• Home
 • »
 • News
 • »
 • national-international
 • »
 • Republic Day: 74ನೇ ಗಣರಾಜ್ಯೋತ್ಸವ ಆಚರಣೆಗೆ ಕೌಂಟ್‌ಡೌನ್ ಶುರು: ಈ ಬಾರಿ ಏನೇನಿರಲಿದೆ ಗೊತ್ತಾ?

Republic Day: 74ನೇ ಗಣರಾಜ್ಯೋತ್ಸವ ಆಚರಣೆಗೆ ಕೌಂಟ್‌ಡೌನ್ ಶುರು: ಈ ಬಾರಿ ಏನೇನಿರಲಿದೆ ಗೊತ್ತಾ?

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ

ಗಣರಾಜ್ಯೋತ್ಸವ (ಸಂವಿಧಾನ ದಿನಾಚರಣೆ)ಗೆ ದೆಹಲಿ ಈಗಾಗಲೇ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸ್ತಬ್ದ ಚಿತ್ರಗಳ ಮೆರವಣಿಗೆಯ ಹೊರತಾಗಿ ಈ ಬಾರಿ ನೃತ್ಯ ಪ್ರದರ್ಶನಗಳು, ಡ್ರೋನ್ ಪ್ರದರ್ಶನವೂ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಈ ಬಾರಿ ನಡೆಯಲಿದೆ.

 • News18 Kannada
 • 5-MIN READ
 • Last Updated :
 • New Delhi, India
 • Share this:

ನವದೆಹಲಿ: ಭಾರತದ ರಾಷ್ಟ್ರೀಯ ಆಚರಣೆಗಳ ಪೈಕಿ ಎತ್ತರದ ಸ್ಥಾನದಲ್ಲಿ ನಿಲ್ಲುವ ಗಣರಾಜ್ಯೋತ್ಸವ ದಿನಾಚರಣೆ (Republic Day)ಗೆ ಕೌಂಟ್‌ಡೌನ್ ಶುರುವಾಗಿದೆ. ಗುರುವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಅದ್ಧೂರಿಯಾಗಿ ಗಣರಾಜ್ಯೋತ್ಸವ ನಡೆಯಲಿದ್ದು, ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಎಲ್ಲಾ ಸಿದ್ಧತೆಗಳು ಹಂತಿಮ ಹಂತ ತಲುಪಿದೆ. ನಾಳೆ ಬೆಳಗ್ಗೆ ರಾ‍ಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu), ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಸಾಂವಿಧಾನಿಕ ಹುದ್ದೆಗಳಲ್ಲಿ ಇರುವ ಗಣ್ಯರು ದೇಶ ಮತ್ತು ಆಯಾ ರಾಜ್ಯಗಳನ್ನು ಉದ್ದೇಶಿಸಿ ಮಾತನಾಡಲಿದ್ದು, ಗಣರಾಜ್ಯೋತ್ಸವ ದಿನಾಚರಣೆಗೆ (Republic Day) ದೆಹಲಿ ಈಗಾಗಲೇ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಗಣರಾಜ್ಯೋತ್ಸವದ ಪರೇಡ್‌ನಲ್ಲಿ (Republic Day Parade) ಸ್ತಬ್ದ ಚಿತ್ರಗಳ ಮೆರವಣಿಗೆಯ ಹೊರತಾಗಿ ಈ ಬಾರಿ ನೃತ್ಯ ಪ್ರದರ್ಶನಗಳು, ಡ್ರೋನ್ ಪ್ರದರ್ಶನವೂ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಈ ಬಾರಿ ನಡೆಯಲಿದೆ.


ಮಿಲಿಟರಿ ಟ್ಯಾಟೂ ಮತ್ತು ಬುಡಕಟ್ಟು ನೃತ್ಯ ಉತ್ಸವ


ಈ ಬಾರಿಯ 74ನೇ ಗಣರಾಜ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 126ನೇ ಜನ್ಮ ದಿನದ ಪ್ರಯುಕ್ತ ಮಿಲಿಟರಿ ಟ್ಯಾಟೂ ಮತ್ತು ಬುಡಕಟ್ಟು ನೃತ್ಯ ಉತ್ಸವವನ್ನು ಆಯೋಜಿಸಲಾಗಿತ್ತು. ಜನವರಿ 23 ಮತ್ತು 24ರಂದು ನವ ದೆಹಲಿಯ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ನಡೆದ ಈ ಉತ್ಸವದಲ್ಲಿ ಕುದುರೆ ರೇಸ್, ಹಾಟ್ ಏರ್ ಬಲೂನ್, ಏರ್ ವಾರಿಯರ್ ಡ್ರಿಲ್, ಮೋಟಾರ್ ಸೈಕಲ್ ಪ್ರದರ್ಶನ ಮತ್ತು ನೇವಿ ಬ್ಯಾಂಡ್ ಮೂಲಕ ಭಾರತೀಯ ಸೇನೆ ತನ್ನ ಪರಾಕ್ರಮವನ್ನು ಪ್ರದರ್ಶಿಸಿತು. ಸಾಂಪ್ರದಾಯಿಕ ನೃತ್ಯ ಪ್ರದರ್ಶನಗಳಾದ ಗಟ್ಕಾ, ಕಳರಿಪಯ್ಯಟ್ಟ್, ಮಲ್ಲಕಂಬ, ತಂಗ್ಟಾ ಮತ್ತು ಬುಡಕಟ್ಟು ಸಮುದಾಯದ ಖುಕುರಿ ಡ್ಯಾನ್ಸ್‌ಗಳು ಕೂಡ ದೇಶದ ವಿವಿಧ ಕಡೆಯ ಕಲಾವಿದರಿಂದ ಪ್ರದರ್ಶನಗೊಂಡಿತು.


ಇದನ್ನೂ ಓದಿ: Republic Day: ಈ ಬಾರಿ ಗಣರಾಜ್ಯೋತ್ಸವದಲ್ಲಿ ವಿವಿಐಪಿಗಳಿಗೆ ಆಸನ ಕಡಿತ; ರಿಕ್ಷಾ ಎಳೆಯುವವರಿಂದ ಹಿಡಿದು ತರಕಾರಿ ಮಾರುವವರಿಗೂ ಆದ್ಯತೆ


ಈ ಬಾರಿ ಗಣರಾಜ್ಯೋತ್ಸವ ಪರೇಡ್‌ ಹೇಗಿರಲಿದೆ?


ನಾಳೆ ಗಣರಾಜ್ಯೋತ್ಸವ ಸಮಾರಂಭ ನಡೆಯುವ ಮುನ್ನ ಬೆಳಗ್ಗೆ 7 ಗಂಟೆಯ ಸುಮಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವದೆಹಲಿಯ ರಾ‍ಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಹುತಾತ್ಮರಿಗೆ ಗೌರವ ಸಲ್ಲಿಸಲಿದ್ದಾರೆ. ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದು, ರಾಷ್ಟ್ರಗೀತೆ ಹಾಡಿದ ಬಳಿಕ ಸಶಸ್ತ್ರ ಪಡೆಗಳ ವಿವಿಧ ರೆಜಿಮೆಂಟ್‌ಗಳ ಸಿಬ್ಬಂದಿ ಕರ್ತವ್ಯ ಪಥದಲ್ಲಿ ಸಾಗಲಿದ್ದಾರೆ. ವಿವಿಧ ರಾಜ್ಯಗಳ ಮಿಲಿಟರಿ ಪಡೆಗಳು ಮತ್ತು ಟ್ಯಾಬ್‌ ಲಾಕ್ಸ್‌ಗಳನ್ನು ಸಹ ಮೆರವಣಿಗೆಯಲ್ಲಿ ಪ್ರದರ್ಶಿಸಲಿದ್ದಾರೆ.


ಇದನ್ನೂ ಓದಿ: Anil K Antony Resigns: ಬಿಬಿಸಿ ವಿವಾದದ ಬೆನ್ನಲ್ಲೇ ಕಾಂಗ್ರೆಸ್​ಗೆ ಗುಡ್​ಬೈ ಹೇಳಿದ ಹಿರಿಯ ನಾಯಕ ಎಕೆ ಆಂಟನಿ ಪುತ್ರ ಅನಿಲ್!


ಬೀಟಿಂಗ್‌ ರಿಟ್ರೀಟ್‌


ಇನ್ನು ಬೀಟಿಂಗ್ ರಿಟ್ರೀಟ್ ಸಮಾರಂಭವು ಜನವರಿ 29 ರಂದು ದೆಹಲಿಯ ವಿಜಯ್ ಚೌಕ್ ಪ್ರದೇಶದಲ್ಲಿ ನಡೆಯಲಿದ್ದು, ಈ ಬಾರಿ ನಾರ್ತ್‌ ಬ್ಲಾಕ್‌ನ ಮುಂಭಾಗದಲ್ಲಿ 3 ಡಿ ಅನಾಮಾರ್ಫಿಕ್‌ ಪ್ರೊಜೆಕ್ಷನ್‌ ಮೂಲಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ.
ಡ್ರೋನ್ ಪ್ರದರ್ಶನ


ಇನ್ನು ಸಂಜೆ ಸೂರ್ಯಾಸ್ತದ ವೇಳೆ ರೈಸಿನಾ ಬೆಟ್ಟದ ಮೇಲೆ ಸ್ಥಳೀಯ ಸುಮಾರು ಮೂರು ಸಾವಿರದ ಐನೂರು ಡ್ರೋನ್‌ಗಳು ಹಾರಾಟ ನಡೆಸಲಿದ್ದು, ಡ್ರೋನ್‌ಗಳು ಬೆಟ್ಟವನ್ನು ಬೆಳಗಿಸುವ ಅತ್ಯದ್ಭುತ ದೃಶ್ಯದ ವೀಕ್ಷಣೆಗೂ ಅವಕಾಶ ಕಲ್ಪಿಸಲಾಗಿದೆ.

Published by:Avinash K
First published: