Organ Donation: ಸತ್ತ ಬಳಿಕವೂ ಕಂದಮ್ಮ ಜೀವಂತ! ಇಬ್ಬರಿಗೆ ಜೀವನ ನೀಡಿತು 16 ತಿಂಗಳ ಮಗುವಿನ ಅಂಗಾಂಗ!

16 ತಿಂಗಳು ತುಂಬಿದ ಮಗುವಿನ ತಲೆಗೆ ಪೆಟ್ಟಾದ ನಂತರ ಮೆದುಳು ನಿಷ್ಕ್ರಿಯಗೊಂಡಿದೆ. ಈ ಅಂಬೆಗಾಲಿಡುವ ಮಗುವಿನ ಕುಟುಂಬವು ಮಗುವಿನ ಅಂಗಾಂಗಗಳನ್ನು ಬೇರೆ ಅವಶ್ಯಕವಾಗಿರುವ ಮಕ್ಕಳಿಗೆ ದಾನ (Donate) ಮಾಡಲು ನಿರ್ಧರಿಸಿದ ನಂತರ ಬೇರೆ ಇನ್ನೆರಡು ಚಿಕ್ಕ ಮಕ್ಕಳ ಜೀವಗಳನ್ನು ಉಳಿಸಲು ಸಾಧ್ಯವಾಯಿತು.

ಮೃತ ಮಗು ರಿಶಾಂತ್

ಮೃತ ಮಗು ರಿಶಾಂತ್

  • Share this:
ಒಬ್ಬ ತಾಯಿಗೆ (Mother) ಜೀವನದಲ್ಲಿ ನುಂಗಲಾರದ ನೋವು ಎಂದರೆ ಆಕೆಯ ಮಗು (Baby) ಕಣ್ಣೆದುರು ಸಾವನ್ನಪ್ಪುವುದು (Death). ಅದರಲ್ಲೂ ಆ ಮಗು ಇನ್ನೂ ಚಿಕ್ಕದಾಗಿತ್ತು ಅಂತ ಅಂದರೆ ಆ ನೋವು (Pain) ಆಕೆಯ ಮನಸ್ಸಿನಲ್ಲಿ ಆಳವಾಗಿ ಬೇರೊರುತ್ತದೆ. ಇಲ್ಲಿಯೂ ಸಹ ಅಂತಹದೇ ಒಂದು ಘಟನೆ ನಡೆದಿದ್ದು, ಇದರಲ್ಲಿ 16 ತಿಂಗಳು ತುಂಬಿದ ಮಗುವಿನ ತಲೆಗೆ ಪೆಟ್ಟಾದ ನಂತರ ಮೆದುಳು ನಿಷ್ಕ್ರಿಯಗೊಂಡಿದೆ. ಈ ಅಂಬೆಗಾಲಿಡುವ ಮಗುವಿನ ಕುಟುಂಬವು ಮಗುವಿನ ಅಂಗಾಂಗಗಳನ್ನು ಬೇರೆ ಅವಶ್ಯಕವಾಗಿರುವ ಮಕ್ಕಳಿಗೆ ದಾನ (Donate) ಮಾಡಲು ನಿರ್ಧರಿಸಿದ ನಂತರ ಬೇರೆ ಇನ್ನೆರಡು ಚಿಕ್ಕ ಮಕ್ಕಳ ಜೀವಗಳನ್ನು ಉಳಿಸಲು ಸಾಧ್ಯವಾಯಿತು.

ಬಿದ್ದು ಗಂಭೀರ ಗಾಯಗೊಂಡ ಮಗು ಸಾವು
ಆಗಸ್ಟ್ 17ರಂದು ಬೆಳಿಗ್ಗೆ ಮಾಸ್ಟರ್ ರಿಶಾಂತ್ ತನ್ನ ಮೊದಲ ಹೆಜ್ಜೆಗಳನ್ನು ಇಡಲು ಪ್ರಾರಂಭಿಸಿದ್ದನು, ಆಗ ಬಿದ್ದು ಗಂಭೀರವಾಗಿ ಗಾಯಗೊಂಡಿತ್ತು. ವೃತ್ತಿಯಲ್ಲಿ ಖಾಸಗಿ ಗುತ್ತಿಗೆದಾರರಾಗಿದ್ದ ಅವರ ತಂದೆ ಉಪಿಂದರ್ ಅವರು ಕೆಲಸಕ್ಕೆ ಹೋಗುತ್ತಿದ್ದಾಗ ಅವರಿಗೆ ಈ ವಿಷಯ ತಿಳಿಯುತ್ತದೆ. ಅವರು ಹಿಂತಿರುಗಿ ಬಂದು ಮಗುವನ್ನು ಜಮುನಾ ಪಾರ್ಕ್ ನಲ್ಲಿರುವ ತಮ್ಮ ಮನೆಯ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು.

ಆದರೆ ಮಗುವಿನ ಸ್ಥಿತಿ ಸುಧಾರಿಸದಿದ್ದಾಗ, ಅದರ ತಲೆಗೆ ತೀವ್ರವಾದ ಗಾಯಗಳೊಂದಿಗೆ ಏಮ್ಸ್ ಜೈ ಪ್ರಕಾಶ್ ನಾರಾಯಣ್ ಅಪೆಕ್ಸ್ ಟ್ರಾಮಾ ಸೆಂಟರ್ ಗೆ ದಾಖಲಿಸಿದರು, ಅಲ್ಲಿ ಮಗು ಆಗಸ್ಟ್ 24 ರಂದು ಕೊನೆಯುಸಿರೆಳೆದಿದೆ ಎಂದು ವೈದ್ಯರು ಘೋಷಿಸಿದ್ದಾರೆ.

ರಿಶಾಂತ್ ಅವರ ಅಂಗಗಳು ಇತರ ಮಕ್ಕಳಿಗೆ ದಾನ 
ಏಮ್ಸ್ ನ ಆರ್ಗನ್ ರಿಟ್ರೈವಲ್ ಬ್ಯಾಂಕಿಂಗ್ ಆರ್ಗನೈಸೇಷನ್ (ಒಆರ್‌ಬಿಒ) ವೈದ್ಯರು ಮತ್ತು ಕಸಿ ಸಂಯೋಜಕರು ಮಗುವನ್ನು ಕಳೆದುಕೊಂಡ ದುಃಖದಲ್ಲಿ ಇದ್ದಂತಹ ಕುಟುಂಬದೊಂದಿಗೆ ಕುಳಿತು, ಅವರೊಡನೆ ಮಾತನಾಡಿ ಸಲಹೆ ನೀಡಿದರು ಮತ್ತು ರಿಶಾಂತ್ ಅವರ ಅಂಗಗಳು ಇತರ ಮಕ್ಕಳಿಗೆ ದಾನ ಮಾಡಬಹುದು ಅಂತ ಹೇಳಿದರು.

ಇದನ್ನೂ ಓದಿ: Ganesh Chaturthi: ಮಗಳ ಸ್ಕೂಲ್ ಫೀಸ್ ಪಾವತಿಸಲು ಖೈದಿಯಿಂದ ಗಣೇಶನ ಮೂರ್ತಿ ತಯಾರಿಸಿ ಮಾರಾಟ!

ರಿಶಾಂತ್ ಅವರ ಅಂಗಾಂಗಗಳನ್ನು ಹೇಗೆ ಬೇರೆ ಮಕ್ಕಳಿಗೆ ಕೊಡಬಹುದು ಮತ್ತು ಇತರ ಮಕ್ಕಳಿಗೆ ಆ ಅಂಗಾಂಗಗಳನ್ನು ಕಸಿ ಮಾಡುವುದರ ಮೂಲಕ ಅವರ ಜೀವನಕ್ಕೆ ಒಂದು ದಾರಿ ಮಾಡಿಕೊಡಬಹುದು ಎಂದು ಕುಟುಂಬವು ಅರ್ಥ ಮಾಡಿಕೊಂಡಾಗ, ಅವರು ವಿರೂಪಗೊಳ್ಳದೆ, ಅವರ ಅಂಗಾಂಗಗಳನ್ನು ದಾನ ಮಾಡಲು ಹೃತ್ಪೂರ್ವಕವಾಗಿ ಒಪ್ಪಿಕೊಂಡರು.

ಈ ಬಗ್ಗೆ ಮಗುವಿನ ತಂದೆ ದುಃಖದಿಂದ ಏನು ಹೇಳಿದ್ದಾರೆ ನೋಡಿ
"ಬೇಬಿ ರಿಶಾಂತ್ ನಮ್ಮ ಆರನೇ ಮತ್ತು ಕಿರಿಯ ಮಗು. ನಾವು ಮತ್ತು ಅವನ ಐದು ಹಿರಿಯ ಸಹೋದರಿಯರು ಅವನನ್ನು ತುಂಬಾನೇ ಪ್ರೀತಿಸುತ್ತಿದ್ದರು. ಒಂದು ದಿನ ಬೆಳಿಗ್ಗೆ ನಾನು ಕೆಲಸಕ್ಕೆ ಹೊರಡುವಲ್ಲಿ ನಿರತನಾಗಿದ್ದೆ ಮತ್ತು ನನ್ನ ಮಗುವನ್ನು ನನ್ನ ತೋಳುಗಳಲ್ಲಿ ಎತ್ತಿಕೊಳ್ಳುವುದಕ್ಕೂ ಸಹ ಸಾಧ್ಯವಾಗಲಿಲ್ಲ. ನಾವು ಅವನನ್ನು ಕಳೆದು ಕೊಂಡಿದ್ದೇವೆ ಎಂದು ನನ್ನ ಹೃದಯ ಒಪ್ಪಿಕೊಳ್ಳುತ್ತಿಲ್ಲ. ಆದರೆ ಅವರ ಅಂಗಾಂಗಗಳು ಇತರ ಜೀವಗಳನ್ನು ಉಳಿಸಲು ಸಾಧ್ಯವಾದರೆ, ನಾವು ಅವುಗಳನ್ನು ದಾನ ಮಾಡಬೇಕು ಎಂದು ನಾನು ಭಾವಿಸಿದೆ" ಎಂದು ರಿಶಾಂತ್ ತಂದೆ ಉಪಿಂದರ್ ಹೇಳಿದರು.

ಎರಡೂ ಮೂತ್ರಪಿಂಡಗಳನ್ನು ಐದು ವರ್ಷದ ಬಾಲಕನಿಗೆ ಕಸಿ 
ವೈದ್ಯರ ಪ್ರಕಾರ, ಅಂಗಾಂಗಗಳನ್ನು ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆಗೆ ನೀಡಿದೆ. ರಿಶಾಂತ್ ಅವರ ಎರಡೂ ಮೂತ್ರಪಿಂಡಗಳನ್ನು ಏಮ್ಸ್ ನಲ್ಲಿ ಐದು ವರ್ಷದ ಬಾಲಕನಿಗೆ ಕಸಿ ಮಾಡಲಾಗಿದ್ದು, ಅವರ ಯಕೃತ್ತು ಅನ್ನು ಮ್ಯಾಕ್ಸ್ ಆಸ್ಪತ್ರೆಯಲ್ಲಿ ಆರು ತಿಂಗಳ ಹೆಣ್ಣು ಮಗುವಿಗೆ ಕಸಿ ಮಾಡಲಾಗಿದೆ. ಅವರ ಹೃದಯ ಕವಾಟಗಳು ಮತ್ತು ಕಾರ್ನಿಯಾಗಳನ್ನು ಏಮ್ಸ್ ನಲ್ಲಿ ಹಾಗೆಯೇ ಸಂರಕ್ಷಿಸಿ ಇಡಲಾಗಿದೆ.

ಒಆರ್‌ಬಿಒ ನ ಮುಖ್ಯಸ್ಥರಾದ ಡಾ. ಆರತಿ ವಿಜ್ ಅವರು “ಯಶಸ್ವಿ ಅಂಗಾಂಗ ಮರು ಪಡೆಯುವಿಕೆ ಮತ್ತು ಕಸಿ ಮಾಡುವಲ್ಲಿ ಸಂಭಾವ್ಯ ದಾನಿಯ ಗುರುತಿಸುವಿಕೆ ಮತ್ತು ನಿರ್ವಹಣೆ ತುಂಬಾನೇ ಮುಖ್ಯವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ:  Shocking News: ಛೇ! ಬೆಕ್ಕಿನ ಕೂಗಿಗೆ ಅಮಾಯಕ ಬಲಿ! ದಾರುಣ ಘಟನೆ ಬಯಲಿಗೆ

“ಮೃತನ ಕುಟುಂಬದ ಒಪ್ಪಿಗೆಯನ್ನು ಪಡೆಯುವುದರಿಂದ ಹಿಡಿದು ಅಂಗಾಂಗಗಳನ್ನು ಸುರಕ್ಷಿತವಾಗಿ ಮರಳಿ ಪಡೆಯುವುದು, ಅವುಗಳನ್ನು ಹಂಚಿಕೆ ಮಾಡುವುದು ಮತ್ತು ಸಾಗಿಸುವುದು ಹಲವಾರು ತಂಡಗಳು ಮತ್ತು ಸ್ಮಾರ್ಟ್ ಸಮನ್ವಯವನ್ನು ಒಳಗೊಂಡಿರುತ್ತದೆ. ಚಿಕಿತ್ಸೆ ನೀಡುವ ವೈದ್ಯರು, ಕಸಿ ಸಂಯೋಜಕರು, ಕಸಿ ಮಾಡುವ ವೈದ್ಯರ ತಂಡಗಳು, ಒಟಿ ತಂಡ, ವಿಧಿವಿಜ್ಞಾನ ವಿಭಾಗ, ಬೆಂಬಲ ವಿಭಾಗಗಳು, ನೋಟೋ ಮತ್ತು ಪೊಲೀಸ್ ಇಲಾಖೆಗಳು ಒಂದಕ್ಕೊಂದು ಸಮನ್ವಯವಾಗಿ ಕೆಲಸ ಮಾಡಿದರೆ ಮಾತ್ರ ಈ ಇಡೀ ಪ್ರಕ್ರಿಯೆಯು ಪರಿಣಾಮಕಾರಿಯಾಗಿರುತ್ತದೆ. ಈ ರೀತಿಯಾಗಿ ಈ ಡಬಲ್ ಕಸಿ ಮಾಡಲು ಸಾಧ್ಯವಾಯಿತು" ಎಂದು ಅವರು ಹೇಳಿದರು.
Published by:Ashwini Prabhu
First published: