BV Srinivas: ಧರ್ಮದ ಅಫೀಮು ಸೇವಿಸಿರುವ ಸಂಘಪರಿವಾರ, ಬಿಜೆಪಿಯವರೇ ನಿಜವಾದ ಡ್ರಗಿಸ್ಟ್​ಗಳು: ಕಟೀಲ್​ಗೆ ಶ್ರೀನಿವಾಸ್ ತಿರುಗೇಟು!

ನಳಿನ್ ಕುಮಾರ್ ಕಟೀಲ್ ದುರ್ಬಲ ಅಧ್ಯಕ್ಷ. ಆ ಲೋಪವನ್ನು ಮರೆಮಾಚಲು, ದೆಹಲಿಯ ಬಿಜೆಪಿ ನಾಯಕಕರನ್ನು ಮೆಚ್ಚಿಸಲು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ತಲೆ ಸರಿ ಇಲ್ಲ ಎಂದು ಹೇಳಿದರು.

ಬಿ ವಿ ಶ್ರೀನಿವಾಸ್

ಬಿ ವಿ ಶ್ರೀನಿವಾಸ್

  • Share this:
ನವದೆಹಲಿ, ಅ. 19: ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ (AICC Former President Rahul Gandhi) ಒಬ್ಬ ಡ್ರಗ್ ಪೆಡ್ಲರ್ ಎಂದು ಹೇಳಿಕೆ ನೀಡಿದ್ದ ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ಸಂಸದ ನಳಿನ್ ಕುಮಾರ್ ಕಟೀಲ್ (State BJP President Nalin kumar Katil) ವಿರುದ್ಧ ಅಖಿಲ ಭಾರತ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. (All India Youth Congress President Srinivas BV) ವಾಗ್ದಾಳಿ ನಡೆಸಿದ್ದಾರೆ. ಧರ್ಮದ ಅಫೀಮನ್ನು ಸೇವಿಸಿರುವ ಸಂಘ ಪರಿವಾರದವರು (Sangapariwar) ಮತ್ತು ಬಿಜೆಪಿಯವರೇ ನಿಜವಾದ ಡ್ರಗಿಸ್ಟ್ ಗಳು ಎಂದು ತಿರುಗೇಟು ನೀಡಿದ್ದಾರೆ.

ದೆಹಲಿಯ ಯುವ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ‌ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಶ್ರೀನಿವಾಸ್ ಬಿ.ವಿ., ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಸಂಘಪರಿವಾರ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (BJP National President J.P. Nadda) ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ (BJP National Organization General Secretary BL Santhosh) ಕಲಿಸಿರುವ ಸಂಸ್ಕೃತಿ ಇದೆಯಾ? ಅಥವಾ ಸಂಘಪರಿವಾರದ ಸಂಸ್ಕೃತಿ ಇದೆಯಾ? ಎಂದು ಪ್ರಶ್ನಿಸಿದರು.

ನಳಿನ್ ಕುಮಾರ್ ಕಟೀಲ್ ಸಂಸದರಾಗಿ, ಒಂದು ಪಕ್ಷದ ಅಧ್ಯಕ್ಷರಾಗಿ ಎಂದಾದರೂ ಜನ ನಿಜವಾಗಿಯೂ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಮಾತನಾಡಿದ್ದಾರಾ ಜವಾಬ್ದಾರಿಯುತರಾಗಿ ನಡೆದುಕೊಂಡಿದ್ದಾರಾ?. ಅವರು ತಮ್ಮ ಪಕ್ಷದ ನಾಯಕರು‌ ಹದ್ದು ಮೀರಿ‌ ವರ್ತಿಸದಂತೆ ತಡೆಯಲಾಗದ, ಯಾರ ವಿರುದ್ಧವೂ ಕ್ರಮ ಕೈಗೊಳ್ಳಲಾಗದ ದುರ್ಬಲ ಅಧ್ಯಕ್ಷ. ಆ ಲೋಪವನ್ನು ಮರೆ ಮಾಚಲು, ದೆಹಲಿಯ ಬಿಜೆಪಿ ನಾಯಕಕರನ್ನು ಮೆಚ್ಚಿಸಲು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ಇವರಿಗೆ ತಲೆ ಸರಿ ಇಲ್ಲ. ಇವರಿಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ (Nimhans Hospital) ಬೆಡ್ ಬುಕ್ ಆಗಿದೆ. ಅಲ್ಲಿಯೂ ಅವರ ತಲೆ ಸರಿಹೋಗದಿದ್ದರೆ ಬೇರೆ ಕಡೆ ಉತ್ತಮ ಚಿಕಿತ್ಸೆ ಕೊಡಲಾಗುವುದು ಎಂದು ಮಾರ್ಮಿಕವಾಗಿ ಮಾತನಾಡಿದರು.

ನಳಿನ್ ಕುಮಾರ್ ಕಟೀಲ್ ನಿಜವಾದ ಸಮಸ್ಯೆಗಳಿಂದ ಜನರ ಮನಸ್ಸನ್ನು ಬೇರೆಡೆಗೆ ಸೆಳೆಯಲು ಈ ರೀತಿ ಹುಚ್ಚು ಹುಚ್ಚಾಗಿ ಮಾತಾಡುತ್ತಿದ್ದಾರೆ. ನಳಿನ್ ಕುಮಾರ್ ಕಟೀಲ್ ತಮ್ಮ ಹೇಳಿಕೆಗೆ ಕ್ಷಮೆ ಕೇಳಿ ತಪ್ಪನ್ನು ತಿದ್ದಿಕೊಳ್ಳದಿದ್ದರೆ ಮುಂದೆ ಯುವ ಕಾಂಗ್ರೆಸ್  ಕಟೀಲ್ ಮತ್ತು ಬಿಜೆಪಿ ವಿರುದ್ಧ ಖಂಡಿತ ಹೋರಾಟ ಮಾಡಬೇಕಾಗುತ್ತದೆ. ಸರಿಯಾಗಿ ಬುದ್ದಿ ಕಲಿಸಬೇಕಾಗುತ್ತದೆ ಎಂದು‌ ಶ್ರೀನಿವಾಸ್ ಬಿ.ವಿ. ಎಚ್ಚರಿಸಿದರು.

ಕಟೀಲ್ ಅವಿವೇಕಿ

ಇದೇ ವಿಷಯಕ್ಕೆ ಪ್ರತಿಕ್ರಿಯೆ ನೀಡಿರುವ ಮಾಜಿ ಕಾಂಗ್ರೆಸ್​ ರಾಜ್ಯಾಧ್ಯಕ್ಷ ಮತ್ತು ಹಾಲಿ ಶಾಸಕ ದಿನೇಶ್​ ಗುಂಡೂರಾವ್ (Congress Leader Dinesh Gundu Rao)​, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ತಲೆ ಕೆಟ್ಟಿದೆ. ಅದಕ್ಕಾಗಿಯೇ ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದಿದ್ದಾರೆ. ನಳಿನ್​ ಕುಮಾರ್​ ಕಟೀಲ್​ ಒಬ್ಬ ಅವಿವೇಕಿ. ತಲೆಕೆಟ್ಟಿರುವ ವ್ಯಕ್ತಿ ಎಂದು ದಿನೇಶ್​ ಗುಂಡೂರಾವ್​ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು ಕಟೀಲ್​ ಹೇಳಿಕೆಯನ್ನು ಕಟುವಾಗಿ ಖಂಡಿಸಿದರು. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷ ಈ ರೀತಿಯ ಬೇಜವಾಬ್ದಾರಿ ಹೇಳಿಕೆ ನೀಡುವುದು ಅಕ್ಷಮ್ಯ ಅಪರಾಧ ಎಂದು ಗುಂಡೂರಾವ್​ ದೂರಿದರು.

ಇಂತಹ ತಲೆ ಕೆಟ್ಟಿರುವ ವ್ಯಕ್ತಿಯನ್ನು ಬಿಜೆಪಿ ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾ ಗೊಳಿಸಬೇಕು ಎಂದು ಆಗ್ರಹಿಸಿದರು. ಇವರ ಮಾನಸಿಕ ಸ್ಥಿಮಿತ ಕೂಡ ಸರಿ ಇಲ್ಲ, ಇದು ಅತ್ಯಂತ ಕೀಳುಮಟ್ಟದ ಹಾಗೂ ಆಧಾರ ರಹಿತ ಆರೋಪ. ಕೊಳಕು ಮನಸ್ಸಿನ ಸಂಸ್ಕೃತಿ ಬಗ್ಗೆ ಗೊತ್ತಾಗ್ತಿದೆ. ಕೂಡಲೇ ಬಿಜೆಪಿಗೆ ನೈತಿಕತೆ ಇದ್ರೆ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತಾಕಬೇಕು ಎಂದು ದಿನೇಶ್ ಗುಂಡೂರಾವ್​ ಆಗ್ರಹಿಸಿದರು.

ರಾಹುಲ್​ ತಂದೆಯಿಂದ ದೇಶಕ್ಕಾಗಿ ಪ್ರಾಣತ್ಯಾಗ

ರಾಹುಲ್ ಗಾಂಧಿ ಅವರ ತಂದೆ ದೇಶಕ್ಕೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ (Rajiv Gandhi sacrificed his life for country). ಇಂತಹ ವ್ಯಕ್ತಿ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿರೋದು ನಿಜಕ್ಕೂ ನಾಚಿಕೆಗೇಡು. ಒಬ್ಬ ಸಂಸದನಾಗಿ, ರಾಜ್ಯಾಧ್ಯಕ್ಷ ನಾಗಿ ಈ ರೀತಿ ಮಾತಾಡ್ತಾರೆ ಅಂದರೆ ಅವ್ರ ಕೊಳಕು ಮನಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ ಎಂದು ಕಟೀಲ್​ ಅವರ ವಿರುದ್ಧ ಹರಿಹಾಯ್ದರು.

ಬ್ಲೂ ಫಿಲಂ ನೋಡೋದು ಇವರ ಸಂಸ್ಕೃತಿ

ದೇವರು, ಸಂಸ್ಕೃತಿ ಬಗ್ಗೆ ಮಾತಾಡೋರು, ಬ್ಲೂ ಫಿಲಂ ನೋಡೋರು, ಬ್ಲೂ ಫಿಲಂ ಮಾಡಿದವರ ವಿರುದ್ದ ಏನು ಕ್ರಮ ತೆಗೆದುಕೊಂಡಿದ್ದಾರೆ..? ಎಂದು ಗುಂಡೂರಾವ್​ ಪ್ರಶ್ನಿಸಿದರು. ಈ ನಳಿನ್ ಕುಮಾರ್ ಕಟೀಲ್ ಗೆ ಯೋಗ್ಯತೆನೇ ಇಲ್ಲ. ಬಿಜೆಪಿ ಒಂದು ಭ್ರಷ್ಟ ಪಕ್ಷ, ಕೇವಲ ಹಣದಲ್ಲಿ ಅಲ್ಲ, ನೈತಿಕತೆಯಲ್ಲೂ ಬಹಳ ಭ್ರಷ್ಟರಾಗಿದ್ದಾರೆ. ದೇವರನ್ನು ಬಂಡವಾಳ ಮಾಡಿಕೊಂಡು ದೇಶದಲ್ಲಿ ಕೆಟ್ಟ ಪ್ರಕ್ರಿಯೆಗಳನ್ನು ಅಳವಡಿಸುತ್ತಿದ್ಸಾರೆ. ಇವರ ನಾಲಿಗೆ ಯಾವುದೇ ರೀತಿಯ ಲಂಗು ಲಗಾಮು ಇಲ್ಲ. ಸಿಟಿ ರವಿ, ಯತ್ನಾಳ್, ಅನಂತ ಕುಮಾರ್ ಹೆಗಡೆ, (CT Ravi, Basanagouda Patil Yatnal, Ananth Kumar Hegde) ಈ ಕಟೀಲ್ ದೊಡ್ಡ ಹೀರೋಗಳು. ಇವರಿಗೆ ಏನಾದರೂ ರಾಜಕೀಯ ಸಂಸ್ಕೃತಿ ಗೊತ್ತಿದೆಯಾ..? ಇಲ್ಲಿರುವ ಮುಖ್ಯಮಂತ್ರಿ ಬೊಮ್ಮಾಯಿ ಇವರನ್ನು ಕಂಟ್ರೋಲ್ ಮಾಡಿಲ್ಲ. ಬಾಯಿಗೆ ಬಂದ ಮಾತಾಡುವ ಇವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ.ಇವರಿಗೆ ಕ್ಷಮೆ ಕೇಳುವ ಅರ್ಹತೆ ಇಲ್ಲ ಎಂದು ಗುಂಡೂರಾವ್​ ಗುಡುಗಿದರು.

ಇದನ್ನು ಓದಿ: Nalin Kumar Kateel: 'ರಾಹುಲ್ ಗಾಂಧಿ ಒಬ್ಬ ಡ್ರಗ್ ಅಡಿಕ್ಟ್, ಡ್ರಗ್ ಪೆಡ್ಲರ್': ನಳಿನ್ ಕುಮಾರ್ ಕಟೀಲ್ ವಿವಾದಾತ್ಮಕ ಹೇಳಿಕೆ

ಬಿಜೆಪಿಯವರಿಗೆ ನೈತಿಕತೆ ಅನ್ನೋದು ಇದ್ರೆ, ಅವರನ್ನು ಕಿತ್ತಾಕಬೇಕು. ಇಲ್ಲ ಅಂದರೆ ಸರಿಯಾಗಿ ಇರಪ್ಪ ಎಂದು ವಾರ್ನ್ ಮಾಡಬೇಕು‌. ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾನೂನು ಕ್ರಮ ಆಗಬೇಕು. ಅವರ ಪಕ್ಷದವರು, ಮತ್ತೆ ಮಂತ್ರಿಗಳು ಏನೇನು ಮಾಡ್ತಿದಾರೆ ಎಂದು ನಮಗೆ ಗೊತ್ತಿಲ್ವಾ..? ಸುಮ್ಮನೆ ಬಾಯಿಗೆ ಬಂದಂತೆ ಏನೇನೋ ಮಾತಾಡಬಾರದು. ಏನಾದರೂ ಆಧಾರ ಇಟ್ಟುಕೊಂಡು ಮಾತಾಡಬೇಕು. ಅಧ್ಯಕ್ಷ ನೇಮಕ ಮಾಡೋದು ಬಿಡೋದು ನಮ್ಮ ಪಕ್ಷದ ತೀರ್ಮಾನ . ನಮ್ಮ ಪಕ್ಷದೊಳಗಿನ ವಿಚಾರಕ್ಕೂ ಇವರಿಗೂ ಏನು ಸಂಬಂಧ ಎಂದರು.

  • ವರದಿ: ಧರಣೀಶ್ ಬೂಕನಕೆರೆ

Published by:HR Ramesh
First published: