ಹಬ್ಬದ ಸೀಸನ್‌ಗೆ ಮುಂಚಿತವಾಗಿ ನವೀನ್ ಪಟ್ನಾಯಕ್ (Naveen Patnaik) ನೇತೃತ್ವದ ಒಡಿಸ್ಸಾ ಸರಕಾರವು, ಎಲ್ಲಾ ರಾಜ್ಯ ಸರಕಾರಿ ನೌಕರರು (Government Employees) ಹಾಗೂ ಪಿಂಚಣಿದಾರರ ತುಟ್ಟಿ ಭತ್ಯೆಯನ್ನು (DA) 3% ದಷ್ಟು ಹೆಚ್ಚಿಸಲು ಘೋಷಿಸಿದೆ. ಪ್ರಸ್ತಾಪನೆಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅಂಗೀಕಾರ ನೀಡಿದ್ದಾರೆ. ಇದರೊಂದಿಗೆ ಭತ್ಯೆಯು 31 % ದಿಂದ 34% ಕ್ಕೆ ಏರಿಕೆಯಾಗಿದ್ದು ಒಡಿಸ್ಸಾ ಸರಕಾರದ (Odisha Government) ಸೂಚನಗೆ ಅನುಸಾರವಾಗಿ ತುಟ್ಟಿಭತ್ಯೆ ಹೆಚ್ಚಳವು ಜವರಿ 1, 2022 ರಿಂದ ಪೂರ್ವಾನ್ವಯವಾಗಿ ಅನ್ವಯವಾಗಲಿದೆ. ತುಟ್ಟಿ ಭತ್ಯೆ ಹೆಚ್ಚಳವು 4 ಲಕ್ಷ ಸರಕಾರಿ ನೌಕರರು ಹಾಗೂ 3.5 ಲಕ್ಷ ಪಿಂಚಣಿದಾರರಿಗೆ (Pensioners) ಲಾಭವನ್ನುಂಟು ಮಾಡಲಿದೆ. ದುರ್ಗಾ ಪೂಜೆಗೂ ಮುನ್ನವೇ ಸರಕಾರ ರಾಜ್ಯ ಸರಕಾರಿ ನೌಕರರ ತುಟ್ಟಿ ಭತ್ಯೆಯನ್ನು ಹೆಚ್ಚಿಸಿದ್ದು ನಿಜಕ್ಕೂ ಗಮನಾರ್ಹ ಅಂಶವಾಗಿದೆ.
ತುಟ್ಟಿಭತ್ಯೆ
ಹಣದುಬ್ಬರದ ಕಾರಣದಿಂದ ಹೆಚ್ಚಿದ ಜೀವನ ವೆಚ್ಚವನ್ನು ಸರಿದೂಗಿಸಲು ಪಾವತಿಸುವ ಒಬ್ಬ ವ್ಯಕ್ತಿಯ ಸಂಬಳದ ಒಂದು ಅಂಶವಾಗಿದೆ. ಪ್ರತೀ ವರ್ಷ ತುಟ್ಟಿಭತ್ಯೆಯನ್ನು ಅರೆ ವಾರ್ಷಿಕದಂತೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ಮಾರ್ಚ್‌ನಲ್ಲಿ, ಕೇಂದ್ರವು ತನ್ನ ಉದ್ಯೋಗಿಗಳಿಗೆ 3% ತುಟ್ಟಿಭತ್ಯೆ ಏರಿಕೆಯನ್ನು ಘೋಷಿಸಿದ್ದು, ಪ್ರಸ್ತುತ 34% ದರವನ್ನು ಸೂಚಿಸುತ್ತದೆ.
ತುಟ್ಟಿಭತ್ಯೆ ಹೆಚ್ಚಳವನ್ನು ಹೇಗೆ ನಿರ್ಧರಿಸಲಾಗುತ್ತದೆ?
ಶಿಮ್ಲಾದಲ್ಲಿರುವ ಕಾರ್ಮಿಕ ಸಂಸ್ಥೆ ಬಿಡುಗಡೆ ಮಾಡುವ AICPI-IW ಅಂಕಿ ಅಂಶವನ್ನು ತುಟ್ಟಿ ಭತ್ಯೆ ಹೆಚ್ಚಳವು ಆಧರಿಸಿದೆ. ಆಗಸ್ಟ್‌ನಲ್ಲಿ ತುಟ್ಟಿ ಭತ್ಯೆ ಹೆಚ್ಚಳದ ಲಾಭ ಪಡೆದಿರುವ ಇತರ ರಾಜ್ಯಗಳೆಂದರೆ
ಇದನ್ನೂ ಓದಿ: Bihar Government: 'ನೋ-ಬ್ಯಾಗ್ ಡೇ' ಮತ್ತು ಕಡ್ಡಾಯ ಸ್ಪೋರ್ಟ್ ಪೀರಿಯಡ್ ಪರಿಚಯಿಸಲು ಸಜ್ಜಾಗ್ತಿದೆ ಬಿಹಾರ ಸರ್ಕಾರ
1) ಛತ್ತೀಸ್‌ಗಢ್ ತುಟ್ಟಿಭತ್ಯೆ 6% ಹೆಚ್ಚಳ
ಆಗಸ್ಟ್ 16 2022 ರಂದು, ಛತ್ತೀಸ್‌ಗಢ ಸರಕಾರವು 7 ನೇ ವೇತನ ಆಯೋಗದ ಅಡಿಯಲ್ಲಿ ತನ್ನ ಉದ್ಯೋಗಿಗಳಿಗೆ DA ಯನ್ನು 6% ರಿಂದ 28% ರಷ್ಟು ಹೆಚ್ಚಿಸಿದೆ.
2) ಗುಜರಾತ್‌ನಲ್ಲಿ ತುಟ್ಟಿಭತ್ಯೆ ಹೆಚ್ಚಳ
ಗುಜರಾತ್ ಸರ್ಕಾರವು 7 ನೇ ವೇತನ ಆಯೋಗದ ಅಡಿಯಲ್ಲಿ ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ/ತುಟ್ಟಿ ಪರಿಹಾರ ಭತ್ಯೆಯನ್ನು 3% ರಷ್ಟು ಹೆಚ್ಚಿಸಿದೆ. ರಾಜ್ಯದಲ್ಲಿ ಡಿಎ ಹೆಚ್ಚಳವು ಗುಜರಾತ್ ಸರಕಾರದ ಸುಮಾರು 9.38 ಲಕ್ಷ ನೌಕರರು, ಪಂಚಾಯತ್ ಸೇವೆ ಮತ್ತು ಪಿಂಚಣಿದಾರರಿಗೆ ಪ್ರಯೋಜನವನ್ನು ಒದಗಿಸುತ್ತದೆ.
3) ಮಹಾರಾಷ್ಟ್ರದಲ್ಲಿ ತುಟ್ಟಿಭತ್ಯೆ ಹೆಚ್ಚಳ
ಮಹಾರಾಷ್ಟ್ರ ಸರಕಾರವು ತನ್ನ ಉದ್ಯೋಗಿಗಳಿಗೆ 3% ದಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿದೆ. ಇದರಿಂದ ಮಹಾರಾಷ್ಟ್ರ ಸರಕಾರಿ ನೌಕರರ ತುಟ್ಟಿಭತ್ಯೆಯು 34% ಕ್ಕೆ ಏರಿಕೆಯಾಗಿದ್ದು ಸರಕಾರಿ ನೌಕರರಿಗೆ ಸಮವಾಗಿದೆ.
4) ತಮಿಳು ನಾಡು ತುಟ್ಟಿಭತ್ಯೆ ಹೆಚ್ಚಳ
ಸರಕಾರಿ ಉದ್ಯೋಗಿಗಳು, ಪಿಂಚಣಿದಾರರು ಹಾಗೂ ಕೌಟುಂಬಿಕ ಪಿಂಚಣಿದಾರರಿಗೆ ತಮಿಳು ನಾಡು ಸರಕಾರವು ತುಟ್ಟಿ ಭತ್ಯೆ ಹಾಗೂ ಪರಿಹಾರ ಭತ್ಯೆಯಲ್ಲಿ 3% ಹೆಚ್ಚಳವನ್ನು ಘೋಷಿಸಿದೆ. ಇದರಿಂದ ತಮಿಳುನಾಡು ನೌಕರರ ತುಟ್ಟಿಭತ್ಯೆ ದರವು 34% ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: Congress President Election: ಗಾಂಧಿ ಕುಟುಂಬದ ಹೊರಗಿನವರು ಕಾಂಗ್ರೆಸ್ ಅಧ್ಯಕ್ಷರಾಗ್ತಾರಾ?
ತುಟ್ಟಿಭತ್ಯೆ ಹೆಚ್ಚಿಸಿದ ಕೇಂದ್ರ ಸರಕಾರ
1.16 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗುವಂತೆ ಬೆಲೆ ಏರಿಕೆಯನ್ನು ಪರಿಗಣಿಸಲು ಕೇಂದ್ರ ಸಚಿವ ಸಂಪುಟವು ಮಾರ್ಚ್ 30 ರಂದು ತುಟ್ಟಿಭತ್ಯೆ (ಡಿಎ) ಮತ್ತು ಪರಿಹಾರ ಭತ್ಯೆಯನ್ನು (ಡಿಆರ್) ಹೆಚ್ಚಿಸಿದೆ. ಹೆಚ್ಚಳದ ದರವು 3% ಆಗಿದ್ದು ಒಟ್ಟಾರೆ ದರವು 34% ರಷ್ಟಿದೆ.
ಕೇಂದ್ರ ಸರಕಾರಿ ನೌಕರರಿಗೆ ಎರಡು ಬಾರಿ ಪರಿಷ್ಕರಣೆ
ಕೇಂದ್ರ ಸರಕಾರಿ ನೌಕರರ ತುಟ್ಟಿಭತ್ಯೆಯನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ಮೊದಲನೆಯನ್ನು ಜನವರಿಯಿಂದ ಜೂನ್‌ವರೆಗೆ ನೀಡಲಾಗುತ್ತದೆ ಎರಡನೆಯದನ್ನು ಜುಲೈನಿಂದ ಡಿಸೆಂಬರ್‌ವರೆಗೆ ಪರಿಗಣಿಸಲಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ