Rooster Owner: ಪೊಲೀಸರಿಗೆ ಹುಂಜದ ಓನರ್ ಪತ್ತೆಹಚ್ಚುವ ತಲೆಬಿಸಿ! ಏನಿದು ವಿಚಿತ್ರ ಕೇಸ್?

ಹುಂಜ

ಹುಂಜ

ಹುಂಜ ತಮಗೆ ಸೇರಿದ್ದೆಂದು ಇಬ್ಬರು ಮಾಲೀಕರು ಬಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂತೆಯೇ ಹುಂಜದ ನಿಜವಾದ ಮಾಲೀಕರಿಗಾಗಿ ಬಲೆ ಬೀಸಿದ ಪೊಲೀಸರ ತನಿಖೆಯನ್ನು ದಿನಜ್‌ಪುರದ ಬಲೂರ್‌ಘಾಟ್‌ನ ನಿವಾಸಿಗಳು ಕುತೂಹಲಕಾರಿಯಾಗಿ ವೀಕ್ಷಿಸಿದರು. ಹೇಗಿತ್ತು ನೋಡಿ ಈ ದೃಶ್ಯ

  • Share this:

ಹುಂಜದ (Rooster) ನಿಜವಾದ ಮಾಲೀಕರು ಯಾರು ಎಂಬುದನ್ನು ಕಂಡುಹಿಡಿಯಲು ಮೂವರು ಪೊಲೀಸರನ್ನು ತನ್ನ ಹಿಂದೆ ಓಡುವಂತೆ ಮಾಡಿದ ಚಾಲಾಕಿ ಹುಂಜ 24 ಗಂಟೆಗಳ ಓಟದ ರೇಸ್ (Race) ಮುಗಿಸಿ ತನ್ನ ನಿಜವಾದ ಯಜಮಾನನ ಮನೆ ಸೇರಿತು. ಹುಂಜ ತಮಗೆ ಸೇರಿದ್ದೆಂದು ಇಬ್ಬರು ಮಾಲೀಕರು ಬಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂತೆಯೇ ಹುಂಜದ ನಿಜವಾದ ಮಾಲೀಕರಿಗಾಗಿ ಬಲೆ ಬೀಸಿದ ಪೊಲೀಸರ ತನಿಖೆಯನ್ನು (Police Investigation) ದಿನಜ್‌ಪುರದ ಬಲೂರ್‌ಘಾಟ್‌ನ ನಿವಾಸಿಗಳು ಕುತೂಹಲಕಾರಿಯಾಗಿ ವೀಕ್ಷಿಸಿದರು. ಇನ್ನು ಹುಂಜದ ಮಾಲೀಕರು ಯಾರು ಎಂಬುದನ್ನು ಪತ್ತೆಮಾಡಲು ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಶಾಂತಿನಾಥ ಪಂಜ, ಹುಂಜವನ್ನು ಮುಕ್ತವಾಗಿ ಓಡಾಡಲು ಅವಕಾಶ ಮಾಡಿಕೊಟ್ಟರು.


ಅಂತೆಯೇ ಸಹೋದ್ಯೋಗಿ ಅಧಿಕಾರಿಗಳಿಗೆ ಹುಂಜದ ಮೇಲೆ ಕಣ್ಣಿಡಲು ಹೇಳಿದರು; ದಿನದ ಅಂತ್ಯಕ್ಕೆ ಅದು ಯಾರ ಮನೆ ಸೇರುತ್ತದೆಯೋ ಅವರೇ ಹುಂಜದ ಯಜಮಾನ ಎಂದು ಶಾಂತಿನಾಥ ತೀರ್ಪಿತ್ತರು.


ಪ್ರಕರಣವೇನು?
ಇನ್ನು ಹುಂಜ ಎಲ್ಲೆಲ್ಲಿ ಸುತ್ತಾಡುತ್ತದೆ ಎಂಬುದನ್ನು ಕಣ್ಣಿಡಲು ಮೂವರು ಪೊಲೀಸ್ ಅಧಿಕಾರಿಗಳು ನಿಯೋಜಿತಗೊಂಡಿದ್ದರು. ಬಲೂರ್‌ಘಾಟ್ ಪಟ್ಟಣದ ಭೈರಬಿತಾಳದ ನಿವಾಸಿ ಗೃಹಿಣಿ ಚುಮ್ಕಿ ಸರ್ಕಾರ್ ತನ್ನ ನೆರೆಹೊರೆಯ ನಿವಾಸಿಯಾದ ಇ-ರಿಕ್ಷಾ ಚಾಲಕ ದೇಬಾಶಿಶ್ ಬಿಸ್ವಾಸ್ ತನ್ನ ಹುಂಜವನ್ನು ಕೊಂಡೊಯ್ದಿರುವುದಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುತ್ತಾರೆ.


ಹುಂಜದ ಮಾಲೀಕ ಯಾರು?
ಇತ್ತೀಚೆಗೆ ತಾನೇ ಮಾರಾಟಗಾರರಿಂದ ಹುಂಜವನ್ನು ಖರೀದಿಸಿರುವುದಾಗಿ ಚುಮ್ಕಿ ಠಾಣೆಯಲ್ಲಿ ಹೇಳಿದ್ದು, ಬಿಸ್ವಾಸ್ ಅದನ್ನು ಕೊಂಡೊಯ್ದು ತನ್ನ ಹಕ್ಕಿ ಎಂದು ಹೇಳಿರುವುದಾಗಿ ದೂರಿತ್ತಿದ್ದಾರೆ. ಇನ್ನು ದೂರುದಾರರೊಂದಿಗೆ ಬಿಸ್ವಾಸ್ ಮನೆಗೆ ಪೊಲೀಸರು ಹೋದಾಗ, ಬಿಸ್ವಾಸ್ ಕೂಡ ಮಾರಾಟಗಾರರಿಂದ ಹುಂಜವನ್ನು ನಾನು ಖರೀದಿಸಿದ್ದೇನೆ. ಹಾಗಾಗಿ ಹುಂಜದ ನಿಜವಾದ ಮಾಲೀಕ ನಾನು ಎಂದು ವಾದಿಸಿದ್ದಾನೆ ಎಂದು ಬಲೂರ್‌ಘಾಟ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ನಿಜವಾದ ಮಾಲೀಕರು ಯಾರು ಅಂತ ತಿಳಿಯಲು ಪೊಲೀಸರ ಉಪಾಯ 
ಹುಂಜದ ನಿಜವಾದ ಮಾಲೀಕರು ಯಾರು ಎಂಬುದನ್ನು ಕಂಡುಹಿಡಿಯಲು ಪೊಲೀಸ್ ಠಾಣೆ ಪ್ರಭಾರಿ ಪಂಜ ಅವರ ಗಮನಕ್ಕೆ ತರಲಾಯಿತು. ಪೊಲೀಸ್ ಅಧಿಕಾರಿಗಳೆಲ್ಲರೂ ಸಭೆ ಸೇರಿ ಅದರಂತೆಯೇ ಪಂಜ ಅವರು ಒಂದು ವಿಧಾನವನ್ನು ಅನ್ವೇಷಿಸಿದರು. ಹುಂಜವನ್ನುನ್ನು ಮುಕ್ತವಾಗಿ ತಿರುಗಾಡಲು ಬಿಡುವುದು ಹಾಗೂ ಅದು ಯಾರ ಮನೆ ಸೇರುತ್ತದೆ ಎಂಬುದನ್ನು ತಿಳಿಯಲು ಸಂಜೆಯವರೆಗೆ ಕಾಯಲು ಹೇಳಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹುಂಜ ಮತ್ತು ಕೋಳಿಗಳು ಸಾಮಾನ್ಯವಾಗಿ ಸಂಜೆ ವೇಳೆಗೆ ತಮ್ಮ ಮಾಲೀಕರ ಮನೆಗೆ ಮರಳುತ್ತವೆ ಎಂಬುದು ಇಲ್ಲಿ ತರ್ಕಬದ್ಧವಾದ ಅಂಶವನ್ನು ನಿರ್ಣಾಯಕವನ್ನಾಗಿ ಮಾಡಲಾಗಿತ್ತು.


ಇದನ್ನೂ ಓದಿ:  Viral Video: ವಿಷಕಾರಿ ಹಾವುಗಳಿಗೆ ಬರಿಗೈಯಲ್ಲಿಯೇ ಸ್ನಾನ ಮಾಡಿಸ್ತಾರೆ ಈ ಧೈರ್ಯಶಾಲಿ ವ್ಯಕ್ತಿ, ವಿಡಿಯೋ ನೋಡಿದ್ರೆ ಶಾಕ್ ಆಗ್ತೀರಾ


ಪಂಜ ಹೇಳಿದಂತೆ ಹುಂಜದ ತಿರುಗಾಟಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ಹಾಗೂ ಅದನ್ನು ಯಾರೂ ಕದ್ದೊಯ್ಯದಂತೆ ನಿಗಾ ಇರಿಸಲು ಮೂವರು ಪೊಲೀಸರನ್ನು ನಿಯೋಜಿಸಿದರು. ಹುಂಜ ಎಲ್ಲೆಲ್ಲಿ ಹೋಗುತ್ತಿತ್ತೋ ಅಲ್ಲೆಲ್ಲಾ ಪೊಲೀಸರು ಕೂಡ ಅದನ್ನು ಅನುಸರಿಸಬೇಕಾಗಿತ್ತು.


ಪೊದೆಯ ಹಿಂದೆ ಕೂಡ ಹುಂಜ ಹೋಗುತ್ತಿತ್ತು, ಈ ಸಮಯದಲ್ಲಿ ಟಾರ್ಚ್ ಹಿಡಿದುಕೊಂಡು ನಾವು ಅದನ್ನು ಅನುಸರಿಸುತ್ತಿದ್ದೆವು ಎಂಬುದಾಗಿ ಪೊಲೀಸರು ತಿಳಿಸಿದ್ದು, ಸಂಜೆಯ ಹೊತ್ತಿಗೆ ಹುಂಜ ಚುಮ್ಕಿಯ ಮನೆಗೆ ಹಾರಿ ಹೋಯಿತು ಎಂಬುದಾಗಿ ತಿಳಿಸಿದ್ದಾರೆ. ಇದರಿಂದ ಹುಂಜದ ನಿಜವಾದ ಮಾಲೀಕರು ಚುಮ್ಕಿ ಎಂಬುದು ನಿರ್ಣಯವಾಯಿತು.


ಗಮನಿಸಬೇಕಾದ ಅಂಶಗಳು
ಪೊಲೀಸ್ ಅಧಿಕಾರಿ ಪಂಜ ಹುಂಜದ ಸ್ವಾತಂತ್ರ್ಯಕ್ಕೆ ಪ್ರಾಮುಖ್ಯತೆ ನೀಡುವ ಜೊತೆಗೆ ಅದರ ಸುರಕ್ಷತೆಗೂ ಮಹತ್ವವನ್ನು ನೀಡಿದ್ದಾರೆ. ಶುಕ್ರವಾರ ಸಂಜೆ ಗೃಹಿಣಿ ಚುಮ್ಕಿ ಸರ್ಕಾರ್ ಹುಂಜ ಕಾಣುತ್ತಿಲ್ಲವೆಂದು ಹೇಳಿ ಠಾಣೆಗೆ ಹೋಗಿದ್ದು ನೆರೆಯ ಮನೆಯವನಾದ ದೇಬಾಶಿಶ್ ಬಿಸ್ವಾಸ್ ತನ್ನ ಹುಂಜವನ್ನು ತೆಗೆದುಕೊಂಡು ಹೋಗಿದ್ದಾನೆ ಎಂದು ಆರೋಪಿಸಿದ್ದರು. ಬಿಸ್ವಾಸ್ ಕೂಡ ಹುಂಜವನ್ನು ತಾನು ಖರೀದಿ ಮಾಡಿದ್ದಾಗಿ ಹೇಳಿದ್ದು ಹುಂಜ ತನಗೆ ಸೇರಿದ್ದು ಎಂದು ವಾದಿಸಿದ್ದಾನೆ.


ಇದನ್ನೂ ಓದಿ:  Dog Teeth: ಅಬ್ಬಬ್ಬಾ! ನಾಯಿಯ ಹಲ್ಲು ಕ್ಲೀನ್ ಮಾಡಿಸಲು 5 ಲಕ್ಷ ಪಾವತಿಸಿದ್ರು!


ಅಧಿಕಾರಿ ಪಂಜ ಹುಂಜವನ್ನು ಸ್ವತಂತ್ರವಾಗಿ ತಿರುಗಾಡಲು ಅವಕಾಶ ನೀಡಿ, ಸಂಜೆ ಅದು ಯಾರ ಮನೆಗೆ ಮರಳುತ್ತದೆಯೋ ಅವರೇ ಅದರ ಯಜಮಾನರು ಎಂದು ತೀರ್ಮಾನಿಸುತ್ತಾರೆ. ಮುಕ್ತವಾಗಿ ಸಂಚರಿಸಿದ ಹುಂಜವು ಅಂತಿಮವಾಗಿ ತನ್ನ ಯಜಮಾನಿ ಚುಮ್ಕಿ ಮನೆಗೆ ಹಾರಿತು.

First published: