Court Judgment: ಬರೋಬ್ಬರಿ 28 ವರ್ಷಗಳ ನಂತರ ಮರಣದಂಡನೆ ಶಿಕ್ಷೆ ರದ್ದುಗೊಳಿಸಿದ ಸುಪ್ರೀಂ ಕೋರ್ಟ್​​

ಸುಪ್ರೀಂ ಕೋರ್ಟ್​​

ಸುಪ್ರೀಂ ಕೋರ್ಟ್​​

25 ವರ್ಷಗಳ ಕಾಲ ಪೂನಾದ ಯರವಾಡಾ ಜೈಲಿನಲ್ಲಿದ್ದ ನಾರಾಯಣ್, ಜೈಲು ಕಂಬಿಯ ಹಿಂದೆಯೇ ಮರಾಠಿ ಹಾಗೂ ಇಂಗ್ಲೀಷ್ ಭಾಷೆಯನ್ನು ಕಲಿತುಕೊಂಡಿದ್ದಾನೆ. ಅಂತೆಯೇ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾನೆ.

  • Share this:
  • published by :

ಐವರು ಮಹಿಳೆಯರು (Women) ಹಾಗೂ ಇಬ್ಬರು ಮಕ್ಕಳ ಹತ್ಯೆಗೆ ಸಂಬಂಧಿಸಿದಂತೆ ಮರಣ ದಂಡನೆಗೆ ಒಳಗಾಗಿದ್ದ ಆರೋಪಿಯನ್ನು 28 ವರ್ಷಗಳ ನಂತರ ಸುಪ್ರೀಂ ಕೋರ್ಟ್ (Court) ಬಿಡುಗಡೆ ಮಾಡುವಂತೆ ಆದೇಶಿಸಿದೆ. ಅಪರಾಧವೆಸಗುವ ಸಮಯದಲ್ಲಿ ಈ ವ್ಯಕ್ತಿ ಬಾಲಕನಾಗಿದ್ದ. ಹಾಗಾಗಿ ಆತ ಮಾಡಿದ ಕೃತ್ಯ ಬಾಲಾಪರಾಧಕ್ಕೆ ಸಮನಾಗುತ್ತದೆ ಎಂದು ಸುಪ್ರೀಂ ಕೋರ್ಟ್ (Supreme Court) ತಿಳಿಸಿದೆ. ಹೀಗಾಗಿ ಆರೋಪಿಗೆ ವಿಧಿಸಿದ್ದ ಮರಣದಂಡನೆಯನ್ನು ರದ್ದುಗೊಳಿಸಿ ಬಿಡುಗಡೆ ಮಾಡಲು ಆದೇಶ ನೀಡಿದೆ.


ಬಾಲಾಪರಾಧಿಗೆ ಮೂರು ವರ್ಷಗಳ ಜೈಲು ಶಿಕ್ಷೆ


ಜುವೆನೈಲ್ ಜಸ್ಟೀಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ, 2015 (2015 ಕಾಯಿದೆ) ಅಡಿಯಲ್ಲಿ ಬಾಲಪರಾಧಿಯನ್ನು ಮರಣದಂಡನೆ ಮತ್ತು ಗರಿಷ್ಠ ಶಿಕ್ಷೆಗೆ ಒಳಪಡಿಸಲಾಗುವುದಿಲ್ಲ ಬದಲಿಗೆ ಮೂರು ವರ್ಷಗಳ ಶಿಕ್ಷೆಯನ್ನು ವಿಧಿಸಬಹುದು ಎಂದು ನ್ಯಾಯಪೀಠ ತೀರ್ಪಿತ್ತಿದೆ. ಆದರೆ ಪ್ರಕರಣದ ದೋಷಿ ನಾರಾಯಣ್ ಚೇತನ್‌ರಾಮ್ ಚೌಧರಿ ಕಳೆದ 28 ವರ್ಷಗಳಿಂದ ಬಂಧನಲ್ಲಿದ್ದು ತಕ್ಷಣವೇ ಆತನನ್ನು ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿದೆ.


ನಾರಾಯಣ್ ಚೇತನ್‌ರಾಮ್ ಎಸಗಿದ ಅಪರಾಧವೇನು?


ನಾರಾಯಣ್ ತನ್ನ ಇನ್ನಿಬ್ಬರು ಸಹಚರರೊಂದಿಗೆ ಒಬ್ಬರು ಗರ್ಭಿಣಿ ಮಹಿಳೆ ಸೇರಿದಂತೆ ಐವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳನ್ನು ಪೂನಾದಲ್ಲಿ ಹತ್ಯೆಗೈದಿದ್ದನು. ಆತನನ್ನು 1994 ರಂದು ರಾಜಸ್ಥಾನದಲ್ಲಿ ಬಂಧಿಸಲಾಯಿತು ಹಾಗೂ ಆತ 28 ಕ್ಕಿಂತ ಅಧಿಕ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ. ವಿಚಾರಣಾ ನ್ಯಾಯಾಲಯವು 1998 ರಲ್ಲಿ ಆತನಿಗೆ ಮರಣದಂಡನೆ ವಿಧಿಸಿ ದೋಷಿ ಎಂದು ತೀರ್ಪು ನೀಡಿತ್ತು. ಹೈಕೋರ್ಟ್ ಶಿಕ್ಷೆಯನ್ನು ದೃಢಪಡಿಸಿತು ಮತ್ತು ಅಪೆಕ್ಸ್ ಕೋರ್ಟ್ ಕೂಡ ಶಿಕ್ಷೆಯನ್ನು ದೃಢಪಡಿಸಿತು. ನಂತರ, ಮರುಪರಿಶೀಲನಾ ಅರ್ಜಿಯನ್ನು ಸಲ್ಲಿಸಲಾಯಿತು, ಅದನ್ನು ಅಂತಿಮವಾಗಿ ವಜಾಗೊಳಿಸಲಾಯಿತು.


ಇದನ್ನೂ ಓದಿ: Higher Education ಕೋರ್ಸ್​ಗಳ ಫುಲ್​ ಫಾರ್ಮ್​​​ ಲಿಸ್ಟ್​ ಇಲ್ಲಿದೆ ನೋಡಿ


ಬಾಲಾಪರಾಧ ನ್ಯಾಯ ಕಾಯಿದೆ, 2015 ರ 9(2) ರ ಅಡಿಯಲ್ಲಿ ನಾರಾಯಣ್ ಅಪರಾಧದ ಆಯೋಗದ ಸಮಯದಲ್ಲಿ ಬಾಲಾಪರಾಧಿಯಾಗಿದ್ದನು ಎಂದು ಪ್ರತಿಪಾದಿಸಲಾಯಿತು. 2019 ರಲ್ಲಿ, ಅರ್ಜಿದಾರರ ಬಾಲಾಪರಾಧಿ ಎಂಬುದನ್ನು ನಿರ್ಧರಿಸಲು ಮತ್ತು ವರದಿಯನ್ನು ಕಳುಹಿಸಲು ಪುಣೆಯ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಿಗೆ (ವಿಚಾರಣೆ ಮಾಡುವ ನ್ಯಾಯಾಧೀಶರು) ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು. ತನಿಖಾ ನ್ಯಾಯಾಲಯ ಸ್ವೀಕರಿಸಿರುವ ವರದಿಯ ಅನ್ವಯ ಅಪರಾಧವೆಸಗುವ ಸಮಯದಲ್ಲಿ ನಾರಾಯಣ್ ಹನ್ನೆರಡರ ಬಾಲಕನಾಗಿದ್ದನು ಎಂಬುದು ಸಾಬೀತಾಯಿತು.


ಚಾರ್ಜ್‌ಶೀಟ್‌ನ ಅನ್ವಯ ಅಪರಾಧವೆಸಗುವ ಸಮಯದಲ್ಲಿ ನಾರಾಯಣ್ 20 ರ ಹರೆಯದವನಾಗಿದ್ದನು. ಇನ್ನು 2019 ರ 30 ನೇ ಜನವರಿಯಂದು ಸಲ್ಲಿಸಿರುವ ಜನನ ಪ್ರಮಾಣ ಪತ್ರದ ಅನ್ವಯ ನಾರಾಯಣ್ 1.02.1982 ರಂದು ಜನಿಸಿದ್ದನು ಎಂಬುದಾಗಿ ತಿಳಿದು ಬಂದಿದೆ. ಹಾಗಾಗಿ ಅಪರಾಧವೆಸಗುವ ಸಮಯದಲ್ಲಿ ನಾರಾಯಣ್ 12 ವರ್ಷ 6 ತಿಂಗಳ ವಯಸ್ಸಾಗಿರಬಹುದು ಎಂಬುದಾಗಿ ತೀರ್ಮಾನಿಸಲಾಗಿದೆ.




ಮೂರನೇ ತರಗತಿಯವರೆಗೆ ಓದಿದ್ದ ನಾರಾಯಣ್


25 ವರ್ಷಗಳ ಕಾಲ ಪೂನಾದ ಯರವಾಡಾ ಜೈಲಿನಲ್ಲಿದ್ದ ನಾರಾಯಣ್,ಜೈಲು ಕಂಬಿಯ ಹಿಂದೆಯೇ ಮರಾಠಿ ಹಾಗೂ ಇಂಗ್ಲೀಷ್ ಭಾಷೆಯನ್ನು ಕಲಿತುಕೊಂಡಿದ್ದಾನೆ ಅಂತೆಯೇ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಗಳಿಸಿದ್ದಾನೆ. ಜಲಬ್ಸರ್‌ನಲ್ಲಿರುವ ರಾಜ್‌ಕಿಯಾ ಆದರ್ಶ್ ಉಚ್ ಮಾಧ್ಯಮಿಕ ವಿದ್ಯಾಲಯದ ರಿಜಿಸ್ಟರ್, ಚೌಧರಿ ಮೇ 15, 1989 ರಂದು 3 ನೇ ತರಗತಿಯವರೆಗೆ ಮಾತ್ರ ಶಾಲೆಗೆ ಹೋಗಿರುವುದಾಗಿ ತೋರಿಸಿದೆ.


ಅಪರೂಪದಲ್ಲೇ ಅಪರೂಪದ ಪ್ರಕರಣ


ಹೀಗಾಗಿ ಸರ್ವೋಚ್ಛ ನ್ಯಾಯಾಲಯವು ಅಪರೂಪದಲ್ಲೇ ಇದೊಂದು ಅಪರೂಪದ ಪ್ರಕರಣ ಎಂಬುದಾಗಿ ತೀರ್ಮಾನಿಸಿ ಐವರು ಮಹಿಳೆಯರು ಹಾಗೂ ಇಬ್ಬರು ಮಕ್ಕಳ ಹತ್ಯೆಯ ಆರೋಪಿ ನಾರಾಯಣ್ ಹತ್ಯೆಯ ಸಂದರ್ಭದಲ್ಲಿ ಇತರ ಇಬ್ಬರೊಂದಿಗೆ ಮರಣದಂಡನೆ ವಿಧಿಸಿದಾಗ ಅವನು ಬಾಲಾಪರಾಧಿ ಎಂದು ತೀರ್ಪು ನೀಡಿತ್ತು.

top videos


    ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು, ಚೌಧರಿ ಅವರನ್ನು 28 ವರ್ಷಗಳಿಗೂ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ ಕಾರಣ,  ವಿಚಾರಣೆ ಸಮಯದಲ್ಲಿ ಆತನನ್ನು ವಯಸ್ಕನಂತೆ ವಿಚಾರಿಸಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ ಎಂಬುದನ್ನು ಕಂಡುಕೊಂಡ ಸುಪ್ರೀಂ ಕೋರ್ಟ್, ಆತನನ್ನು ಜೈಲಿನಲ್ಲಿರುವ ಸುಧಾರಣಾ ಮನೆಯಿಂದ ಕೂಡಲೇ ಬಿಡುಗಡೆಗೊಳಿಸಬೇಕು ಎಂದು ತೀರ್ಪಿತ್ತಿದೆ.

    First published: