ಆರ್​ಬಿಐ ನೂತನ ಗೌವರ್ನರ್​ನಿಂದ ಆರು ದೊಡ್ಡ ನಿರ್ಧಾರಗಳು; ಜನರ ಮೇಲೆ ಅವುಗಳ ನೇರ ಪರಿಣಾಮ​ವೇನು?

ಮೋದಿ ಸರ್ಕಾರದ ನಂತರ ಈಗ ಆರ್​ಬಿಐ ರೈತರಿಗೆ ದೊಡ್ಡ ಕೊಡುಗೆ ಘೋಷಿಸಿದೆ. ಆರ್​ಬಿಐನ ಹೊಸ ನಿರ್ಧಾರದ ಪ್ರಕಾರ, ಯಾವುದೇ ಅಡಮಾನವಿಡದೆ ರೈತರು ಈಗ 1.6 ಲಕ್ಷ ಸಾಲವನ್ನು ಪಡೆಯಬಹುದಾಗಿದೆ. ಈ ಮೊದಲು ಈ ಸಾಲದ ಮಿತಿ 1 ಲಕ್ಷ ಇತ್ತು. 

HR Ramesh | news18
Updated:February 7, 2019, 4:59 PM IST
ಆರ್​ಬಿಐ ನೂತನ ಗೌವರ್ನರ್​ನಿಂದ ಆರು ದೊಡ್ಡ ನಿರ್ಧಾರಗಳು; ಜನರ ಮೇಲೆ ಅವುಗಳ ನೇರ ಪರಿಣಾಮ​ವೇನು?
ಆರ್​ಬಿಐ
  • News18
  • Last Updated: February 7, 2019, 4:59 PM IST
  • Share this:
ನವದೆಹಲಿ: 2017ರ ಆಗಸ್ಟ್​ ನಂತರ ಮೊದಲ ಬಾರಿಗೆ ರೆಪೋ ದರ ಕಡಿತಗೊಳಿಸಲಾಗಿತ್ತು. ಇದು ಉಳಿತಾಯ ದರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳಿದ್ದರು. ಅದೇ ಸಮಯದಲ್ಲಿ, ಸಾಲದ ಮೇಲಿನ ಇಎಂಐ ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆರ್​ಬಿಐ ಹೊಸದಾಗಿ ತೆಗೆದುಕೊಂಡ ಕೆಲ ದೊಡ್ಡ ನಿರ್ಧಾರಗಳ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ.

ಆರ್​ಬಿಐ ಶೇ.0.25 ರೆಪೋ ದರವನ್ನು ಕಡಿತ ಮಾಡಿದೆ. ಇದರಿಂದಾಗಿ ಶೇ.6.50ರಷ್ಟಿದ್ದ ರೆಪೋ ದರ ಶೇ.6.25 ಆಗಿದೆ. ರೆಪೋ ದರವನ್ನು ಕಡಿಮೆ ಮಾಡಲಾಗುತ್ತದೆ ಎಂದು ಈ ಮೊದಲೇ ನಿರೀಕ್ಷಿಸಲಾಗಿತ್ತು. ಇದರಿಂದ ಸಾಲ ಕಡಿಮೆಯಾಗಲಿದೆ. ರೆಪೋ ದರ ಕಡಿಮೆಗೊಳಿಸಿರುವುದರಿಂದ ಆಯಾ ಬ್ಯಾಂಕ್​ಗಳ ಅನುಗುಣವಾಗಿ ಗ್ರಾಹಕರಿಗೆ ಯಾವಾಗ ಎಷ್ಟು ಅನುಕೂಲವಾಗಲಿದೆ ಎಂಬುದನ್ನು ತಿಳಿಯಬೇಕಿದೆ. ಮುಂದಿನ ವಾರ ಆರ್​ಬಿಐ ನೂತನ ಗೌವರ್ನರ್​ ಎಲ್ಲ ಬ್ಯಾಂಕ್​ ಅಧಿಕಾರಿಗಳ ಸಭೆ ಕರೆದಿದ್ದಾರೆ. ಇಲ್ಲಿ ಆರ್​ಬಿಐ ಜಾರಿಗೆ ತಂದಿರುವ ಆರು ನೀತಿ, ನಿರ್ಧಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬಹುಶಃ ಆರ್​ಬಿಐನ ಈ ಆರು ದೊಡ್ಡ ನಿರ್ಧಾರಗಳು ನೇರವಾಗಿ ನಿಮ್ಮ ಜೇಬಿಗೆ ನೇರ ಪರಿಣಾಮ ಬೀರಬಹುದು.

ಇನ್ನು ಎರಡು ಅಥವಾ ಮೂರು ವಾರದಲ್ಲಿ ಬ್ಯಾಂಕ್​ ಅಧಿಕಾರಿಗಳನ್ನು ಭೇಟಿಯಾಗಲಿದ್ದೇನೆ. ದರ ಕಡಿಮೆಗೊಳಿಸಿದ್ದರ ಲಾಭ ಗ್ರಾಹಕರಿಗೆ ಸಿಗುವ ಬಗ್ಗೆ ಅವರೊಂದಿಗೆ ಚರ್ಚೆ ನಡೆಸುತ್ತೇನೆ. ಆಯಾ ಬ್ಯಾಂಕ್​ ಅನುಗುಣವಾಗಿ ಸಾಲದ ಮೇಲಿನ ಬಡ್ಡಿ ಕಡಿಮೆಯಾಗಲಿದೆ ಎಂದು ಆರ್​ಬಿಐ ಗೌವರ್ನರ್​ ಶಕ್ತಿಕಾಂತ್ ದಾಸ್​ ತಿಳಿಸಿದ್ದಾರೆ.

ಇದನ್ನು ಓದಿ: ರೆಪೋ ದರ ಇಳಿಸಿದ ಆರ್​ಬಿಐ; ಕಡಿಮೆಯಾಗಲಿದೆಯಾ ಬಡ್ಡಿ ದರ?

ಆರ್​ಬಿಐ ತೆಗೆದುಕೊಂಡಿರುವ ಆರು ನಿರ್ಧಾರಗಳು

1. ಇಎಂಐ ಕಡಿಮೆಯಾಗಲಿದೆ: 2017ರ ಆಗಸ್ಟ್​ ನಂತರ ಮೊದಲ ಬಾರಿಗೆ ರೆಪೋ ದರ ಕಡಿಮೆಯಾಯಿತು. ಇದರಿಂದ ಉಳಿತಾಯ ದರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಜ್ಞರು ಹೇಳಿದ್ದರು. ಇದೇ ವೇಳೆ, ಇದು ಸಾಲದ ಮೇಲಿನ ಇಎಂಐ ಶೀಘ್ರದಲ್ಲೇ ಕಡಿಮೆಯಾಗಲಿದೆ ಎಂದು ನಿರೀಕ್ಷಿದ್ದರು.

2. ರೈತರಿಗೆ ಕೊಡುಗೆ: ಮೋದಿ ಸರ್ಕಾರದ ನಂತರ ಈಗ ಆರ್​ಬಿಐ ರೈತರಿಗೆ ದೊಡ್ಡ ಕೊಡುಗೆ ಘೋಷಿಸಿದೆ. ಆರ್​ಬಿಐನ ಹೊಸ ನಿರ್ಧಾರದ ಪ್ರಕಾರ, ಯಾವುದೇ ಅಡಮಾನವಿಡದೆ ರೈತರು ಈಗ 1.6 ಲಕ್ಷ ಸಾಲವನ್ನು ಪಡೆಯಬಹುದಾಗಿದೆ. ಈ ಮೊದಲು ಈ ಸಾಲದ ಮಿತಿ 1 ಲಕ್ಷ ಇತ್ತು.3. ಪಾವತಿಯಲ್ಲಿ ಪ್ರತ್ಯೇಕ ನಿಯಮ: ಈ ನಿಯಮದ ಪ್ರಕಾರ ಸಾಮಾನ್ಯ ಜನರ ಆನ್​ಲೈನ್​ ವರ್ಗಾವಣೆಯಲ್ಲಿ ಹೆಚ್ಚು ಸುರಕ್ಷತೆ ಒದಗಿಸಲಿದೆ. ಇದು ಇ-ವಾಲೆಟ್​ ಕಂಪನಿಗಳ ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.

4. ಬಡ್ಡಿದರ ಮತ್ತಷ್ಟು ಕಡಿತ ನಿರೀಕ್ಷೆ

5. ಕಂಪನಿಗಳಿಗೆ ದೊಡ್ಡ ನಿರಾಳ: ಆರ್​ಬಿಐ ಈ ಸಭೆಯಿಂದಾಗಿ ಕಂಪನಿಗಳಿಗೆ ದೊಡ್ಡ ಪರಿಹಾರ ಸಿಗಲಿದೆ. ಕಂಪನಿಗಳು ಇದೀಗ ವಿದೇಶಗಳಿಂದ ಬಾಹ್ಯ ವಾಣಿಜ್ಯ ಸಾಲದ ಮೂಲಕ ತಮ್ಮ ಸಾಲವನ್ನು ಪಾವತಿಸಲು ಅನುಮತಿ ನೀಡಲಾಗಿದೆ


6. ಬ್ಯಾಂಕ್​ ಎನ್​ಬಿಎಫ್​ಸಿ ನ ಎಲ್ಲಾ ನಿಯಮಗಳು ಬದಲಾವಣೆಯಾಗಲಿದೆ. ಈ ತಿಂಗಳ ಕೊನೆಯಲ್ಲಿ ಹೊಸ ನಿಯಮಗಳು ಅನುಷ್ಠಾನಕ್ಕೆ ಬರಲಿವೆ.

First published: February 7, 2019, 4:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading