್ರಾಂತ್ಯದಲ್ಲಿ ಗುಂಡಿಕ್ಕಿ ಕೊಂದಿದ್ದಾನೆ.  ಈ ವಿಚಾರವನ್ನು ಫವಾದ್ ಅಂದರಬಿಯವರ ಕುಟುಂಬದ ಸದಸ್ಯರು ಭಾನುವಾರದಂದು ಈ ರೀತಿಯ ಹೇಳಿಕೆ ನೀಡಿದ್ದಾರೆ. 


  ತಾಲಿಬಾನ್​ ಉಗ್ರರ ಮಿಲಿಟರಿ ಸರ್ಕಾರವನ್ನು ಉರುಳಿಸಿದ ನಂತರ ಈ ದಂಗೆಕೋರರು ದೇಶದಲ್ಲಿ ತಮ್ಮ ದಬ್ಬಾಳಿಕೆಯನ್ನು ಮತ್ತೆ ಮಾಡುತ್ತಾರೆ ಎನ್ನುವ  ಆತಂಕ  ಈ ಜನಪದ ಗಾಯಕನ ಹತ್ಯೆಯ ನಂತರ ಮತ್ತೆ ಹುಟ್ಟಿಕೊಂಡಿದೆ ಎಂದು ಹೇಳಲಾಗುತ್ತಿದೆ. ಅಂದರಬಿ ಕಣಿವೆಯಲ್ಲಿ ಈ ಹತ್ಯೆ ಶುಕ್ರವಾರ ಸಂಭವಿಸಿದ್ದು, ಆದ ಕಾರಣ ಆ ಕಣಿವೆಗೆ ಮರಣ ಹೊಂದಿದ ಗಾಯಕನ ಹೆಸರನ್ನೇ ಇಡಲಾಗಿದೆ ಎಂದು ವರದಿಯಾಗಿದೆ.


  ಈ ಹತ್ಯೆಯು ನಡೆದ ಸ್ಥಳ ಕಾಬೂಲ್‌ನ ಉತ್ತರಕ್ಕೆ 100 ಕಿಲೋಮೀಟರ್ (60 ಮೈಲಿ) ಬಾಗ್ಲಾನ್ ಪ್ರಾಂತ್ಯದ ಪ್ರದೇಶದಲ್ಲಿದೆ. ತಾಲಿಬಾನ್ ಸ್ವಾಧೀನದಿಂದ ಕಣಿವೆಯ ಜನಜೀವನದಲ್ಲಿ ಸಾಕಷ್ಟು ಏರುಪೇರು ಉಂಟಾಗಿದೆ, ಈ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ತಾಲಿಬಾನ್ ಆಳ್ವಿಕೆಯನ್ನು ವಿರೋಧಿಸಿದ ಸೇನಾ ಹೋರಾಟಗಾರರು ತಮ್ಮ ನಿಯಂತ್ರಣಕ್ಕೆ ಇವುಗಳನ್ನು ತೆಗೆದುಕೊಂಡಿದ್ದಾರೆ.


  ತಾಲಿಬಾನ್ ಉಗ್ರರು ಈ ಹಿಂದೆ ಅಂದರಬಿಯ ಮನೆಗೆ ಬಂದು ಅವರನ್ನು ಹುಡುಕುತ್ತಿತ್ತು ಹಾಗೂ ನಮ್ಮ  ಸಂಗೀತಗಾರ ತಂದೆಯ ಜೊತೆಗೆ ಚಹಾ ಕೂಡ ಕುಡಿಯುತ್ತಿದ್ದರು ಎಂದು ಅವರ ಮಗ ಜವಾದ್ ಅಂದರಬಿ ಅಸೋಸಿಯೇಟೆಡ್ ಪ್ರೆಸ್‌ಗೆ ತಿಳಿಸಿದರು. ಆದರೆ ಶುಕ್ರವಾರ ಏನೋ ಬೇರೆಯದೇ ಘಟನೆ ನಡೆದಿದೆ ಆದ ಕಾರಣ ಈ ಹತ್ಯೆ ನಡೆದಿದೆ ಎಂದು ಹೇಳಿದ್ದಾರೆ.

  ಈ ಹಾಡುಗಾರನ ಮಗ ತನಗೆ ನ್ಯಾಯ ಬೇಕೆಂದು ಪಟ್ಟು ಹಿಡಿದಿದ್ದು, ಇದಕ್ಕೆ ಸ್ಥಳೀಯ ತಾಲಿಬಾನ್ ಕೌನ್ಸಿಲ್ ತನ್ನ ತಂದೆಯ ಕೊಲೆಗಾರನನ್ನು ಶಿಕ್ಷಿಸುವುದಾಗಿ ಭರವಸೆ ನೀಡಿದೆ, ಈ ನಿರ್ಧಾರ ಸಮಾಧಾನ ತಂದಿದೆ ಎಂದು ಹೇಳಿದರು.


  ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಎಪಿ ಸುದ್ದಿ ಸಂಸ್ಥೆಗೆ ಈ ವಿಚಾರವಾಗಿ ಮಾತನಾಡಿದ್ದು, ಘಟನೆಯ ಬಗ್ಗೆ ತನಿಖೆ ನಡೆಸಲಾಗುತ್ತದೆ, ಆದರೆ ಹತ್ಯೆಯ ಬಗ್ಗೆ ಯಾವುದೇ ವಿವರಗಳು ಸರಿಯಾಗಿ ಲಭ್ಯವಿಲ್ಲ ಎಂದರು.


  ಅಫ್ಘಾನಿಸ್ತಾನದಾದ್ಯಂತ ಮಿಂಚಿನ ದಾಳಿಯ ನಂತರ ಅನೇಕ ನಗರಗಳು ಯಾವುದೇ ಪ್ರತಿರೋಧವಿಲ್ಲದೆ ದಂಗೆಕೋರರ ವಶವಾದವು, ತಾಲಿಬಾನ್‌ಗಳು 1990 ರ ಉತ್ತರಾರ್ಧದಲ್ಲಿ ಇಸ್ಲಾಮಿಕ್ ಆಳ್ವಿಕೆಯ ಕಟ್ಟುನಿಟ್ಟಾದ ಕಾನೂನುಗಳನ್ನು ಹೇರಿದ್ದಕ್ಕಿಂತಲೂ ಬೇರೆಯದೆ ರೂಪದಲ್ಲಿ ನಾವು ಈಗ ಆಳ್ವಿಕೆ ನೀಡುತ್ತೇವೆ ಎಂದು ಹೇಳಿದ್ದಾರೆ. ಆದರೆ ಅನೇಕ ಆಫ್ಘನ್​ ನಾಗರೀಕರು ಸಂಶಯದಿಂದಲೇ ತಾಲಿಬಾನ್​ ಉಗ್ರರನ್ನು ನೋಡುತ್ತಿದ್ದಾರೆ.


  ಇವರ ಮೇಲೆ ಜನರಿಗೆ ಎಷ್ಟು ಅಪನಂಬಿಕೆ ಇದೆ ಎಂದರೆ ಸಾವಿರಾರು ಜನರು ವಿಮಾನ ನಿಲ್ದಾಣಕ್ಕೆ ಓಡಿಹೋದರು, ದೇಶದಿಂದ ಪಲಾಯನ ಮಾಡಲು ದಾರಿ ಹುಡುಕಿ ಹತಾಶರಾದರು.


  ಹಳೆಯ ತಲೆಮಾರಿನ ಜನರು ತಾಲಿಬಾನಿಗಳು ಹೇರಿದ್ದ ಹಿಂದಿನ ಕಠಿಣ ನಿಯಮವನ್ನು ನೆನಪಿಸಿಕೊಳ್ಳುತ್ತಾರೆ, ಮಹಿಳೆಯರನ್ನು ತಮ್ಮ ಮನೆಗಳಿಗೆ ಮಾತ್ರ ಸೀಮಿತಗೊಳಿಸಿದರು ದೂರದರ್ಶನ ಮತ್ತು ಸಂಗೀತವನ್ನು ನಿಷೇಧಿಸಿದರು ಮತ್ತು ಸಾರ್ವಜನಿಕ ಮರಣದಂಡನೆ ಜಾರಿಗೆ ತಂದರು. 9/11 ದಾಳಿಯ ನಂತರ US ನೇತೃತ್ವದ ಮಿಲಿಟರಿ ಆಕ್ರಮಣದ ನಂತರ ತಾಲಿಬಾನಿಗಳ ಕ್ರೌರ್ಯ ಒಂದಷ್ಟು ಕಡಿಮೆಯಾಯಿತು ಹಾಗೂ ಅವರನ್ನು ಹಿಮ್ಮೆಟ್ಟಿಸಿದ ಪರಿಣಾಮ ಈ ದೇಶದಲ್ಲಿ ಒಂದಷ್ಟು ಶಾಂತಿ ನೆಲೆಸಿತು ಎಂದು ಹೇಳಬಹುದು.


  'ಸುಳ್ಳು ಭರವಸೆಗಳು'


  ತಾಲಿಬಾನ್ ಇಡೀ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ಮೊದಲು ಹೇಳಿದ್ದು ಇದೇ ಮಾತನ್ನು, ’’ನಾವು ಮಹಿಳೆಯರ ಹಕ್ಕುಗಳನ್ನು ಗೌರವಿಸುತ್ತೇವೆ ಹಾಗೂ ನಮ್ಮ ವಿರುದ್ಧ ಹೋರಾಡಿದವರನ್ನು ಕ್ಷಮಿಸುತ್ತೇವೆ ಮತ್ತು ಅಫ್ಘಾನಿಸ್ತಾನವು ಭಯೋತ್ಪಾದಕರ ಸ್ವರ್ಗವಾಗದಂತೆ ನೋಡಿಕೊಳ್ಳದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಲಾಗಿತ್ತು. ಆದರೆ ಈಗ ದಿನ ಕಳೆದಂತೆ ಅವರ ಭರವಸೆಗಳು ಪೊಳ್ಳು ಎನ್ನುವುದು ಬೆಳಕಿಗೆ ಬರುತ್ತಿದೆ.

  ಅನಾಮಧೇಯ ಅಫ್ಘಾನ್ ಮಹಿಳೆಯೊಬ್ಬರು ದಿ ಗಾರ್ಡಿಯನ್‌ ಪತ್ರಿಕೆಗೆ ಹೀಗೆ ಬರೆದಿದ್ದು: “ನಾವು ಮತ್ತೆ ನಮ್ಮ ಮೂಲಭೂತ ಹಕ್ಕುಗಳಿಂದ ವಂಚಿತರಾಗುತ್ತೇವೆ ಮತ್ತು 20 ವರ್ಷಗಳಷ್ಟು ಹಿಂದಕ್ಕೆ ಪ್ರಯಾಣಿಸುತ್ತೇವೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಮ್ಮ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ 20 ವರ್ಷಗಳ ಹೋರಾಟದ ನಂತರ, ನಾವು ಮತ್ತೆ ಬುರ್ಖಾ ತೊಟ್ಟುಕೊಂಡೆ ಜೀವನ ನಡೆಸ ಬೇಕಾದ ಅನಿವಾರ್ಯತೆಗೆ ಬಂದು ನಿಂತಿದ್ದೇವೆ ಮತ್ತು ನಮ್ಮ ಗುರುತನ್ನು ಮರೆಮಾಡಬೇಕಾದ ಕೆಟ್ಟ ಸಂದರ್ಭದಲ್ಲಿ ಇದ್ದೇವೆ ಎಂದು ಹೇಳಿದ್ದಾರೆ.


  ಹಲವಾರು ಅಫ್ಘಾನ್ ಮಹಿಳಾ ಪತ್ರಕರ್ತರು ತಾಲಿಬಾನ್ ನಿಂದ ಕೆಲಸ ಮಾಡಲು ಅವಕಾಶವಿಲ್ಲ ಎಂದು ಹೇಳಿದ್ದಾರೆ. ಆರ್‌ಟಿಎ (ರೇಡಿಯೋ ಟೆಲಿವಿಷನ್ ಅಫ್ಘಾನಿಸ್ತಾನ) ದಲ್ಲಿ ಆಂಕರ್ ಆಗಿರುವ ಶಬ್ನಮ್ ಖಾನ್ ದವ್ರನ್ ಅವರು ತಮ್ಮ ಕಚೇರಿಗೆ ಪ್ರವೇಶಿಸಲು ಹೋದಾಗ, ನೀವು ಒಳಗೆ ಹೋಗಲು ಸಾಧ್ಯವಿಲ್ಲ ಎಂದು ಹೇಳಿದರು. "ನಾನು ಕೆಲಸಕ್ಕೆ ಮತ್ತೆ ಹೋಬೇಕು ಎಂದು  ಬಯಸಿದ್ದೆ, ಆದರೆ ದುರದೃಷ್ಟವಶಾತ್ ಅವರು ನನ್ನನ್ನು ಕೆಲಸ ಮಾಡಲು ಬಿಡಲಿಲ್ಲ. ಆಡಳಿತವು ಬದಲಾಗಿದೆ ಮತ್ತು ನೀವು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅವರು ನನಗೆ ಹೇಳಿದರು, "ಎಂದು ಟೌಲೋ ನ್ಯೂಸ್ ವರದಿ ಮಾಡಿದೆ.


  ಇದನ್ನೂ ಓದಿ: Indian Railways: ನೀವು ಬುಕ್​ ಮಾಡಿದ ಟಿಕೆಟ್​ಅನ್ನು ನಿಮ್ಮ ಸಂಬಂಧಿಕರಿಗೂ ನೀಡಬಹುದು: ರೈಲ್ವೇ ಇಲಾಖೆಯ ಸಖತ್​ ಆಫರ್​


  ಮತ್ತೊಬ್ಬ ಪತ್ರಕರ್ತೆ ಖದೀಜಾ ಕೂಡ ಹೀಗೆ ಹೇಳಿದ್ದು, ನನ್ನನ್ನು ಕೂಡ ಕಚೇರಿಗೆ ಪ್ರವೇಶಿಸಲು ತಾಲಿಬಾನ್ ಅನುಮತಿ ನೀಡಿಲ್ಲ ಎಂದಿದ್ದಾರೆ. "ನಾವು ತಾಲಿಬಾನ್ ನಿಂದ ನೇಮಕಗೊಂಡ ನಮ್ಮ ಹೊಸ ನಿರ್ದೇಶಕರೊಂದಿಗೆ ಮಾತನಾಡಿದೆವು ... ಕಾರ್ಯಕ್ರಮಗಳಲ್ಲಿ ಬದಲಾವಣೆ ಕಂಡುಬಂದಿದೆ, ಅಲ್ಲದೇ  ಮಹಿಳಾ ನಿರೂಪಕರು ಮತ್ತು ಮಹಿಳಾ ಪತ್ರಕರ್ತರಿಗೆ ಅವಕಾಶ ಇಲ್ಲವೇ ಇಲ್ಲ ಎಂದು ಅವರು ಹೇಳಿದರು "ಎಂದು ಖದೀಜಾ ಕಿಡಿಯಾದರು ಎಂದು ಟೋಲೋ ನ್ಯೂಸ್ ತನ್ನ ವರದಿಯಲ್ಲಿ ತಿಳಿಸಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  Published by:HR Ramesh
  First published: