ತನಗಿಂತ 15 ವರ್ಷ ಚಿಕ್ಕವನನ್ನ ಗೆಳೆಯನನ್ನಾಗಿಸಿಕೊಂಡ ಶ್ರೀಮಂತ ಮಹಿಳೆ - ಈ ಇನಿಯನಿಗೆ ಸಂಬಳ ಎಷ್ಟು ಗೊತ್ತಾ?

ದ ಸನ್ ವರದಿ ಪ್ರಕಾರ, ಹಾಗಾದ್ರೆ ಈ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳಲು ಗೆಳೆಯನಿಗೆ ಸಂಬಳ ನೀಡ್ತೀರಾ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಜೂಲಿ, ಸರಿ ಸುಮಾರು 11 ಲಕ್ಷ ರೂ.ಗಳಷ್ಟು ಸಂಬಳ ನೀಡುತ್ತೇನೆ. ಆದರೂ ಈ ತಿಂಗಳು ಆತ ಈಜುಕೊಳ ಸ್ವಚ್ಛಗೊಳಿಸೋದನ್ನು ಮರೆತಿದ್ದಾನೆ ಎಂದು ಜೂಲಿ ಪ್ರಶ್ನೆ ಕೇಳಿದವರ ಮುಂದೆಯೇ ದೂರು ಸಲ್ಲಿಸಿದ್ದಾಳೆ.

ತನ್ನ ಇನಿಯನ ಜೊತೆ ಜೂಲಿ ಚಿತ್ರ ಕೃಪೆ: ಆಜ್​ ತಕ್​

ತನ್ನ ಇನಿಯನ ಜೊತೆ ಜೂಲಿ ಚಿತ್ರ ಕೃಪೆ: ಆಜ್​ ತಕ್​

 • Share this:
  44 ವರ್ಷದ ಮಹಿಳೆ ತನಗಿಂತ 15 ವರ್ಷ ಚಿಕ್ಕವನನ್ನು ಸಂಬಳ ನೀಡಿ ಗೆಳೆಯ(BoyFriend) ನನ್ನಾಗಿ ಮಾಡಿಕೊಂಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಮಹಿಳೆ ತನ್ನ ಮತ್ತು ಗೆಳೆಯನ ಸಂಬಂಧದ (Relationship) ಬಗ್ಗೆ ಹೇಳಿಕೊಂಡಿದ್ದಾಳೆ. ಮಹಿಳೆ ಮತ್ತು ಆಕೆಯ ಗೆಳೆಯನ ವಿಡಿಯೋಗಳು ಟಿಕ್ ಟಾಕ್ ನಲ್ಲಿ ವೈರಲ್ (Tik Tok Video Viral) ಆಗಿವೆ. ಮಹಿಳೆ ವಿಡಿಯೋದಲ್ಲಿ ಗೆಳೆಯನ ಬಗ್ಗೆ ಏನೆಲ್ಲ ಹೇಳಿಕೊಂಡಿದ್ದಾಳೆ ಅನ್ನೋದನ್ನು ನೋಡೋಣ ಬನ್ನಿ.

  ಯಾರು ಈ ಮಹಿಳೆ?

  ಈ ಮಹಿಳೆ ಹೆಸರು ಜೂಲಿ(Juile), ವಯಸ್ಸು 44 ವರ್ಷ . ಟಿಕ್ ಟಾಕ್ ನಲ್ಲಿ ಮಹಿಳೆಯ ಖಾತೆ @juile.withthebooty ಎಂಬ ಹೆಸರಿನಲ್ಲಿದೆ. ಜೂಲಿ ಗೆಳೆಯನ ವಯಸ್ಸು 29. ನಾನು ಗೆಳೆಯನಿಗಾಗಿ ಹೆಚ್ಚೆಚ್ಚು ಹಣ ಖರ್ಚು ಮಾಡುತ್ತೇನೆ. ಕಾರಣ ನಾನು ಅವನಿಂದ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳಬೇಕು. ಮನೆಯಲ್ಲಿ ಅಡುಗೆ ಮಾಡುವ ಕೆಲಸದಿಂದ ಹಿಡಿದು ಸ್ವಚ್ಛತಾ ಕಾರ್ಯವನ್ನು ಗೆಳೆಯನೇ ಮಾಡುತ್ತಾನೆ. ಟಿಕ್ ಟಾಕ್ ವಿಡಿಯೋದಲ್ಲಿ ಗೆಳೆಯನ ಬಗ್ಗೆ ಹೇಳಿರುವ ಜೂಲಿ, ಆತ ತನಗಾಗಿ ಏನೇನು ಮಾಡುತ್ತಾನೆ ಎಂದು ತಿಳಿಸಿದ್ದಾಳೆ. ಗೆಳೆಯ ನನಗಾಗಿ ಕೇಳಿದ ವಸ್ತುಗಳನ್ನೆಲ್ಲ ತರುತ್ತಾನೆ. ತಿಂಗಳಿಗೆ ನಾನು ಆತನಿಗಾಗಿ ಸುಮಾರು 15 ಲಕ್ಷ ರೂಪಾಯಿ ಖರ್ಚು ಮಾಡೋದಾಗಿ ಹೇಳಿಕೊಂಡಿದ್ದಾಳೆ.

  Also read: Foreign wildlife: ಬೆಂಗಳೂರಿನಲ್ಲಿ ವಿದೇಶಿ ವನ್ಯಜೀವಿಗಳ ಮಾರಾಟ: ಅಸಹಾಯಕರಾದ ಅರಣ್ಯ ಇಲಾಖೆ

  ದ ಸನ್ ವರದಿ ಪ್ರಕಾರ, ಹಾಗಾದ್ರೆ ಈ ಎಲ್ಲ ಕೆಲಸಗಳನ್ನು ಮಾಡಿಸಿಕೊಳ್ಳಲು ಗೆಳೆಯನಿಗೆ ಸಂಬಳ ನೀಡ್ತೀರಾ ಎಂದು ಜನರು ಪ್ರಶ್ನೆ ಮಾಡಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿರುವ ಜೂಲಿ, ಸರಿ ಸುಮಾರು 11 ಲಕ್ಷ ರೂ.ಗಳಷ್ಟು ಸಂಬಳ ನೀಡುತ್ತೇನೆ. ಆದರೂ ಈ ತಿಂಗಳು ಆತ ಈಜುಕೊಳ ಸ್ವಚ್ಛಗೊಳಿಸೋದನ್ನು ಮರೆತಿದ್ದಾನೆ ಎಂದು ಜೂಲಿ ಪ್ರಶ್ನೆ ಕೇಳಿದವರ ಮುಂದೆಯೇ ದೂರು ಸಲ್ಲಿಸಿದ್ದಾಳೆ. ಸಂಬಳ ಬದಲಾಗಿ ಆತ ನಾನು ಮಾಡುವ ಎಲ್ಲ ಮನೆಗೆಲಸಗಳನ್ನು ಮಾಡುತ್ತಾನೆ. ಮನೆ ಕೆಲಸದ ಜೊತೆ ಇತರೆ ಶಾಪಿಂಗ್, ತರಕಾರಿ ಖರೀದಿಯನ್ನು ಸಹ ಆತನೇ ಮಾಡುತ್ತಾನೆ ಎಂಂದು ಹೇಳುತ್ತಾಳೆ ಜೂಲಿ.

  ನೆಟ್ಟಿಗರ ಪ್ರಶ್ನೆಗೆ ಜೂಲಿ ತಿರುಗೇಟು:

  ಜೂಲಿ ಮತ್ತು ಗೆಳೆಯನ ನಡುವಿವ ವಯಸ್ಸಿನ ಅಂತರದ (Age Gap in Relationship) ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡುತ್ತಾರೆ. ಆದ್ರೆ ಇದ್ಯಾವೂದನ್ನು ಸಹ ಜೂಲಿ ಕೇರ್ ಮಾಡಿಲ್ಲ. ಇಬ್ಬರ ನಡುವೆ ವಯಸ್ಸಿನ ಅಂತರ ದೊಡ್ಡದಿದೆ. ನಿಮ್ಮ 29 ವರ್ಷದ ಗೆಳೆಯ ಶೀಘ್ರದಲ್ಲಿಯೇ ನಿಮ್ಮಿಂದ ದೂರವಾಗ್ತಾನೆ ನೋಡುತ್ತಿರಿ ಎಂದು ಕೆಲ ನೆಟ್ಟಿಗರು ಭವಿಷ್ಯ ನುಡಿದಿದ್ದಾರೆ. ನೆಟ್ಟಿಗರ ಭವಿಷ್ಯದ ಮಾತುಗಳಿಗೆ ಪ್ರತಿಕ್ರಿಯಿಸಿರುವ ಜೂಲಿ, ದೂರವಾಗುವ ಭಯ ನನಗೆ ಇಲ್ಲ, ಬಹುಶಃ ಆತನಿಗೆ ಇರಬಹುದು. ಒಂದು ವೇಳೆ ನಾನು ಆತನಿಂದ ದೂರವಾದ್ರೆ ಹೇಗೆ ಗೆಳೆಯ ಯೋಚಿಸಬೇಕೇ ಹೊರತು ನಾನನಲ್ಲ ಎಂದು ಜೂಲಿ ತನ್ನ ನಡೆಯನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾಳೆ. ದ ಸನ್ ವರದಿ ಪ್ರಕಾರ, ಜೂಲಿ ಅತಿ ಶ್ರೀಮಂತ ಮಹಿಳೆಯಾಗಿದ್ದು, ಆಕೆಯ ಬಳಿ ಬಂಗಲೆ, ಕಾರು ಮತ್ತು ಒಳ್ಳೆಯ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾಳೆ.

  Also read: Uttar Pradesh: ಫ್ಲೆಕ್ಸ್​ನಲ್ಲಿ ಸೋನಿಯಾ ಗಾಂಧಿ ಜೊತೆ ಕಾಣಿಸಿಕೊಂಡ ವರುಣ್ ಗಾಂಧಿ: ಸ್ಪಷ್ಟನೆ ಕೇಳಿದ ಕಾಂಗ್ರೆಸ್

  ಅಳಿಯನ ಜೊತೆ ಅತ್ತೆಯ ಸರಸ:

  ತನಗೆ ಜನ್ಮ ಕೊಟ್ಟ ಅಮ್ಮನ ಜೊತೆ ಗಂಡ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಗೊತ್ತಾಗುತ್ತಿದ್ದಂತೆ ಆಘಾತಕ್ಕೀಡಾದ ವಂದನಾ ಎಂಬ ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಘಟನೆ ಹೈದರಾಬಾದ್ (Hyderabad) ನಗರದ ಮೀರ್ ಪೇಟೆಯಲ್ಲಿ 2020 ಮಾರ್ಚ್ ತಿಂಗಳಲ್ಲಿ ನಡೆದಿತ್ತು. ವಂದನಾ ಪತಿ ನವೀನ್ ಕುಮಾರ್ ಅತ್ತೆ ಅನಿತಾ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಅಮ್ಮ (Mother) ಮತ್ತು ಗಂಡ(Husband)ನ ಸಂಬಂಧ ತಿಳಿಯುತ್ತಿದ್ದಂತೆ ವಂದನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.

  ವರದಿ: ಮೊಹ್ಮದ್ ರಫೀಕ್ ಕೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: