Kabul Airport: ಕಾಬೂಲ್​ನಲ್ಲಿ ಮತ್ತೊಂದು ರಾಕೆಟ್​ ದಾಳಿ; ಮಗು ಸೇರಿ ಮೂವರು ಸಾವು

ಕಾಬೂಲ್​ನ ಖಜೆಹ್​ ಬಾಗ್ರಾದ ಗುಲಾಯ್​ ಪ್ರದೇಶದಲ್ಲಿ ರಾಕೆಟ್​ ದಾಳಿ ನಡೆದಿದೆ

ಕಾಬೂಲ್​ನಲ್ಲಿ ಮತ್ತೊಂದು ರಾಕೆಟ್​ ದಾಳಿ;

ಕಾಬೂಲ್​ನಲ್ಲಿ ಮತ್ತೊಂದು ರಾಕೆಟ್​ ದಾಳಿ;

  • Share this:
    ಕಾಬೂಲ್​ ವಿಮಾನ ನಿಲ್ದಾಣದಲ್ಲಿ (Kabul Airport blast) ಐಸಿಸ್​ ಖೋರಾಸನ್ ಅವಳಿ ಸ್ಪೋಟದ ನಡೆಸಿದ ಮೂರನೇ ದಿನದ ಬಳಿಕ ​ ಮತ್ತೊಂದು ದಾಳಿಗೆ ಕಾಬೂಲ್​ ನಲುಗಿದೆ. ಕಾಬೂಲ್​ನ ಖಜೆಹ್​ ಬಾಗ್ರಾದ ಗುಲಾಯ್​ ಪ್ರದೇಶದಲ್ಲಿ ರಾಕೆಟ್​ ದಾಳಿ (rocket hit) ನಡೆದಿದೆ. ಘಟನೆಯಲ್ಲಿ ಮಗು ಸೇರಿದಂತೆ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅಫ್ಘಾನ್​​ನಲ್ಲಿ (Afghan) ಭಯೋತ್ಪಾದಕ ದಾಳಿಯ ಕುರಿತು ಅಮೆರಿಕ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದ್ದು, ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಅಮೆರಿಕ ಸೇನಾ ಪಡೆಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಬಾಗ್ರಾದ ಗುಲಾಯ್​ ಪ್ರದೇಶದಲ್ಲಿನ ಮನೆಯೊಂದರ ಮೇಲೆ ಈ ರಾಕೆಟ್​ ದಾಳಿ ನಡೆದಿದೆ.

    ಅಮೆರಿಕ ಮಿಲಿಟರಿ ದಾಳಿ (US MILITARY STRIKE)

    ಕಾಬೂಲ್​ನ ವಿಮಾನ ನಿಲ್ದಾಣದಲ್ಲಿ ನಡೆದ ಅವಳಿ ದಾಳಿ ರೂವಾರಿ ಐಸಿಸ್​-ಕೆ ಉಗ್ರರನ್ನು ಗುರಿಯಾಗಿಸಿಕೊಂಡು ಇಂದು ಅಮೆರಿಕ ಮಿಲಿಟರಿ ಪಡೆ ಕಾಬೂಲ್​​ನಲ್ಲಿ ದಾಳಿ ನಡೆಸಿದೆ. ಗುರುವಾರ ವಿಮಾನ ನಿಲ್ದಾಣದ ಗೇಟ್‌ಗಳ ಹೊರಗೆ ಆತ್ಮಾಹುತಿ ಬಾಂಬ್ ದಾಳಿಗೆ ಕಾರಣವಾಗಿರುವ ಶಂಕಿತ ISIS-K ಉಗ್ರರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.

    ಕಾಬೂಲ್​ ಅನ್ನು ತಾಲಿಬಾನ್​ ವಶಪಡಿಸಿಕೊಂಡ ನಂತರ ಅಮೆರಕ ಜನರ ಬೃಹತ್​ ಸ್ಥಳಾಂತರ ಕಾರ್ಯ ನಡೆಯುತ್ತಿದೆ. ಆ. 31ರವೆಗೆ ಈ ಸ್ಥಳಾಂತರ ಕಾರ್ಯಕ್ಕೆ ತಾಲಿಬಾನ್​ ಕೂಡ ಸಮ್ಮತಿ ಸೂಚಿಸಿದೆ. ಈ ನಡುವೆ ಕಖಳೆದ ಮೂರು ದಿಗನಳ ಹಿಂದೆ ಸ್ಥಳಾಂತರದ ವೇಳೆ ನಡೆದ ವಿಮಾನ ನಿಲ್ದಾಣದಲ್ಲಿ ನಡೆದ ಆತ್ಮಾಹುತಿ ಬಾಂಬ್​ ದಾಳಿಯಿಂದಾಗಿ 13 ಅಮೆರಿಕನ್​ ಸೈನಿಕರು ಸೇರಿದಂತೆ 169 ಮಂದಿ ಸಾವನ್ನಪ್ಪಿದ್ದರು.

    ಇದನ್ನು ಓದಿ: ಕೋವಿಡ್​ ಲಸಿಕೆ ಪಡೆದು ಅಸ್ವಸ್ಥಗೊಂಡ ಅಪ್ರಾಪ್ತ ಬಾಲಕ; ತನಿಖೆಗೆ ಆಗ್ರಹ

    ಇಂದು ಅಂದರೆ ಭಾನುವಾರದಂದು ಕಾಬೂಲ್ ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಬಯಸಿದ್ದ ವಾಹನದಲ್ಲಿ ಆತ್ಮಾಹುತಿ ಬಾಂಬರ್ ಅನ್ನು ಗುರಿಯಾಗಿಸಿಕೊಂಡು ಯುಎಸ್ ವಾಯುದಾಳಿ ನಡೆಸಿದೆ ಎಂದು ತಾಲಿಬಾನ್ ತಿಳಿಸಿದೆ.
    ಅಮೆರಿಕ ಸೇನಾ ಪಡೆಯ ಈ ದಾಳಿ ಮತ್ತು ವಿಮಾನ ನಿಲ್ದಾಣದ ಬಳಿ ನಡೆದ ರಾಕೆಟ್​​ ದಾಳಿ ಎರಡು ಪ್ರತ್ಯೇಕ ಘಟನೆಗಳು ಎಂಬ ಮಾಹಿತಿ ಲಭ್ಯವಾಗಿದೆ.

    ಈ ಮೊದಲೇ ಎಚ್ಚರಿಕೆ ನೀಡಿದ್ದ ಬಿಡೆನ್
    ಕಾಬೂಲ್​ ವಿಮಾನ ನಿಲ್ದಾಣ ಬಳಿ ರಾಕೆಟ್​ ದಾಳಿ ನಡೆಯುವ ಮುನ್ನವೇ ಈ ಕುರಿತು ಅಮೆರಿಕ ಅಧ್ಯಕ್ಷರು ಎಚ್ಚರಿಕೆ ನೀಡಿದ್ದರು. ಮುಂದಿನ 24ರಿಂದ 36 ಗಂಟೆಗಳಲ್ಲಿ ಕಾಬೂಲ್​​ನಲ್ಲಿ ಮತ್ತೊಂದು ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದರು.

    ಕಾಬೂಲ್​ನಲ್ಲಿ ಪರಿಸ್ಥಿತಿ ತುಂಬಾ ಅಪಾಯಕಾರಿಯಾಗಿದೆ ವಿಮಾನ ನಿಲ್ದಾಣದ ಬಳಿ ಮತ್ತೊಂದು ದೊಡ್ಡ ಭಯೋತ್ಪಾದಕ ದಾಳಿ ನಡೆಯುವ ಸಾಧ್ಯತೆ ಇದೆ. ಈ ಸಂಬಂಧ ನಮ್ಮ ಕಮಾಂಡರ್​ ನನಗೆ ಮಾಹಿತಿ ನೀಡಿದ್ದಾರೆ. ಮುಂದಿನ 24 ರಿಂದ 36 ಗಂಟೆಗಳ ಒಳಗೆ ಈ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಜೊ ಬಿಡೆನ್​ ತಿಳಿಸಿದ್ದರು.
    ಕಾಬೂಲ್​ ವಿಮಾನ ನಿಲ್ದಾಣದ ಸುತ್ತ ದಾಳಿ ನಡೆಯುವ ಬೆದರಿಕೆ ಮುನ್ಸೂಚನೆ ಹಿನ್ನಲೆ ತಕ್ಷಣವೇ ಅಮೆರಿಕನ್ನರು ಆ ಪ್ರದೇಶವನ್ನು ತೊರೆಯುವಂತೆ ಕೂಡ ಅಮೆರಿಕ ಸೂಚಿಸಿತ್ತು

    ಕಡೆಯ ಹಂತದ ಸ್ಥಳಾಂತರ ಕಾರ್ಯ
    ಆಗಸ್ಟ್​ 31ರೊಳಗೆ ಅಮೆರಿಕನ್ನರ ಸ್ಥಳಾಂತ ಕಾರ್ಯ ಮುಗಿಸುವ ಕುರಿತು ತಿಳಿಸಿತ್ತು. ಅದರಂತೆ ಈಗ ಕಡೆಯ ಹಂತದ ಸ್ಥಳಾಂತರ ಕಾರ್ಯ ಭರದಿಂದ ಸಾಗಿದೆ.
    ಬ್ರಿಟನ್ ಈಗಾಗಲೇ ಅಫ್ಘಾನಿಸ್ತಾನದಲ್ಲಿ ತನ್ನ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಶನಿವಾರ ಕೊನೆಯಾದಾಗಿ 2000 ಜನರನ್ನು ಹೊತ್ತ ಬ್ರಿಟನ್​ ವಿಮಾನ ಕಾಬೂಲ್​ನಿಂದ ಹೊರಟಿತ್ತು. ಈ ಮೂಲಕ ಐದು ವರ್ಷಗಳ ಕಾಲ ಆಫ್ಘಾನಿಸ್ತಾನದಲ್ಲಿದ್ದ ಬ್ರಿಟಿಷ್​ ಸೈನ್ಯದ ಕಾರ್ಯಾಚರಣೆ ಮುಕ್ತಾಯಗೊಂಡಿತು.
    Published by:Seema R
    First published: