ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಶ್ವಾನಗಳು; ನಮ್ಮ ಮಿಲಿಟರಿ ಪಡೆಯದ್ದಲ್ಲ ಎಂದ ಅಮೆರಿಕ!

ಡಜನ್‌ ಗಟ್ಟಲೆ ಶ್ವಾನಗಳನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಅಮೆರಿಕ ಸೇನೆಯು ಹೊರಟು ಹೋಗಿದೆ ಎಂಬ ವರದಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಸರ್ಕಾರ ಈ ಸುದ್ದಿ ಸುಳ್ಳು. ಈ ಶ್ವಾನಗಳು ಸೇನೆಗೆ ಸಂಬಂಧಪಟ್ಟಿದ್ದಲ್ಲ ಎಂದು ತಿಳಿಸಿದೆ.

ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಸಿಕ್ಕ ನಾಯಿಗಳು

ಕಾಬೂಲ್​ ವಿಮಾನ ನಿಲ್ದಾಣದಲ್ಲಿ ಸಿಕ್ಕ ನಾಯಿಗಳು

  • Share this:
ಅಮೆರಿಕ ಸೇನೆಯು ಅಪ್ಘಾನಿಸ್ತಾನವನ್ನು ತೊರೆದು ತಮ್ಮ ದೇಶಕ್ಕೆ ಮರಳುವ ಅಂತಿಮ ಗಡುವು ಆಗಸ್ಟ್ 31 ನೇ ದಿನಾಂಕವಾಗಿತ್ತು. ಈ ದಿನಾಂಕದ ನಂತರ ವಿದೇಶದ ಪ್ರಜೆಗಳು ಅಥವಾ ಯಾವುದೇ ಸೇನಾ ಸಿಬ್ಬಂದಿ ಅಪ್ಘಾನಿಸ್ತಾನವನ್ನು ತೊರೆಯದೇ ಹೋದಲ್ಲಿ ಅವರು ಇಲ್ಲಿಯೇ ವಾಸಿಸಬೇಕು ಹಾಗೂ ನಂತರ ಅವರನ್ನು ಅವರ ದೇಶಕ್ಕೆ ಕಳುಹಿಸಲಾಗುವುದಿಲ್ಲವೆಂದು ತಾಲಿಬಾನ್ ಕಟ್ಟಾಜ್ಞೆ ಹೊರಡಿಸಿತ್ತು. ಈ ಸಲುವಾಗಿ ಅಮೆರಿಕ ಹಾಗೂ ಅನೇಕ ವಿದೇಶಿ ಮಿತ್ರ ರಾಷ್ಟ್ರಗಳು ಅಪ್ಘನ್ ನೆಲವನ್ನು ತೊರೆದಿವೆ. ಆದರೆ ಅಮೆರಿಕ ಸೇನೆಯು ಅಪ್ಘಾನಿಸ್ತಾನವನ್ನು ತೊರೆಯುವಾಗ ತಮ್ಮ ಸೇನೆಗೆ ಸೇರಿದ ಶ್ವಾನಗಳನ್ನು ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಿದೆ ಎಂಬುದು ವರದಿಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಸುದ್ದಿ ಹಾಗೂ ಫೋಟೋ ವೈರಲ್ ಆಗಿದೆ. 

ಡಜನ್‌ ಗಟ್ಟಲೆ ಶ್ವಾನಗಳನ್ನು ವಿಮಾನ ನಿಲ್ದಾಣದಲ್ಲಿಯೇ ಬಿಟ್ಟು ಅಮೆರಿಕ ಸೇನೆಯು ಹೊರಟು ಹೋಗಿದೆ ಎಂಬ ವರದಿಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕ ಸರ್ಕಾರ ಈ ಸುದ್ದಿ ಸುಳ್ಳು. ಈ ಶ್ವಾನಗಳು ಸೇನೆಗೆ ಸಂಬಂಧಪಟ್ಟಿದ್ದಲ್ಲ ಎಂದು ತಿಳಿಸಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ಪಂಜರದೊಳಗೆ ಹಾಕಿದ್ದ ಹಲವಾರು ಶ್ವಾನಗಳ ಫೋಟೋಗಳು ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿರುವಂತೆಯೇ ಪೆಂಟಗಾನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ಇವು ನಮ್ಮ ಸೇನೆಗೆ ಸಂಬಂಧಪಟ್ಟ ಶ್ವಾನಗಳಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಪ್ರಸ್ತುತ ಈ ಶ್ವಾನಗಳು ಕಾಬೂಲ್‌ನ ಪ್ರಾಣಿ ರಕ್ಷಕ ಸಂಸ್ಥೆಯ ಆಶ್ರಯದಲ್ಲಿವೆ ಎಂದು ಕಿರ್ಬಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.ಕಿರ್ಬಿ ತಮ್ಮ ಟ್ವೀಟ್‌ನಲ್ಲಿ ಈ ಅಂಶವನ್ನು ಸ್ಪಷ್ಟವಾಗಿ ಬರೆದಿದ್ದು, ಯುಎಸ್ ಮಿಲಿಟರಿಯು ಯಾವುದೇ ಶ್ವಾನಗಳನ್ನು ಹಮೀದ್ ಕರ್ಝಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಿಟ್ಟಿಲ್ಲ. ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೋಗಳು ಕಾಬೂಲ್‌ನ ಪ್ರಾಣಿ ರಕ್ಷಕ ಸಂಸ್ಥೆಯ ಅಧೀನದಲ್ಲಿರುವ ಶ್ವಾನಗಳಾಗಿದ್ದು, ಇದು ಸುಳ್ಳು ಸುದ್ದಿಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಇನ್​ಸ್ಟಾಗ್ರಾಂಗೆ ಲಗ್ಗೆ ಇಟ್ಟ ನಟಿ Jyotika: ಕೆಲವೇ ನಿಮಿಷಗಳಲ್ಲಿ 1 ಮಿಲಿಯನ್​ಗೂ ಹೆಚ್ಚು ಹಿಂಬಾಲಕರು..!

ಕಾಬೂಲ್‌ನ ಸ್ಮಾಲ್ ಅನಿಮಲ್ ರೆಸ್ಕ್ಯೂ (ಪ್ರಾಣಿ ರಕ್ಷಕ ಸಂಘ) ಅಪ್ಘಾನಿಸ್ತಾನದಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಪ್ರಾಣಿ ದಯಾ ಹಕ್ಕುಗಳ ಸಂಘಟನೆಯಾಗಿದೆ. ಇದು ಆರಂಭದಲ್ಲಿ ಕೆಲವೊಂದು ಪ್ರಾಣಿಗಳನ್ನು ಸ್ಥಳಾಂತರಿಸುವ ಯೋಜನೆಯನ್ನು ನಡೆಸಿತ್ತು. ಆದರೆ, ಮಿಲಿಟರಿ ವಿಮಾನಗಳಲ್ಲಿ ಶ್ವಾನಗಳನ್ನು ಅನುಮತಿಸಲಾಗಲಿಲ್ಲ ಹಾಗೂ ಖಾಸಗಿ ವಿಮಾನಗಳಿಗೆ ಕಾಬೂಲ್‌ನಲ್ಲಿ ಅನುಮತಿ ಇಲ್ಲದೇ ಇರುವ ಕಾರಣ ಮಿಲಿಟರಿ ಪಡೆಗಳು ಶ್ವಾನಗಳನ್ನು ವಿಮಾನ ನಿಲ್ದಾಣದಲ್ಲಿಯೇ ಬಿಡಬೇಕಾಯಿತು ಎಂದು ಈ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ: Shershaah: ಹೊಸ ದಾಖಲೆ ಬರೆದ ಸಿದ್ಧಾರ್ಥ್​ ಮಲ್ಹೋತ್ರಾ ಅಭಿನಯದ ಶೇರ್​ಷಾ ಸಿನಿಮಾ

ಕಾಬೂಲ್‌ನ ಪ್ರಾಣಿ ರಕ್ಷಕ ಸಂಸ್ಥೆಯ ಶ್ವಾನಗಳನ್ನು ಹಾಗೂ ಅವುಗಳ ಆರೈಕೆದಾರರನ್ನು ಅಪ್ಘಾನಿಸ್ತಾನದಿಂದ ಹೊರಕ್ಕೆ ಕರೆದೊಯ್ಯಲು ನಮ್ಮ ವಿಮಾನದಲ್ಲಿ ಅನುಮತಿ ಇಲ್ಲದಿರುವುದು ನಮಗೆ ಹೆಚ್ಚಿನ ನೋವುಂಟು ಮಾಡಿದೆ ಎಂದು SPCA ಅಂತರಾಷ್ಟ್ರೀಯ ಕಾರ್ಯಕ್ರಮಗಳ ನಿರ್ದೇಶಕರಾದ ಲೋರಿ ಕಲೆಫ್ ತಿಳಿಸಿದ್ದಾರೆ.

ಇದನ್ನೂ ಓದಿ: Raghavendra: ಕೃಷ್ಣನ ವೇಷದಲ್ಲಿ ಮಿಂಚಿದ ಮಜಾ ಭಾರತದ ಅದ್ಭುತ ಪ್ರತಿಭೆ ರಾಗಿಣಿ

ಅಂತೂ ಇಂತು ಈ ಶ್ವಾನಗಳು ಯಾರಿಗೆ ಸೇರಿವೆ ಎಂಬುದು ಇನ್ನೂ ತಿಳಿದುಬಂದಿಲ್ಲ. ಅಪ್ಘಾನಿಸ್ತಾನದಲ್ಲಿ ಕಾಬೂಲ್‌ ಆಡಳಿತದ ಪರಿಣಾಮದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಲ್ಲಿನ ಪ್ರಜೆಗಳು ನರಕ ಯಾತನೆಯನ್ನು ಅನುಭವಿಸುತ್ತಿದ್ದಾರೆ ಎಂಬುದು ಅಲ್ಲಿನ ಸ್ಥಿತಿಗತಿಗಳಿಂದ ತಿಳಿದುಬಂದಿದ್ದು ಈಗ ಈ ಶ್ವಾನಗಳೂ ಅನಾಥವಾಗಿವೆ.
Published by:Anitha E
First published: