Trump visits Taj Mahal: ಸಂದರ್ಶಕರ ಪುಸ್ತಕದಲ್ಲಿ ತಾಜ್​​ ಮಹಲ್​​ ಬಗ್ಗೆ ಟ್ರಂಪ್​​ ಬರೆದಿದ್ದೇನು?

ತಾಜ್​ ಮಹಲ್​ಗೆ ಆಗಮಿಸಿದ ಟ್ರಂಪ್​ ದಂಪತಿಯನ್ನು ವಿವಿಧ ತಂಡಗಳ ಕಲಾವಿದರು ಆತ್ಮೀಯವಾಗಿ ಬರಮಾಡಿಕೊಂಡರು. ಅಮೆರಿಕ ಮತ್ತು ಭಾರತ ಬಾವುಟ ಹಿಡಿದ ಖುಷಿಯಿಂದ ಸ್ವಾಗತಿಸಿದರು. ರಸ್ತೆಯದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್​​ ಸ್ನೇಹವನ್ನು ಗಟ್ಟಿಗೊಳಿಸುವಂತ ಬ್ಯಾನರ್​​ಗಳು ರಾರಾಜಿಸುತ್ತಿದ್ದವು.

ತಾಜ್​​ ಮಹಲ್​ಗೆ ಭೇಟಿ ನೀಡಿದ ಟ್ರಂಪ್​​​

ತಾಜ್​​ ಮಹಲ್​ಗೆ ಭೇಟಿ ನೀಡಿದ ಟ್ರಂಪ್​​​

 • Share this:
  ನವದೆಹಲಿ(ಫೆ.24): ಗುಜರಾತ್​​ನ​​ ಅಹಮದಾಬಾದ್​ನಲ್ಲಿ ನಡೆದ "ನಮಸ್ತೆ ಟ್ರಂಪ್​ ಕಾರ್ಯಕ್ರಮದ ಬಳಿಕ ಕುಟುಂಬ ಸಮೇತರಾಗಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್​​ ಟ್ರಂಪ್​​ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ​ಐತಿಹಾಸಿಕ ಸ್ಮಾರಕ ತಾಜ್​​ ಮಹಲ್​​​ಗೆ ಭೇಟಿ ನೀಡಿದ್ದರು. ಆಗ್ರಾದ ವಿಶ್ವದ ಖ್ಯಾತ ತಾಜ್​ ಮಹಲ್​ಗೆ ಭೇಟಿ ನೀಡಿದ ಟ್ರಂಪ್​​ ಮತ್ತವರ ಕುಟುಂಬ ಅಲ್ಲಿನ ವಾಸ್ತುಶಿಲ್ಪ ಕಣ್ತುಂಬಿಕೊಂಡರು. ನಂತರ ಇಡೀ ತಾಜ್​​ ಮಹಲ್​ ಸುತ್ತಾಡಿದ ಬಳಿಕ ಸಂತಸಗೊಂಡರು.

  ಇನ್ನು, ತಾಜ್​​ ಮಹಲ್​​ ಪ್ರವೇಶಿಸುವ ಮುನ್ನ ಸಂದರ್ಶಕರ ಪುಸ್ತಕದಲ್ಲಿ ಟ್ರಂಪ್​​ ತಾಜ್​​ ಮಹಲ್​​ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಲ್ಲಿನ "ತಾಜ್​ ಮಹಲ್ ಸಾವಿಲ್ಲದ ಮರಣ ಶಾಸನ, ವಿಸಯ್ಮಕಾರಿ ಸ್ಮಾರಕ ಭವನ. ಭಾರತ ಸಂಸ್ಕೃತಿಯ ಸೌಂದರ್ಯದ ಪ್ರತೀಕ, ಶ್ರೀಮಂತಿಕೆಯ ಸಮಯರಹಿತ ಒಡಂಬಡಿಕೆ" ಎಂದು ಬರೆದಿದ್ದಾರೆ. ಹಾಗೆಯೇ ಧನ್ಯವಾದ ಭಾರತ ಎಂದು ವಂದನೆ ಸಂತಸ ವ್ಯಕ್ತಪಡಿಸಿದ್ಧಾರೆ.  ಅಹಮದಾಬಾದ್​​ನಿಂದ ನೇರ ಟ್ರಂಪ್​ ತಮ್ಮ ಕುಟುಂಬ ಸಮೇತ ಆಗ್ರಾಗೆ ಬಂದಿಳಿದರು. ಟ್ರಂಪ್​​ ಮತ್ತವರ ಕುಟುಂಬಕ್ಕೆ ಉತ್ತರ ಪ್ರದೇಶದ ರಾಜ್ಯಪಾಲೆ ಆನಂದಿ ಬೆನ್​ ಮತ್ತು ಸಿಎಂ ಯೋಗಿ ಆದಿತ್ಯನಾಥ್​ ಅವರಿಂದ ಅದ್ದೂರಿ ಸ್ವಾಗತ ಸಿಕ್ಕಿತು. ಇದೇ ವೇಳೆ ದೇಶದ ಹಲವು ಸಾಂಪ್ರದಾಯಿಕ ಕಲೆಗಳ ಮೂಲಕ ಟ್ರಂಪ್​ ದಂಪತಿಗೆ ಗೌರವ ಸಲ್ಲಿಸಲಾಯ್ತು.

  ಇದನ್ನೂ ಓದಿ: ತಾಜ್​​ ಮಹಲ್​ ಸಾವಿಲ್ಲದ ಮರಣ ಶಾಸನ, ಭಾರತ ಸಂಸ್ಕೃತಿಯ ಸೌಂದರ್ಯದ ಪ್ರತೀಕ; ಟ್ರಂಪ್​​

  ತಾಜ್​ ಮಹಲ್​ಗೆ ಆಗಮಿಸಿದ ಟ್ರಂಪ್​ ದಂಪತಿಯನ್ನು ವಿವಿಧ ತಂಡಗಳ ಕಲಾವಿದರು ಆತ್ಮೀಯವಾಗಿ ಬರಮಾಡಿಕೊಂಡರು. ಅಮೆರಿಕ ಮತ್ತು ಭಾರತ ಬಾವುಟ ಹಿಡಿದ ಖುಷಿಯಿಂದ ಸ್ವಾಗತಿಸಿದರು. ರಸ್ತೆಯದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್​​ ಸ್ನೇಹವನ್ನು ಗಟ್ಟಿಗೊಳಿಸುವಂತ ಬ್ಯಾನರ್​​ಗಳು ರಾರಾಜಿಸುತ್ತಿದ್ದವು.

  ಈ ಮುನ್ನವೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಇಂದು ಭೇಟಿ ನೀಡಿದ್ದಾರೆ. ವಿಶೇಷ ವಿಮಾನದಲ್ಲಿ ಅಹಮದಾಬಾದ್​ಗೆ ಬಂದಿಳಿದ ಟ್ರಂಪ್ ಹಾಗೂ ಅವರ ಕುಟುಂಬವನ್ನು ಪ್ರಧಾನಿ ಮೋದಿ ಸ್ವಾಗತಿಸಿದರು. ವಿಮಾನ ನಿಲ್ದಾಣದಲ್ಲಿ ವಿವಿಧ ಕಲಾತಂಡಗಳು ಟ್ರಂಪ್ ಅವರಿಗೆ ಭವ್ಯ ಸ್ವಾಗತ ಕೋರಿದವು. ಪ್ರಧಾನಿ ಮೋದಿ ಟ್ರಂಪ್ ಅವರನ್ನು ಆಲಂಗಿಸಿ ಸ್ವಾಗತಿಸಿದರು. ಬಳಿಕ ಟ್ರಂಪ್​-ಮೋದಿ ಏರ್​ಪೋರ್ಟ್​​ನಿಂದ ಸಬರಮತಿ ಆಶ್ರಮಕ್ಕೆ ತೆರಳಿದರು. ಅಲ್ಲಿಂದ ಮೊಟೆರಾ ಸ್ಟೇಡಿಯಂಗೆ ತೆರಳಿದ್ದು, ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.
  First published: