• Home
  • »
  • News
  • »
  • national-international
  • »
  • Baby Girl: 10 ತಿಂಗಳ ಮಗುವಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ! ಲಕ್ಕಿ ಅಲ್ಲ ಕಣ್ರೀ, ಕಂದಮ್ಮನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

Baby Girl: 10 ತಿಂಗಳ ಮಗುವಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ! ಲಕ್ಕಿ ಅಲ್ಲ ಕಣ್ರೀ, ಕಂದಮ್ಮನ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅರೇ ಇದೇನಪ್ಪಾ 8 ತಿಂಗಳ ಹೆಣ್ಣು ಮಗುವಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿದ್ಯಾ? ಪುಟ್ಟ ಮಗು ಓದಿ ಡಿಗ್ರಿ ಪಡೆದಿಲ್ಲ, ಕೆಲ್ಸಕ್ಕಾಗಿ ಅಲೆಯಲಿಲ್ಲ. ಆಕೆಗೆ ಹೇಗೆ ಸಿಕ್ಕಿತು ರೈಲ್ವೆ ಇಲಾಖೆಯ ಕೆಲಸ? ಲಕ್ಕಿ ಕಣ್ರೀ ಆ ಮಗು ಅಂತೀರಾ? ಹಾಗಿದ್ರೆ ನಿಮ್ಮ ಮಾತು ಸರಿಯಲ್ಲ.

  • Share this:

ನವದೆಹಲಿ: ಆಕೆ ಈ ಜಗತ್ತಿಗೆ (World) ಬಂದು 1 ವರ್ಷವೂ (1 Year) ಆಗಿಲ್ಲ, ಬದಲಾಗಿ ಕೇವಲ 10 ತಿಂಗಳಷ್ಟೇ (10 Months) ಆಗಿದೆ. ಆದರೆ ಆ ಪುಟ್ಟ ಕಂದಮ್ಮನಿಗೆ (Small Baby) ಒಳ್ಳೆಯ ಜಾಬ್ (Job) ಒಂದು ಸಿಕ್ಕಿದೆ. ಅದೂ ಭಾರತೀಯ ರೈಲ್ವೆ ಇಲಾಖೆಯಲ್ಲಿ (Indian Railway Department) ಕೆಲಸ ಸಿಕ್ಕಿದೆ. ಅರೇ ಇದೇನಪ್ಪಾ 10 ತಿಂಗಳ ಹೆಣ್ಣು ಮಗುವಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಸಿಕ್ಕಿದ್ಯಾ? ಪುಟ್ಟ ಮಗು ಓದಿ ಡಿಗ್ರಿ (Degree) ಪಡೆದಿಲ್ಲ, ಕೆಲ್ಸಕ್ಕಾಗಿ ಅಲೆಯಲಿಲ್ಲ. ಆಕೆಗೆ ಹೇಗೆ ಸಿಕ್ಕಿತು ರೈಲ್ವೆ ಇಲಾಖೆಯ ಕೆಲಸ? ಲಕ್ಕಿ (Lucky) ಕಣ್ರೀ ಆ ಮಗು ಅಂತೀರಾ? ಹಾಗಿದ್ರೆ ನಿಮ್ಮ ಮಾತು ಸರಿಯಲ್ಲ. ಯಾಕೆಂದ್ರೆ ಆ ಪುಟ್ಟ ಕಂದಮ್ಮ ಜಗತ್ತು ನೋಡುತ್ತಿದ್ದಂತೆ ತನ್ನ ತಂದೆ ಮತ್ತು ತಾಯಿಯನ್ನು (Father and Mother) ಕಳೆದುಕೊಂಡಿದೆ. ಈ ಮಗುವಿನ ಕಥೆ ಕೇಳಿದ್ರೆ ನಿಮ್ಮ ಹೃದಯ ಕರಗಿ, ಮನಸು ಮರುಗಿ, ಕಣ್ಣಲ್ಲಿ ನೀರು ಬರುವುದು ಗ್ಯಾರೆಂಟಿ!


10 ತಿಂಗಳ ಹೆಣ್ಣು ಮಗುವಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ


ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡ 10 ತಿಂಗಳ ಅನಾಥ ಹೆಣ್ಣು ಮಗುವಿಗೆ ಭಾರತೀಯ ರೈಲ್ವೆ ಇಲಾಖೆ ಉದ್ಯೋಗ ನೀಡಿದೆ. ಯಾಕೆಂದ್ರೆ ಈ ಹೆಣ್ಣು ಮಗು ತನ್ನ ತಂದೆ ಹಾಗೂ ತಾಯಿ ಇಬ್ಬರನ್ನೂ ಕಳೆದುಕೊಂಡಿದೆ.


ಅಪಘಾತದಲ್ಲಿ ತಂದೆ-ತಾಯಿ ಸಾವು, ಮಗು ಅಪಾಯದಿಂದ ಪಾರು


ಈ 10 ತಿಂಗಳ ಹೆಣ್ಣು ಮಗುವಿನ ತಂದೆ ರಾಜೇಂದ್ರ ಕುಮಾರ್ ರೈಲ್ವೇ ಯಾರ್ಡ್‌ನ ಅಸಿಸ್ಟೆಂಟ್ ಆಗಿ ಚತ್ತೀಸಘಡದ ಬಿಲಾಯಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ತಿಂಗಳು ಜೂನ್ 1 ರಂದು ನಡೆದ ರಸ್ತೆ ಅಪಘಾತದಲ್ಲಿ ರಾಜೇಂದ್ರ ಕುಮಾರ್ ಹಾಗೂ ಪತ್ನಿ ಸ್ಥಳದಲ್ಲೆ ಮೃತಪಟ್ಟಿದ್ದರು. ಈ ಅಪಘಾತದಲ್ಲಿ ಇವರ 10 ತಿಂಗಳ ಹೆಣ್ಣು ಮಗು ಪವಾಡ ಸದೃಶ್ಯ ರೀತಿಯಲ್ಲಿ ಬದುಕುಳಿದಿತ್ತು.


ಇದನ್ನೂ ಓದಿ: Explained: ಬ್ಲ್ಯೂ ಬೇಬಿ ಸಿಂಡ್ರೋಮ್ ಎಂದರೇನು? ಚರ್ಮ ನೀಲಿ ಬಣ್ಣಕ್ಕೆ ತಿರುಗುವ ಹಿಂದಿದೆ ಈ ಕಾರಣ!


ತಂದೆಗೆ ಬರಬೇಕಾಗಿರೋ ಸೌಲಭ್ಯ ಹೆಣ್ಣುಮಗುವಿಗೆ ವಿತರಣೆ


ಪೋಷಕರ ನಿಧನದಿಂದ ಹೆಣ್ಣು ಮಗುವಿನ ಶಿಕ್ಷಣ ಹಾಗೂ ಇತರ ವೆಚ್ಚಗಳನ್ನು ಕುಟುಂಬ ಇತರ ಸದಸ್ಯರು ಭರಿಸಬೇಕಾಗುತ್ತದೆ. ಪ್ರತಿ ತಿಂಗಳ ವೇತನವನ್ನು ಮಗುವಿನ ಹೆಸರಲ್ಲಿ ಜಮಾ ಆಗಲಿದೆ. ಈ ಹಣ ಮಗುವಿನ ಪಾಲನೆಗೆ, ಶಿಕ್ಷಣ ಹಾಗೂ ಇತರ ವೆಚ್ಚಕ್ಕೆ ಖರ್ಚು ಮಾಡಲಾಗುತ್ತದೆ ಎಂದು ರೈಲ್ವೇ ಇಲಾಖೆ ಹೇಳಿದೆ. ರೈಲ್ವೆ ಇಲಾಖೆಯೇ ಹೆಣ್ಣು ಮಗುವಿಗೆ ಎಲ್ಲಾ ನೆರವು ನೀಡುವ ಭರವಸೆ ನೀಡಿದೆ. ರಾಜೇಂದ್ರ ಕುಮಾರ್‌ಗೆ ಇಲಾಖೆಯಿಂದ ಬರಬೇಕಿರುವ ಎಲ್ಲಾ ಸೌಲಭ್ಯಗಳನ್ನು ಮಗುವಿನ ಹೆಸರಿಗೆ ಮಾಡುವುದಾಗಿ ಇಲಾಖೆ ಹೇಳಿದೆ. ಇದರ ಜೊತೆಗೆ ನೌಕರಿಯನ್ನು ನೀಡಲು ನಿರ್ಧರಿಸಿದೆ.


ಇದನ್ನೂ ಓದಿ: Explained: ಪೋಷಕರ ಜೀನ್‌ಗಳು ಮಕ್ಕಳ ನಡವಳಿಕೆಯನ್ನು ರೂಪಿಸುತ್ತವೆಯಂತೆ; ಅದು ಹೇಗೆ ಗೊತ್ತಾ?


ಅನುಕಂಪದ ಆಧಾರದ ಮೇಲೆ ಕೆಲಸ


ಅನುಕಂಪದ  ಆಧಾರದಲ್ಲಿ 10 ತಿಂಗಳ ಮಗುವನ್ನು ರೈಲ್ವೇ ಇಲಾಖೆಯಲ್ಲಿ ನೇಮಕಾತಿ ಮಾಡಿಕೊಳ್ಳಲಾಗಿದೆ. ಜುಲೈ 4 ರಂದು ಸೌತ್ ಈಸ್ಟ್ ಸೆಂಟ್ರಲ್ ರೈಲ್ವೇಸ್ (SECR), ರಾಯ್‌ಪುರ ರೈಲ್ವೆ ವಿಭಾಗದ ಸಿಬ್ಬಂದಿ ಇಲಾಖೆಯಲ್ಲಿ ನೇಮಕಾತಿ ನೋಂದಣಿ ಆಗಿದೆ. ಈ ಹೆಣ್ಣು ಮಗು 18 ವರ್ಷ ತುಂಬಿದಾಗ ರೈಲ್ವೇ ನ್ಯಾಷನಲ್ ಟ್ರಾನ್ಸ್‌ಪೋರ್ಟರ್ ಆಗಿ ಕೆಲಸಕ್ಕೆ ಸೇರಿಕೊಳ್ಳಬಹುದು ಎಂದು ರೈಲ್ವೇ ಇಲಾಖೆ ತಿಳಿಸಿದೆ. ರೈಲ್ವೆ ದಾಖಲೆಗಳಲ್ಲಿ ಅಧಿಕೃತ ನೋಂದಣಿ ಮಾಡಲು ಮಗುವಿನ ಬೆರಳಚ್ಚುಗಳನ್ನು ತೆಗೆದುಕೊಂಡಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Published by:Annappa Achari
First published: