Afghanistan Crisis| ಅಫ್ಘಾನಿಸ್ತಾನದ ರಾಜಕೀಯ ಅನಿಶ್ಚಿತತೆ; ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಮಹತ್ವದ ಸಭೆ!

ತಾಲಿಬಾನಿಗಳಿಗೆ ಹೆದರಿ ಅಘ್ಘಾನಿಸ್ತಾನವನ್ನು ತೊರೆಯಲು ಇಚ್ಛಿಸುತ್ತಿರುವ ಅಲ್ಲಿನ ಪ್ರಜೆಗಳಿಗೆ ಭಾರತ ಪ್ರವೇಶಕ್ಕೆ ಅವಕಾಶ ನೀಡಬೇಕೆ? ಅಥವಾ ಬೇಡವೇ? ಎಂಬ ಬಗ್ಗೆ ಪ್ರಧಾನಿ ಮೋದಿ ನೇತೃತ್ವದ ಇಂದಿನ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಆಯುಧದ ಜೊತೆಗೆ ತಾಲಿಬಾನಿ.

ಆಯುಧದ ಜೊತೆಗೆ ತಾಲಿಬಾನಿ.

 • Share this:
  ನವ ದೆಹಲಿ (ಆಗಸ್ಟ್​ 08) ಅಮೇರಿಕ ತನ್ನ ಸೈನಿಕರನ್ನು ಹಿಂಪಡೆದುಕೊಂಡ ಬೆನ್ನಿಗೆ ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಕೈಮೀರಿದೆ. ತಾಲಿಬಾನ್ ಬಂಡುಕೋರರು ಭಾನುವಾರ ಕಾಬೂಲ್​ ಪ್ರವೇಶಿಸಿ ಇಡೀ ದೇಶವನ್ನು ತಮ್ಮ ವಶಕ್ಕೆ ಪಡೆದುಕೊಂಡಿ ದ್ದಾರೆ. ಅಘ್ಘಾನ್ ಅಧ್ಯಕ್ಷ ಅಶ್ರಫ್ ಘಾನಿ ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ತಜಕಿಸ್ಥಾನಕ್ಕೆ ಪಲಾಯನ ಮಾಡಿದ್ದಾರೆ. ದೇಶದ ಜನ ಜೀವ ಉಳಿಸಿಕೊಂಡರೆ ಸಾಕು ಎಂಬ ಭಯದಲ್ಲಿ ಅನ್ಯ ದೇಶಗಳಿಗೆ ಪಲಾಯನ ಮಾಡಲು ವಿಮಾನ ನಿಲ್ದಾಣಗಳ ಲ್ಲಿ ಜಮಾಯಿಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅನೇಕ ದೇಶಗಳು ಅಘ್ಘಾನ್​ ಪ್ರಜೆಗಳಿಗೆ ಸಹಾಯ ಹಸ್ತ ಚಾಚುವ ಉದಾರತೆ ತೋರಿದ್ದಾರೆ. ಇದೀಗ ಭಾರತ ಸರ್ಕಾರ ಸಹ ಅಫ್ಘಾನಿಸ್ತಾ ನದ ರಾಜಕೀಯ ಅನಿಶ್ಚಿತತೆ ಹಿನ್ನೆಲೆ ಇಂದು  ಕೇಂದ್ರ ಸಚಿವ ಸಂಪುಟದಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗುತ್ತಿದೆ.

  ಪ್ರಧಾನಿ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆಯಲ್ಲಿ ಆಫ್ಘಾನಿಸ್ತಾನಿ ನಿರಾಶ್ರಿತರ ಬಗ್ಗೆ ಚರ್ಚೆಯಾಗಲಿದೆ. ತಾಲಿಬಾನಿಗಳಿಗೆ ಹೆದರಿ ಅಘ್ಘಾನಿಸ್ತಾನವನ್ನು ತೊರಯಲು ಇಚ್ಛಿಸುತ್ತಿರುವ ಅಲ್ಲಿನ ಪ್ರಜೆಗಳಿಗೆ ಭಾರತ ಪ್ರವೇಶಕ್ಕೆ ಅವಕಾಶ ನೀಡಬೇಕೆ? ಅಥವಾ ಬೇಡವೇ? ಎಂಬ ಬಗ್ಗೆ ಈ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಅಲ್ಲದೆ, ಇದೀಗ ಅಫ್ಘಾನಿಸ್ತಾನದಲ್ಲಿ ಮತ್ತೆ ಹೊಸದಾಗಿ ಅಧಿಕಾರ ಹಿಡಿದಿರುವ ತಾಲಿಬಾನಿಗಳ ಬಗ್ಗೆ ಭಾರತ ತೆಗೆದುಕೊಳ್ಳಬೇಕಾದ ನಿಲುವುಗಳೇನು? ರಾಜತಾಂತ್ರಿಕವಾಗಿ ಇಡಬೇಕಾದ ಹೆಜ್ಜೆಗಳೇನು? ಎಂಬ ಕುರಿತು ಸಭೆಯಲ್ಲಿ ಸಮಾಲೋಚನೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

  ಪ್ರಸ್ತುತ ತಾಲಿಬಾನಿಗಳ ವಶದಲ್ಲಿರುವ ಅಪ್ಘಾನಿಸ್ತಾನದಲ್ಲಿರುವ ಜನರಿಗೆ ನೆರವು ನೀಡುವ ಸಲುವಾಗಿ ಕೇಂದ್ರ ಸರಕಾರವು ಈಗಾಗಲೇ ತುರ್ತು ಇ-ವೀಸಾ ಸೌಲಭ್ಯವಾದ X-Misc ವೀಸಾ ಪರಿಚಯಿಸಿದೆ. ನ್ಯೂಸ್ 18ಗೆ ದೊರಕಿರುವ ಮಾಹಿತಿ ಮೂಲಗಳ ಪ್ರಕಾರ ಈ ಹಿಂದೆ ಅಫ್ಘಾನಿಸ್ತಾ ನವು ಈ ವಿಭಾಗಕ್ಕೆ ಒಳಪಟ್ಟಿರಲಿಲ್ಲ. ರಾಯಭಾರ ಕಚೇರಿಯಲ್ಲಿ ವೀಸಾ ಪಡೆಯುವವರು ದೈಹಿಕವಾಗಿ ಹಾಜರಾಗಬೇಕಿತ್ತು. ಪ್ರಸ್ತುತ ಕಾಬೂಲ್‌ ಪರಿಸ್ಥಿತಿ ಅವಲೋಕಿಸಿ ಅಲ್ಲಿನ ರಾಯಭಾರ ಕಚೇರಿಯೂ ಮುಚ್ಚಿರಬಹುದು. ಅದಕ್ಕಾಗಿ ಇ-ವೀಸಾ ಪರಿಚಯಿಸಲಾಗಿದೆ ಎನ್ನಲಾಗಿದೆ.

  ನೂತನ ಇ-ವೀಸಾ ಪ್ರಕಾರ ಎಲ್ಲಾ ಅಫ್ಘನ್ ಪ್ರಜೆಗಳು ಧರ್ಮ-ಆಧಾರಿತ ಆದ್ಯತೆಯ ಹೊರತಾಗಿ ಅರ್ಜಿ ಸಲ್ಲಿಸಬಹು ದಾಗಿದೆ. ಅರ್ಜಿಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತದೆ. ಆರಂಭದಲ್ಲಿ ಆರು ತಿಂಗಳ ವೀಸಾ ನೀಡಲಾಗುತ್ತಿದ್ದು ವೀಸಾಕ್ಕೆ ಅಗತ್ಯವಾಗಿರುವ ದಾಖಲೆಗ ಳನ್ನು ಪೋರ್ಟಲ್‌ನಲ್ಲಿ ಅಪ್‌ಡೇಟ್ ಮಾಡಲಾಗುತ್ತದೆ ಎಂಬುದಾಗಿ ಮೂಲಗಳು ತಿಳಿಸಿವೆ.

  ಇದನ್ನೂ ಓದಿ: Afghanistan Crisis| ಸೈನಿಕರು, ರೈತರು ಸೇರಿದಂತೆ ಯಾರೊಂದಿಗೂ ದ್ವೇಷವಿಲ್ಲ, ಎಲ್ಲರನ್ನೂ ಕ್ಷಮಿಸಲಾಗಿದೆ; ತಾಲಿಬಾನ್ ಘೋಷಣೆ

  ರಾಜ್ಯದಲ್ಲಿರುವ ಆಫ್ಘನ್ ವಿದ್ಯಾರ್ಥಿಗಳ ಗತಿ ಏನು?

  ಕರ್ನಾಟಕದಲ್ಲಿ ಸುಮಾರು 300 ಕ್ಕೂ ಅಧಿಕ ಅಫ್ಘನ್ ಪ್ರಜೆಗಳು ಶಿಕ್ಷಣಕ್ಕಾಗಿ ಆಗಮಿಸಿದ್ದಾರೆ. ಈ ಪೈಕಿ 192 ಜನರ ಸ್ಟೂಡೆಂಟ್ಸ್ ವೀಸಾ ಅವಧಿ ಮುಗಿಯುತ್ತಾ ಬರುತ್ತಿದೆ. ಆದರೆ, ಅಫ್ಘನ್​ನಲ್ಲಿ ಹಿಂಸಾಚಾರ, ರಾಜಕೀಯ ಅನಿಶ್ಚಿತತೆ ಭುಗಿಲೆದ್ದಿದ್ದು ಅಲ್ಲಿಗೆ ತೆರಳಲು ವಿದ್ಯಾರ್ಥಿಗಳು ಮುಂದಾಗುತ್ತಿಲ್ಲ. ಅಲ್ಲದೆ, ಅಸಹಾಯಕವಾಗಿ ಇಲ್ಲಿನ ಸರ್ಕಾರ ಸಹಾಯ ಯಾಚಿಸುತ್ತಿದ್ದಾರೆ.

  ಇದನ್ನೂ ಓದಿ: Afghanistan Crisis| ತ್ವರಿತ ಪರಿಶೀಲನೆಗೆ ಅಫ್ಘಾನಿಸ್ತಾನ ಜನತೆಗೆ ಇ-ವೀಸಾ ಪರಿಚಯಿಸಿದ ಕೇಂದ್ರ ಸರಕಾರ

  ಆದರೆ, ಈ ಬಗ್ಗೆ ಇಂದು ಬೆಂಗಳೂರಿನಲ್ಲಿ ಸ್ಪಷ್ಟನೆ ನೀಡಿರುವ ಗೃಹ ಸಚಿವ ಆರಗ ಆರಗ ಜ್ಞಾನೇಂದ್ರ, "ಅಫ್ಘನ್ ಪ್ರಜೆಗಳ ಮೀಸಾ ಅವಧಿ ಸಹ ಮುಗೀತಾ ಇದೆ ಅಂತಿದ್ದಾರೆ. ಅದರ ಬಗ್ಗೆಯೂ ಸಂಬಂಧ ಪಟ್ಟವರ ಬಳಿ ಮಾತನಾಡಲಾಗುವುದು. ಆಫ್ಘಾನ್‌ ಜನರ ಪರ ಸರ್ಕಾರ ಇದೆ, ಅವರ ರಕ್ಷಣೆ ಮಾಡಲಾಗುತ್ತದೆ" ಎಂದು ಆಶ್ವಾಸನೆ ನೀಡಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿ ತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸು ವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊ ಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿ ನಿಂದ ತಮ್ಮನ್ನು ತಾವು ಕಾಪಾಡಿ ಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾ ರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: