• Home
 • »
 • News
 • »
 • national-international
 • »
 • Grain ATM: 'ಧಾನ್ಯ ವಿತರಣಾ ಎಟಿಎಂ' ಆರಂಭಕ್ಕೆ ಶೀಘ್ರದಲ್ಲೇ ಚಾಲನೆ!

Grain ATM: 'ಧಾನ್ಯ ವಿತರಣಾ ಎಟಿಎಂ' ಆರಂಭಕ್ಕೆ ಶೀಘ್ರದಲ್ಲೇ ಚಾಲನೆ!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ರಾಜ್ಯ ಸರ್ಕಾರವು ʼರಾಷ್ಟ್ರೀಯ ಮತ್ತು ರಾಜ್ಯ ಆಹಾರ ಭದ್ರತಾ ಕಾರ್ಯಕ್ರಮಗಳʼ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳಿಗೆ ಸ್ವಯಂಚಾಲಿತ ಟೆಲ್ಲರ್ ಯಂತ್ರಗಳ (ಎಟಿಎಂ) ಮೂಲಕ ಪಡಿತರ ವಿತರಿಸುವ ಯೋಜನೆಯನ್ನು ಶೀಘ್ರದಲ್ಲಿಯೇ ಆರಂಭಿಸಲು ಹಸಿರು ನಿಶಾನೆ ಹೊರಡಿಸಿದೆ.

 • News18 Kannada
 • Last Updated :
 • Odisha (Orissa), India
 • Share this:

ಭುವನೇಶ್ವರ: ರಾಜ್ಯ ಸರ್ಕಾರವು ʼರಾಷ್ಟ್ರೀಯ ಮತ್ತು ರಾಜ್ಯ ಆಹಾರ ಭದ್ರತಾ ಕಾರ್ಯಕ್ರಮಗಳʼ ವ್ಯಾಪ್ತಿಗೆ ಒಳಪಡುವ ಫಲಾನುಭವಿಗಳಿಗೆ ಸ್ವಯಂಚಾಲಿತ ಟೆಲ್ಲರ್ ಯಂತ್ರಗಳ (ಎಟಿಎಂ) (ATM) ಮೂಲಕ ಪಡಿತರ ವಿತರಿಸುವ ಯೋಜನೆಯನ್ನು ಶೀಘ್ರದಲ್ಲಿಯೇ ಆರಂಭಿಸಲು ಹಸಿರು ನಿಶಾನೆ ಹೊರಡಿಸಿದೆ. ಈ ಕುರಿತು ಮಂಗಳವಾರದಂದು ವಿಧಾನಸಭೆಗೆ ಮಾಹಿತಿ ನೀಡಿದ ʼಆಹಾರ ಸರಬರಾಜು ಮತ್ತು ಗ್ರಾಹಕರ ಕಲ್ಯಾಣʼ (Food supply and consumer welfare) ಸಚಿವ ಅತಾನು ಸಬ್ಯಸಾಚಿ ನಾಯಕ್, “ಮೊದಲ ಹಂತದಲ್ಲಿ ರಾಜ್ಯದ ನಗರ ಪ್ರದೇಶಗಳಲ್ಲಿ ಈ ಸೌಲಭ್ಯವನ್ನು ಪರಿಚಯಿಸಲಾಗುವುದು. ಹಾಗೆಯೇ ಈ ಸೇವೆಯು ಆರಂಭದಲ್ಲಿ ಭುವನೇಶ್ವರದಲ್ಲಿ (Bhubaneswar) ಮಾತ್ರ ಲಭ್ಯವಾಗಲಿದೆ” ಎಂದು ಅವರು ತಿಳಿಸಿದ್ದಾರೆ.


ಒಡಿಶಾದ ಮೊದಲ ಧಾನ್ಯ ವಿತರಣಾ ಎಟಿಎಂ
ಇದು ಒಡಿಶಾದ ಮೊದಲ ಧಾನ್ಯ ವಿತರಣಾ ಎಟಿಎಂ ಆಗಲಿದೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾಗಿ ಪೂರ್ಣಗೊಂಡ ಬಳಿಕ ರಾಜ್ಯಾದ್ಯಂತ ಈ ಆಹಾರ ಸರಬರಾಜು ಯಂತ್ರಗಳನ್ನು ಅಳವಡಿಸಲು ಯೋಜನೆಗಳನ್ನು ರೂಪಿಸಲಾಗುವುದು. ಇದರಿಂದ ಗ್ರಾಹಕರಿಗೆ ಅನುಕೂಲವಾಗುವುದಲ್ಲದೆ, ಫಲಾನುಭವಿಗಳಿಗೆ ಸರಿಯಾದ ಪ್ರಮಾಣದ ಪಡಿತರವನ್ನು ತೆಗೆದುಕೊಳ್ಳಲು ನಿಜಕ್ಕೂ ಒಂದು ವರದಾನವಾಗಿ ಈ ʼಗ್ರೇನ್‌ ಎಟಿಎಂʼ ಕಾರ್ಯ ನಿರ್ವಹಿಸುವುದರ ಜೊತೆಗೆ ಫಲಾನುಭವಿಗಳಿಗೆ ಸಹಾಯ ಮಾಡಲಿದೆ.


ಹಾಗೆಯೇ ಆಹಾರ ವಿತರಣಾ ವ್ಯವಸ್ಥೆಯಲ್ಲಿ ಇಷ್ಟು ದಿನ ಕೆಲವು ಕಡೆ ಮೋಸ-ವಂಚನೆಗಳು ನಡೆಯುತ್ತಲೇ ಇದ್ದವು. ಆದರೆ ಇನ್ನು ಮುಂದೆ ಈ ರೀತಿಯ ಅಪಾರದರ್ಶಕತೆಗೆ ದಾರಿ ಮಾಡಿಕೊಡದಂತೆ ಈ ʼಗ್ರೇನ್‌ ಎಟಿಎಂʼ ನಿಂದ ಪಡಿತರದಲ್ಲಿ ಪಾರದರ್ಶಕತೆ ಇರುತ್ತದೆ ಮತ್ತು ಪ್ರತಿಯೊಬ್ಬರ ಸಮಯವನ್ನು ಈ ಎಟಿಎಂ ಉಳಿಸುವುದರಲ್ಲಿ ಸಂಶಯವಿಲ್ಲ ಎಂದು ಸಚಿವರು ತಿಳಿಸಿದ್ದಾರೆ.


ಈ ಸೇವೆಯನ್ನು ಪಡೆಯಲು ಫಲಾನುಭವಿಗಳಿಗೆ ವಿಶೇಷ ಕೋಡ್ ಕಾರ್ಡ್ ಒಂದನ್ನು ನೀಡಲಾಗುತ್ತದೆ. ಇದು ಎಟಿಎಂ ಟಚ್ ಸ್ಕ್ರೀನ್ ಹೊಂದಿರುವ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಹೊಂದಿದ್ದು, ಇದಕ್ಕೆ ಫಲಾನುಭವಿಯು ಆಧಾರ್ ಕಾರ್ಡ್‌ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.


ಈ ಕಾರ್ಡ್ ನ ಉದ್ದೇಶವೇನು
ಈ ಸೇವೆಯನ್ನು ಬಯೋಮೆಟ್ರಿಕ್ ದೃಢೀಕರಣದ ಆಧಾರದ ಮೇಲೆ, ಫಲಾನುಭವಿಗಳಿಗೆ ಸರ್ಕಾರವು ನಿಗದಿಪಡಿಸಿದ ಆಹಾರಧಾನ್ಯಗಳನ್ನು ಯಂತ್ರಗಳ ಮೂಲಕ ನೀಡಲಾಗುತ್ತದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಮತ್ತು ರಾಜ್ಯ ಆಹಾರ ಭದ್ರತಾ ಕಾರ್ಯಕ್ರಮ (SFSP) ಅಡಿಯಲ್ಲಿ ಹೆಚ್ಚಿನ ಫಲಾನುಭವಿಗಳಿಗೆ ಅಕ್ಕಿಯನ್ನು ನೀಡಲಾಗುತ್ತದೆ.


ಇದನ್ನೂ ಓದಿ: Jio Institute: ಮೊದಲ ಬ್ಯಾಚ್‌ ವಿದ್ಯಾರ್ಥಿಗಳನ್ನು ಸ್ವಾಗತಿಸಿದ ಜಿಯೋ ಇನ್‌ಸ್ಟಿಟ್ಯೂಟ್


2021 ರಲ್ಲಿ ರಾಜ್ಯ ಸರ್ಕಾರವು ವಿಶ್ವ ಆಹಾರ ಕಾರ್ಯಕ್ರಮದೊಂದಿಗೆ (WFP) ಹಲವಾರು ಪಾಲುದಾರಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ. ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಭತ್ತ ಸಂಗ್ರಹಣೆ, ಧಾನ್ಯಗಳ ಎಟಿಎಂ ಯಂತ್ರ ಮತ್ತು ಸ್ಮಾರ್ಟ್ ಮೊಬೈಲ್ ಶೇಖರಣಾ ಘಟಕಗಳ ರೂಪಾಂತರವು ಒಪ್ಪಂದದ ಅಡಿಯಲ್ಲಿ ತೆಗದುಕೊಂಡಿರುವ ಕೆಲವು ಪ್ರಮುಖ ಯೋಜನೆಗಳಾಗಿವೆ.


ದೇಶದ ಮೊದಲ 'ಗ್ರೇನ್ ಎಟಿಎಂ' ಅಥವಾ ʼಧಾನ್ಯದ ಎಟಿಎಂʼ ಅನ್ನು ಕಳೆದ ವರ್ಷ ಹರಿಯಾಣದ ಗುರುಗ್ರಾಮ್‌ನಲ್ಲಿ ಸ್ಥಾಪಿಸಲಾಗಿತ್ತು. ಈ ಯಂತ್ರವನ್ನು ವಿಶ್ವ ಆಹಾರ ಕಾರ್ಯಕ್ರಮದ ಅಡಿಯಲ್ಲಿ ಸ್ಥಾಪಿಸಲಾಗಿದೆ ಮತ್ತು ಇದನ್ನು 'ಸ್ವಯಂಚಾಲಿತ, ಬಹು ಸರಕು, ಧಾನ್ಯ ವಿತರಣಾ ಯಂತ್ರ' ಎಂದು ಕರೆಯಲಾಗುತ್ತದೆ. ಉತ್ತರಾಖಂಡ ಸರ್ಕಾರವು ಕೂಡ ʼಗ್ರೇನ್ ಎಟಿಎಂʼ ಅನ್ನು ಪರಿಚಯಿಸಿದೆ.


ಈ ʼಗ್ರೇನ್‌ ಎಟಿಎಂʼ ಹೇಗೆ ಕಾರ್ಯ ನಿರ್ವಹಿಸುತ್ತದೆ?


 • ಎಟಿಎಂನಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಇರಲಿದೆ.

 • ಫಲಾನುಭವಿಯು ತನ್ನ ಆಧಾರ್ ಅಥವಾ ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಬೇಕು.

 • ಇದನ್ನು ದೃಢೀಕರಿಸಿದ ನಂತರ, ಎಟಿಎಂ ಮೂಲಕ ಧಾನ್ಯಗಳನ್ನು ಒದಗಿಸಲಾಗುತ್ತದೆ.


ಇದನ್ನೂ ಓದಿ:  Water Police: ಇಲ್ಲಿ ನೀರಿನ ಬಳಕೆಗೂ ಇದೆ ಮಿತಿ, ಸ್ವಲ್ಪ ಯಾಮಾರಿದ್ರೂ ದಂಡ ಗ್ಯಾರೆಂಟಿ


ಇಷ್ಟು ದಿನ ಪಡಿತರ ತಗೊಬೇಕು ಎಂದರೆ ಪಡಿತರ ಕೊಡೊ ಸ್ಥಳದಲ್ಲಿ ಗಂಟೆಗಟ್ಟಲೆ ಕಾಯುವುದು ಬಡ ಜನರಿಗೆ ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ಆದರೆ ಈ ಗ್ರೇನ್‌ ಎಟಿಎಂ ಬಂದ ಮೇಲೆ ಬಡವರಿಗೆ ಸರಿಯಾದ ಸಮಯಕ್ಕೆ ಸೂಕ್ತ ಪ್ರಮಾಣದ ಆಹಾರವು ಯಾವುದೇ ಮೋಸ -ವಂಚನೆ ಇಲ್ಲದೇ ಸಿಗುವುದು ನಿಜಕ್ಕೂ ಒಂದು ಸಂತಸದ ಸಂಗತಿಯಾಗಿದೆ. ನಮ್ಮ ಕರ್ನಾಟಕದಲ್ಲೂ ಈ ಯೋಜನೆಯನ್ನು ಕಾರ್ಯ ರೂಪಕ್ಕೆ ತರಲು ರಾಜ್ಯ ಸರ್ಕಾರ ಯೋಜನೆ ಹಾಕುತ್ತಿದೆ. ಆದರೆ ಏನು ಆಗುತ್ತೋ ಏನೋ ಮುಂದೆ ನೋಡೊಣ.

Published by:Ashwini Prabhu
First published: