• Home
  • »
  • News
  • »
  • national-international
  • »
  • King Charles III: ಕಿಂಗ್ ಚಾರ್ಲ್ಸ್ III ಭಾವಚಿತ್ರವಿರುವ ಹೊಸ ನಾಣ್ಯ ಬಿಡುಗಡೆ ಮಾಡಿದ ರಾಯಲ್ ಮಿಂಟ್

King Charles III: ಕಿಂಗ್ ಚಾರ್ಲ್ಸ್ III ಭಾವಚಿತ್ರವಿರುವ ಹೊಸ ನಾಣ್ಯ ಬಿಡುಗಡೆ ಮಾಡಿದ ರಾಯಲ್ ಮಿಂಟ್

ಎಲಿಜಬೆತ್ ಸ್ಮರಣೆಗೆ ನಾಣ್ಯ ಬಿಡುಗಡೆ

ಎಲಿಜಬೆತ್ ಸ್ಮರಣೆಗೆ ನಾಣ್ಯ ಬಿಡುಗಡೆ

ಎಲಿಜಬೆತ್ ಅವರ ಜೀವನ ಮತ್ತು ಪರಂಪರೆಯನ್ನು ನೆನಪಿಸುವ ಪ್ರತ್ಯೇಕ ಸ್ಮಾರಕ 5-ಪೌಂಡ್ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ನಾಣ್ಯದ ಒಂದು ಬದಿಯಲ್ಲಿ ಚಾರ್ಲ್ಸ್ ಕಾಣಿಸಿಕೊಂಡರೆ, ಹಿಂಭಾಗದಲ್ಲಿ ಎಲಿಜಬೆತ್ ಅವರ ಎರಡು ಹೊಸ ಭಾವಚಿತ್ರಗಳು ಅಕ್ಕಪಕ್ಕದಲ್ಲಿರುವಂತೆ ಚಿತ್ರಿಸಲಾಗಿದೆ.

ಮುಂದೆ ಓದಿ ...
  • Share this:

ಬ್ರಿಟನ್‌ನ ರಾಯಲ್ ಮಿಂಟ್, ಕಿಂಗ್ ಚಾರ್ಲ್ಸ್ III ರ (King Charles III) ಭಾವಚಿತ್ರವನ್ನು ಒಳಗೊಂಡ ಮೊದಲ ನಾಣ್ಯಗಳನ್ನು ಅನಾವರಣಗೊಳಿಸಿದೆ. ಹೊಸ ಚಿತ್ರವು 50 ಪೆನ್ಸ್ ($0.55) ನಾಣ್ಯಗಳಲ್ಲಿ ಗೋಚರಿಸುತ್ತಿದ್ದು, ಇದು ಡಿಸೆಂಬರ್‌ನಲ್ಲಿ ಚಲಾವಣೆಯಾಗಲಿದೆ. ಎಲಿಜಬೆತ್ (Elizabeth) ಅವರ ಜೀವನ ಮತ್ತು ಪರಂಪರೆಯನ್ನು ನೆನಪಿಸುವ ಪ್ರತ್ಯೇಕ ಸ್ಮಾರಕ 5-ಪೌಂಡ್ ನಾಣ್ಯವನ್ನು ಬಿಡುಗಡೆ ಮಾಡಲಾಗುತ್ತಿದ್ದು, ಈ ನಾಣ್ಯದ (Coin) ಒಂದು ಬದಿಯಲ್ಲಿ ಚಾರ್ಲ್ಸ್ ಕಾಣಿಸಿಕೊಂಡರೆ, ಹಿಂಭಾಗದಲ್ಲಿ ಎಲಿಜಬೆತ್ ಅವರ ಎರಡು ಹೊಸ ಭಾವಚಿತ್ರಗಳು ಅಕ್ಕಪಕ್ಕದಲ್ಲಿರುವಂತೆ ಚಿತ್ರಿಸಲಾಗಿದೆ. ಹೊಸ ರಾಜನ ಪ್ರತಿಮೆಯನ್ನು ಬ್ರಿಟಿಷ್ ಶಿಲ್ಪಿ ಮಾರ್ಟಿನ್ ಜೆನ್ನಿಂಗ್ಸ್ ರಚಿಸಿದ್ದಾರೆ ಮತ್ತು ಚಾರ್ಲ್ಸ್ ಅವರು ವೈಯಕ್ತಿಕವಾಗಿ ಅನುಮೋದಿಸಿದ್ದಾರೆ ಎಂದು ರಾಯಲ್ ಮಿಂಟ್ (Royal Mint) ತಿಳಿಸಿದೆ.


ಸಂಪ್ರದಾಯಕ್ಕೆ ಅನುಗುಣವಾಗಿ ರಾಜನ ಭಾವಚಿತ್ರವು ಎಡದಿಕ್ಕಿಗಿದ್ದು ತಾಯಿ ರಾಣಿ ಎಲಿಜಬೆತ್ ಚಿತ್ರವು ವಿರುದ್ಧ ದಿಕ್ಕಿನಲ್ಲಿದೆ.


ರಾಜಮನೆತನದ ಸಂಪ್ರದಾಯದ ಅನುಸರಣೆ
ಬ್ರಿಟಿಷ್ ನಾಣ್ಯದಲ್ಲಿ ರಾಜಮನೆತನವು ಹೊಂದಿರುವ ಸಾಮಾನ್ಯ ಸಂಪ್ರದಾಯವನ್ನು ಚಾರ್ಲ್ಸ್ ಅನುಸರಿಸಿದ್ದಾರೆ. ಚಾರ್ಲ್ಸ್ II ಅವರ ಕಾಲದಲ್ಲಿ ರಾಜನು ತನ್ನ ಪೂರ್ವಾಧಿಕಾರಿಯ ವಿರುದ್ಧ ದಿಕ್ಕಿನಲ್ಲಿ ಎದುರಿಸುತ್ತದೆ ಎಂಬುದಾಗಿ ರಾಯಲ್ ಮಿಂಟ್ ಮ್ಯೂಸಿಯಂನಲ್ಲಿ ಕ್ರಿಸ್ ಬಾರ್ಕರ್ ತಿಳಿಸಿದ್ದಾರೆ.


ನಾಣ್ಯದಲ್ಲಿ ಚಾರ್ಲ್ಸ್ ಅವರನ್ನು ಹೇಗೆ ಚಿತ್ರಿಸಲಾಗಿದೆ
ನಾಣ್ಯದಲ್ಲಿ ಚಾರ್ಲ್ಸ್ ಅವರನ್ನು ಕಿರೀಟವಿಲ್ಲದೆ ಚಿತ್ರಿಸಲಾಗಿದೆ. ಭಾವಚಿತ್ರದ ಸುತ್ತಲು ಬರೆದಿರುವ ಲ್ಯಾಟಿನ್ ಶಾಸನವು "ಕಿಂಗ್ ಚಾರ್ಲ್ಸ್ III, ದೇವರ ಅನುಗ್ರಹದಿಂದ, ನಂಬಿಕೆಯ ರಕ್ಷಕ" ಎಂಬುದಾಗಿ ತಿಳಿಸುತ್ತದೆ.


ರಾಯಲ್ ಮಿಂಟ್ ರಾಜಪರಿವಾರದವನ್ನು ನಾಣ್ಯದಲ್ಲಿ ದಾಖಲಿಸುತ್ತಿದೆ
ದಕ್ಷಿಣ ವೇಲ್ಸ್‌ನಲ್ಲಿರುವ ರಾಯಲ್ ಮಿಂಟ್ ಬ್ರಿಟನ್‌ನ ರಾಜಮನೆತನವನ್ನು 1,100 ವರ್ಷಗಳಿಂದ ನಾಣ್ಯಗಳಲ್ಲಿ ಚಿತ್ರಿಸುತ್ತಿದೆ ಅಂತೆಯೇ ಆಲ್ಫ್ರೆಡ್ ದಿ ಗ್ರೇಟ್‌ನಿಂದೀಚೆಗೆ ಪ್ರತಿ ರಾಜನನ್ನು ನಾಣ್ಯದಲ್ಲಿ ದಾಖಲಿಸುತ್ತಿದೆ.


ಇದನ್ನೂ ಓದಿ: Prince George: ಫ್ರೆಂಡ್ಸ್‌ ಜೊತೆ ಜಗಳ ಮಾಡಿಕೊಂಡ ನಂತರ ಪ್ರಿನ್ಸ್ ಜಾರ್ಜ್ ಏನು ಹೇಳಿದ್ರು ಗೊತ್ತಾ?


ನಾಣ್ಯಗಳು 20 ವರ್ಷಗಳ ಕಾಲ ಬಾಳಿಕೆ ಬರುವುದರಿಂದ ಮರಣ ಹೊಂದಿದ ರಾಣಿಯನ್ನು ಚಿತ್ರಿಸಿರುವ 27 ಬಿಲಿಯನ್‌ನ ನಾಣ್ಯಗಳು ಸವೆಯದಲ್ಲಿ ಅಥವಾ ಹಾನಿಗೊಳಗಾದಲ್ಲಿ ಮಾತ್ರವೇ ಅವುಗಳನ್ನು ತೆಗೆದುಹಾಕಲಾಗುತ್ತದೆ ಎಂದು ಮಿಂಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನ್ನೆ ಜೆಸ್ಸೊಪ್ ತಿಳಿಸಿದ್ದಾರೆ. ಈ ಕಾರಣದಿಂದಲೇ ನಾಣ್ಯಗಳ ಬದಲಾವಣೆಗಳಿಗೆ ಸ್ವಲ್ಪ ಸಮಯ ತಗುಲುತ್ತದೆ ಎಂಬುದು ಅವರ ಹೇಳಿಕೆಯಾಗಿದೆ.


ತೆರಿಗೆದಾರರಿಗೆ ವೆಚ್ಚವನ್ನುಂಟು ಮಾಡುವುದಿಲ್ಲ
ನಾಣ್ಯದಲ್ಲಿ ಮಾಡುವ ಬದಲಾವಣೆಗಳು ತೆರಿಗೆದಾರರಿಗೆ ಯಾವುದೇ ವೆಚ್ಚವನ್ನುಂಟು ಮಾಡುವುದಿಲ್ಲ ಏಕೆಂದರೆ ಸವೆದು ಹೋದ ನಾಣ್ಯಗಳಿಗೆ ಬದಲಿಯಾಗಿ ಹೊಸದನ್ನು ಉತ್ಪಾದಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಕಾರ್ಡ್‌ಗಳು ಹಾಗೂ ಮೊಬೈಲ್ ಪಾವತಿಗಳು ನಗದಿನ ಸ್ಥಾನವನ್ನು ಆಕ್ರಮಿಸಿಕೊಂಡಿರುವುದರಿಂದ ಭವಿಷ್ಯದಲ್ಲಿ ಕಡಿಮೆ ನಾಣ್ಯಗಳು ಬೇಕಾಗಬಹುದು ಎಂಬುದಾಗಿ ಜೆಸೊಪ್ಸ್ ತಿಳಿಸಿದ್ದಾರೆ.


ರಾಣಿಯ ಚಿತ್ರವಿರುವ ನೋಟುಗಳ ಚಲಾವಣೆ
ಪರಿಸರ ಹಾಗೂ ಆರ್ಥಿಕ ಪರಿಣಾಮವನ್ನು ಕಡಿಮೆ ಮಾಡಲು ರಾಜಮನೆತನದ ನಿಯಮಗಳನ್ನು ಅನುಸರಿಸಿ ರಾಣಿಯ ಚಿತ್ರವಿರುವ ಅದೇ ನೋಟುಗಳನ್ನು ನೀಡುವ ಕ್ರಮವನ್ನು ಮುಂದುವರಿಸುವುದಾಗಿ ಬ್ಯಾಂಕ್ ಆಫ್ ಇಂಗ್ಲೆಂಡ್ ಘೋಷಿಸಿದೆ. ಹೊಸ ಬ್ಯಾಂಕ್ ನೋಟುಗಳನ್ನು ವರ್ಷಾಂತ್ಯದೊಳಗೆ ಅನಾವರಣಗೊಳಿಸಲಾಗುತ್ತದೆ ಮತ್ತು 2024 ರ ವೇಳೆಗೆ ಚಲಾವಣೆಗೆ ಬರುವ ನಿರೀಕ್ಷೆಯಿದೆ ಎಂಬುದಾಗಿ ಬ್ಯಾಂಕ್ ತಿಳಿಸಿದೆ.


ಸಿಂಹಾಸನವನ್ನೇರಿದ ಚಾರ್ಲ್ಸ್
ತಮ್ಮ ತಾಯಿ ಎಲಿಜಬೆತ್ II ಮರಣಾನಂತರ ಚಾರ್ಲ್ಸ್ ಸಪ್ಟೆಂಬರ್ 8 ರಂದು ಸಿಂಹಾಸನವನ್ನು ಏರಿದರು. ಬ್ರಿಟನ್‌ನ ದೀರ್ಘಾವಧಿಯ ದೊರೆ ರಾಣಿ ಎಲಿಜಬೆತ್ ತಮ್ಮ 96 ನೇ ವಯಸ್ಸಿನಲ್ಲಿ ನಿಧನರಾದರು.


ಇದನ್ನೂ ಓದಿ:  King Charles III: ಕಿಂಗ್ ಚಾರ್ಲ್ಸ್ ಹಿರಿ ಮುತ್ತಜ್ಜ ಮತ್ತು ಕ್ಯಾಮಿಲ್ಲಾ ಪಾರ್ಕರ್ ಮುತ್ತಜ್ಜಿ ನಡುವೆ ಇತ್ತು ಪ್ರೇಮ ಸಂಬಂಧ!


ಇತಿಹಾಸದಲ್ಲಿ ಮೊದಲ ಬಾರಿಗೆ ಚಾರ್ಲ್ಸ್ ಸಿಂಹಾಸನವನ್ನೇರುವ ದೃಶ್ಯಗಳನ್ನು ದೂರದರ್ಶನದಲ್ಲಿ ಪ್ರಸಾರ ಮಾಡಲಾಯಿತು. "ದೇವರು ರಾಜನನ್ನು ರಕ್ಷಿಸಲಿ" ಎಂಬುದಾಗಿ ಸಭೆಯ ಗುಮಾಸ್ತರು ಮಾಡಿದ ಘೋಷಣೆಯನ್ನು ಸಭೆ ಸೇರಿದವರು ಪುನರುಚ್ಛರಿಸಿದರು.

Published by:Ashwini Prabhu
First published: