ಚೀನಾ ಬಗ್ಗೆ ಭಾರತೀಯರ ಒಲುವು ಹೇಗಿದೆ; ನ್ಯೂಸ್ 18 ನಡೆಸಿದ ಸಮೀಕ್ಷೆಯಲ್ಲಿ ಹೊರಬಿದ್ದ ಸತ್ಯಾಂಶವೇನು?

ಜೂನ್​ 19ರ ಮಧ್ಯಾಹ್ನ 12 ಗಂಟೆಯಿಂದ ಜೂನ್ 20 ಮಧ್ಯಾಹ್ನ 12 ಗಂಟೆಯವರೆಗೆ ಒಟ್ಟು 24 ಗಂಟೆ ಈ ಸಮೀಕ್ಷೆ ನಡೆಸಲಾಗಿದ್ದು, ದೇಶಾದ್ಯಂತ ಒಟ್ಟು 6 ಸಾವಿರ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ 9 ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಅವರ ಉತ್ತರ ಈ ಕೆಳಕಂಡಂತಿವೆ.

ಡ್ರ್ಯಾಗನ್

ಡ್ರ್ಯಾಗನ್

 • Share this:
  ಕಳೆದ 15 ದಿನಗಳಲ್ಲಿ ಚೀನಾದ ಬಗ್ಗೆ ಭಾರತೀಯರ ಮನೋಭಾವ ಅರಿಯಲು ನ್ಯೂಸ್ 18 ನಡೆಸಿದ ಎರಡನೇ ಸಮೀಕ್ಷೆ ಇದಾಗಿದೆ. ಚೀನಾ ಕುರಿತ ಮೊದಲ ಸಮೀಕ್ಷೆಯ ಫಲಿತಾಂಶಗಳನ್ನು ಜೂನ್ 5 ರಂದು ಪ್ರಕಟಿಸಲಾಗಿತ್ತು.

  ಸಿಎನ್​ಎನ್​-ನ್ಯೂಸ್18, ನ್ಯೂಸ್18 ಇಂಡಿಯಾ, ನ್ಯೂಸ್ 18 ಲಾಂಗ್ವೆಜಸ್, ಸಿಎನ್​ಬಿಸಿ, ಟಿವಿ 18, ಮನಿ ಕಂಟ್ರೋಲ್ ಹಾಗೂ ಫಸ್ಟ್ ಪೋಸ್ಟ್ ಸೇರಿದಂತೆ ನೆಟ್​ವರ್ಕ್ 18ನ ಎಲ್ಲ ವೆಬ್​ಸೈಟ್​ಗಳಲ್ಲಿ ಈ ಸಮೀಕ್ಷೆ ನಡೆಸಲಾಗಿತ್ತು.

  ಜೂನ್​ 19ರ ಮಧ್ಯಾಹ್ನ 12 ಗಂಟೆಯಿಂದ ಜೂನ್ 20 ಮಧ್ಯಾಹ್ನ 12 ಗಂಟೆಯವರೆಗೆ ಒಟ್ಟು 24 ಗಂಟೆ ಈ ಸಮೀಕ್ಷೆ ನಡೆಸಲಾಗಿದ್ದು, ದೇಶಾದ್ಯಂತ ಒಟ್ಟು 6 ಸಾವಿರ ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಸಮೀಕ್ಷೆಯಲ್ಲಿ ಪಾಲ್ಗೊಂಡವರಿಗೆ 9 ಪ್ರಶ್ನೆಗಳನ್ನು ಕೇಳಲಾಗಿತ್ತು. ಅದಕ್ಕೆ ಅವರ ಉತ್ತರ ಈ ಕೆಳಕಂಡಂತಿವೆ.

  ಇದನ್ನು ಓದಿ: Network18 Public Sentimeter Poll: ಭಾರತದ ಯೋಧರನ್ನು ಮೋಸದಿಂದ ಕೊಂದ ಚೀನಾದ ಬಗ್ಗೆ ನಿಮ್ಮ ಅಭಿಪ್ರಾಯ ದಾಖಲಿಸಿ

  ಸಮೀಕ್ಷೆಯ ಮುಖ್ಯಾಂಶಗಳು

  • ಶೇ. 70ರಷ್ಟು ಭಾರತೀಯರು ಹೆಚ್ಚುವರಿ ವೆಚ್ಚದ ಅರಿವಿದ್ದರೂ ಚೀನೀ ವಸ್ತುಗಳನ್ನು ಬಹಿಷ್ಕರಿಸಲು ಸಿದ್ಧರಿದ್ದಾರೆ

  • ಶೇ.91ರಷ್ಟು ಮಂದಿ ಚೀನಾದ ಆ್ಯಪ್​ ಬಳಕೆ ನಿಲ್ಲಿಸುವಂತೆ ಮತ್ತು ಅದೇ ರೀತಿಯ ಇತರೆ ಆ್ಯಪ್ ಬಳಕೆಗೆ ಉತ್ತೇಜನ ನೀಡಲು ಸಿದ್ಧರಾಗಿದ್ದಾರೆ.

  • ಶೇ.92ರಷ್ಟು ಜನರು ಚೀನಾ ದೇಶವನ್ನು ನಂಬುವುದಿಲ್ಲ

  • ಚೀನೀಯರ ಆಹಾರದ ಬಗ್ಗೆ ಭಾರತೀಯರಿಗೆ ಇನ್ನೂ ಖಚಿತತೆ ಇಲ್ಲ. ಶೇ.43 ಜನರು ಚೀನೀ ಆಹಾರವನ್ನು ಸೇವಿಸುವುದಿಲ್ಲ ಎಂದು ಹೇಳಿದರೆ, ಶೇ. 31 ಜನರು ಆಹಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಾರೆ.

  • ಸುಮಾರು ಶೇ. 97ರಷ್ಟು ಭಾರತೀಯರು, ಸೆಲೆಬ್ರೆಟಿಗಳು, ಖ್ಯಾತನಾಮರು ಚೀನಾದ ಉತ್ಪನ್ನಗಳ ಬಳಕೆಯನ್ನು ನಿಲ್ಲಿಸಬೇಕೆಂದು ಬಯಸುತ್ತಾರೆ.

  • ಪಾಕಿಸ್ತಾನಕ್ಕಿಂತ ಚೀನಾ ಭಾರತಕ್ಕೆ ಅತಿದೊಡ್ಡ ಅಪಾಯವನ್ನು ಉಂಟು ಮಾಡಲಿದೆ ಎಂದು ಶೇ.92ರಷ್ಟು ಭಾರತೀಯರು ನಂಬಿದ್ದಾರೆ.

  • ಭಾರತಕ್ಕೆ ಯಾವುದೇ ಮಿತ್ರರಾಷ್ಟ್ರಗಳಿಲ್ಲ ಮತ್ತು ಸ್ವಂತವಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ ಎಂದು ಶೇ.52ರಷ್ಟು ಭಾರತೀಯರು ಹೇಳುತ್ತಾರೆ.

  • ಹೆಚ್ಚಿನ ಭಾರತೀಯರು (ಶೇ.19.32) ಪುಟಿನ್ ಅವರನ್ನು ಟ್ರಂಪ್ (ಶೇ. 18.12) ಗಿಂತ ಭಾರತದ ನಿಕಟ ಮಿತ್ರರಾಗಿ ನೋಡುತ್ತಾರೆ.

  First published: