ಈಗಂತೂ ದುಡ್ಡೇ ಎಲ್ಲಾ ಅನ್ನೋ ಹಾಗೆ ಆಗಿದೆ ನೋಡಿ, ಮನುಷ್ಯ (Man) ಹೇಗಿದ್ದಾನೆ? ಆರೋಗ್ಯವಾಗಿದ್ದಾನೆಯೇ ಅಂತ ಬಹುತೇಕರು ತಲೆ ಕೆಡೆಸಿಕೊಳ್ಳುತ್ತಿಲ್ಲ. ಒಂದು ವಿಲಕ್ಷಣ ಘಟನೆಯೊಂದರಲ್ಲಿ, ಬಾಡಿಗೆದಾರರು (Rent) ಎರಡು ವರ್ಷಗಳಿಂದ ಒಂದು ಫ್ಲ್ಯಾಟ್ ನಲ್ಲಿ (Flat) ಸತ್ತು ಬಿದ್ದಿದ್ದರೂ ಅವರಿಂದ ಮನೆಯ ಮಾಲೀಕ ಬಾಡಿಗೆ ತೆಗೆದುಕೊಳ್ಳುತ್ತಲೇ ಇದ್ದರಂತೆ. 61 ವರ್ಷದ ಶೀಲಾ ಸೆಲಿಯೋನೆ (Sheila Seleoane) ಅವರ ಅವಶೇಷಗಳು ಈ ವರ್ಷದ ಫೆಬ್ರವರಿಯಲ್ಲಿ ಲಂಡನ್ ನ (London) ಪೆಕ್ಹ್ಯಾಮ್ ನಲ್ಲಿರುವ ಅವರ ಮನೆಯಲ್ಲಿ ಪತ್ತೆಯಾಗಿದ್ದವು. ಪೊಲೀಸರು ಈ ಫ್ಲ್ಯಾಟ್ ನ ಒಳಗೆ ಬಲವಂತವಾಗಿ ಪ್ರವೇಶಿಸಿ ಅವಳನ್ನು ಅಸ್ಥಿಪಂಜರದ (Skeleton) ಸ್ಥಿತಿಯಲ್ಲಿ ನೋಡಿದ ನಂತರ ಈ ಸುದ್ದಿ ಬೆಳಕಿಗೆ ಬಂದಿದೆ.
ದಿ ಡೈಲಿ ಮೇಲ್ ವರದಿಯ ಪ್ರಕಾರ, ಶೀಲಾಗೆ ಇನ್ನೂ ಮದುವೆಯಾಗಿರಲಿಲ್ಲ ಮತ್ತು ಅವರ ಪೋಷಕರು ದಕ್ಷಿಣ ಆಫ್ರಿಕಾದಲ್ಲಿ ವಾಸಿಸುತ್ತಿರುವುದು ತಿಳಿದು ಬಂದಿದೆ. ಫೆಬ್ರವರಿ 2022 ರಲ್ಲಿ ಅವಳು ತನ್ನ ಸೋಫಾದಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆಕೆಯ ಸಾವಿಗೆ ಯಾವುದೇ ಅನುಮಾನಾಸ್ಪದ ಸನ್ನಿವೇಶಗಳಿಲ್ಲ ಎಂದು ಪೊಲೀಸರು ನಿರ್ಧರಿಸಿದ್ದರಿಂದ ಅವಳ ದಂತ ದಾಖಲೆಗಳನ್ನು ಬಳಸಿಕೊಂಡು ಅವಳನ್ನು ಗುರುತಿಸಲಾಯಿತು, ಈಕೆಯ ಸಾವು ಹೆಚ್ಚಾಗಿ ಆಗಸ್ಟ್ 2019 ರಲ್ಲಿ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.
ಫ್ಲ್ಯಾಟ್ ನಿಂದ ಬರುತ್ತಿದ್ದ ಕೆಟ್ಟ ವಾಸನೆ
ನೆರೆಹೊರೆಯವರ ಪ್ರಕಾರ, ಅಕ್ಟೋಬರ್ 2019 ರಿಂದ ಅವರ ಫ್ಲ್ಯಾಟ್ ನಿಂದ ಒಂದು ರೀತಿಯ ಕೆಟ್ಟ ವಾಸನೆ ಬರುತ್ತಿರುವುದನ್ನು ಹೌಸಿಂಗ್ ಅಸೋಸಿಯೇಷನ್ ಗೆ ಪದೇ ಪದೇ ವರದಿ ಮಾಡಿದ್ದರು. ಆಕೆಯ ಮನೆಯ ಹೊರಗೆ ದೂರುಗಳು ಮತ್ತು ಪತ್ರಗಳು ರಾಶಿ ಬಿದ್ದ ನಂತರ, ಪರಿಶೀಲಿಸಲು ಪೊಲೀಸರನ್ನು ಎರಡು ಬಾರಿ ಕರೆಸಲಾಯಿತು.
ಇದನ್ನೂ ಓದಿ: World Best Place: ಉಳಿಯೋಕೆ ಇಡೀ ವಿಶ್ವದಲ್ಲೇ ಈ 10 ನಗರಗಳು ಬೆಸ್ಟ್!
ಆದಾಗ್ಯೂ, ಅವಳು "ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾಳೆ" ಎಂದು ಪೊಲೀಸರು ನಂಬಿದ್ದರು. ಕೊನೆಗೆ ಅಧಿಕಾರಿಗಳು ಬಲವಂತವಾಗಿ ಒಳಕ್ಕೆ ಹೋದಾಗಲೆ ಈ ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ. ಅವರು ಕೊನೆಯ ಬಾರಿಗೆ ಏಪ್ರಿಲ್ 2019 ರಲ್ಲಿ ಹೊರಗೆ ಕಾಣಿಸಿ ಕೊಂಡಿದ್ದು, ಆಗಸ್ಟ್ 2019 ರಲ್ಲಿ ಅವರ ಕೊನೆಯ ಮಾಸಿಕ ಬಾಡಿಗೆಯನ್ನು ಪಾವತಿಸಿದರು ಎಂದು ನೆರೆಹೊರೆಯವರು ವರದಿ ಮಾಡಿದ್ದಾರೆ.
ಒಮ್ಮೆ ಅವಳು ಬಾಡಿಗೆಯನ್ನು ಪಾವತಿಸಲು ವಿಫಲಳಾದ ನಂತರ, ಪೀಬಾಡಿ ಹೌಸಿಂಗ್ ಗ್ರೂಪ್ ತನ್ನ ಯೂನಿವರ್ಸಲ್ ಕ್ರೆಡಿಟ್ ಪಾವತಿಗಳಿಂದ ಬಾಡಿಗೆಯನ್ನು ನೇರವಾಗಿ ಪಾವತಿಸುವಂತೆ ಅರ್ಜಿ ಸಲ್ಲಿಸಿತು. ಅರ್ಜಿಯನ್ನು ಅನುಮೋದಿಸಿದ ನಂತರ, ಮಾರ್ಚ್ 2020 ರಿಂದ ಅವಳ ಬಾಡಿಗೆಯನ್ನು ಹೌಸಿಂಗ್ ಸೊಸೈಟಿಗೆ ಪ್ರತಿ ತಿಂಗಳು ಪಾವತಿಸಲಾಯಿತು. ಆದಾಗ್ಯೂ, ಯಾರೂ ಶೀಲಾಳನ್ನು ಸಂಪರ್ಕಿಸಲು ಪ್ರಯತ್ನಿಸಲಿಲ್ಲ. ಜೂನ್ 2020 ರಲ್ಲಿ ಅಧಿಕಾರಿಗಳು ವಾಡಿಕೆಯ ಅನಿಲ ತಪಾಸಣೆ ನಡೆಸಲು ಪ್ರಯತ್ನಿಸಿದರು. ಆದಾಗ್ಯೂ, ಯಾರೂ ಪ್ರತಿಕ್ರಿಯಿಸದಿದ್ದಾಗ, ಮತ್ತು ಫ್ಲ್ಯಾಟ್ ಗೆ ಅನಿಲ ಪೂರೈಕೆಯನ್ನು ಸಹ ಕಡಿತಗೊಳಿಸಲಾಯಿತು.
ಜಿಪಿ ವರದಿಯ ಪ್ರಕಾರ ಏನಿದೆ?
ಜಿಪಿ ವರದಿಯ ಪ್ರಕಾರ, 61 ವರ್ಷದ ಅವರು ಆಗಸ್ಟ್ 14, 2019 ರಂದು ದೂರವಾಣಿ ಮೂಲಕ ವೈದ್ಯರನ್ನು ಕಾಣಲು ಅಪಾಯಿಂಟ್ಮೆಂಟ್ ಅನ್ನು ಬುಕ್ ಮಾಡಿದ್ದರಂತೆ. ಆಕೆ ತನಗೆ "ಜ್ವರ ಮತ್ತು ಕೆಲವೊಮ್ಮೆ ಉಸಿರಾಟದ ತೊಂದರೆ" ಎಂದು ಹೇಳಿದ ಮಾಹಿತಿ ಇದೀಗ ಹೊರ ಬಿದ್ದಿದೆ. ಅವಳು ಮರುದಿನ ವೈದ್ಯರ ಭೇಟಿಗೆ ಹೋಗಬೇಕಾಗಿತ್ತು, ಆದರೆ ಅವಳು ಎಂದಿಗೂ ಆ ಅಪಾಯಿಂಟ್ಮೆಂಟ್ ಗೆ ಹಾಜರಾಗಲಿಲ್ಲ.
ಶೀಲಾಳ ದೇಹವು ತುಂಬಾ ಕೊಳೆತಿದ್ದರಿಂದ ಮರಣೋತ್ತರ ಪರೀಕ್ಷೆಗೆ ಸಾವಿಗೆ ಕಾರಣವನ್ನು ಕಂಡು ಹಿಡಿಯಲು ಸಾಧ್ಯವಾಗಲಿಲ್ಲ. ಪೀಬಾಡಿ ಹೌಸಿಂಗ್ ಗ್ರೂಪ್ ಈಗ ಶೀಲಾಳ ಮೃತ ದೇಹವನ್ನು ಎರಡೂವರೆ ವರ್ಷಗಳಿಂದ ಪತ್ತೆ ಮಾಡದೆ ಇದ್ದುದ್ದಕ್ಕೆ ಕ್ಷಮೆಯಾಚಿಸಿ ಬ್ಲಾಕ್ ನಲ್ಲಿರುವ ಎಲ್ಲಾ ಬಾಡಿಗೆದಾರರಿಗೆ ಪತ್ರವನ್ನು ಕಳುಹಿಸಿದೆ.
ಇದನ್ನೂ ಓದಿ: Viral News: 14 ವರ್ಷದ ಹಿಂದೆ ಕಿಡ್ನ್ಯಾಪ್ ಆಗಿದ್ದವ ಮರಳಿ ಬಂದ! ಕೈಯಲ್ಲಿತ್ತೊಂದು ಲೆಟರ್
ಸೌತ್ವಾರ್ಕ್ ಕೊರೋನರ್ಸ್ ಕೋರ್ಟ್ ನ ಸಹಾಯಕ ಕರೋನರ್ ಡಾ.ಜೂಲಿಯನ್ ಮೋರಿಸ್, ಯಾವುದೇ ರೀತಿಯ ಸಾವು ದುಃಖಕರವೇ ಆಗಿರುತ್ತದೆ. ಎರಡು ವರ್ಷಗಳ ಕಾಲ ಒಬ್ಬ ವ್ಯಕ್ತಿ ಬದುಕಿದ್ದಾರೋ, ತೀರಿಕೊಂಡಿದ್ದಾರೋ ಅಂತ ಪತ್ತೆಹಚ್ಚಲು ಸಾಧ್ಯವಾಗದೆ ಇರುವುದು ತುಂಬಾನೇ ನೋವಿನ ಸಂಗತಿ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ