ಕಸದ ರಾಶಿ ಸಮಸ್ಯೆ ಬಗೆಹರಿಸಿ, ಕೇಜ್ರಿವಾಲ್​ ಅವರನ್ನು ಹೊಣೆ ಮಾಡಬೇಡಿ: ಲೆಫ್ಟಿನೆಂಟ್​ ಗವರ್ನರ್​ಗೆ ಸುಪ್ರೀಂ ಚಾಟಿ


Updated:July 12, 2018, 3:43 PM IST
ಕಸದ ರಾಶಿ ಸಮಸ್ಯೆ ಬಗೆಹರಿಸಿ, ಕೇಜ್ರಿವಾಲ್​ ಅವರನ್ನು ಹೊಣೆ ಮಾಡಬೇಡಿ: ಲೆಫ್ಟಿನೆಂಟ್​ ಗವರ್ನರ್​ಗೆ ಸುಪ್ರೀಂ ಚಾಟಿ

Updated: July 12, 2018, 3:43 PM IST
ನ್ಯೂಸ್​-18 ಕನ್ನಡ

ನವದೆಹಲಿ(ಜುಲೈ.12): ಭಾರತದ ರಾಜಧಾನಿಯಲ್ಲಿ ದಿನೇದಿನೇ ಕಸದ ರಾಶಿ ಬೆಳೆಯುತ್ತಿದ್ದು, ಅದನ್ನು ವಿಲೇವಾರಿ ಮಾಡುವಂತೆ ಸುಪ್ರೀಂಕೋರ್ಟ್​ ದೆಹಲಿ ಲೆಫ್ಟಿನೆಂಟ್​ ಗವರ್ನರ್​ ಅನಿಲ್​ ಬೈಜಾಲ್​ ಅವರಿಗೆ ಆದೇಶ ನೀಡಿದೆ.

ಕೇಂದ್ರ ಸರ್ಕಾರದ ಸ್ವಚ್ಛ ಭಾರತ ಅಭಿಯಾನವನ್ನು ಅಣಕಿಸುವಂತೆ ದೆಹಲಿಯಲ್ಲಿ ಕಸದ ರಾಶಿಯ ಗುಡ್ಡೆ ದಿನೇ ದಿನೇ ಬೆಳೆಯುತ್ತಿದೆ. ಇದನ್ನು ವಿಲೇವಾರಿ ಮಾಡುವ ಅಧಿಕಾರ ನಿಮಗಿದೆ. ನೀವೂ ಈ ಸಮಸ್ಯೆ ಬಗೆಹರಿಸಿ. ಇದರಲ್ಲೂ ಸಿಎಂ ಕೇಜ್ರಿವಾಲ್​ ಅವರನ್ನು ಮಧ್ಯೆ ತರಬೇಡಿ ಎಂದು ಸುಪ್ರೀಂಕೋರ್ಟ್​ ಲೆಫ್ಟಿನೆಂಟ್​ ಗವರ್ನರ್​ಗೆ ಚಾಟಿ ಬೀಸಿದೆ.

ಈ ಹಿಂದೆ ರಾಜಧಾನಿಯಲ್ಲಿನ ಬೃಹತ್ ಘನ ತ್ಯಾಜ್ಯ ಸಂಗ್ರಹಾಗಾರದಲ್ಲಿ ವೃದ್ದಿಯಾಗುತ್ತಿರುವ ಕಸದ ರಾಶಿಯು ದೇಶದ ವಾಸ್ತವ ಸ್ಥಿತಿಗೆ ಸಾಕ್ಷಿಯಾಗಿತ್ತು. ಕೇಂದ್ರ ಸರ್ಕಾರದ ಪರಿಸರ ಸಚಿವಾಲಯ ನಿಗದಿಗೊಳಿಸಿರುವ ಗರಿಷ್ಠ ಮಿತಿಯಾದ 30 ಮೀಟರ್ ಎತ್ತರವನ್ನು ಮೀರಿ ಬೆಳೆಯುತ್ತಿದ್ದು, ಗಂಭೀರ ಮಾಲಿನ್ಯದ ಆತಂಕಕ್ಕೆ ಎಡೆ ಮಾಡಿಕೊಟ್ಟಿತ್ತು.

ಈ ಹಿನ್ನಲ್ಲೆಯಲ್ಲಿ ಕಸದ ವಿಲೇವಾರಿ ಮಾಡುವಂತೆ ದೆಹಲಿಯಲ್ಲಿ ಹೋರಾಟಗಳ ನಡೆದವು. ಈ ವೇಳೆ ಲೆಫ್ಟಿನೆಂಟ್​ ಗವರ್ನರ್​ ಅವರು ಕೇಜ್ರಿವಾಲ್​ ಅವರಿಗೆ ಕಸದ ವಿಲೇವಾರಿ ಮತ್ತು ಕಸದ ರಾಶಿ ಸಮಸ್ಯೆಯನ್ನು ಬಗೆಹರಿಸುವ ಅಧಿಕಾರವಿದೆ. ಆದರೂ ಯಾಕೋ ಸಿಎಂ ಕಾರ್ಯ ಕೈಗೆತ್ತುಕೊಂಡಿಲ್ಲ ಎಂದು ಆರೋಪಿಸಿದ್ದರು. ಇದೀಗ ಸುಪ್ರೀಂಕೋರ್ಟ್​ ಲೆಫ್ಟಿನೆಂಟ್​ ಗವರ್ನರ್​ಗೆ ಸಿಎಂ ಕೇಜ್ರಿವಾಲ್​ ಅವರನ್ನು ಆರೋಪಿಸದೆ, ಕಾರ್ಯವರ್ವಹಿಸುವಂತೆ ಸೂಚಿಸುವ ಮೂಲಕ ತಿರುಗೇಟು ನೀಡಿದೆ.

ದೆಹಲಿಯಲ್ಲಿ ಘನತ್ಯಾಜ್ಯ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಏರುತ್ತಿದೆ. 15 ವರ್ಷಗಳ ಹಿಂದೆ ರಾಜಧಾನಿಯಲ್ಲಿ ಪ್ರತಿನಿತ್ಯ 400 ಕಸ ಉತ್ಪಾದನೆಯಾಗುತ್ತಿತ್ತು. ಆದರೆ ಇಂದು 9000 ಟನ್‍ಗಳಷ್ಟು ಏರಿಕೆಯಾಗಿದೆ ಎನ್ನಲಾಗಿದೆ. ದೇಶದ ವಾಣಿಜ್ಯ ನಗರಿ ಮುಂಬೈ, ಅಹಮದಾಬಾದ್, ಹೈದರಾಬಾದ್, ಚೆನ್ನೈ, ಕೋಲ್ಕತಾ ನಗರಗಳಲ್ಲೂ ಘನತ್ಯಾಜ್ಯ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ-ಅಂಶದಿಂದ ತಿಳಿದುಬಂದಿದೆ.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...