Bihar Politics: ಬಿಜೆಪಿಯಿಂದ ದೂರ ಸರಿದಿದ್ದೇಕೆ ನಿತೀಶ್​ ಕುಮಾರ್, ಬಯಲಾಯ್ತು ಶಾಕಿಂಗ್ ನಡೆ ಹಿಂದಿನ ಸತ್ಯ!

ಪ್ರಮಾಣವಚನ ಸ್ವೀಕರಿಸಿದ ನಂತರ ನಿತೀಶ್ ಕುಮಾರ್ ತೇಜಸ್ವಿ ಯಾದವ್ ಪರಸ್ಪರ ಅಪ್ಪಿಕೊಂಡಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ವೇದಿಕೆಯ ಮೇಲಿಂದ ಫೋಟೋಗಳಿಗೆ ಪೋಸ್ ನೀಡಿ, ಜನರತ್ತ ಕೈ ಬೀಸಿ ಶುಭಾಶಯ ಕೋರಿದರು. ಹೀಗಿರುವಾಗ ನಿತೀಶ್ ಕುಮಾರ್ ಕೂಡ ಪ್ರಧಾನಿ ಹುದ್ದೆಗೆ ಸಂಬಂಧಿಸಿದಂತೆ ಮೌನ ಮುರಿದಿದ್ದಾರೆ.

ಜೆಡಿಯು ನಾಯಕ ನಿತೀಶ್ ಕುಮಾರ್

ಜೆಡಿಯು ನಾಯಕ ನಿತೀಶ್ ಕುಮಾರ್

  • Share this:
ಪಾಟ್ನಾ(ಆ.10): ನಿತೀಶ್ ಕುಮಾರ್ (Nitish Kumar) ಮತ್ತೆ ಬಿಹಾರ ಸಿಎಂ ಆಗಿ (Chief Minister Of Bihar) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ತೇಜಸ್ವಿ ಯಾದವ್ ಅವರೊಂದಿಗೆ ಪ್ರಮಾಣ ವಚನ ಸ್ವೀಕರಿಸಿದ ನಂತರ ನಿತೀಶ್ ಕುಮಾರ್ ಎನ್‌ಡಿಎ ಮತ್ತು ಬಿಜೆಪಿ ತೊರೆಯಲು ಕಾರಣ ಏನು ಎಂಬುವುದನ್ನು ಸ್ಪಷ್ಟಪಡಿಸಿದರು. ನಮ್ಮ ಪಕ್ಷದ ಎಲ್ಲ ಜನರ ಒಪ್ಪಿಗೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಿತೀಶ್ ಕುಮಾರ್ ಪಾಟ್ನಾದಲ್ಲಿ (Patna)  ಹೇಳಿದ್ದಾರೆ. ಜೆಡಿಯು (JDU) ಜೊತೆ 2020ರ ಚುನಾವಣೆ ಸರಿಯಲ್ಲ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ಅನೇ ಕ ಮಂದಿ ಇದೇ ಅಭಿಪ್ರಾಯ ನೀಡಿದ್ದರು. 2015ರಲ್ಲಿ ಜೊತೆಯಾಗಿದ್ದವರು ಈಗ ಮತ್ತೆ ಒಂದಾಗಿದ್ದಾರೆ ಎಂದಿದ್ದಾರೆ.

ಪ್ರಧಾನಿ ಹುದ್ದೆಯ ಬಗ್ಗೆ ನಿತೀಶ್ ಕುಮಾರ್ ಅವರನ್ನು ಕೇಳಿದಾಗ, ನನಗೆ ಅಂತಹ ಯಾವುದೇ ಆಸೆ ಇಲ್ಲ ಎಂದು ಹೇಳಿದ್ದಾರೆ. ಕೆಲವರು ಪ್ರತಿಪಕ್ಷಗಳ ಅಂತ್ಯದ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ವಿರೋಧವು ಕೊನೆಗೊಳ್ಳುವುದಿಲ್ಲ, ಜನರು ಏನು ಮಾಡಬೇಕೋ ಅದನ್ನು ಮಾಡುತ್ತಲೇ ಇರುತ್ತಾರೆ ಎಂದು ನಿತೀಶ್ ಕುಮಾರ್ ಹೇಳಿದರು. ಈ ಹಿಂದೆ ನಾವು ವಿರೋಧ ಪಕ್ಷದಲ್ಲಿದ್ದೆವು, ಮುಂದೆಯೂ ಇರುತ್ತೇವೆ ಮತ್ತು ಒಟ್ಟಿಗೆ ಇರುತ್ತೇವೆ ಎಂದು ನಿತೀಶ್ ಕುಮಾರ್ ಹೇಳಿದರು.

ಇದನ್ನೂ ಓದಿ:  Bihar Politics: 8ನೇ ಬಾರಿಗೆ ಬಿಹಾರ ಸಿಎಂ ಆದ ನಿತೀಶ್ ಕುಮಾರ್; ತೇಜಸ್ವಿ ಯಾದವ್ ಉಪಮುಖ್ಯಮಂತ್ರಿ

2014ರಲ್ಲಿ ಜನಾದೇಶ ಪಡೆದವರಿಗೆ 2024ರಲ್ಲಿ ಜನಾದೇಶ ಸಿಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ನಿತೀಶ್ ಕುಮಾರ್ ಹೇಳಿದರು. ನಾವು ಚುನಾವಣೆಯಲ್ಲಿ ಅವರನ್ನು ಬೆಂಬಲಿಸಿದ್ದೇವೆ ಆದರೆ ಬಿಹಾರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ನಾಯಕರು ಸೋತಿದ್ದಾರೆ. ಫಲಿತಾಂಶದ ನಂತರ ನಾನು ಬಿಹಾರ ಸಿಎಂ ಆಗಲು ಬಯಸಲಿಲ್ಲ, ಆದರೆ ಎಲ್ಲಾ ಕಡೆಯಿಂದ ಒತ್ತಡವಿತ್ತು ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. ನೀವು ಬಿಹಾರವನ್ನು ನೋಡಿಕೊಳ್ಳಿ ಎಂದು ನನಗೆ ಹೇಳಿದ್ದರು. ನನ್ನ ಜೊತೆ ಏನೆಲ್ಲಾ ನಡೆಯಿತೋ ಅದು ನನಗೆ ಸರಿ ಕಾಣಲಿಲ್ಲ ಎಂದಿದ್ದಾರೆ.As Nitish Kumar Breaks Up With BJP Lalu yadav Old Tweet Goes Viral

ಇದನ್ನೂ ಓದಿ:  Bihar Politics: ನಿತೀಶ್ ಕುಮಾರ್ 2024ರಲ್ಲಿ ಪ್ರಧಾನಿ ಅಭ್ಯರ್ಥಿ ಆಗುವರೇ? ಪ್ರಶಾಂತ್ ಕಿಶೋರ್ ಹೀಗಂದ್ರು

ನನ್ನ ಪಕ್ಷದ ಜನರೊಂದಿಗೆ ಮಾತುಕತೆ ನಡೆಸಿದಾಗ ಹಲವು ವಿಷಯಗಳು ಬಹಿರಂಗವಾಗಿದ್ದು, ಆ ಬಳಿಕ ಬಿಜೆಪಿಯಿಂದ ಬೇರ್ಪಡಲು ನಿರ್ಧರಿಸಿದ್ದೇನೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ. 2015ರ ವಿಧಾನಸಭಾ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸಿ ಎಷ್ಟು ಸ್ಥಾನ ಗೆದ್ದಿದ್ದೇವೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು. ನಾವು ಇರುತ್ತೇವೆಯೋ ಇಲ್ಲವೋ, ಆದರೆ 2024 ರಲ್ಲಿ ಇರುತ್ತೇವೆಯೋ ಇಲ್ಲವೋ ಎಂದು ಈಗ ಬಿಜೆಪಿಯವರು ಮಾತನಾಡುವುದಿಲ್ಲ ಎಂದಿದ್ದಾರೆ.

ಬಿಜೆಪಿಯಿಂದ ಪ್ರತಿಭಟನೆ

ಇನ್ನು ನಿತೀಶ್ ಕುಮಾರ್ ಅವರು ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಇಂದು ಪಾಟ್ನಾದಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ. ಬಿಹಾರದ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ನಡೆಸುವ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿದೆ. ಬಿಹಾರ ರಾಜ್ಯ ಬಿಜೆಪಿ ಮುಖ್ಯಸ್ಥ ಡಾ.ಸಂಜಯ್ ಜೈಸ್ವಾಲ್, ಬಿಹಾರದ ಜನರು ನಿತೀಶ್ ಕುಮಾರ್ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ.

ಬಿಜೆಪಿ-ಜನತಾ ದಳ (ಯುನೈಟೆಡ್) ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ತಾರ್​ಕಿಶೋರ್ ಪ್ರಸಾದ್ ಅವರು ಮೈತ್ರಿ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಪ್ರಯತ್ನಿಸಿದ್ದೇವೆ ಎಂದು ಹೇಳಿದ್ದಾರೆ. ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನಿತೀಶ್ ಕುಮಾರ್ ಅವರೊಂದಿಗೆ ಮಾತನಾಡಿದ್ದಾರೆ ಎಂದು ಅವರು ಹೇಳಿದರು.
Published by:Precilla Olivia Dias
First published: