Lassi: ಆರ್ಥಿಕತೆ ಹಿಡಿದೆತ್ತಲು ಪಾಕ್ ಹೊಸ ಸೂತ್ರ; ಟೀ ಬಿಡಿ, ಲಸ್ಸಿ ಕುಡಿ ಎಂದ ಆಯೋಗ!

ಚಹಾ (Tea) ಕುಡಿಯುವುದನ್ನು ಕಡಿಮೆ ಮಾಡಿ ಅಂತ ಪಾಕಿಸ್ತಾನ ಸರ್ಕಾರವೇ (Government) ಜನರಿಗೆ ಸಲಹೆ ನೀಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನ ಸರ್ಕಾರದ ಆಯೋಗ, ಟೀ ಬದಲು ಲಸ್ಸಿ (Lassi) ಕುಡಿಯಿರಿ ಅಂತ ಜನರಿಗೆ ಪುಕ್ಕಟ್ಟೆ ಸಲಹೆ (Suggestion) ನೀಡಿದೆ.

ಸಂಗ್ರಹ ಚಿತ್ರ

ಸಂಗ್ರಹ ಚಿತ್ರ

  • Share this:
ಪಾಕಿಸ್ತಾನ: ನೆರೆ ರಾಷ್ಟ್ರ ಪಾಕಿಸ್ತಾನದಲ್ಲಿ (Pakistan) ಆರ್ಥಿಕ ಪರಿಸ್ಥಿತಿ (Economic situation) ಪಾತಾಳಕ್ಕೆ ಕುಸಿದಿದೆ. ಜೀವನಾವಶ್ಯಕ ವಸ್ತುಗಳು ಬಲು ದುಬಾರಿಯಾಗುತ್ತಿದ್ದು, ಜಸಾಮಾನ್ಯರ (Publics) ಕೈಗೆ ಸಿಗದಂತೆ ಆಗಿದೆ. ಹೀಗಾಗಿ ಚಹಾ (Tea) ಕುಡಿಯುವುದನ್ನು ಕಡಿಮೆ ಮಾಡಿ ಅಂತ ಪಾಕಿಸ್ತಾನ ಸರ್ಕಾರವೇ (Government) ಜನರಿಗೆ ಸಲಹೆ ನೀಡಿತ್ತು. ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಪಾಕಿಸ್ತಾನ ಸರ್ಕಾರದ ಆಯೋಗ, ಟೀ ಬದಲು ಲಸ್ಸಿ (Lassi) ಕುಡಿಯಿರಿ ಅಂತ ಜನರಿಗೆ ಪುಕ್ಕಟ್ಟೆ ಸಲಹೆ (Suggestion) ನೀಡಿದೆ. ಪಾಕಿಸ್ತಾನದಲ್ಲಿ ಚಹಾ ಆಮದು ಮೇಲಿನ ವೆಚ್ಚವನ್ನು ಕಡಿತಗೊಳಿಸಿದ ನಂತರ, ಈಗ ಉನ್ನತ ಶಿಕ್ಷಣ ಆಯೋಗವು ಚಹಾದ ಬದಲಿಗೆ ಲಸ್ಸಿ ಮತ್ತು ಸಟ್ಟು ಎನಿರ್ಜಿ ಡ್ರಿಂಕ್ಸ್‍ಗಳಂತಹ ಸ್ಥಳೀಯ ಪಾನೀಯಗಳನ್ನು ಕುಡಿಯುವಂತೆ ಸಲಹೆ ನೀಡಿದೆ.

ಟೀ ಬದಲು ಲಸ್ಸಿ ಕುಡಿಯಿರಿ

ಪಾಕಿಸ್ತಾನದ ಸರ್ಕಾರದ ಆಯೋಗವು ಜನರಲ್ಲಿನ ಚಹಾದ ಚಟವನ್ನು ಕಡಿಮೆ ಮಾಡಲು ಹೊಸ ಮಾರ್ಗ ಸೂಚಿಸಿದ್ದಾರೆ. ಪಾಕ್ ಉನ್ನತ ಶಿಕ್ಷಣ ಆಯೋಗವು ದೇಶದಲ್ಲಿರುವ ಎಲ್ಲಾ ಕಾಲೇಜುಗಳ ಉಪಕುಲಪತಿಗಳಿಗೆ ಚಹಾದ ಬದಲಿಗೆ ಲಸ್ಸಿ ಮತ್ತು ಸ್ಥಳೀಯ ಎನಿರ್ಜಿ ಡ್ರಿಂಕ್ಸ್‌ಗಳಂತಹ  ಸ್ಥಳೀಯ ಪಾನೀಯಗಳನ್ನು ಪ್ರೋತ್ಸಾಹಿಸಲು ಸಲಹೆ ನೀಡಿದೆ.

ಲಸ್ಸಿ ಕುಡಿಯುವುದರಿಂದ ಉದ್ಯೋಗಾವಕಾಶ

ಈ ರೀತಿ ಲಸ್ಸಿ ಅಥವಾ ಸ್ಥಳೀಯ ಡ್ರಿಂಕ್ಸ್ ಕುಡಿಯುವುದಿರಿಂದ ಉದ್ಯೋಗಾವಕಾಶ ಹೆಚ್ಚುವುದಲ್ಲದೆ, ಸಾರ್ವಜನಿಕರ ಆದಾಯವೂ ಹೆಚ್ಚುತ್ತದೆ ಎಂದು ಆಯೋಗ ಹೇಳಿದೆ.

ಇದನ್ನೂ ಓದಿ: Agnipath Recruitment: ಅಗ್ನಿಪಥ್ ನೇಮಕಾತಿ ದಾಖಲೆ! ಅಗ್ನಿವೀರರಾಗಲು 56,960 ಅರ್ಜಿ ಸಲ್ಲಿಕೆ

ಟೀ ಸೇವನೆಗೆ ಬ್ರೇಕ್ ಹಾಕಿ ಎಂದ ತಜ್ಞರು

ಇತ್ತೀಚೆಗಷ್ಟೇ ಪಾಕಿಸ್ತಾನದ ಯೋಜನಾ ಸಚಿವರು ಚಹಾ ಸೇವನೆಯನ್ನು ಕಡಿಮೆ ಮಾಡುವಂತೆ ತಮ್ಮ ದೇಶದ ಜನರಿಗೆ ಒತ್ತಾಯಿಸಿದ್ದರು. ಪಾಕಿಸ್ತಾನವು ಪ್ರಸ್ತುತ ಚಹಾವನ್ನು ಆಮದು ಮಾಡಿಕೊಳ್ಳಲು ಹಣವನ್ನು ಸಾಲ ಪಡೆಯಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ದೇಶದ ಜನರಿಗೆ ಪ್ರತಿ ದಿನ ಒಂದು ಅಥವಾ 2 ಕಪ್ ಟೀ ಕಡಿತಗೊಳಿಸುವಂತೆ ಅವರು ಮನವಿ ಮಾಡಿದ್ದರು.

ಚೀನಾದಿಂದ ಪಾಕಿಸ್ತಾನಕ್ಕೆ ಸಾಲ

ದಿನಗಳಲ್ಲಿ ಪಾಕಿಸ್ತಾನಕ್ಕೆ 2.3 ಬಿಲಿಯನ್ ಡಾಲರ್‌ ಸಾಲ ನೀಡಲು ಚೀನಾದ ಬ್ಯಾಂಕ್‌ಗಳ ಒಕ್ಕೂಟ ನಿರ್ಧಾರ ಮಾಡಿದೆ. ಚೀನೀ ಬ್ಯಾಂಕ್‌ಗಳ ಒಕ್ಕೂಟ ಮತ್ತು ಪಾಕಿಸ್ತಾನವು ಈಗಾಗಲೇ 2.3 ಬಿಲಿಯನ್‌ ಡಾಲರ್‌ ಸಾಲ ಸೌಲಭ್ಯ ಒಪ್ಪಂದಕ್ಕೆ ಸಹಿ ಹಾಕಿವೆ. ಒಪ್ಪಂದದಂತೆ ನಗದು ಒಳಹರಿವು ಕೆಲವೇ ದಿನಗಳಲ್ಲಿ ನಿರೀಕ್ಷಿಸಲಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಹೇಳಿದ್ದಾರೆ.

ಬೀದಿ ದೀಪ ಆರಿಸುವಂತೆ ಪಾಕ್ ಸರ್ಕಾರ ಆದೇಶ

ಪಾಕಿಸ್ತಾನ ಸರ್ಕಾರ ಈ ಹಿಂದೆ ಹೆಚ್ಚುವರಿ ಖರ್ಚು ಕಡಿಮೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ಇಗ ನೀಡಿರುವ ಆದೇಶದಂತೆ ಮೆರವಣಿಗೆ, ಮೆಹಂದಿ ಹಚ್ಚುವ ಸಮಾರಂಭ, ಭಾಂಗಡಾ ಪಾರ್ಟಿ ಸೇರಿದಂತೆ ಎಲ್ಲ ಕಾರ್ಯಕ್ರಮಗಳನ್ನು ರಾತ್ರಿ 9ರ ಒಳಗೆ ಮುಗಿಸಬೇಕಾಗಿದೆ. ರಾತ್ರಿ 9ರ ನಂತರ ಅನಗತ್ಯ ಬೀದಿ ದೀಪಗಳನ್ನು ಸಹ ಬಂದ್ ಮಾಡಲಾಗುವುದು. ಇದರಿಂದ ಔಷಧದ ಅಂಗಡಿಗಳು, ಪೆಟ್ರೋಲ್ ಪಂಪ್‌ಗಳು, ಬಸ್ ನಿಲ್ದಾಣಗಳು, ಹಾಲಿನ ಅಂಗಡಿಗಳು ಇತ್ಯಾದಿಗಳಿಗೆ ವಿನಾಯತಿ ನೀಡಲಾಗಿದೆ.

ಇದನ್ನೂ ಓದಿ: Maharashtra Politics: ಜುಲೈ 11ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್, ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡ ಶಿಂಧೆ ಟೀಂ!

ಕಂಪನಿಗಳಲ್ಲೂ 5 ದಿನ ಮಾತ್ರ ಕೆಲಸ

ಈಗ ಸರಕಾರಿ ಕಚೇರಿಗಳಲ್ಲಿ ಕೇವಲ 5 ದಿನ ಮಾತ್ರ ಕೆಲಸವಿರುತ್ತದೆ. ಭಾನುವಾರದ ಜೊತೆ ಶನಿವಾರ ಕಚೇರಿಯನ್ನು ಮುಚ್ಚುವದರಿಂದ ವಾರ್ಷಿಕವಾಗಿ ಸುಮಾರು 7 ಸಾವಿರದ 870 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಸರಕಾರ ಹೇಳಿಕೊಂಡಿದೆ. ಅಲ್ಲದೆ ಸರಕಾರವು ಶುಕ್ರವಾರ ಮನೆಯಲ್ಲೆ ಇದ್ದುಕೊಂಡು ಕೆಲಸ ಮಾಡುವಂತೆ ಪರ್ಯಾಯವನ್ನು ನೀಡುತ್ತಾ ನೌಕರರಿಗೆ ವಿತರಿಸುವ ಇಂಧನ ಪ್ರಮಾಣವನ್ನು ಶೇ. 40ರಷ್ಟು ಕಡಿತಗೊಳಿಸಿ ಆದೇಶ ಹೊರಡಿಸಿದೆ. ಅದೇ ಸಮಯದಲ್ಲಿ ಪಾಕಿಸ್ತಾನಿ ಸೈನ್ಯವು ‘ಡ್ರೈ ಡೇ’ಎಂದು ಆಚರಿಸುತ್ತಿದ್ದು ಆ ದಿನ ಯಾವುದೇ ಅಧಿಕೃತ ವಾಹನಗಳು ಚಲಿಸುವದಿಲ್ಲ ಎಂದು ಹೇಳಲಾಗಿದೆ.
Published by:Annappa Achari
First published: