• Home
  • »
  • News
  • »
  • national-international
  • »
  • Iodine Pills: ಅಯೋಡಿನ್ ಮಾತ್ರೆ ಖರೀದಿಸಲು ಮುಗಿಬಿದ್ದ ಉಕ್ರೇನ್ ಜನತೆ, ಬಯಲಾಯ್ತು ಅಚ್ಚರಿಯ ಕಾರಣ

Iodine Pills: ಅಯೋಡಿನ್ ಮಾತ್ರೆ ಖರೀದಿಸಲು ಮುಗಿಬಿದ್ದ ಉಕ್ರೇನ್ ಜನತೆ, ಬಯಲಾಯ್ತು ಅಚ್ಚರಿಯ ಕಾರಣ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಉಕ್ರೇನ್‌ನ ಕೈವ್‌ನಲ್ಲಿ ಫಾರ್ಮಸಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ಅಯೋಡಿನ್ ಮಾತ್ರೆಗಿರುವ ಬೇಡಿಕೆಯನ್ನು ತಿಳಿಸಿದ್ದು, ಮಾತ್ರೆಗಳನ್ನರಸಿಕೊಂಡು ಪ್ರತೀ ದಿನ ಗ್ರಾಹಕರು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಎಲ್ಲಿಯಾದರೂ ಪರಮಾಣು ಬಾಂಬ್ ದಾಳಿ ನಡೆದಲ್ಲಿ ಪೊಟ್ಯಾಶಿಯಂ ಐಯೋಡೈಡ್ ಮಾತ್ರೆಗಳನ್ನು ನಿವಾಸಿಗಳಿಗೆ ವಿತರಿಸಲಾಗುತ್ತದೆ ಎಂದು ಕೈವ್ ನಗರದ ಕೌನ್ಸಿಲ್ ಪ್ರಕಟಿಸಿದೆ.

ಮುಂದೆ ಓದಿ ...
  • Share this:

ನ್ಯೂಕ್ಲಿಯರ್ ದಾಳಿಯ (nuclear attack) ನಿರಂತರ ಹೆದರಿಕೆಯಿಂದ ಭೀತಿಯಲ್ಲೇ ಬದುಕುತ್ತಿರುವ ಉಕ್ರೇನಿಯನ್ನರು, ಐಯೋಡಿನ್ ಮಾತ್ರೆಗಳ ಮೇಲೆ ನಿರ್ದಿಷ್ಟ ಆಸಕ್ತಿಯನ್ನು ತಾಳಿರುವುದು ಆಸಕ್ತಿಗೆ ಕಾರಣವಾಗಿದೆ. ಉಕ್ರೇನ್‌ನ ಕೈವ್‌ನಲ್ಲಿ ಫಾರ್ಮಸಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ಅಯೋಡಿನ್ ಮಾತ್ರೆಗಿರುವ (Iodine pills) ಬೇಡಿಕೆಯನ್ನು ತಿಳಿಸಿದ್ದು, ಮಾತ್ರೆಗಳನ್ನರಸಿಕೊಂಡು ಪ್ರತೀ ದಿನ ಗ್ರಾಹಕರು ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಎಲ್ಲಿಯಾದರೂ ಪರಮಾಣು ಬಾಂಬ್ (Atomic bomb) ದಾಳಿ ನಡೆದಲ್ಲಿ ಪೊಟ್ಯಾಶಿಯಂ ಐಯೋಡೈಡ್ ಮಾತ್ರೆಗಳನ್ನು ನಿವಾಸಿಗಳಿಗೆ ವಿತರಿಸಲಾಗುತ್ತದೆ ಎಂದು ಕೈವ್ ನಗರದ ಕೌನ್ಸಿಲ್ ಪ್ರಕಟಿಸಿದೆ ಹಾಗೂ ವೈದ್ಯಕೀಯ ಶಿಫಾರಸುಗಳನ್ನು ಆಧರಿಸಿ ಮಾತ್ರೆಗಳ ಸೌಲಭ್ಯವನ್ನು ನಿವಾಸಿಗಳಿಗೆ ನೀಡಲಾಗುತ್ತದೆ ಎಂದು ಕೌನ್ಸಿಲ್ ತಿಳಿಸಿದ್ದು, ನಗರದ ಔಷಧ ಕೇಂದ್ರಗಳಲ್ಲಿ ಕೂಡ ಮಾತ್ರೆಗಳು ದೊರೆಯುತ್ತದೆ ಎಂದು ತಿಳಿಸಿದೆ.


ಅಯೋಡಿನ್ ಮಾತ್ರೆಗಳ ದಾಸ್ತಾನು
ಯುರೋಪ್‌ನಂತಹ ಕೆಲವೊಂದು ದೇಶಗಳು ಮಾತ್ರೆಗಳನ್ನು ದಾಸ್ತಾನು ಮಾಡುವಲ್ಲಿ ನಿರತವಾಗಿದೆ ಹಾಗೂ ಫಿನ್‌ಲ್ಯಾಂಡ್‌ನ ಆರೋಗ್ಯ ಸಚಿವಾಲಯವು ತುರ್ತು ಸಂದರ್ಭದಲ್ಲಿ ಪ್ರತಿ ಮನೆಯವರೂ ಸಿಂಗಲ್ ಡೋಸ್ ಅನ್ನು ಖರೀದಿಸಬೇಕೆಂದು ಶಿಫಾರಸು ಮಾಡಿದ್ದರಿಂದ ದೇಶದ ಔಷಧ ಕೇಂದ್ರಗಳು ಮಾತ್ರೆಗಳ ದಾಸ್ತಾನಿನಲ್ಲಿ ಕೊರತೆಯನ್ನು ಎದುರಿಸಿದವು.


ಅಯೋಡಿನ್ ಮಾತ್ರೆಗಳು ಎಂದರೇನು? ಅವುಗಳು ಏನು ಮಾಡುತ್ತವೆ ಇಲ್ಲಿದೆ ವಿವರ
ಪೊಟ್ಯಾಶಿಯಂ ಐಯೊಡೈಡ್ ಅಥವಾ KI ಸ್ಫೋಟದಿಂದ ಒಂದು ಬಗೆಯ ರಕ್ಷಣೆಯನ್ನು ಒದಗಿಸುತ್ತವೆ. ಪರಮಾಣು ಸ್ಫೋಟದಿಂದ ವಾತಾವರಣಕ್ಕೆ ಸೇರಬಹುದಾದ ವಿಕಿರಣಶೀಲ ಅಯೋಡಿನ್ ಅನ್ನು ಕುತ್ತಿಗೆಯಲ್ಲಿನ ಹಾರ್ಮೋನು ಉತ್ಪಾದಿಸುವ ಗ್ರಂಥಿ ಥೈರಾಯ್ಡ್ ಹೀರಿಕೊಳ್ಳುವುದನ್ನು ಇದು ತಡೆಗಟ್ಟುತ್ತದೆ. ವಿಕಿರಣ ಶೀಲ ಅಂಶವು ದೇಹಕ್ಕೆ ಹೊಕ್ಕಾಗ ಇದು ಥೈರಾಯ್ಡ್ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯನ್ನುಂಟು ಮಾಡಬಹುದು ಉದಾಹರಣೆಗೆ ಗಾಳಿಯನ್ನು ಉಸಿರಾಡುವುದು, ಇಲ್ಲದಿದ್ದರೆ ವಿಕಿರಣ ಮಿಶ್ರಿತ ಆಹಾರ ಸೇವನೆ ಇತ್ಯಾದಿ.


ಇದನ್ನೂ ಓದಿ: Prince William: ಕೇಟ್ ಮಿಡಲ್ಟನ್ ಅಂಗರಕ್ಷಕಿ ಸಾರ್ಜೆಂಟ್ ಎಮ್ಮಾಗೆ ವಿಶೇಷ ಗೌರವ ನೀಡಿದ ಪ್ರಿನ್ಸ್ ವಿಲಿಯಂ


ವಿಶೇಷವಾಗಿ ಮಕ್ಕಳ ಮೇಲೆ ಇದು ಅಪಾಯಕಾರಿ ಪ್ರಭಾವವನ್ನು ಬೀರುತ್ತದೆ ಹಾಗೂ ಇದರ ಪರಿಣಾಮ ಹಲವಾರು ವರ್ಷಗಳವರೆಗೆ ಭೂಮಿಯ ಮೇಲೆ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಈ ಮಾತ್ರೆಗಳು ಕಡಿಮೆ ಬೆಲೆಯದ್ದಾಗಿದ್ದು ವಿಶ್ವದಾದ್ಯಂತ ಮಾರಾಟವಾಗುತ್ತವೆ ಹಾಗೂ ಯುಎಸ್‌ನಂತಹ ದೇಶಗಳು ಈ ಮಾತ್ರೆಗಳನ್ನು ದಾಸ್ತಾನು ಮಾಡಿಕೊಳ್ಳುತ್ತವೆ.


ಪರಮಾಣು ಬಾಂಬ್ ಹಲವಾರು ಬಗೆಯ ವಿಕಿರಣಗಳನ್ನು ಬಿಡುಗಡೆ ಮಾಡಬಹುದು ಹಾಗೂ ಇದು ದೇಹದ ಬೇರೆ ಬೇರೆ ಭಾಗಗಳಿಗೆ ಅಪಾಯಕಾರಿಯಾಗಿರುತ್ತದೆ. ಪೊಟ್ಯಾಶಿಯಂ ಐಯೊಡೈಡ್ (KI) ಅನ್ನು ನಿರ್ದಿಷ್ಟ ಪರಮಾಣು ತುರ್ತು ಸಂದರ್ಭಗಳಲ್ಲಿಯೇ ಮಾತ್ರವೇ ತೆಗೆದುಕೊಳ್ಳಬೇಕು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಸ್ಫೋಟದ ಸಮಯಕ್ಕೆ ನಿಕಟವಾಗಿ ಸೇವಿಸುವುದು ಉತ್ತಮವಾಗಿ ಕೆಲಸ ಮಾಡುತ್ತದೆ ಎಂದು ಸೂಚಿಸಿದೆ. ಇನ್ನು ಸ್ಫೋಟದಿಂದ ರಕ್ಷಣೆಗಾಗಿ ಮೊದಲೇ ತೆಗೆದುಕೊಳ್ಳಬಾರದು ಎಂದು ಎಚ್ಚರಿಸಿದೆ.


ಪರಮಾಣು ದುರಂತ


ನ್ಯೂಕ್ಲಿಯರ್ ದಾಳಿ ನಡೆಸುವುದಾಗಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹೇಳಿಕೆ ಬರಿಯ ಬೆದರಿಕೆ ಮಾತ್ರವಲ್ಲ. ಯುದ್ಧದ ಕೆಲವು ದಿನಗಳ ಮುನ್ನ ರಷ್ಯಾದ ಯುದ್ಧಪಡೆಗಳು ಯುದ್ಧ ಸ್ಥಳಗಳಲ್ಲಿ ಬಂದಿಳಿದಿದ್ದು ಪರಮಾಣು ದಾಳಿಯ ಭೀತಿಯನ್ನು ಹೆಚ್ಚಿಸಿದೆ ಹಾಗೂ ಪರಮಾಣು ದುರಂತ ಸನ್ನಿಹಿತವಾಗುತ್ತಿದೆ ಎಂಬ ಮುನ್ಸೂಚನೆಯನ್ನು ನೀಡಿದೆ.


ಉಕ್ರೇನ್ ಹಾಗೂ ರಷ್ಯಾ ಒಂದರ ಮೇಲೊಂದರಂತೆ ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದ್ದು ಯುದ್ಧಭೂಮಿಯಲ್ಲಿ ಆತಂಕವನ್ನು ಹುಟ್ಟುಹಾಕಿದೆ. 1986 ರಲ್ಲಿ ನಡೆದ ಚರ್ನೊಬಿಲ್ ದುರಂತದಿಂದ ಸಂಭವಿಸಿದ ದುರಂತದಂತಹ ಅಪಾಯದಿಂದ ಉಕ್ರೇನ್ ಅನ್ನು ರಕ್ಷಿಸಲು ಅಧಿಕಾರಿಗಳು ಕೊನೆಯ ಅಣುಕೇಂದ್ರವನ್ನು ಮುಚ್ಚಲು ನಿರ್ಧರಿಸಿದ್ದಾರೆ.


ಇದನ್ನೂ ಓದಿ: Xi Jinping: ಚೀನಾಕ್ಕೆ ಮತ್ತೆ ಕ್ಸಿ ಜಿನ್​ಪಿಂಗ್ ನಾಯಕ! ಹುಲ್ಲು ಅಲುಗೋಕೂ ಅಪ್ಪಣೆ ಬೇಕು


ಹಲವಾರು ವಾರಗಳ ಹಿಂದೆ ಸ್ಥಾವರದ ಕೊನೆಯ ಅಣು ಕೇಂದ್ರವನ್ನು ಸ್ಥಗಿತಗೊಳಿಸುವುದರಿಂದ ವಿಕಿರಣ ದುರಂತದ ಅಪಾಯವನ್ನು ಗಣನೀಯವಾಗಿ ಕಡಿಮೆಗೊಳಿಸಿತು ಹಾಗೂ ಕರಗುವಿಕೆಗೆ ತಗುಲುವ ಸಮಯವನ್ನು ಹೆಚ್ಚಿಸಿತು ಆದರೆ ಸಂಪೂರ್ಣ ಶಕ್ತಿಯ ನಷ್ಟದಿಂದ ಕೂಲಿಂಗ್ ವಿಫಲಗೊಂಡಲ್ಲಿ ಕರಗುವಿಕೆಗಳು ನಡೆಯುವ ಸಾಧ್ಯತೆ ಇರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೀರಾ ಹೀನಾಯ ಪರಿಸ್ಥಿತಿಯಲ್ಲಿ ಬಹುಶಃ ಜಪಾನ್‌ನ ಫುಕುಶಿಮಾದಲ್ಲಿ ನಡೆದ ಅದೇ ಪರಿಸ್ಥಿತಿಯನ್ನು ಉಕ್ರೇನ್ ಕೂಡ ಕಾಣಬಹುದು ಎಂದು ಇಂಗ್ಲೆಂಡ್‌ನ ನ್ಯೂಕ್ಲಿಯರ್ ಪರಿಣಿತ ಪೌಲ್ ಡೋರ್ಫ್‌ಮ್ಯಾನ್ ತಿಳಿಸಿದ್ದಾರೆ.

Published by:Ashwini Prabhu
First published: