ಭವಿಷ್ಯದ ಪೀಳಿಗೆಗೆ ಸಂಪತ್ತನ್ನು ಸೃಷ್ಟಿಸುವುದೇ ಸ್ಟಾರ್ಟ್​​ಅಪ್‌ನ ಯಶಸ್ಸಿನ ಸೂತ್ರ !

ಡೆರಿಕ್ ಪ್ರಕಾರ 'ಶೇಕಡಾ 90 ರಷ್ಟು ಜನರು, 5 ಮಿಲಿಯನ್ ಡಾಲರ್​ಗೂ ಹೆಚ್ಚಿನ ಮೌಲ್ಯದ ಕಂಪನಿ ಮಾರಾಟ ಮಾಡಿದ್ದಾರೆ. 7 ಅಂಕಿಯ ಸಂಬಳ ನೀಡುವ ಕೆಲಸಗಳ ಸಂಖ್ಯೆ ಕಡಿಮೆ ಇದೆ. ಮಲ್ಟಿ ಮಿಲಿಯನೇರ್ಸ್​​ ಅವಕಾಶ ಸೃಷ್ಟಿಸಿ ಮಾರುತ್ತಾರೆ' ಎನ್ನುವುದನ್ನು ವಿವರಿಸುತ್ತಾರೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

  • Share this:
ಡೆರಿಕ್ ಎಲ್. ಮೈಲ್ಸ್ ! ವೈದ್ಯಕೀಯ ಲೋಕದಲ್ಲಿ ಸ್ಟಾರ್ಟ್​​ಅಪ್​ (Startup) ವ್ಯಾಖ್ಯಾನವನ್ನೇ ಬದಲಿಸಿದ ಯಶಸ್ವಿ ಉದ್ಯಮಿ. ಈ ಯಶಸ್ಸಿಗೆ ಹಾರ್ಡ್​ವರ್ಕ್​ ಬದಲಿಗೆ ಸ್ಮಾರ್ಟ್​​ವರ್ಕ್​ ತಂತ್ರವನ್ನು ಚೆನ್ನಾಗಿ ರೂಢಿಸಿಕೊಂಡವರು. ಡೆರಿಕ್ ಪ್ರಕಾರ ಭವಿಷ್ಯದ ತಲೆಮಾರಿಗೆ ಸಂಪತ್ತನ್ನು ಸೃಷ್ಟಿಸುವುದೇ ಸ್ಟಾರ್ಟ್​​ಅಪ್​ಗಳ ಯಶಸ್ಸಿನ ಸೂತ್ರವಾಗಿದೆ. ಕೋರ್​​ಮೇಡ್​ ಔಷಧ ವಿತರಣಾ ಕಂಪನಿಯ ಅಧ್ಯಕ್ಷರು ಮತ್ತು ಸಿಇಒ ಆಗಿರುವ ಡೆರಿಕ್ ಆರೋಗ್ಯ ಕ್ಷೇತ್ರದಲ್ಲಿ (Health Department) ಹೊಸ ಮೈಲಿಗಲ್ಲು ಸ್ಥಾಪಿಸಿದವರು. ಎಂಟರ್​ಪ್ರೈಸ್ ಸಾಫ್ಟ್​ವೇರ್, ಆರೋಗ್ಯ ಉತ್ಪನ್ನಗಳ ವಿತರಣೆ ಮತ್ತು ಸೇವೆಯ ಮೂಲಕ ಜಾಗತಿಕವಾಗಿ ಪರಿಚಿತರು.

ವಾಯುವ್ಯ ಟೆಕ್ಸಾಸ್ ಹೆಲ್ತ್‌ಕೇರ್ ಸಿಸ್ಟಂನ ದಿ ಪೆವಿಲಿಯನ್ ನ ಸಿಇಒ ಆಗಿ 31ನೇ ವಯಸ್ಸಿನಲ್ಲಿ ಆರ್ಥಿಕವಾಗಿ ಸದೃಢರಾಗಿದ್ದರು. ಆದರೆ ತಮ್ಮ ವಾರಗೆಯವರು 100 ಮಿಲಿಯನ್​ ಡಾಲರ್‌ಗಳಿಸಿ ಯಶಸ್ಸಿನ ಉತ್ತುಂಗದಲ್ಲಿದ್ದರು. ಈ ಬೆಳವಣಿಗೆ ಡೆರಿಕ್ ಅವರ ಮನಸ್ಸಿನಲ್ಲಿ ತಾನು ಎಲ್ಲಿದ್ದೇನೆ? ಏನು ಮಾಡುತ್ತಿದ್ದೇನೆ? ಎನ್ನುವ ಪ್ರಶ್ನೆ ಹುಟ್ಟು ಹಾಕಿತ್ತು. ಹೀಗೆ ಕಾರ್ಪೋರೇಟ್​ ಕ್ಷೇತ್ರದಲ್ಲಿ ಏಣಿ ಹತ್ತುವ ಬದಲಿಗೆ ಮುಂದಿನ ಪೀಳಿಗೆಗೆ ಸಂಪತ್ತನ್ನು ಸೃಷ್ಟಿಸುವ ಮೂಲಕ ತಾವು ಬೆಳೆಯಬಹುದು ಎನ್ನುವುದನ್ನು ಕಂಡುಕೊಂಡರು ಡೆರಿಕ್.

ಡೆರಿಕ್ 38 ನೇ ವಯಸ್ಸಿಗೆ ಬಂದಾಗ ನಿಜ ದರ್ಶನವಾಯಿತು. ತಾವು ನಿವೃತ್ತಿಯಾದರೆ ತಮ್ಮ ಬದಲಿಗೆ ಆ ಸ್ಥಾನಕ್ಕೆ ಮತ್ತೊಬ್ಬರು ಬರಬಹುದು. ಆದರೆ ನನ್ನ ಮುಂದಿನ ಪೀಳಿಗೆಯವರು ಎತ್ತರಕ್ಕೆ ಏರುವುದು ಯಾವಾಗ ಎನ್ನುವುದು ಕಾಡತೊಡಗಿತು.

ರಾಬರ್ಟ್ ಎಫ್. ಸ್ಮಿತ್, ಡೇವಿಡ್ ಸ್ಟೀವರ್ಡ್ ಮತ್ತು ಡೇವಿಡ್ ಗ್ರೇನ್‌ನಂತಹ ಬಿಲಿಯನೇರ್‌ಗಳ ಬಗೆಗಿನ ಓದು ಅವರಲ್ಲಿ ಹೊಸ ಹೊಳಹನ್ನು ಮೂಡಿಸಿತ್ತು. ಸಿಇಒ ಸ್ಥಾನದಿಂದ ಸಿರಿವಂತಿಕೆ ಬರುವುದಿಲ್ಲ. ನವೋದ್ಯಮ ಮತ್ತು ಅದರ ಪರಂಪರೆಯ ನಿರ್ಮಾಣವೇ ಅವರನ್ನು ಸಿರಿತನದ ಒಡೆಯರನ್ನಾಗಿ ಮಾಡಿದೆ ಎನ್ನುವುದನ್ನು ಅರಿತುಕೊಂಡರು.

ಡೆರಿಕ್ ಪ್ರಕಾರ 'ಶೇಕಡಾ 90 ರಷ್ಟು ಜನರು, 5 ಮಿಲಿಯನ್ ಡಾಲರ್​ಗೂ ಹೆಚ್ಚಿನ ಮೌಲ್ಯದ ಕಂಪನಿ ಮಾರಾಟ ಮಾಡಿದ್ದಾರೆ. 7 ಅಂಕಿಯ ಸಂಬಳ ನೀಡುವ ಕೆಲಸಗಳ ಸಂಖ್ಯೆ ಕಡಿಮೆ ಇದೆ. ಮಲ್ಟಿ ಮಿಲಿಯನೇರ್ಸ್​​ ಅವಕಾಶ ಸೃಷ್ಟಿಸಿ ಮಾರುತ್ತಾರೆ' ಎನ್ನುವುದನ್ನು ವಿವರಿಸುತ್ತಾರೆ. ಅಲ್ಲದೇ ಈ ಅಂಶವೇ ಅವರನ್ನು ಕಾರ್ಪೊರೇಟ್ ಅಮೇರಿಕದಿಂದ ಹೊರ ನಡೆದು ಉದ್ಯಮಿಯಾಗುವಂತೆ ಪ್ರೇರೆಪಿಸಿತಂತೆ.

ಆರಂಭದ ಒಂದೆರಡು ಸೋಲಿನ ಬಳಿಕ 2014ರಲ್ಲಿ, "ದಿ 800 ಮಿಲಿಯನ್ ಡಾಲರ್" ಎಂದು ಖ್ಯಾತರಾಗಿದ್ದ ನೀಲ್ಯಾಂಡ್ ಯಂಗ್‌ಬ್ಲಡ್‌ರನ್ನು ಡೆರಿಕ್ ಭೇಟಿಯಾದರು. ಇದು ಅವರ ಬದುಕನ್ನೇ ಬದಲಿಸಿತು.

ಉದ್ಯಮಶೀಲತೆ, ಮುಂದಿನ ಪೀಳಿಗೆಗೆ ಸಂಪತ್ತಿನ ಸೃಷ್ಟೀಕರಣಕ್ಕೆ ನೀಲ್ಯಾಂಡ್​​​ ಡೆರಿಕ್​ಗೆ ನೆರವಾದರು. 'ಡೆರಿಕ್ ನೀವು ಆಸ್ಪತ್ರೆಯಲ್ಲಿ ಕೆಲಸ ಮಾಡುವ ಬದಲಿಗೆ, ನಿಮ್ಮದೇ ಸ್ವಂತ ಆಸ್ಪತ್ರೆಗಳನ್ನು ಹೊಂದಬೇಕು' ಎಂದು ಹುರಿದುಂಬಿಸಿದರು. ಇದರ ಪರಿಣಾಮ 2015ರಲ್ಲಿ ಪೋಸ್ಟ್‌ಮೇಟ್‌ಗಳ ಮಾದರಿ ಆರಂಭವಾಗಿ 2018ರಲ್ಲಿ ಕೋರ್​ಮೇಡ್​​ ಎನ್ನುವ ನವೋದ್ಯಮ ಆರಂಭವಾಯಿತು.

ಕೋರ್​​ಮೇಡ್​​ ಔಷಧ ವಿತರಣಾ ಕಂಪನಿ. ಕಮ್ಯೂನಿಟಿ ಫಾರ್ಮಸಿಗಳೊಟ್ಟಿಗೆ ರೋಗಿಗಳಿಗೆ ಮನೆಯಲ್ಲೇ ಆರೋಗ್ಯ ಸೌಲಭ್ಯವನ್ನು ಪೂರೈಸುತ್ತದೆ. ಕೋವಿಡ್ 19 ಲಸಿಕೆ, ಮೊನೊಕ್ಲೋನಲ್ ಪ್ರತಿಕಾಯಗಳು, IV ವಿಟಮಿನ್ ಥೆರಪಿ ವಿತರಣೆ ಮೂಲಕ ಕೋರ್​ಮೇಡ್​ ದೊಡ್ಡ ಮಟ್ಟಕ್ಕೆ ಬೆಳೆದು ನಿಂತಿದೆ. ಎಂಟರ್‌ಪ್ರೈಸ್ ಸಾಫ್ಟ್‌ವೇರ್ ರೋಗಿಗಳ ಆರೋಗ್ಯದಲ್ಲಿ ಅಪಾರ ಸುಧಾರಣೆಗೆ ಕಾರಣವಾಗಿದೆ.

ಕೋವಿಡ್ 19 ಆರಂಭಕ್ಕೂ ಮೊದಲು ಕೋರ್‌ಮೆಡ್ 2019ರಲ್ಲಿ 300% ಆದಾಯ ಹೆಚ್ಚಿಸಿಕೊಂಡಿತ್ತು. ಮೈಕ್ರೋಸಾಫ್ಟ್ ಮತ್ತು ಗೂಗಲ್ ಇದಕ್ಕೆ ಬೆಂಬಲ ನೀಡಿದೆ. ಇನ್ನೂ ಡೆರಿಕ್ ಅವರ 100 ಮಿಲಿಯನ್ ಡಾಲರ್​ ಗುರಿಯ ಕನಸಿನ ಹಾದಿ ಇನ್ನಷ್ಟು ಹೊಸ ಅವಕಾಶಗಳಿಗಾಗಿ ಕಾದು ನಿಂತಿದೆ.

'ನನ್ನ ಆಲೋಚನೆ ಬದುಕು ಬದಲಿಸಿತು. ನನ್ನಂತೆ ನೀವು ನಿರ್ಧರಿಸುವುದಾದರೆ 2 ಅಂಶಗಳನ್ನು ಗಮನದಲ್ಲಿರಿಸಿಕೊಳ್ಳಿ' ಎನ್ನುತ್ತಾರೆ ಡೆರಿಕ್.

ಬಿಲಿಯನೇರ್ ಮೈಂಡ್​ಸೆಟ್​ ಇರಲಿ

ಮಿಲಿಯನೇರ್, ಬಿಲಿಯನೇರ್​ನಂತೆ ಯೋಚಿಸುವುದೇ ಮಲ್ಟಿ ಮಿಲಿಯನೇರ್​ ಆಗುವುದಕ್ಕೆ ಪ್ರೇರಣೆ. ಅದು ನಿಮಗಿಂತ ದೊಡ್ಡದಾಗಿ ಯೋಚಿಸುತ್ತದೆ ಎನ್ನುತ್ತಾರೆ ನವೋದ್ಯಮದ ಐಕಾನ್. ನನ್ನ ಮೆಚ್ಚಿನ ಪುಸ್ತಕದ ಪ್ರಕಾರ 'ಒಬ್ಬ ಉತ್ತಮ ಮನುಷ್ಯ ತನ್ನ ಗಳಿಕೆಯನ್ನು ತನ್ನ ಮಕ್ಕಳು, ಮೊಮ್ಮಕ್ಕಳಿಗೆ ಬಿಟ್ಟು ಹೋಗುತ್ತಾನೆ. ಮುಂಬರುವ ಪೀಳಿಗೆಗೆ ಇಷ್ಟವಿರಲಿ, ಬಿಡಲಿ ಅವರ ಮುಂದಿನ ನಿರ್ಧಾರಕ್ಕೆ ಒಂದಷ್ಟು ಸಂಪತ್ತು ಇರುತ್ತದೆ. ಆ ಪೀಳಿಗೆ ನನಗಿಂತ ಅಮಿತವಾಗಿ ಯೋಚಿಸಬಲ್ಲವರಾಗಬಹುದು' ಎನ್ನುವ ಆಶಾವಾದ ಡೆರಿಕ್ ಅವರದ್ದು.

'ವ್ಯಾಪಾರದ ಗುರಿ ಇರಲಿ, ಕಠಿಣವಾದರೂ ದೊಡ್ಡ ಆಲೋಚನೆ ಇರಲಿ. ಇರುವ ಕೆಲಸದ ಆಚೆಗೆ ದೊಡ್ಡದಾಗಿ ಯೋಚಿಸಿ, ಯೋಜಿಸಿ. ನಿಮ್ಮನ್ನು ಮೀರಿಕೊಂಡು ಬೆಳೆಯಿರಿ. ನೀವು ಊಹಿಸಿಕೊಂಡಿದ್ದಕ್ಕಿಂತಲೂ ದೊಡ್ಡದಾಗಿ ಬೆಳೆಯಲು ಬಿಲಿಯನೇರ್ ಮೈಂಡ್​ಸೆಟ್​ ಸಜ್ಜುಗೊಳಿಸುತ್ತದೆ ' ಎನ್ನುವುದೇ ಡೆರಿಕ್ ಗೆಲುವಿನ ಮಂತ್ರ.

ಸಮಾನ ಮನಸ್ಕರ ಜೊತೆಗೆ ಸಮಯ ಕಳೆಯಿರಿ

'ನಿಮ್ಮ ಸುತ್ತಲೂ ಯಾವ ಜನರಿರಬೇಕು ಎಂದು ನೀವು ನಿರ್ಧರಿಸಿ. ನಾನು ನನಗಿಂತ ಮೇಲಿನವರ ಸ್ನೇಹ ಮಾಡಿದೆ. ನಿಮ್ಮ ಉತ್ಸಾಹ, ನಿಮ್ಮ ಯೋಚನೆ ಹಂಚಿಕೊಳ್ಳುವವರ ಜೊತೆಗೆ ಸಮಯ ಕಳೆಯಿರಿ. ಇದಕ್ಕೆ ವಿರುದ್ಧವಾದರೆ ನಿಮ್ಮ ಮೈಂಡ್ ಬ್ಲಾಕ್ ಆಗಬಹುದು. ನಿಮ್ಮ ಶಕ್ತಿ ಬೆಳೆಸಿಕೊಂಡು ನಿಮ್ಮ ಗಡಿ ಮೀರುವ ಸಾಂಗತ್ಯವಿರಲಿ. ಬಿಲಿಯನೇರ್​ ಮನಸ್ಥಿತಿಯ ಪಾಲುದಾರರು ಅವರಾಗಿರಲಿ. ನನ್ನ ಕನಸ್ಸಲ್ಲಿ ನಂಬಿಕೆ ಇದ್ದವರ ಜೊತೆಗೆ ನಾನಿದ್ದೆ. ಅದಕ್ಕೆ ಇಲ್ಲಿಯ ತನಕ ಬಂದೆ' ಎನ್ನುವ ಮೂಲಕ ಹಿಡಿದ ಕೆಲಸ ಸಾಧಿಸಲು ಬೇಕಾದ ಉಪಾಯ ತಿಳಿಸುತ್ತಾರೆ ಡೆರಿಕ್.

ಇದನ್ನೂ ಓದಿ: Explainer: ಸಾಂಕ್ರಾಮಿಕ ರೋಗದ ಅವಧಿಯಲ್ಲಿ ರಾಜ್ಯದಲ್ಲಿ ಮಕ್ಕಳಿಗಾಗಿರುವ ಕಲಿಕೆಯ ನಷ್ಟದ ವಿವರ ಇಲ್ಲಿದೆ!

ನಾವು ಆಲೋಚಿಸುವ ರೀತಿ ಬದಲಾದರೆ ಯಶಸ್ಸಿನ ಸೃಷ್ಟಿ ರಹಸ್ಯ ನಮ್ಮದಾಗುತ್ತದೆ. ನಮಗಾಗಿ ಹಣ ಮಾಡುವ ಬದಲಿಗೆ ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ನಮಗಿಂತ ದೊಡ್ಡದಾದ, ಉತ್ತಮವಾದುದನ್ನು ನಿರ್ಮಿಸಿದರೆ ಮುಂದೆ ಅದು ಪರಂಪರೆಯಾಗಿ ಬೆಳೆಯುತ್ತದೆ.
Published by:MAshok Kumar
First published: