• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Sabarimala Ayyappa: ಯಾರಿಗೆ ಸಿಗುತ್ತೆ ಅಯ್ಯಪ್ಪನ ಪೂಜೆಯ ಅವಕಾಶ? ಪುಟ್ಟ ಮಕ್ಕಳಿಂದ ಆಯ್ಕೆಯಾಗಲಿದ್ದಾರೆ ಅರ್ಚಕರು!

Sabarimala Ayyappa: ಯಾರಿಗೆ ಸಿಗುತ್ತೆ ಅಯ್ಯಪ್ಪನ ಪೂಜೆಯ ಅವಕಾಶ? ಪುಟ್ಟ ಮಕ್ಕಳಿಂದ ಆಯ್ಕೆಯಾಗಲಿದ್ದಾರೆ ಅರ್ಚಕರು!

ಶಬರಿಮಲೆ ಅಯ್ಯಪ್ಪ ಸ್ವಾಮಿ

ಶಬರಿಮಲೆ ಅಯ್ಯಪ್ಪ ಸ್ವಾಮಿ

ವಿಶೇಷ ಆಚರಣೆ, ಕಠಿಣ ವೃತ ಇರುವ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮುಖ್ಯ ಅರ್ಚಕರನ್ನು (chief priest) ನೇಮಿಸುವುದು ಯಾರು ಗೊತ್ತೇ? ಇಬ್ಬರು ಪುಟ್ಟ ಮಕ್ಕಳು! ಇದು ನಿಜಕ್ಕೂ ಆಶ್ಚರ್ಯವಾದರೂ ಸತ್ಯವಾದ ವಿಚಾರ. ಇದೇ ತಿಂಗಳು 18ರಂದು ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮುಖ್ಯ ಅರ್ಚಕರ ನೇಮಕ ನಡೆಯಲಿದ್ದು, ಓರ್ವ ಬಾಲಕ ಹಾಗೂ ಬಾಲಕಿ ಲಾಟರಿ ಮೂಲಕ ಆಯ್ಕೆ ಮಾಡಲಿದ್ದಾರೆ.

ಮುಂದೆ ಓದಿ ...
 • News18 Kannada
 • 3-MIN READ
 • Last Updated :
 • Kerala, India
 • Share this:

ಶಬರಿಮಲೆ, ಕೇರಳ: ದೇಶದ ಪ್ರಮುಖ ದೇಗುಲಗಳಲ್ಲಿ (Temple) ಒಂದಾದ ಶಬರಿಮಲೆ (Sabarimala) ಹಿಂದೂಗಳ (Hindu) ಪರಮ ಪವಿತ್ರ ತೀರ್ಥಕ್ಷೇತ್ರವೂ ಹೌದು. ಇಲ್ಲಿ ನೆಲೆನಿಂತಿರುವ ಅಯ್ಯಪ್ಪ ಸ್ವಾಮಿಗೆ (Ayyappa Swamy) ಭಾರತದಾದ್ಯಂತ ಅಪಾರ ಭಕ್ತವೃಂದವೇ (Devotees) ಇದೆ. ಕಠಿಣ ವೃತ ಮಾಡುವ ಭಕ್ತರು, 18 ಮೆಟ್ಟಿಲು (18 steps) ಏರಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ವಯಸ್ಕ ಸ್ತ್ರೀಯರಿಗೆ ಹಾಗೂ ಮೈನೆರೆದ ಬಾಲಕಿಯರಿಗೆ ಇಲ್ಲಿಗೆ ಪ್ರವೇಶ ನಿಷಿದ್ಧ. ಇಷ್ಟೆಲ್ಲಾ ಆಚರಣೆ, ಕಠಿಣ ವೃತ ಇರುವ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮುಖ್ಯ ಅರ್ಚಕರನ್ನು (chief priest) ನೇಮಿಸುವುದು ಯಾರು ಗೊತ್ತೇ? ಇಬ್ಬರು ಪುಟ್ಟ ಮಕ್ಕಳು (Two little children). ಇದು ನಿಜಕ್ಕೂ ಆಶ್ಚರ್ಯವಾದರೂ ಸತ್ಯವಾದ ವಿಚಾರ. ಇದೇ ತಿಂಗಳು 18ರಂದು ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಮುಖ್ಯ ಅರ್ಚಕರ ನೇಮಕ ನಡೆಯಲಿದ್ದು, ಓರ್ವ ಬಾಲಕ ಹಾಗೂ ಬಾಲಕಿ ಲಾಟರಿ ಮೂಲಕ ಆಯ್ಕೆ ಮಾಡಲಿದ್ದಾರೆ.


ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ಅರ್ಚಕರ ಆಯ್ಕೆ


ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಹಾಗೂ  ಮಾಲಿಕಪ್ಪುರಂನ ದೇಗುಲದ ನೂತನ ಪ್ರಧಾನ ಅರ್ಚಕರ ಆಯ್ಕೆಗೆ ಮುಹೂರ್ತ ಫಿಕ್ಸ್ ಆಗಿದೆ. ಇದೇ ಅಕ್ಟೋಬರ್ 18ರಂದು ಅಯ್ಯಪ್ಪ ಸ್ವಾಮಿ ದೇಗುಲ ಹಾಗೂ ಮಾಲಿಕಪ್ಪುರಂ ದೇಗುಲದ ಮುಖ್ಯ ಅರ್ಚಕರ ಆಯ್ಕೆ ನಡೆಯಲಿದೆ.


ಅರ್ಚಕರನ್ನು ಆಯ್ಕೆ ಮಾಡಲಿರುವ ಮಕ್ಕಳು


ಮುಖ್ಯ ಅರ್ಚಕರನ್ನು ಆಯ್ಕೆ ಮಾಡುವುದು ಮಕ್ಕಳು!


ಹೌದು, ಇದು ಕೇಳಲು ಆಶ್ಚರ್ಯಕರ ವಿಚಾರವಾದರೂ ಸತ್ಯ. ಈ ಎರಡು ದೇಗುಲಗಳ ಮುಖ್ಯ ಅರ್ಚಕರನ್ನು ಇಬ್ಬರು ಪುಟ್ಟ ಮಕ್ಕಳು ಆಯ್ಕೆ ಮಾಡುತ್ತಾರೆ. ಒಂದನೇ ಮತ್ತು ನಾಲ್ಕನೇ ತರಗತಿ ಓದುತ್ತಿರುವ ಇಬ್ಬರು ವಿದ್ಯಾರ್ಥಿಗಳು ಈ ಬಾರಿ ಚೀಟಿ ಎತ್ತುವ ಮೂಲಕ ಅರ್ಚಕರನ್ನು ಆಯ್ಕೆ ಮಾಡಲಿದ್ದಾರೆ.


ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ


ಇದನ್ನೂ ಓದಿ: Shivalinga: 5 ಸಾವಿರ ವರ್ಷಗಳ ಹಿಂದಿನ ಈ ಪುರಾತನ ಶಿವಲಿಂಗ ಪ್ರತಿ ವರ್ಷವೂ ಬೆಳೆಯುತ್ತಂತೆ! ಈ ವಿಸ್ಮಯ ತಾಣ ಎಲ್ಲಿದೆ ಗೊತ್ತಾ?


ಅರ್ಚಕರನ್ನು ಆಯ್ಕೆ ಮಾಡುವ ಮಕ್ಕಳು ಯಾರು?


ಈ ಬಾರಿ ದೇಗುಲದ ಪ್ರಧಾನ ಅರ್ಚಕರನ್ನು ಆಯ್ಕೆ ಮಾಡುವ ಅವಕಶಾ ಇಬ್ಬರು ಮಕ್ಕಳಿಗೆ ಒದಗಿಬಂದಿದೆ. 1ನೇ ತರಗತಿಯ ಬಾಲಕ ಕೃತಿಕೇಶ್ ವರ್ಮಾ ಹಾಗೂ 4ನೇ ತರಗತಿಯ ವಿದ್ಯಾರ್ಥಿನಿ ಪೌರ್ಣಮಿ ವರ್ಮಾ ಎಂಬುವರು ಈ ಬಾರಿ ಮುಖ್ಯ ಅರ್ಚಕರನ್ನು ಆಯ್ಕೆ ಮಾಡಲಿದ್ದಾರೆ.


ಮಾಲಿಕಪ್ಪುರಂ ದೇವಿ ದೇಗುಲ


ಈ ಮಕ್ಕಳು ಯಾರು?


ಕೃತಿಕೇಶ್ ವರ್ಮಾ 1ನೇ ತರಗತಿ ವಿದ್ಯಾರ್ಥಿಯಾಗಿದ್ದು, ಪಂದಳಂ ಮುಂಡಕ್ಕಲ್ ಅರಮನೆಯ ಅನೂಪ್ ವರ್ಮಾ ಮತ್ತು ಎರ್ನಾಕುಲಂನ ಮಂಗಳಾ ಮಠದ ಪಾರ್ವತಿ ವರ್ಮಾ ಅವರ ಮಗ. ಕೃತಿಕೇಶ್ ಎರ್ನಾಕುಲಂನ ಗಿರಿನಗರದ ಭವಾನ್ಸ್ ವಿದ್ಯಾಮಂದಿರದಲ್ಲಿ ಓದುತ್ತಿದ್ದಾರೆ. ಪೌರ್ಣಮಿ ವರ್ಮಾ ಅವರು ಪಂದಳಂ ಸಂಬ್ರಿಕಲ್‌ನ ಡಾ.ಗಿರೀಶ್ ವರ್ಮಾ ಮತ್ತು ಎಡಪಲ್ಲಿಯ ಲಕ್ಷ್ಮೀ ವಿಲಾಸಂನ ಸರಿತಾ ವರ್ಮಾ ಅವರ ಪುತ್ರಿ. ದೋಹಾದಲ್ಲಿರುವ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ 4ನೇ ತರಗತಿಯಲ್ಲಿ ಪೌರ್ಣಮಿ ಓದುತ್ತಿದ್ದಾಳೆ.


ರಾಜಮನೆತನದ ಪ್ರಮುಖರಿಂದ ಮಕ್ಕಳ ಆಯ್ಕೆ


2011ರ ಸುಪ್ರೀಂಕೋರ್ಟ್‌ನ ಆದೇಶದ ಅನ್ವಯ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ಹಾಗೂ ಮಾಲಿಕಪ್ಪುರಂನ ದೇಗುಲದ ಮುಖ್ಯ ಅರ್ಚಕರನ್ನು ಮಕ್ಕಳು ಚೀಟಿ ಮೂಲಕ ಆಯ್ಕೆ ಮಾಡುವ ಪರಿಪಾಠವಿದೆ. ಅಂತೆಯೇ ಪಂದಳಂ ಅರಮನೆಯ ಹಿರಿಯ ಮಹಾರಾಜ ತಿರುನಾಳ್ ರಾಘವ ವರ್ಮ ಅವರು ಚೀಟಿ ಎತ್ತಲು ಕೃತಿಕೇಶ್ ವರ್ಮಾ ಮತ್ತು ಪೌರ್ಣಮಿ ವರ್ಮಾ ಎಂಬ ಇಬ್ಬರನ್ನು ಆಯ್ಕೆ ಮಾಡಿದ್ದಾರೆ.


ಇದನ್ನೂ ಓದಿ: Gummalapura: ಬೆಂಗಳೂರಿನ ಸನಿಹದಲ್ಲೇ ಇದೆ ಪಾರ್ವತಿಯ ತವರು, ವರ್ಷಕ್ಕೊಮ್ಮೆ ಬರುತ್ತಾಳೆ ಗೌರಮ್ಮ!


ಅಕ್ಟೋಬರ್ 17ರಂದು ದೇಗುಲ ಓಪನ್


ತುಳಮಾಸ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ದೇವಸ್ಥಾನವನ್ನು ಅಕ್ಟೋಬರ್ 17 ರಂದು ಸಂಜೆ 5 ಗಂಟೆಗೆ ತೆರೆಯಲಾಗುತ್ತದೆ. ದೇವಸ್ಥಾನದ ತಂತ್ರಿ ಕಂದರಾರು ರಾಜೀವರು ಅವರ ಉಸ್ತುವಾರಿಯಲ್ಲಿ ಮೇಲುಶಾಂತಿ ಎನ್ ಪರಮೇಶ್ವರನ್ ನಂಬೂತಿರಿ ಅವರು ಗರ್ಭಗುಡಿಯ ದ್ವಾರಗಳನ್ನು ತೆರೆದು ದೀಪ ಬೆಳಗಿಸುವರು.

Published by:Annappa Achari
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು