Nita Ambani in Sports Business Summit | ಲಂಡನ್ನಲ್ಲಿ ಭಾರತದ ನಾರಿ ಶಕ್ತಿ, ಯುವ ಶಕ್ತಿ, ಕ್ರೀಡಾ ಶಕ್ತಿ ಜಾಹೀರುಪಡಿಸಿದ ನೀತಾ ಅಂಬಾನಿ

ಮಹಿಳೆಯರ ಅಭೂತಪೂರ್ವ ಶಕ್ತಿ ಬಗ್ಗೆ ನನಗೆ ಪೂರ್ಣ ಭರವಸೆ ಇದೆ. ಮಹಿಳೆಯರು ಮಹಿಳೆಯರೊಂದಿಗೆ ಒತ್ತಾಸೆಗೆ ನಿಂತರೆ ಅಪೂರ್ವ ಸಾಧನೆಗಳು ಹೊರಹೊಮ್ಮುತ್ತವೆ ಎಂದು ಶೃಂಗಸಭೆಯಲ್ಲಿ ನೀತಾ ಅಂಬಾನಿ ಹೇಳಿದ್ಧಾರೆ.

news18
Updated:October 8, 2019, 9:32 PM IST
Nita Ambani in Sports Business Summit | ಲಂಡನ್ನಲ್ಲಿ ಭಾರತದ ನಾರಿ ಶಕ್ತಿ, ಯುವ ಶಕ್ತಿ, ಕ್ರೀಡಾ ಶಕ್ತಿ ಜಾಹೀರುಪಡಿಸಿದ ನೀತಾ ಅಂಬಾನಿ
ನೀತಾ ಅಂಬಾನಿ
news18
Updated: October 8, 2019, 9:32 PM IST
ಲಂಡನ್(ಅ. 08): ಇಂಗ್ಲೆಂಡ್ ರಾಜಧಾನಿಯಲ್ಲಿ ಅ. 10ರವರೆಗೆ ನಡೆಯುತ್ತಿರುವ ದಿ ಬ್ಯುಸಿನೆಸ್ ಸ್ಪೋರ್ಟ್ಸ್ ಶೃಂಗ ಸಭೆಯಲ್ಲಿ ಇವತ್ತು ನೀತಾ ಅಂಬಾನಿ ಅವರು ಭಾಷಣ ಮಾಡಿದರು. “ಬಿಲಿಯನ್ ಡ್ರೀಮ್ಸ್: ದಿ ಇಂಡಿಯಾ ಆಪರ್ಚುನಿಟಿ” ವಿಷಯದ ಕುರಿತು ಮಾತನಾಡಿದ ರಿಲಾಯನ್ಸ್ ಫೌಂಡೇಶನ್ ಮುಖ್ಯಸ್ಥೆ ನೀತಾ ಅಂಬಾನಿ ಅವರು ಭಾರತದ ಕ್ರೀಡಾ ಶಕ್ತಿ, ನಾರಿ ಶಕ್ತಿ ಮತ್ತು ಯುವ ಶಕ್ತಿಯ ಬಗ್ಗೆ ಹೊಸ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರು.

ನಮಸ್ಕಾರ ಎಂದು ಭಾಷಣ ಆರಂಭಿಸಿದ ನೀತಾ ಅವರು, ತಮಗೆ ಈ ವೇದಿಕೆ ಏರಲು ಅವಕಾಶ ಮಾಡಿಕೊಟ್ಟ ಆಯೋಜಕರಿಗೆ ಧನ್ಯವಾದ ಅರ್ಪಿಸಿದರು. “ಇವರು ನನ್ನನ್ನು ಭಾರತದ ಕ್ರೀಡೆಯ ಮೊದಲ ಮಹಿಳೆ ಎಂದು ಪರಿಗಣಿಸಿದ್ದು ನನ್ನ ಪಾಲಿಗೆ ಬಹಳ ಗೌರವವಾದುದು. ನಾನಿಲ್ಲಿ ಬಂದಿರುವುದು ಭಾರತದ ಎಲ್ಲಾ ಮಹಿಳೆಯರಿಗೂ ಗೌರವದ ವಿಷಯವಾಗಿದೆ. ಭಾರತದಲ್ಲಿರುವ ಎಲ್ಲಾ ಮಹಿಳೆಯರ ಸಬಲೀಕರಣ ಮಾಡುವುದು ನನ್ನ ಧ್ಯೇಯ ಮತ್ತು ಗುರಿಯಾಗಿದೆ” ಎಂದವರು ಹೇಳಿದರು.

ಇದನ್ನೂ ಓದಿ: ರಿಲಯನ್ಸ್​ ಫೌಂಡೇಷನ್ ಅಧ್ಯಕ್ಷೆ ನೀತಾ ಅಂಬಾನಿ ಸಾಧನೆಯ ಹಾದಿ ಇಲ್ಲಿದೆ...



Loading...

“ಬುದ್ಧ, ಮಹಾತ್ಮ ಗಾಂಧಿ, ಮದರ್ ತೆರೆಸಾ ನಾಡಿನಿಂದ ಬಂದವಳು. ನಾನು ಕೋಟ್ಯಂತರ ಭಾರತೀಯರ ಆಶೋತ್ತರಗಳನ್ನು ಪ್ರತಿನಿಧಿಸುತ್ತೇನೆ. ಭಾರತದಲ್ಲಿ ವಿಶ್ವದ ಆರನೇ ಒಂದು ಭಾಗದ ಜನರು ಇದ್ದಾರೆ. 130 ಕೋಟಿ ಜನರ ಇಚ್ಛಾಶಕ್ತಿಯಿಂದ ಕೂಡಿರುವ ದೇಶ ನಮ್ಮದು. ಈ 130 ಕೋಟಿ ಜನರ ಪೈಕಿ 60 ಕೋಟಿ ಮಂದಿ 25 ವರ್ಷದೊಳಗಿನವರಾಗಿದ್ದಾರೆ” ಎಂದು ಭಾರತದ ಯುವ ಶಕ್ತಿಯನ್ನು ನೀತಾ ಅಂಬಾನಿ ತೋರ್ಪಡಿಸಿದರು.


“ಭಾರತದಲ್ಲಿ ಮಹಿಳೆಯರು ಹಿಂದೆಂದೂ ಕಾಲಿಡದ ವಿವಿಧ ಕ್ಷೇತ್ರಗಳಲ್ಲಿ ಇಂದು ಮುನ್ನುಗ್ಗುತ್ತಿದ್ದಾರೆ… ಮಹಿಳೆಯರ ಅಭೂತಪೂರ್ವ ಶಕ್ತಿ ಬಗ್ಗೆ ನನಗೆ ಪೂರ್ಣ ಭರವಸೆ ಇದೆ. ಮಹಿಳೆಯರು ಮಹಿಳೆಯರೊಂದಿಗೆ ಒತ್ತಾಸೆಗೆ ನಿಂತರೆ ಅಪೂರ್ವ ಸಾಧನೆಗಳು ಹೊರಹೊಮ್ಮುತ್ತವೆ. ಮಹಿಳೆ ಮನಸು ಮಾಡಿದರೆ ರಾಷ್ಟ್ರ ಮತ್ತು ಅಂತಾರಾಷ್ಟ್ರ ಮಟ್ಟದಲ್ಲಿ ಕ್ರೀಡಾಪಟುವಾಗಿಯಷ್ಟೇ ಅಲ್ಲ, ಕ್ರೀಡೆಯ ಅಭಿವೃದ್ಧಿಯಲ್ಲೂ ಮುಂದಿರುತ್ತಾಳೆ” ಎಂದು ನೀತಾ ವಿಶ್ವಾಸ ವ್ಯಕ್ತಪಡಿಸಿದರು.

ಮುಂಬೈ ಇಂಡಿಯನ್ಸ್ ಐಪಿಎಲ್ ಟೀಮ್​ನ ಮಾಲಕಿಯಾಗಿರುವ ನೀತಾ ಅಂಬಾನಿ ಭಾರತದಲ್ಲಿ ಐಪಿಎಲ್​ನಿಂದಾಗಿ ಮಹಿಳೆಯರು ಕ್ರಿಕೆಟ್​ನತ್ತ ಆಕರ್ಷಿತರಾಗಿರುವ ಬಗ್ಗೆ ಸುಳಿವು ನೀಡಿದರು. “ಸಾಮಾನ್ಯವಾಗಿ ಕ್ರಿಕೆಟನ್ನು ಹೆಚ್ಚಾಗಿ ವೀಕ್ಷಿಸುವುದು ಪುರುಷರೇ ಆಗಿದ್ದರು. ಆದರೆ, ಕಳೆದ 10 ವರ್ಷದಲ್ಲಿ ಮಹಿಳೆಯರು ಕ್ರಿಕೆಟ್ ವೀಕ್ಷಿಸುವ ಪ್ರಮಾಣ ಹೆಚ್ಚಾಗಿದೆ” ಎಂದು ನೀತಾ ಅವರು ಐಪಿಎಲ್ ಯಶಸ್ಸನ್ನು ಮುಂದಿಟ್ಟರು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...