• Home
  • »
  • News
  • »
  • national-international
  • »
  • Ram Setu: ರಾಷ್ಟ್ರೀಯ ಸ್ಮಾರಕವಾಗಲಿದೆಯೇ ರಾಮಸೇತು? ಜುಲೈ 26ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

Ram Setu: ರಾಷ್ಟ್ರೀಯ ಸ್ಮಾರಕವಾಗಲಿದೆಯೇ ರಾಮಸೇತು? ಜುಲೈ 26ಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ರಾಮಸೇತು

ರಾಮಸೇತು

ಈ ಹಿಂದೆ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ವಿವಾದಾತ್ಮಕ 'ಸೇತುಸಮುದ್ರಂ ಶಿಪ್ ಚಾನೆಲ್ ಪ್ರಾಜೆಕ್ಟ್' ಅಂದರೆ ಸೇತುಸಮುದ್ರಂ ನೌಕಾ ಕಾಲುವೆ ಯೋಜನೆ ಘೋಷಿಸಿತ್ತು. ಅದರ ಪ್ರಕಾರ ಯೋಜನೆಗಾಗಿ ರಾಮಸೇತು ಒಡೆಯುವ ಬಗ್ಗೆ ಯೋಚಿಸಲಾಗಿತ್ತು.

  • Share this:

ನವದೆಹಲಿ: ಭಾರತೀಯ ಸಂಸ್ಕೃತಿಯಲ್ಲಿ (Indian Culture), ಅದರಲ್ಲೂ ಹಿಂದೂ ಧರ್ಮದಲ್ಲಿ (Hinduism) ರಾಮಾಯಣಕ್ಕೆ (Ramayana) ಎಷ್ಟು ಮಹತ್ವ ಇದೆಯೋ ಅಷ್ಟೇ ಮಹತ್ವ ರಾಮ ಓಡಾಡಿದ ಪ್ರದೇಶ, ಭೇಟಿ ಕೊಟ್ಟ ಸ್ಥಳಗಳೆಲ್ಲ ಪುಣ್ಯ ಪವಿತ್ರವಾಗಿದೆ. ಪೈಕಿ ರಾಮ ಸೇತುವೂ (Ram Setu) ಸೇರಿದೆ. ಸೀತೆಯನ್ನು (Seetha) ಕರೆದುಕೊಂಡು ಬರಲು ಸಮುದ್ರದ ಮಧ್ಯೆ ಸೇತುವೆ ಕಟ್ಟಿ, ಅದರ ಮೂಲಕವೇ ಶ್ರೀರಾಮ (Sri Rama) ಹಾಗೂ ಸೇನೆ ಲಂಕೆಗೆ (Lanka) ಹೋಗಿತ್ತು ಎನ್ನುವುದು ಪ್ರತೀತಿ. ಈ ಹಿಂದಿನಿಂದಲೂ ರಾಮಸೇತು ವಿವಾದಕ್ಕೆ (Controversy) ಒಳಗಾಗಿದೆ. ಇದೀಗ 'ರಾಮಸೇತು'ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಇದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್ (Supreme Court) ಸಮ್ಮತಿಸಿದೆ. ಇದೇ ಜುಲೈ 26ರಂದು ರಾಮಸೇತು ಕುರಿತಾದ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯಲಿದೆ.


ಸುಪ್ರೀಂಕೋರ್ಟ್‌ನಲ್ಲಿ ಜುಲೈ 26ಕ್ಕೆ ವಿಚಾರಣೆ


ಈ ಹಿಂದೆ ಯುಪಿಎ ಸರ್ಕಾರದ ಮೊದಲ ಅವಧಿಯಲ್ಲಿ ವಿವಾದಾತ್ಮಕ 'ಸೇತುಸಮುದ್ರಂ ಶಿಪ್ ಚಾನೆಲ್ ಪ್ರಾಜೆಕ್ಟ್' ಅಂದರೆ ಸೇತುಸಮುದ್ರಂ ನೌಕಾ ಕಾಲುವೆ ಯೋಜನೆ ಘೋಷಿಸಿತ್ತು. ಅದರ ಪ್ರಕಾರ ಯೋಜನೆಗಾಗಿ ರಾಮಸೇತು ಒಡೆಯುವ ಬಗ್ಗೆ ಯೋಚಿಸಲಾಗಿತ್ತು.


ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ ಸುಬ್ರಮಣಿಯನ್ ಸ್ವಾಮಿ


ಇದರ ವಿರುದ್ದ ಬಿಜೆಪಿ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್‌ ಸಲ್ಲಿಸಿದ್ದರು. ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕವೆಂದು ಘೋಷಿಸುವ ವಿಷಯವನ್ನು ಸುಬ್ರಮಣಿಯನ್ ಸ್ವಾಮಿ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದರು.


ಇದನ್ನೂ ಓದಿ: Pampa Sarovara: ಅಂಜನಾದ್ರಿ ಆಯ್ತು, ಈಗ ಪಂಪಾ ಸರೋವರದ ಸರದಿ; ಹೊಸ ವಿವಾದ ಸೃಷ್ಟಿಸಿದ ಗುಜರಾತ ಸರ್ಕಾರ


ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಮನವಿ


'ರಾಮಸೇತು'ವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಈ ಅರ್ಜಿಯನ್ನು ಮನ್ನಿಸಿರುವ ಸುಪ್ರೀಂ ಕೋರ್ಟ್‌ ಜುಲೈ 26 ರಂದು ವಿಚಾರಣೆ ನಡೆಸಲಿದೆ. ಈ ಸಮಸ್ಯೆಯು ದೀರ್ಘಕಾಲದವರೆಗೆ ಬಾಕಿ ಉಳಿದಿದೆ ಮತ್ತು ತುರ್ತು ವಿಚಾರಣೆಯ ಅಗತ್ಯವಿದೆ ಎಂದು ಸ್ವಾಮಿ ಸಲ್ಲಿಸಿದ ನಂತರ, ಪೀಠವು ಜುಲೈ 26 ರಂದು ವಿಚಾರಣೆಗೆ ವಿಷಯವನ್ನು ಪಟ್ಟಿ ಮಾಡಿದೆ.


ರಾಷ್ಟ್ರೀಯ ಸ್ಮಾರಕ ಅಂತ ಘೋಷಿಸುವಂತೆ ಮನವಿ


ಈ ವಿಷಯದ ಬಗ್ಗೆ ಭಾರತ ಸರ್ಕಾರದ ನಿಲುವಿನ ಬಗ್ಗೆಯೂ ಪೀಠವು ಕೇಳಿದೆ. ಈ ಕುರಿತು ಸರ್ಕಾರ ಅಫಿಡವಿಟ್ ಸಲ್ಲಿಸಿದೆ ಎಂದು ಸ್ವಾಮಿ ಹೇಳಿದರು. ರಾಮಸೇತುವನ್ನು ರಾಷ್ಟ್ರೀಯ ಪ್ರಾಮುಖ್ಯತೆಯ ಪುರಾತನ ಸ್ಮಾರಕವೆಂದು ಘೋಷಿಸಲು ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ (ಎನ್‌ಎಂಎ) ಜೊತೆಗೆ ಭಾರತ ಒಕ್ಕೂಟಕ್ಕೆ ಆದೇಶ ಮತ್ತು ನಿರ್ದೇಶನ ನೀಡುವಂತೆ ಸುಪ್ರೀಂ ಕೋರ್ಟ್‌ಗೆ ತಮ್ಮ ಮನವಿಯಲ್ಲಿ ಸ್ವಾಮಿ ಒತ್ತಾಯಿಸಿದ್ದಾರೆ.


“ನಾನು ಈಗಾಗಲೇ ಗೆದ್ದಿದ್ದೇನೆ”


"ರಾಮಸೇತುವಿನ ಅಸ್ತಿತ್ವದ ಕುರಿತು ಕೇಂದ್ರವು ಒಪ್ಪಿಕೊಂಡಿರುವುದರಿಂದ ಮೊಕದ್ದಮೆಯ ಮೊದಲ ಸುತ್ತಿನಲ್ಲಿ ನಾನು ಈಗಾಗಲೇ ಗೆದ್ದಿದ್ದೇನೆ. ರಾಷ್ಟ್ರೀಯ ಸ್ಮಾರಕವೆಂದು ರಾಮಸೇತುವನ್ನು ಘೋಷಿಸುವ ಸಲುವಾಗಿ ಮತ್ತು ನನ್ನ ಬೇಡಿಕೆಯನ್ನು ಪರಿಶೀಲಿಸುವ ಸಲುವಾಗಿ ಕೇಂದ್ರ ಸಚಿವರು ೨೦೧೭ರಲ್ಲಿ ಸಭೆ ಕರೆದಿದ್ದರು. ಬಳಿಕ ಈ ಕುರಿತು ಯಾವುದೇ ಪ್ರಗತಿಯಾಗಿಲ್ಲʼʼ ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದಾರೆ.


ಇದನ್ನೂ ಓದಿ: Gotabaya Rajapaksa: ರಾತ್ರೋ ರಾತ್ರಿ ದೇಶ ತೊರೆದಿದ್ದು ಗೋತಬಯ ಒಬ್ಬರೇ ಅಲ್ಲ! ಪಲಾಯನ ಮಾಡಿದವರ ಲಿಸ್ಟ್ ದೊಡ್ಡದಿದೆ ನೋಡಿ


ಮಾನವ ನಿರ್ಮಿತ ಎನ್ನುವುದಕ್ಕೆ ಪುರಾವೆ


ಭಾರತ ಮತ್ತು ಶ್ರೀಲಂಕಾ ನಡುವೆ ಇರುವ ರಾಮಸೇತು ನೈಸರ್ಗಿಕವಲ್ಲ. ಅದು ಮಾನವ ನಿರ್ಮಿತ ಎನ್ನುವುದಕ್ಕೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ ಎಂದು ಡಿಸ್ಕವರಿ ಚಾನೆಲ್ ಈ ಹಿಂದೆ ವರದಿ ಮಾಡಿತ್ತು. ಎರಡು ಭೂಭಾಗಗಳ ನಡುವೆ ನೈಸರ್ಗಿಕವಾದ ಮರಳು ಮತ್ತು ಸೀಮೆ ಸುಣ್ಣದ ದಿಬ್ಬ ಇದೆ. ಈ ಮರಳು ದಿಬ್ಬದ ಮೇಲೆ ಅದಕ್ಕೂ ಹಳೆಯದಾದ ಬಂಡೆಗಳಿವೆ ಎಂದು ಅಮೆರಿಕದ ವಿಜ್ಞಾನಿಗಳು ಹೇಳಿದ್ದರು. ಈ ಬಂಡೆಗಳು ಸುಮಾರು 7 ಸಾವಿರ ವರ್ಷದಷ್ಟು ಹಳೆಯವು. ಆದರೆ, ಅದರ ಅಡಿಯಲ್ಲಿರುವ ಮರಳ ರಾಶಿ 4 ಸಾವಿರ ವರ್ಷಗಳಷ್ಟು ಹಿಂದಿನದ್ದು ಎಂದು ಅಮೆರಿಕದ ವಿಜ್ಞಾನಿಗಳು ಹೇಳಿದ್ದರು.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು