news18-kannada Updated:June 17, 2020, 4:33 PM IST
ಅಮಿತ್ ಶಾ
ನವ ದೆಹಲಿ (ಜೂನ್ 17); ಭಾರತ-ಚೀನಾ ಗಡಿಯಲ್ಲಿ ಚೀನಾ ಸೈನಿಕರ ಗುಂಡಿಗೆ ಜೀವ ಚೆಲ್ಲಿದ 20 ಭಾರತೀಯ ಸೈನಿಕರ ಸಾವಿಗೆ ಗೃಹ ಸಚಿವ ಅಮಿತ್ ಶಾ ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.
ಸೈನಿಕರ ಸಾವಿಗೆ ಟ್ವೀಟ್ ಮೂಲಕ ಸಂತಾಪ ವ್ಯಕ್ತಪಡಿಸಿರುವ ಅಮಿತ್ ಶಾ, "ಲಡಾಖ್ನ ಗಾಲ್ವಾನ್ನಲ್ಲಿ ನಮ್ಮ ತಾಯಿನಾಡನ್ನು ರಕ್ಷಿಸುವ ಸಂದರ್ಭದಲ್ಲಿ ನಾವು ನಮ್ಮ ಕೆಚ್ಚೆದೆಯ ಸೈನಿಕರನ್ನು ಕಳೆದುಕೊಂಡಿದ್ದೇವೆ. ಈ ನೋವನ್ನು ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಭಾರತೀಯ ಭೂಪ್ರದೇಶವನ್ನು ಸುರಕ್ಷಿತವಾಗಿಡಲು ಪ್ರಾಣ ತ್ಯಾಗ ಮಾಡಿದ ನಮ್ಮ ಅಮರ ವೀರರಿಗೆ ರಾಷ್ಟ್ರ ನಮಸ್ಕರಿಸುತ್ತದೆ. ಅವರ ಧೈರ್ಯವು ತನ್ನ ಭೂಮಿಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ" ಎಂದು ತಿಳಿಸಿದ್ದಾರೆ.
ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ನಡುವೆ ಸೋಮವಾರ ರಾತ್ರಿ ಸಂಭವಿಸಿದ ಸಂಘರ್ಷದಲ್ಲಿ ದೇಶದ ಕಮಾಂಡಿಂಗ್ ಅಧಿಕಾರಿ ಸೇರಿ 20 ಮಂದಿ ಯೋಧರು ಹುತಾತ್ಮರಾಗಿದ್ಧಾರೆ. ಇದೇ ವೇಳೆ ಚೀನಾ ಸೇನೆಯ 43 ಜನ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ಹೇಳಿಕೆ ನೀಡಿದೆ. ಆದರೆ, ಇದನ್ನೂ ಚೀನಾ ಸರ್ಕಾರ ಈವರೆಗೆ ಇದನ್ನು ದೃಢಪಡಿಸಿಲ್ಲ.
ಇದನ್ನೂ ಒದಿ : Indo-China Conflict: ಗಾಲ್ವಾನ್ ಕಣಿವೆಯಲ್ಲಿ ಸತ್ತ ಚೀನಾ ಸೈನಿಕರ ಸಂಖ್ಯೆ ಎಷ್ಟು? ಪ್ರತಿಕ್ರಿಯಿಸಲು ನಿರಾಕರಿಸಿದ ಚೀನಾ
ಆದರೆ, ಭಾರತೀಯ ಸೈನಿಕರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶದ ಎಲ್ಲಾ ಪ್ರಮುಖ ನಾಯಕರು ಮತ್ತು ಜನ ಸಾಮಾನ್ಯರು ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಚೀನಾ ವಿರುದ್ಧ ಪ್ರತಿಕಾರದ ಒತ್ತಾಯಗಳು ಕೇಳಿ ಬರುತ್ತಿದೆ.
First published:
June 17, 2020, 4:21 PM IST