CoronaVirus: ದೆಹಲಿಯಲ್ಲಿ ನಿಯಂತ್ರಣಕ್ಕೆ ಸಿಗದ ಕೊರೋನಾ ಸೋಂಕು; ಏರಿಕೆಯಾಗುತ್ತಲೇ ಇದೆ ಸಾವಿನ ಸಂಖ್ಯೆ

ಭಾರತದಲ್ಲಿ ಈವರೆಗೆ 9,36,181 ಜನರಿಗೆ ಕೊರೋನಾ ಸೋಂಕು ಆವರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಈ ಸೋಂಕಿಗೆ 24,309 ಜನ ಮೃತಪಟ್ಟಿದ್ದಾರೆ. ಇನ್ನೂ ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 3176  ಹೊಸ ಕೊರೋನಾ ಪ್ರಕರಣಗಳು ಕಂಡುಬಂದಿವೆ. ಇದು ಈವರೆಗಿನ ದಾಖಲೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ.

news18-kannada
Updated:July 16, 2020, 7:49 AM IST
CoronaVirus: ದೆಹಲಿಯಲ್ಲಿ ನಿಯಂತ್ರಣಕ್ಕೆ ಸಿಗದ ಕೊರೋನಾ ಸೋಂಕು; ಏರಿಕೆಯಾಗುತ್ತಲೇ ಇದೆ ಸಾವಿನ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ನವ ದೆಹಲಿ (ಜುಲೈ 16); ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ಹಿಡಿತಕ್ಕೆ ಸಿಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಪರಿಸ್ಥಿತಿ ಉಲ್ಭಣಿಸುತ್ತಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ತಲೆ ನೋವಿನ ವಿಚಾರವಾಗಿ ಬದಲಾಗಿದೆ. ಹಲವಾರು ಮುಂಜಾಗ್ರತಾ ಕ್ರಮಗಳ ನಡುವೆಯೂ ನಿನ್ನೆ ಒಂದೇ ದಿನ ಸುಮಾರು 1647 ಪ್ರಕರಣಗಳು ಪತ್ತೆಯಾಗಿವೆ. ಇನ್ನೂ 41ಜನ ಮಾರಣಾಂತಿಕ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ದೆಹಲಿಯಲ್ಲಿ ಕೊರೋನಾ ಸೋಂಕು ನಿಯಂತ್ರಿಸುವ ಸಲುವಾಗಿ ಅರವಿಂದ ಕೇಜ್ರಿವಾಲ್‌ ಸರ್ಕಾರ ಕೇಂದ್ರದ ಸಹಾಯದ ಮೊರೆ ಹೋಗಿತ್ತು. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಸಹ ಸಭೆ ನಡೆಸಿ ತಾವು ದೆಹಲಿಯ ಸಹಾಯಕ್ಕೆ ನಿಲ್ಲುವುದಾಗಿ ಸೂಚಿಸಿದ್ದರು. ಅದರಂತೆ ಸೋಂಕು ನಿಯಂತ್ರಣಕ್ಕೆ ಸಾಕಷ್ಟು ಹೊಸ ಕ್ರಮಗಳನ್ನು ಅಳವಡಿಸಲಾಗಿತ್ತು. ಅಲ್ಲದೆ, ಖಾಸಗಿ ಆಸ್ಪತ್ರೆಗಳನ್ನೂ ಸಹ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುವಂತೆ ಸೂಚಿಸಿ ಅದಕ್ಕೂ ದರಪಟ್ಟಿ ನಿಗದಿಪಡಿಸಲಾಗಿತ್ತು.

ಆದರೂ. ದೆಹಲಿ ಸೋಂಕಿ ಪ್ರಮಾಣ ಸರಾಸರಿ ದಿನಿದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಒಂದೇ ದಿನ ದೆಹಲಿಯಲ್ಲಿ  1,647 ಹೊಸ ಕೊರೊನಾ‌ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಕೊರೋನಾ ಪೀಡಿತರ ಸಂಖ್ಯೆ 1,16,993ಕ್ಕೆ ಏರಿಕೆಯಾಗಿದೆ. ಈ ಮೂಲಕ ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ ದೆಹಲಿ ಇದೆ ಎನ್ನಲಾಗುತ್ತಿದೆ.

ಇನ್ನೂ ದೆಹಲಿಯಲ್ಲಿ ಕೊರೋನಾದಿಂದಾಗಿ ನಿನ್ನೆ ಒಂದೇ ದಿನ 41 ಜನ ಮೃತಪಟ್ಟಿದ್ದಾರೆ. ಈ ಮೂಲಕ ದೆಹಲಿಯಲ್ಲಿ 3,487 ಜನ‌ ಕೊರೋನಾಗೆ ಬಲಿಯಾದಂತಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಭಾರತದಲ್ಲಿ ಈವರೆಗೆ 9,36,181 ಜನರಿಗೆ ಕೊರೋನಾ ಸೋಂಕು ಆವರಿಸಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ, ಈ ಸೋಂಕಿಗೆ 24,309 ಜನ ಮೃತಪಟ್ಟಿದ್ದಾರೆ. ಇನ್ನೂ ಕರ್ನಾಟಕದಲ್ಲಿ ನಿನ್ನೆ ಒಂದೇ ದಿನಕ್ಕೆ 3176  ಹೊಸ ಕೊರೋನಾ ಪ್ರಕರಣಗಳು ಕಂಡುಬಂದಿವೆ. ಇದು ಈವರೆಗಿನ ದಾಖಲೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 47,253ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ : ಕೊರೋನಾ ಸಂಕಷ್ಟದಲ್ಲೂ ಶಿಕ್ಷಕರಿಗೆ ತರಬೇತಿ ನೀಡುತ್ತಿರುವ ಡಯಟ್!
ಅಲ್ಲದೆ, ಈ ಸೋಂಕಿಗೆ 87 ಜನ ಮೃತಪಟ್ಟಿದ್ದು ಸಾವಿನ ಸಂಖ್ಯೆ 928ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಮಾತ್ರ ಸುಮಾರು ನಿನ್ನೆ 1900ಕ್ಕೂ ಅಧಿಕ ಹೊಸ ಪ್ರಕರಣಗಳು ಕಂಡು ಬಂದಿದೆ. ಲಾಕ್‌ಡೌನ್‌ ಜಾರಿಯ ನಡುವೆಯೂ ಈ ಪ್ರಮಾಣದಲ್ಲಿ ಸೋಂಕು ಪೀಡಿತರು ಕಂಡು ಬರುತ್ತಿರುವುದು ರಾಜ್ಯ ಸರ್ಕಾರಕ್ಕೂ ತಲೆ ನೋವಿನ ಸಂಗತಿಯಾಗಿದೆ ಎನ್ನಲಾಗುತ್ತಿದೆ.
Published by: MAshok Kumar
First published: July 16, 2020, 7:49 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading