468 ಕೋಟಿಗೆ ಮಾರಾಟವಾಯಿತು ಶತಮಾನದ ಅಪರೂಪದ ಗುಲಾಬಿ ವಜ್ರ; ಯಾರಿದರ ಮಾಲೀಕ?

ಅಪರೂಪವಾಗಿರುವ ಗುಲಾಬಿ ಬಣ್ಣದ ವಜ್ರಗಳು ಸಾಮಾನ್ಯವಾಗಿ 4 ಅಥವಾ 40 ಕ್ಯಾರಟ್​ಗಳಾಗಿರುತ್ತದೆ. ಆದರೆ ಈ ವಜ್ರ 19 ಕ್ಯಾರೆಟ್​ನದ್ದಾಗಿದೆ.

Seema.R | news18
Updated:November 14, 2018, 12:02 PM IST
468 ಕೋಟಿಗೆ ಮಾರಾಟವಾಯಿತು ಶತಮಾನದ ಅಪರೂಪದ ಗುಲಾಬಿ ವಜ್ರ; ಯಾರಿದರ ಮಾಲೀಕ?
ಅಪರೂಪವಾಗಿರುವ ಗುಲಾಬಿ ಬಣ್ಣದ ವಜ್ರಗಳು ಸಾಮಾನ್ಯವಾಗಿ 4 ಅಥವಾ 40 ಕ್ಯಾರಟ್​ಗಳಾಗಿರುತ್ತದೆ. ಆದರೆ ಈ ವಜ್ರ 19 ಕ್ಯಾರೆಟ್​ನದ್ದಾಗಿದೆ.
  • Advertorial
  • Last Updated: November 14, 2018, 12:02 PM IST
  • Share this:
ನ್ಯೂಸ್​ 18 ಕನ್ನಡ

ಅತಿ ವಿರಳ ಎನ್ನಬಹುದಾದ ಗುಲಾಬಿ ಬಣ್ಣದ ವಜ್ರವೊಂದನ್ನು ಕೊಳ್ಳಲು ಆರಂಭವಾದ ಬಿಡ್​ ಕೊನೆಗೂ ಮುಕ್ತಾಯವಾಗಿದ್ದು, ಇದು 468 ಕೋಟಿ (65 ಡಾಲರ್​ )ಮೊತ್ತಕ್ಕೆ ಮಾರಾಟವಾಗಿದೆ.

19 ಕ್ಯಾರಟ್​ ಈ ವಜ್ರವನ್ನು  ಕ್ರಿಸ್ಟಿಸ್​ ಆಕ್ಷನ್​ ಹೌಸ್​ ಮಾರಾಟ ಮಾಡಿದ್ದು,  ಇದಕ್ಕಾಗಿ ಫೋನ್​ ಮೂಲಕವೇ ಅತಿ ದೊಡ್ಡ ಬಿಡ್​ ವ್ಯಾಪಾರ ನಡೆದಿತ್ತು. ಕಡೆಗೆ  ಅಮೆರಿಕದ ಶ್ರೀಮಂತ ಆಭರಣಕಾರ ಹ್ಯಾರಿ ವಿನ್ಸ್​ಟನ್​ ಇದನ್ನು ಕೊಂಡುಕೊಂಡಿದ್ದಾರೆ.ಫೋನ್​ ಮೂಲಕ ಬಿಡ್​:

ಈ ಅಪರೂಪದ ಗುಲಾಬಿವಜ್ರವನ್ನು ಕೊಳ್ಳಲು ಐವರು ಉದ್ಯಮಿಗಳು ಫೋನ್​ ಮೂಲಕವೇ ಬಿಡ್​ ನಡೆಸಿದ್ದರು. ಕಡೆಗೆ  ಹ್ಯಾರಿ ವಾಟ್ಸನ್​ ಅತಿ ಹೆಚ್ಚು ಮೊತ್ತಕ್ಕೆ ಬಿಡ್​ ಮಾಡಿ ವಜ್ರವನ್ನು ಪಡೆದಿದ್ದಾರೆ. ಅತಿಹೆಚ್ಚು ಮೌಲ್ಯಕ್ಕೆ ಬಿಡ್​ ಮಾಡಿದ ಎರಡನೇ ವ್ಯಕ್ತಿ ಕುರಿತು ಅವರು ತಿಳಿಸಿಲ್ಲ. ಆದರೆ ಅವರು ಏಷಿಯಾದವರು ಎಂದು ಮಾತ್ರ ತಿಳಿಸಿದ್ದಾರೆ.

ಅಮೇರಿಕದ ಖ್ಯಾತ ಉದ್ಯಮಿ ವಜ್ರದ ವ್ಯಾಪಾರಿ ಜೊತೆಗೆ ಐಷಾರಾಮಿ ವಾಚ್​ಗಳ ಮಾರಾಟಗಾರರಾಗಿರುವ  ಹ್ಯಾರಿ ಈ ವಜ್ರಕೊಂಡ ಬಳಿಕ ಅದಕ್ಕೆ ‘ದಿ ವಾಟ್ಸಾನ್​ ಪಿಂಕ್​ ಲೆಗಸಿ’  ಎಂದು ಮರು ನಾಮಕರಿಸಿದ್ದಾರೆ.

ಈ ವಜ್ರದ ಅಸಲಿ ಮಾಲೀಕರು ಯಾರು?

ಈ ಗುಲಾಬಿ ವಜ್ರ  ದಶಕಗಳ ಹಿಂದೆ 'ಡಿ ಬೀರ್ಸ್​ ಡೈಮಂಡ್​ ಮೈನಿಂಗ್​ ಕಂಪನಿ' ನಡೆಸುತ್ತಿದ್ದ ಒಪನ್​ಹೈಮೆರ್​ ಕುಟಂಬಕ್ಕೆ ಸೇರಿದ್ದಾಗಿದೆ ಎಂದು ತಿಳಿದುಬಂದಿದೆ. . ಆದರೆ ಇದರ ಅಸಲಿ ಮಾಲೀಕ ಯಾರು ಎಂಬ ಬಗ್ಗೆ ಮಾತ್ರ ಇದುವರೆಗೂ ಖಾತ್ರಿಯಾಗಿಲ್ಲ.

ಇದನ್ನು ಓದಿ: ಸೆಲ್ಫಿ ಕ್ರೇಜ್​ ನಿಮಗಿದೆಯಾ, ಇದ್ರಿಂದ ನಿಮ್ಮಲ್ಲಿ ಆಗೋ ಬದಲಾವಣೆ ಏನು ಗೊತ್ತಾ!

ಗುಲಾಬಿ ವಜ್ರಗಳು ಅಪರೂಪವಾಗಿದ್ದು. ಸಾಮಾನ್ಯವಾಗಿ 4 ಅಥವಾ 40 ಕ್ಯಾರಟ್​ ಗುಲಾಬಿ ವಜ್ರ ಕಾಣಬಹುದು. ಕಳೆದ ನವೆಂಬರ್​ನಲ್ಲಿ 15 ಕ್ಯಾರೆಟ್​ ಗುಲಾಬಿ ವಜ್ರವನ್ನು ಹಾಂಗ್​​ಕಅಂಗ್​ನಲ್ಲಿ 32.5ಮಿಲಿಯನ್​ ಡಾಲರ್​ಗೆ ಮಾರಾಟವಾಗಿತ್ತು. ಅದನ್ನು ಬಿಟ್ಟರೆ ಇದೇ ವಜ್ರ ಅತಿ ಹೆಚ್ಚಿನ ಮೊತ್ತಕ್ಕೆ ಮಾರಾಟವಾಗಿದೆ. ಈ ವಜ್ರ ದಕ್ಷಿಣ ಆಫ್ರಿಕಾ ಗಣಿಯಲ್ಲಿ ಸಿಕ್ಕಿದಾಗಿದ್ದು 100 ವರ್ಷ ಹಳೆಯದಾಗಿದೆ.

First published:November 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ