ಬಡತನದಲ್ಲಿ ಬೆಳೆದು ಸಾಮ್ರಾಜ್ಯ ಕಟ್ಟಿದ್ದ ದೋಸೆ ಕಿಂಗ್​ ಹೆಣ್ಣಿಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ಕಥೆ

ಇದರಿಂದ ತೀವ್ರ ಆಕ್ರೋಶಗೊಂಡ ಪಿ. ರಾಜಗೋಪಾಲ್​​, 2001ರಲ್ಲಿ ಸನತ್ ಕುಮಾರ್ ಅವರನ್ನು ಅಪಹರಿಸಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

Ganesh Nachikethu
Updated:July 3, 2019, 4:41 PM IST
ಬಡತನದಲ್ಲಿ ಬೆಳೆದು ಸಾಮ್ರಾಜ್ಯ ಕಟ್ಟಿದ್ದ ದೋಸೆ ಕಿಂಗ್​ ಹೆಣ್ಣಿಗಾಗಿ ಜೀವಾವಧಿ ಶಿಕ್ಷೆಗೆ ಗುರಿಯಾದ ಕಥೆ
ಶರವಣ ಭವನ ಹೋಟೆಲ್​​ ಮಾಲೀಕ ಪಿ. ರಾಜಗೋಪಾಲ್​​
  • Share this:
ಬೆಂಗಳೂರು(ಜುಲೈ.03): ಕೊಲೆ ಪ್ರಕರಣವೊಂದರಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಖ್ಯಾತ ರೆಸ್ಟೋರೆಂಟ್​​ 'ಶರವಣ ಭವನ'ದ ಮಾಲೀಕ ಪಿ. ರಾಜಗೋಪಾಲ್‌ ಸದ್ಯದಲ್ಲೇ ಜೈಲು ಸೇರಲಿದ್ದಾರೆ. ಪ್ರಿನ್ಸ್‌ ಶಾಂತಕುಮಾರ್‌ ಎಂಬವರ ಕೊಲೆ ಘಟನೆಗೆ ಸಂಬಂಧಿಸಿದಂತೆ, ಇದೇ ಜುಲೈ 7ರೊಳಗೆ ಶರಣಾಗುವಂತೆ ಶರವಣ ಭವನ ಮಾಲೀಕರಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿತ್ತು. ಈ ಆದೇಶದಂತೆ ಆರೋಪಿ ಪಿ. ರಾಜಗೋಪಾಲ್‌ ಜೈಲು ಕಂಬಿ ಎಣಿಸಲಿದ್ದಾರೆ.

ಈ ಹಿಂದೆ ಇವರದ್ದೇ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಸಹಾಯಕ ಮ್ಯಾನೇಜರ್ ಮಗಳು ಜೀವಜ್ಯೋತಿ ಎಂಬುವರನ್ನು ಪಿ. ರಾಜಗೋಪಾಲ್ ಮದುವೆ ಆಗಬೇಕೆಂದು ಬಯಸಿದ್ದರು. ಆದರೆ, ಈಗಾಗಲೇ ರಾಜಗೋಪಾಲ್​​ಗೆ ಎರಡು ಮದುವೆಯಾಗಿದ್ದ ಕಾರಣಕ್ಕೆ ಜೀವಜ್ಯೋತಿ ಮದುವೆಗೆ ನಿರಾಕರಿಸಿದ್ದರು.

ಈ ಬೆನ್ನಲ್ಲೇ 1999ರಲ್ಲಿ ಉದ್ಯಮಿ ಸನತ್ ಕುಮಾರ್ ಎಂಬುವರನ್ನು ಜೀವಜ್ಯೊತಿ ಮದುವೆಯಾದರು. ಇದರಿಂದ ತೀವ್ರ ಆಕ್ರೋಶಗೊಂಡ ಪಿ. ರಾಜಗೋಪಾಲ್​​, 2001ರಲ್ಲಿ ಸನತ್ ಕುಮಾರ್ ಅವರನ್ನು ಅಪಹರಿಸಿ ಕೊಲೆಗೈದಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಇದನ್ನೂ ಓದಿ: ಚಾಂದನಿ ಚೌಕ್​ ಬಳಿಯ ಕೋಮು-ಸಂಘರ್ಷ ಸಂಬಂಧ ದೆಹಲಿ ಪೊಲೀಸ್ ಕಮಿಷನರ್​ಗೆ ಸಮನ್ಸ್​ ನೀಡಿದ ಗೃಹ ಸಚಿವ ಅಮಿತ್ ಶಾ

ಶಾಂತಕುಮಾರ್ ಶವ ಕೊಡೈಕನಾಲ್ ಬೆಟ್ಟದ ಸಮೀಪ ಪತ್ತೆಯಾದ ಬಳಿಕ ಈ ಘಟನೆ ಬೆಳಕಿಗೆ ಬಂದಿತ್ತು. ಪೊಲೀಸರು ರಾಜಗೋಪಾಲ್ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), ಸೆಕ್ಷನ್ 364 (ಅಪಹರಣ) ಮತ್ತು ಸೆಕ್ಷನ್ 2019 (ಸಾಕ್ಷ್ಯಗಳ ನಾಶ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.

ಬಳಿಕ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​ ನ್ಯಾಯಮೂರ್ತಿ ಎನ್.ವಿ ರಮಣ ನೇತೃತ್ವದ ನ್ಯಾಯಪೀಠ ಆರೋಪಿ ಪಿ. ರಾಜಗೋಪಾಲ್ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಇದೇ ಜುಲೈ 7 ರಂದು ಶರಣಾಗುವಂತೆಯೂ ಪಿ. ರಾಜಗೋಪಾಲ್ ಅವರಿಗೆ ಸುಪ್ರೀಂ ಕೋರ್ಟ್ ಆದೇಶಿಸಿತ್ತು.

ಇದನ್ನೂ ಓದಿ: Drought Monitor: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಬರಪ್ರವಾಸ ಮುಂದೂಡಿಕೆ; ಕಾರಣವೇನು ಗೊತ್ತಾ?ತಮಿಳುನಾಡು ಮೂಲದ ಶರವಣ ಭವನ ತನ್ನ ಶಾಖೆಗಳನ್ನು ಲಂಡನ್, ಸಿಂಗಾಪೂರ ಸೇರಿದಂತೆ ವಿದೇಶಗಳಲ್ಲೂ ತೆರೆದಿದೆ. ಮೃದುವಾದ ಇಡ್ಲಿ, ದೋಸೆ, ವಡೆಯಂತಹ ತಿನಿಸುಗಳಿಂದಾಗಿ ಈ ಹೋಟೆಲ್​​ ಖ್ಯಾತಿ ಹೊಂದಿದೆ.
--------------
First published:July 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading