• Home
  • »
  • News
  • »
  • national-international
  • »
  • Dog Bite: ಸಾಕುನಾಯಿ ಕಚ್ಚಿದ್ರೆ ಮಾಲೀಕರ ಜೇಬಿಗೆ ಕತ್ತರಿ, ಗಾಯಾಳುಗಳಿಗೆ ಕೊಡಲೇ ಬೇಕು 10 ಸಾವಿರ ರೂಪಾಯಿ!

Dog Bite: ಸಾಕುನಾಯಿ ಕಚ್ಚಿದ್ರೆ ಮಾಲೀಕರ ಜೇಬಿಗೆ ಕತ್ತರಿ, ಗಾಯಾಳುಗಳಿಗೆ ಕೊಡಲೇ ಬೇಕು 10 ಸಾವಿರ ರೂಪಾಯಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಕುನಾಯಿಗಳು ಕಚ್ಚಿದರೆ ಅದರ ಮಾಲೀಕರೇ ಘಟನೆಯ ಸಂಪೂರ್ಣ ಜವಾಬ್ದಾರಿ ಹೊರಬೇಕು. "ಅಯ್ಯೋ ನಮ್ ನಾಯಿ ಪಾಪದ್ದು ಕಣ್ರೀ, ಅಪರಿಚಿತರನ್ನು ನೋಡಿ ಗಾಬರಿಯಾಗಿದೆ ಅಷ್ಟೇ. ನಮ್ಮ ನಾಯಿಗೆ ವ್ಯಾಕ್ಸಿನ್ ಹಾಕಿಸಿದ್ದೀವಿ, ಏನೂ ಆಗಲ್ಲ ಹೆದರಬೇಡಿ" ಅಂತೆಲ್ಲ ಮಾತಿನಲ್ಲೇ ಸಮಾಧಾನ, ಸಬೂಬು ಹೇಳುವಂತಿಲ್ಲ!

ಮುಂದೆ ಓದಿ ...
  • News18 Kannada
  • Last Updated :
  • Uttar Pradesh, India
  • Share this:

ನೋಯ್ಡಾ, ಉತ್ತರ ಪ್ರದೇಶ: ಮನೆಯಲ್ಲಿ ಪ್ರೀತಿಯಿಂದ ಸಾಕುವ ನಾಯಿಗಳು (Pet Dogs) ಕೆಲವೊಮ್ಮೆ ಹೊರಗಡೆ ಹೋಗಿ ದಾಂಧಲೆ ಮಾಡುವುದು ಉಂಟು. ಮನೆಯಿಂದ ಹೊರಗೆ ಅಪರಿಚಿತರನ್ನು (strangers) ನೋಡಿ ಅವರ ಮೇಲೆ ದಾಳಿ (Attack) ಮಾಡುವ, ಕಚ್ಚುವ ಘಟನೆಗಳೂ ನಡೆಯುತ್ತವೆ. ಈ ರೀತಿ ಘಟನೆಗಳು ನಡೆದರೆ ಇನ್ಮುಂದೆ ಸಾಕುನಾಯಿಗಳ ಮಾಲೀಕರೇ (Owners) ಅದರ ಸಂಪೂರ್ಣ ಜವಾಬ್ದಾರಿ ಹೊರಬೇಕು. “ಅಯ್ಯೋ ನಮ್ ನಾಯಿ ಪಾಪದ್ದು ಕಣ್ರೀ, ಅಪರಿಚಿತರನ್ನು ನೋಡಿ ಗಾಬರಿಯಾಗಿದೆ ಅಷ್ಟೇ. ನಮ್ಮ ನಾಯಿಗೆ ವ್ಯಾಕ್ಸಿನ್ (Vaccine) ಹಾಕಿಸಿದ್ದೀವಿ, ಏನೂ ಆಗಲ್ಲ ಹೆದರಬೇಡಿ” ಅಂತೆಲ್ಲ ಮಾತಿನಲ್ಲೇ ಸಮಾಧಾನ, ಸಬೂಬು ಹೇಳುವಂತಿಲ್ಲ. ಅದರ ಬದಲು ಗಾಯಾಳುಗಳಿಗೆ ಪರಿಹಾರ ಅಂತ 10 ಸಾವಿರ ರೂಪಾಯಿಗಳನ್ನು ನೀಡಬೇಕು! ಹೀಗಂತ ನೋಯ್ಡಾ ಪ್ರಾಧಿಕಾರ (Noida authority) ಆದೇಶಿಸಿದೆ.


ಸಾಕು ನಾಯಿ ಕಚ್ಚಿದರೆ ಮನೆ ಮಾಲೀಕರಿಗೆ ದಂಡ!
ನೋಯ್ಡಾ ಪ್ರಾಧಿಕಾರವು ವಸತಿ ಎತ್ತರದ ಕಟ್ಟಡಗಳಿಗೆ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಮೋದಿಸಿದೆ. ಇದರಂತೆ ಸಾಕುಪ್ರಾಣಿಗಳ ನೋಂದಣಿಗೆ ನಿಯಮಗಳನ್ನು ನಿಗದಿಪಡಿಸಿದೆ. ಈ ಗೈಡ್‌ಲೈನ್ಸ್ ಪ್ರಕಾರ ಸಾಕು ನಾಯಿಗಳಿಂದ ಆಗುವ ಗಾಯದ ಸಂದರ್ಭದಲ್ಲಿ ಆ ನಾಯಿಗಳ ಮಾಲೀಕರಿಗೆ ದಂಡ ವಿಧಿಸಬಹುದಾಗಿದೆ.


ಬೆಕ್ಕು ಅಥವಾ ಇತರೇ ಸಾಕು ಪ್ರಾಣಿಗಳಿಗೂ ಈ ನಿಯಮ


ಭಾರತದ ಪ್ರಾಣಿ ಕಲ್ಯಾಣ ಮಂಡಳಿಯ ಮಾರ್ಗಸೂಚಿಗಳ ಅನುಗುಣವಾಗಿ ನೋಯ್ಡಾ ಪ್ರಾಧಿಕಾರದ 207ನೇ ಮಂಡಳಿ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಬರೀ ಸಾಕು ನಾಯಿಯೊಂದೇ ಅಲ್ಲದೇ ಸಾಕು ಬೆಕ್ಕು ಅಥವಾ ಇನ್ನಿತರ ಸಾಕು ಪ್ರಾಣಿಗಳಿಗೂ ಇದು ಅನ್ವಯವಾಗಲಿದೆ.


ನಾಯಿ ಕಚ್ಚಿದರೆ ಗಾಯಾಳುಗೆ 10 ಸಾವಿರ ರೂಪಾಯಿ ಕೊಡಬೇಕು!


ಮಾರ್ಗಸೂಚಿಗಳ ಪ್ರಕಾರ ಸಾಕು ನಾಯಿ ಕಚ್ಚಿದರೆ ಗಾಯಾಳುವಿಗೆ ಸಾಕು ನಾಯಿ ಮಾಲೀಕನೇ ಪರಿಹಾರ ಕೊಡಬೇಕು. ಆತನ ಚಿಕಿತ್ಸೆಗಾಗಿ 10 ಸಾವಿರ ರೂಪಾಯಿಗಳನ್ನು ನೀಡಲೇಬೇಕು ಅಂತ ಆದೇಶಿಸಲಾಗಿದೆ. ಮಾರ್ಚ್ 1, 2023ರಿಂದ ಅನ್ವಯ ಆಗುವಂತೆ ನೋಯ್ಡಾ ಪ್ರಾಧಿಕಾರ ಈ ಆದೇಶ ಹೊರಡಿಸಿದ್ದು, ನಗರದಲ್ಲಿ ನಾಯಿ ದಾಳಿ ಪ್ರಕರಣಗಳು ಹೆಚ್ಚಿರುವ ಹಿನ್ನೆಲೆಯಲ್ಲಿ ನೋಯ್ಡಾ ಪ್ರಾಧಿಕಾರ ಈ ಆದೇಶ ಹೊರಡಿಸಿದೆ.


ಅನುಮತಿ ಇಲ್ಲದೇ ನಾಯಿ ಸಾಕಿದರೆ 2 ಸಾವಿರ ದಂಡ


ಇನ್ನು ಅನುಮತಿ ಇಲ್ಲದೇ ನಾಯಿ ಸಾಕಿದರೆ ಅಂದರೆ ನೋಂದಣಿಯಾಗದ ನಾಯಿಯನ್ನು ನಗರದಲ್ಲಿ ಸಾಕಿದರೆ 2,000 ರೂಪಾಯಿ ದಂಡ ವಿಧಿಸಲಾಗುತ್ತದೆ. ಅಂತೆಯೇ ಪ್ರಾಧಿಕಾರವು ಹೊರಡಿಸಿರುವ ಮಾರ್ಗಸೂಚಿ ಪ್ರಕಾರ, ಸಾಕುಪ್ರಾಣಿಗಳ ಮಾಲೀಕರು ತಮ್ಮ ನಾಯಿ ಅಥವಾ ಬೆಕ್ಕುಗಳನ್ನು ಮುಂದಿನ ವರ್ಷದ ಜನವರಿ 31ರೊಳಗೆ ನೋಂದಾಯಿಸಿಕೊಳ್ಳಬೇಕು ಇಲ್ಲವಾದಲ್ಲಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.


ನೋಂದಣಿ ಮಾಡಿಸದೇ ಇದ್ದರೆ ದಂಡ


ಪ್ರಾಧಿಕಾರದ ಹೊಸ ನೀತಿಯ ಪ್ರಕಾರ ಸಾಕು ನಾಯಿಗಳು ಅಥವಾ ಬೆಕ್ಕುಗಳ ನೋಂದಣಿಯು ಜನವರಿ 31, 2023ರವರೆಗೆ ಇರಲಿದ್ದು, ನೋಂದಣಿ ಆಗದಿದ್ದಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಸಾಕು ನಾಯಿಗಳಿಗೆ ಆಂಟಿರೇಬಿಸ್ ಲಸಿಕೆಯನ್ನು ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದರೆ ಪ್ರತಿ ತಿಂಗಳು 2 ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ.


ಇದನ್ನೂ ಓದಿ: Charlie Special: ಚಾರ್ಲಿಗೆ ಧರ್ಮನೇ ಯಾಕೆ ಇಷ್ಟ ಗೊತ್ತಾ? ಮನುಷ್ಯ ಮತ್ತು ನಾಯಿಗಳ ಬಾಂಧವ್ಯದ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ


ನಾಯಿ ಗಲೀಜು ಮಾಡಿದರೆ ಮಾಲೀಕರೇ ಸ್ವಚ್ಛ ಮಾಡಬೇಕು!
ನಗರ ಮತ್ತು ಸಮೀಪದ ಗ್ರಾಮದ ನಿವಾಸಿಗಳ ಸಮ್ಮತಿಯೊಂದಿಗೆ, ಕಾಯಿಲೆ ಪೀಡಿತ, ಆವೇಶದ ಮತ್ತು ಆಕ್ರಮಣಕಾರಿ ಬೀದಿ ನಾಯಿಗಳಿಗೆ ಶ್ವಾನ ಆಶ್ರಯವನ್ನು ನಿರ್ಮಿಸಲಾಗುತ್ತದೆ. ಅದರ ಜವಾಬ್ದಾರಿಗಳನ್ನು ನಿವಾಸಿ ಕಲ್ಯಾಣ ಸಂಸ್ಥೆ ಅಥವಾ ಪ್ರಾಣಿ ಸಂಸ್ಥೆಗಳು ನೋಡಿಕೊಳ್ಳಲಿವೆ. ಅದಕ್ಕೆ ಜನರು, ಸಂಘಟನೆಗಳು ಆಹಾರದ ವ್ಯವಸ್ಥೆ ಮಾಡಬಹುದು. ಸಾಕುಪ್ರಾಣಿಯು ಸಾರ್ವಜನಿಕ ಸ್ಥಳದಲ್ಲಿ ಗಲೀಜು ಮಾಡಿದರೆ ಅದನ್ನು ಸ್ವಚ್ಛಗೊಳಿಸುವ ಹೊಣೆ ಕೂಡ ನಾಯಿ ಮಾಲೀಕನದ್ದಾಗಿರುತ್ತದೆ.

Published by:Annappa Achari
First published: