• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Wedding Vows: ಭೂಮಿಗಿಂತ 10000 ಅಡಿ ಮೇಲೆ ಮದುವೆ ನಿಶ್ಚಯಕ್ಕೆ ಶುರುವಾಯ್ತು ವೇದಿಕೆ! ಏನಿದು ಹೊಸ ಟ್ರೆಂಡ್?

Wedding Vows: ಭೂಮಿಗಿಂತ 10000 ಅಡಿ ಮೇಲೆ ಮದುವೆ ನಿಶ್ಚಯಕ್ಕೆ ಶುರುವಾಯ್ತು ವೇದಿಕೆ! ಏನಿದು ಹೊಸ ಟ್ರೆಂಡ್?

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಆರು ಗಂಟೆಗಳ ಗಗನನೌಕೆ ನೆಪ್ಚೂನ್ ಹಾರಾಟವು ಅತ್ಯಂತ ಅದ್ಭುತವಾದದ್ದು ಎಂದು ನಿರೀಕ್ಷಿಸಲಾಗಿದೆ, ಏಕೆಂದರೆ ಇದು ಅತಿಥಿಗಳನ್ನು ಭೂಮಿಯಿಂದ 1,00,000 ಅಡಿ ಎತ್ತರಕ್ಕೆ ಕರೆದೊಯ್ಯುತ್ತದೆ. ನಂತರ ಮತ್ತೆ ಮದುವೆಯಾದ ನಂತರ ಕೆಳಗೆ ತಂದು ಬಿಡುತ್ತದೆ.

 • Share this:

ಮೊದಲೆಲ್ಲಾ ಹಿರಿಯರು ಮದುವೆಯನ್ನ ನಿಶ್ಚಯ ಮಾಡಿದರೆ ಮನೆಯಲ್ಲೋ, ಊರ ದೇವಸ್ಥಾನದಲ್ಲೋ ಮದುವೆ (Wedding Vows) ಆಗುತ್ತಿತ್ತು. ಆನಂತರ ಸ್ವಲ್ಪ ಮಟ್ಟಿಗೆ ಕಾಲ ಬದಲಾದ ನಂತರ ಜನರು ತಮ್ಮ ಮನೆಯ ಮದುವೆಯನ್ನು ದೊಡ್ಡ ದೊಡ್ಡ ಕಲ್ಯಾಣ ಮಂಟಪಗಳಲ್ಲಿ ಮಾಡಲು ಶುರು ಮಾಡಿದರು.


ಆದರೆ ಈಗೆಲ್ಲಾ ದುಡ್ಡಿರುವ ಜನರು ತಮ್ಮ ಮಕ್ಕಳ ಮದುವೆಯನ್ನು ಯಾವುದೋ ಒಂದು ರೆಸಾರ್ಟ್ ನಲ್ಲೋ ಅಥವಾ ಗೋವಾ, ರಾಜಸ್ಥಾನ, ಜೈಪುರ್.. ಹೀಗೆ ಡೆಸ್ಟಿನೇಶನ್ ವೆಡ್ಡಿಂಗ್ ಅಂತ ಶುರು ಮಾಡಿಕೊಂಡಿದ್ದಾರೆ. ಸಮಯ ಹೋದಂತೆ ಹೊಸ ಹೊಸ ಟ್ರೆಂಡ್ ಗಳು ಬರುತ್ತಲೇ ಇರುತ್ತವೆ ನೋಡಿ.


ಈ ಮದುವೆಗಳಿಗೂ ಸಹ ಹೊಸ ಟ್ರೆಂಡ್ ಎಂಟ್ರಿ ಕೊಟ್ಟಿದೆ ನೋಡಿ, ಅದೇನು ಅಂತೀರಾ? ಸುಂದರವಾದ ಭೂದೃಶ್ಯಗಳಿಂದ ಸುತ್ತುವರೆದಿರುವ ಪ್ರಕೃತಿಯ ಮಡಿಲಲ್ಲಿ ಸಂಗಾತಿಯ ಕೈ ಹಿಡಿಯುವುದು, ಮದುವೆಯಾಗುವುದು ಒಂದು ಟ್ರೆಂಡ್ ಆದರೆ, ಹೊಸ ಟ್ರೆಂಡ್ ಬಾಹ್ಯಾಕಾಶದಲ್ಲಿ ಮದುವೆ ಮಾಡಿಸಲು ಶುರು ಮಾಡಿದ್ದಾರಂತೆ.


ಇದನ್ನೂ ಓದಿ: Organ Donation: ಮೆದುಳು ನಿಷ್ಕ್ರಿಯಗೊಂಡು ವಿದೇಶಿ ಪ್ರವಾಸಿ ಮೃತ್ಯು; ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ


ಈಗೆಲ್ಲಾ ಮದುವೆ ಸಮಾರಂಭ ಎಂದರೆ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಬಂಧು-ಬಳಗದವರು ಸೇರುವ ಮತ್ತು ಆನಂದದಿಂದ ಸಂಭ್ರಮಿಸುವ ಮದುವೆ ಸಮಾರಂಭವಾಗಿದೆ.


ಬಾಹ್ಯಾಕಾಶದಲ್ಲಿ ಮದುವೆ ಮಾಡಿಸುತ್ತಿದೆಯಂತೆ ಈ ಕಂಪನಿ


ಈಗ, ಒಂದು ಕಂಪನಿಯು ಪ್ರತಿ ದಂಪತಿಗಳಿಗೆ ಎಂದರೆ ಪ್ರತಿ ವ್ಯಕ್ತಿಗೆ 1 ಕೋಟಿ ರೂಪಾಯಿಯಂತೆ ಚಾರ್ಜ್ ಮಾಡಿ ಬಾಹ್ಯಾಕಾಶದಲ್ಲಿ ಮದುವೆಯಾಗಲು ಅವಕಾಶ ನೀಡುತ್ತಿದೆ ನೋಡಿ.


ಹೌದು.. ಸ್ಪೇಸ್ ಪರ್ಸ್ಪೆಕ್ಟಿವ್ ಎಂದು ಕರೆಯಲ್ಪಡುವ ಕಂಪನಿಯು ಭೂಮಿಯ ಸ್ವಲ್ಪ ಮೇಲೆ ಹೋಗಿ ನೋಡಿದರೆ ಹೇಗೆ ಕಾಣುತ್ತದೆ ಅನ್ನೋ ಒಂದು ಕುತೂಹಲ ಅಂಶವನ್ನು ಇರಿಸಿಕೊಂಡು ಹೊಸ ಯೋಜನೆ ಶುರು ಮಾಡಿದೆ. ದೊಡ್ಡ ದೊಡ್ಡ ಕಿಟಕಿಗಳನ್ನು ಹೊಂದಿರುವ ಇಂಗಾಲ-ತಟಸ್ಥ ಬಲೂನ್ ವೊಂದರಲ್ಲಿ ಕಕ್ಷೆಗೆ ಕಳುಹಿಸುವ ಮೂಲಕ ದಂಪತಿಗಳಿಗೆ ಅಲ್ಲಿಯೇ ಮದುವೆಯಾಗಲು ಅವಕಾಶವನ್ನು ನೀಡುತ್ತಿದೆ ಎಂದು ಹೇಳಿದೆ.


ಆರು ಗಂಟೆಗಳ ಗಗನನೌಕೆ ನೆಪ್ಚೂನ್ ಹಾರಾಟವು ಅತ್ಯಂತ ಅದ್ಭುತವಾದದ್ದು ಎಂದು ನಿರೀಕ್ಷಿಸಲಾಗಿದೆ, ಏಕೆಂದರೆ ಇದು ಅತಿಥಿಗಳನ್ನು ಭೂಮಿಯಿಂದ 1,00,000 ಅಡಿ ಎತ್ತರಕ್ಕೆ ಕರೆದೊಯ್ಯುತ್ತದೆ. ನಂತರ ಮತ್ತೆ ಮದುವೆಯಾದ ನಂತರ ಕೆಳಗೆ ತಂದು ಬಿಡುತ್ತದೆ.


ಸಂಸ್ಥೆಯು ಈ ಪ್ರಕ್ರಿಯೆಯನ್ನು 2024 ರಲ್ಲಿ ಪ್ರಾರಂಭಿಸಲು ಯೋಜಿಸಿದೆ ಮತ್ತು ಈಗಾಗಲೇ 1,000 ಟಿಕೆಟ್ ಗಳನ್ನು ಮಾರಾಟ ಮಾಡಿದೆ. ಕಂಪನಿಯ ಸ್ಪೇಸ್ ಬಲೂನ್ ಗಗನನೌಕೆ ನೆಪ್ಚೂನ್ ಅನ್ನು ಕಕ್ಷೆಗೆ ಉಡಾಯಿಸುತ್ತದೆ ಮತ್ತು ಇದನ್ನು ರಾಕೆಟ್ ಗಳ ಬಳಕೆಯಿಲ್ಲದೆ ಅಥವಾ ಇಂಗಾಲದ ಹೆಜ್ಜೆಗುರುತು ಇಲ್ಲದೆ ನವೀಕರಿಸಬಹುದಾದ ಹೈಡ್ರೋಜನ್ ನಿಂದ ಚಾಲನೆ ಮಾಡಲಾಗುತ್ತದೆ.


ಇದನ್ನೂ ಓದಿ: Canada: ನಕಲಿ ಕಾಲೇಜು ಪ್ರವೇಶ ಪತ್ರ ಪಡೆದ ಪ್ರಕರಣ; ಭಾರತೀಯ ವಿದ್ಯಾರ್ಥಿಯ ಗಡಿಪಾರಿಗೆ ಮುಂದಾದ ಕೆನಡಾ!


ಏನೆಲ್ಲಾ ವ್ಯವಸ್ಥೆಗಳನ್ನು ಮಾಡಿದೆ ನೋಡಿ ಈ ಕಂಪನಿ


ವೆಬ್ಸೈಟ್ ಪ್ರಕಾರ, ಜನರು ಹಾರಾಟದ ಸಮಯದಲ್ಲಿ ಸಂಪೂರ್ಣವಾಗಿ ಆನಂದಿಸಬಹುದು. ಅವರು "ಕಾಕ್ಟೈಲ್ ಗಳನ್ನು ಹಂಚಿಕೊಳ್ಳಬಹುದು ಮತ್ತು ಅವರ ಸಹ ಪ್ರಯಾಣಿಕರೊಂದಿಗೆ ಚಾಟ್ ಸಹ ಮಾಡಬಹುದು" ಎಂದು ಹೇಳಿದೆ.


ಕಂಪನಿಯು ತನ್ನ ವೆಬ್ಸೈಟ್ ನಲ್ಲಿ "ಈ ವ್ಯವಸ್ಥೆಯಲ್ಲಿ ಸಂಪೂರ್ಣ ಸುಸಜ್ಜಿತ ವಿಶ್ರಾಂತಿ ಕೊಠಡಿ ಸಹ ಇದೆ. ಸ್ಪೇಸ್ ಲಾಂಜ್ ನಿಂದ, ಎಕ್ಸ್ಪ್ಲೋರರ್ ಗಳು ಬಾಹ್ಯಾಕಾಶಕ್ಕೆ ಹಾರಿದಾಗ ಅತಿದೊಡ್ಡ ಕಿಟಕಿಗಳ ಮೂಲಕ ಆಶ್ಚರ್ಯಕರ, 360 ಡಿಗ್ರಿ ಗೋಚರತೆಯನ್ನು ಸಹ ಒದಗಿಸುತ್ತದೆ. ಹೈಸ್ಪೀಡ್ ವೈ-ಫೈ ಸಂಪರ್ಕವು ಸಹ ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಚಾಟ್ ಮಾಡಲು ಅನುವು ಮಾಡಿಕೊಡುತ್ತದೆ.


ಈ ನೆಪ್ಚೂನ್ ಗಗನನೌಕೆ ನವವಿವಾಹಿತರಿಗೆ ಸ್ಮರಣೀಯ ಅನುಭವವನ್ನು ನೀಡುತ್ತದೆ ಎಂದು ಸಂಸ್ಥೆ ಹೇಳಿದೆ. ಈ ಯೋಜನೆಯ ಸಹ-ಸಂಸ್ಥಾಪಕ ಜೇನ್ ಪೊಯಿಂಟರ್ “ನಕ್ಷತ್ರಗಳ ನಡುವೆ ಮದುವೆಯಾಗಲು ಕಾಯುವ ಪಟ್ಟಿ ಈಗಾಗಲೇ ತುಂಬಾನೇ ಉದ್ದ ಬೆಳೆದಿದೆ, ಮುಂದೆ ಬರುವುದೆಲ್ಲವೂ ಬೆಳಕಿನ ವರ್ಷಗಳು" ಎಂದು ಹೇಳಿದ್ದಾರೆ.


"ನಾವು ಈಗಾಗಲೇ ಬಾಹ್ಯಾಕಾಶದಲ್ಲಿ ಮೊದಲ ಮದುವೆಯಾಗಲು ಬಯಸುವ ಜನರನ್ನು ಹೊಂದಿದ್ದೇವೆ, ಆದ್ದರಿಂದ ಯಾರು ಮೊದಲಿಗರು ಎಂದು ನಾವು ನೋಡಲು ಕಾತುರರಾಗಿದ್ದೇವೆ" ಎಂದು ಅವರು ದಿ ಕೂಲ್ ಡೌನ್ ಗೆ ತಿಳಿಸಿದರು.

top videos  ಇದರಲ್ಲಿ ಎಂಟು ಪ್ರಯಾಣಿಕರು ಮತ್ತು ಒಬ್ಬ ಪೈಲಟ್ ಆರಾಮಾಗಿರುವಷ್ಟು ಸ್ಥಳಾವಕಾಶ ಕಲ್ಪಿಸಲಾಗಿದೆ, ಆದಾಗ್ಯೂ ಹಲವಾರು ನಿರ್ದಿಷ್ಟತೆಗಳನ್ನು ಗ್ರಾಹಕರು ಕಸ್ಟಮೈಸ್ ಮಾಡಬಹುದು, ಕ್ಯಾಪ್ಸೂಲ್ ಊಟದ ಕೋಣೆಯ ಮೇಜು ಅಥವಾ ಮದುವೆ ವೇದಿಕೆಗೆ ಸ್ಥಳಾವಕಾಶ ಕಲ್ಪಿಸಬಹುದು ಎಂದು ಪೊಯಿಂಟರ್ ಹೇಳಿದ್ದಾರೆ.

  First published: