ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಮಹಾ ಹೇಳಿಕೆ; ಸಂಸತ್​ನಲ್ಲಿ ವಿವರಣೆ ಕೇಳಿದ ಶಿವಸೇನೆ

ಸಿಎಂ ​ನಿಯಂತ್ರಣದಲ್ಲಿ 40 ಸಾವಿರ ಕೋಟಿ ರೂಪಾಯಿ ಇತ್ತು. ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಈ ಹಣವನ್ನು ಅಭಿವೃದ್ಧಿ ಬಳಕೆ ಮಾಡದೆ ಅದಕ್ಕೆ ಎಳ್ಳು ನೀರು ಬಿಡುತ್ತಿದ್ದರು. ಹೀಗಾಗಿ ಸಿಎಂ ಆಗಿ ಫಡ್ನವೀಸ್​ ಅಧಿಕಾರ ತೆಗೆದುಕೊಂಡರು. ಕೇವಲ 15 ಗಂಟೆಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ವರ್ಗಾವಣೆ ಮಾಡಿದರು,” ಎಂದು ಹೇಳಿಕೆ ನೀಡಿದ್ದರು.

HR Ramesh | news18-kannada
Updated:December 3, 2019, 4:20 PM IST
ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ಮಹಾ ಹೇಳಿಕೆ; ಸಂಸತ್​ನಲ್ಲಿ ವಿವರಣೆ ಕೇಳಿದ ಶಿವಸೇನೆ
ಶಿವಸೇನೆ ಸಂಸದ ವಿನಾಯಕ ರಾವತ್
  • Share this:
ನವದೆಹಲಿ: ಮಹಾರಾಷ್ಟ್ರದಲ್ಲಿ ಬಹುಮತ ಇಲ್ಲದಿದ್ದರೂ ಬಿಜೆಪಿ ಏಕೆ ಸರ್ಕಾರ ರಚನೆ ಮಾಡಿತ್ತು ಎಂಬುದಕ್ಕೆ ಇತ್ತೀಚೆಗೆ ಬಿಜೆಪಿ ಸಂಸದ ಅನಂತಕುಮಾರ್ ಹೆಗ್ಡೆ ನೀಡಿದ್ದ ಅಸಂಬದ್ಧ ಹೇಳಿಕೆಗೆ ಲೋಕಸಭೆಯಲ್ಲಿ ಶಿವಸೇನೆ ವಿವರಣೆ ಕೇಳಿದೆ.

ಇತ್ತೀಚೆಗೆ ಶಿರಸಿ ತಾಲೂಕಿನ ಬಂಕನಾಳನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅನಂತ್​ ಕುಮಾರ್​ ಹೆಗ್ಡೆ, “ಮಹಾರಾಷ್ಟ್ರದಲ್ಲಿ ಬಹುಮತ ಇರಲಿಲ್ಲ ಎನ್ನುವುದು ಗೊತ್ತಿದ್ದರೂ ಫಡ್ನವೀಸ್​ ಸಿಎಂ ಆಗಿದ್ದೇಕೆ?. ಇದನ್ನು ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣವಿದೆ. ಸಿಎಂ ​ನಿಯಂತ್ರಣದಲ್ಲಿ 40 ಸಾವಿರ ಕೋಟಿ ರೂಪಾಯಿ ಇತ್ತು. ಶಿವಸೇನೆ, ಎನ್​ಸಿಪಿ ಹಾಗೂ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಈ ಹಣವನ್ನು ಅಭಿವೃದ್ಧಿ ಬಳಕೆ ಮಾಡದೆ ಅದಕ್ಕೆ ಎಳ್ಳು ನೀರು ಬಿಡುತ್ತಿದ್ದರು. ಹೀಗಾಗಿ ಸಿಎಂ ಆಗಿ ಫಡ್ನವೀಸ್​ ಅಧಿಕಾರ ತೆಗೆದುಕೊಂಡರು. ಕೇವಲ 15 ಗಂಟೆಗಳಲ್ಲಿ ಕೇಂದ್ರ ಸರ್ಕಾರಕ್ಕೆ ಹಣ ವರ್ಗಾವಣೆ ಮಾಡಿದರು,” ಎಂದು ಹೇಳಿಕೆ ನೀಡಿದ್ದರು.

ಅನಂತಕುಮಾರ್ ಹೆಗ್ಡೆ ಹೇಳಿಕೆಗೆ ಕೆಂಡಾಮಂಡಲವಾಗಿರುವ ಶಿವಸೇನೆ, ಅವರ ಹೇಳಿಕೆಗೆ ವಿವರಣೆ ಕೇಳಿದೆ. ಲೋಕಸಭೆಯಲ್ಲಿ ಇಂದು ವಿಷಯ ಪ್ರಸ್ತಾಪಿಸಿದ ಶಿವಸೇನೆ ಸಂಸದ ವಿನಾಯಕ ರಾವುತ್, ಅನಂತಕುಮಾರ್ ಹೆಗ್ಡೆ ಹೇಳಿಕೆಗೆ  ಉತ್ತರ ನೀಡುವಂತೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.

ಇದನ್ನು ಓದಿ: ಕೇಂದ್ರಕ್ಕೆ 40 ಸಾವಿರ ಕೋಟಿ ವರ್ಗಾಯಿಸಲು ಬಹುಮತ ಇಲ್ಲದಿದ್ದರೂ ಫಡ್ನವೀಸ್ ಸಿಎಂ ಆದರು; ಸಂಸದ ಅನಂತ್​ಕುಮಾರ್ ಹೆಗಡೆ
First published: December 3, 2019, 4:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading