ಕಾಂಗ್ರೆಸ್​ ಕೈ ಬಿಟ್ಟಿದ್ದೇಕೆ ಆಜಾದ್? ಬಯಲಾಯ್ತು ಒಳಗಿನ ಗುಟ್ಟು, ಇಲ್ಲಿದೆ Exclusive ಇನ್​ಸೈಡ್​ ಸ್ಟೋರಿ!

ಕಾಂಗ್ರೆಸ್​ ಪ್ರಾದೇಶಿಕ ಅಧ್ಯಕ್ಷ ಸ್ಥಾನಕ್ಕೆ ಆಜಾದ್ ಅವರಿಂದ ಹೆಸರು ಕೇಳಲಾಗಿತ್ತು. ಸಂಪ್ರದಾಯದಂತೆ ಆಜಾದ್​ ತಮ್ಮ ಆಯ್ಕೆಯ ನಾಲ್ಕು ಹೆಸರುಗಳನ್ನು ನೀಡಿದ್ದರು. ಆದರೆ ರಾಜ್ಯದ ಮುಖಂಡರ ಜತೆ ಮಾತನಾಡಿದ ರಾಹುಲ್ ಗಾಂಧಿ ವಿಕರ್ ರಸೂಲ್ ವಾನಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಹಾಗಾದರೆ ಇದೇ ವಿಚಾರದಿಂದ ಆಜಾದ್​ ಮುನಿಸಿಕೊಂಡರಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನವದೆಹಲಿ(ಆ. 31) ಇತ್ತೀಚೆಗೆ ಗುಲಾಂ ನಬಿ ಆಜಾದ್ (Ghulam Nabi Azad) ಅವರು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ರಾಹುಲ್ ಗಾಂಧಿ (Rahul Gandhi) ವಿರುದ್ಧ ಹತ್ತಾರು ಸವಾಲುಗಳನ್ನೆತ್ತಿದ ಆಜಾದ್, ತನ್ನನ್ನು ಟಾರ್ಗೆಟ್​ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಪಕ್ಷದ ಕಳಪೆ ಸಾಧನೆಗೆ ಕಾರಣವನ್ನೂ ರಾಹುಲ್ ಗಾಂಧಿಗೆ ಹೇಳಿರುವುದಾಗಿ ತಿಳಿಸಿದ್ದರು. ಆದರೆ ಇಷ್ಟು ವರ್ಷಗಳಿಂದ ಆಜಾದ್ ಇದನ್ನೆಲ್ಲ ನೋಡಿಕೊಂಡಿದ್ದರೆ, ಈಗಲೇ ಯಾಕೆ ರಾಜೀನಾಮೆ (Resignation) ಕೊಟ್ಟಿದ್ದಾರೆ ಎಂಬ ಪ್ರಶ್ನೆ ಕಾಡುತ್ತದೆ. ಇಲ್ಲಿದೆ ನೋಡಿ ಕಾಂಗ್ರೆಸ್​ ಪಾಳಯದ ಇನ್​ಸೈಡ್​ ಸ್ಟೋರಿ.

ಆಜಾದ್​ ಓಲೈಕೆಗೆ ಸಮಿತಿ

ವಾಸ್ತವವಾಗಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಅವರ ಪ್ರಕಾರವೇ ನಿರ್ಧಾರ ತೆಗೆದುಕೊಳ್ಳುವುದಾಗಿ ಸೋನಿಯಾ ಗಾಂಧಿ ಆಜಾದ್​ಗೆ ಫೋನ್ ಕರೆ ಮೂಲಕ ಭರವಸೆ ನೀಡಿದ್ದರು. ದೀರ್ಘಕಾಲದವರೆಗೆ, ಕೋಪಗೊಂಡಿದ್ದ ಆಜಾದ್ ಜಿ-23 ಮೂಲಕ ನಾಯಕತ್ವದ ಮೇಲೆ ಒತ್ತಡ ಹೇರುತ್ತಿದ್ದರು. ಹೀಗಿರುವಾಗ ಸೋನಿಯಾ ಗಾಂಧಿ ಅವರನ್ನು ಸಮಾಧಾನಪಡಿಸುವ ಮಾರ್ಗವನ್ನು ಕಂಡುಕೊಂಡು ಆಜಾದ್‌ಗೆ ಅವರ ತವರು ರಾಜ್ಯದಲ್ಲಿ ಮುಕ್ತ ಹಸ್ತ ನೀಡುವುದಾಗಿ ಭರವಸೆ ನೀಡಿದ್ದರು. ಆ ನಂತರ ವಕ್ತಾರ ರಜನಿ ಪಾಟೀಲ್ ಮತ್ತು ಸಂಘಟನೆ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಆಜಾದ್ ಅವರೊಂದಿಗೆ ಮಾತನಾಡಿ ಅವರ ಒಪ್ಪಿಗೆ ಮೇರೆಗೆ ಸಮಿತಿ ರಚಿಸಿದರು.

ಇದನ್ನೂ ಓದಿ: Ghulam Nabi Azad: ಮೋದಿ ಒರಟಲ್ಲ, ಮಾನವೀಯತೆ ಉಳ್ಳವರು! ಗುಲಾಂ ನಬಿ ಆಜಾದ್‌ರಿಂದ ನಮೋ ಗುಣಗಾನ

ಅಧ್ಯಕ್ಷ ಆಯ್ಕೆ ವಿಚಾರದಿಂದ ಮುನಿಸು?

ಕಾಂಗ್ರೆಸ್​ ಪ್ರಾದೇಶಿಕ ಅಧ್ಯಕ್ಷ ಸ್ಥಾನಕ್ಕೆ ಆಜಾದ್ ಅವರಿಂದ ಹೆಸರು ಕೇಳಲಾಗಿತ್ತು. ಸಂಪ್ರದಾಯದಂತೆ ಆಜಾದ್​ ತಮ್ಮ ಆಯ್ಕೆಯ ನಾಲ್ಕು ಹೆಸರುಗಳನ್ನು ನೀಡಿದ್ದರು. ಆದರೆ ರಾಜ್ಯದ ಮುಖಂಡರ ಜತೆ ಮಾತನಾಡಿದ ರಾಹುಲ್ ಗಾಂಧಿ ವಿಕರ್ ರಸೂಲ್ ವಾನಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಈ ವಿಚಾರವಾಗಿ ಆಜಾದ್​ ಸಿಟ್ಟಿಗೆದ್ದರು, ಯಾಕೆಂದರೆ ಅವರಿ ನಾಲ್ಕು ಹೆಸರುಗಳ ಪಟ್ಟಿಯಲ್ಲಿ ಎರಡನೇ ನಂಬರ್​ನಲ್ಲಿದ್ದ ಹೆಸರಿನ ನಾಯಕನನ್ನು ಅಧ್ಯಕ್ಷರನ್ನಾಗಿ ಮಾಡಬೇಕೆಂದು ಬಯಸಿದ್ದರು. ನಾಲ್ಕೂ ಹೆಸರುಗಳನ್ನು ನೀವೇ ಕೊಟ್ಟಿದ್ದೀರಿ, ಪಕ್ಷವು ಇವುಗಳಲ್ಲಿ ಒಂದನ್ನು ಆರಿಸಿದ್ದರೆ, ಅದರಲ್ಲಿ ನಿಮಗೆ ಯಾವುದೇ ತೊಂದರೆಯಾಗಬಾರದು ಎಂಬುದು ರಾಹುಲ್ ಗಾಂಧಿ ಮತ್ತು ನಾಯಕತ್ವದ ತರ್ಕವಾಗಿತ್ತು. ಪಕ್ಷದ ಪ್ರೋಟೋಕಾಲ್ ಪ್ರಕಾರ ತಾನು ನಾಲ್ಕು ಹೆಸರುಗಳನ್ನು ನೀಡಿರಬಹುದು ಆದರೆ ಎರಡನೇ ಸಂಖ್ಯೆಯ ಆಯ್ಕೆ ಮಾಡುವಂತೆ ರಜನಿ ಪಾಟೀಲ್ ಮತ್ತು ವೇಣುಗೋಪಾಲ್ ಅವರಿಗೆ ತಿಳಿಸಿರುವುದಾಗಿ ಆಜಾದ್ ವಾದಿಸಿದ್ದರು. ಈ ನಾಲ್ವರೂ ಅವರ ಆಯ್ಕೆಯಾಗಿದ್ದು, ಆಯ್ಕೆ ವಿಚಾರದಲ್ಲಿ ಆಕ್ಷೇಪ ವ್ಯಕ್ತಪಡಿಸುವುದು ತಪ್ಪು ಎಂಬುದು ಪಕ್ಷದ ವಾದ.ವಾನಿಗೆ ಆಜಾದ್​ ಭೇಟಿ ಮಾಡದಂತೆ ತಾಕೀತು?

ಅದೇ ಸಮಯದಲ್ಲಿ, ರಸೂಲ್ ವಾನಿ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ನಿರ್ಧಾರದ ನಂತರ ಅವರನ್ನು ದೆಹಲಿಗೆ ಕರೆಸಲಾಯಿತು ಎಂದೂ ಆಜಾದ್ ಹೇಳಿದ್ದಾರೆ. ಆದರೆ ನಾಯಕತ್ವವು ವಾನಿಗೆ ಅಧ್ಯಕ್ಷರನ್ನಾಗಿ ಮಾಡುವ ವಿಚಾರ ತಿಳಿಸಿ, ಅವರು ಆಜಾದ್ ಅವರನ್ನು ಭೇಟಿ ಮಾಡಬಾರದು ಎಂದು ಆದೇಶಿಸಿತ್ತು ಎಂದೂ ಆಜಾದ್​ ಆರೋಪಿಸಿದ್ದಾರೆ. ಆದರೆ ರಸೂಲ್ ಆಜಾದ್ ಮನೆಗೆ ಸಿಹಿತಿಂಡಿಯೊಂದಿಗೆ ಹೋಗಿದ್ದರು ಹೀಗಿದ್ದರೂ ಅವರು ಭೇಟಿಗೆ ಅವಕಾಶ ನೀಡಿರಲಿಲ್ಲ, ಗೇಟ್ ತೆರೆಯಲಿಲ್ಲ ಎಂದು ರಜನಿ ಪಾಟೀಲ್ ಹೇಳಿದ್ದಾರೆ.

ಇದನ್ನೂ ಓದಿ: Ghulam Nabi Azad: ಇಂದಿರಾ- ರಾಜೀವ್ ಆಪ್ತರಾಗಿದ್ದ ಆಜಾದ್ ರಾಹುಲ್​ ಗಾಂಧಿಗೆ 'ಅಪರಿಚಿತ' ಆಗಿದ್ದು ಹೇಗೆ?

ವಾನಿಗೆ ಗೇಟ್​ ತೆರೆಯಲಿಲ್ಲ ಎಂದ ಕಾಂಗ್ರೆಸ್​

ಇದರಿಂದ ಕುಪಿತಗೊಂಡ ಆಜಾದ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಿರಾಕರಿಸಿದರು. ಯಾರಾದರೂ ತನ್ನನ್ನು ಓಲೈಸಲು ಬರುತ್ತಾರೆ ಎಂದು ಅವರು ನಿರೀಕ್ಷಿಸಿದ್ದರು ಆದರೆ ಪಕ್ಷದಿಂದ ಯಾರೂ ಅವರನ್ನು ಭೇಟಿಯಾಗಲಿಲ್ಲ. ಕೆಲವು ದಿನ ಕಾದ ನಂತರ ಅವರು ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದರು. ರಾಜೀನಾಮೆ ನಂತರ, ಉಸ್ತುವಾರಿ ರಜನಿ ಪಾಟೀಲ್ ಮಾತನಾಡಲು ಇಚ್ಛಿಸುವುದಾಗಿ ವಾಟ್ಸಾಪ್ ಮಾಡಿದರು, ಆದರೆ ಇದಕ್ಕೆ ಪ್ರತಿಕ್ರಿಯೆಯಾಗಿ ಆಜಾದ್​ ರಾಜೀನಾಮೆ ಕಳುಹಿಸಿದ್ದಾರೆ.
Published by:Precilla Olivia Dias
First published: