BYJU'S Young Genius: ಈ ವಾರ ತಬಲಾ ವಾದಕ ತೃಪ್ತ್​ರಾಜ್​ ಪಾಂಡ್ಯ, ಸ್ಕೇಟರ್​ ತಿಲಕ್​ ಕೀಸಮ್​

ತಿಲಕ್​ ಕನಸು ನನಸಾಗಲಿ ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜು ಕೂಡ ನೀಡಲಿದ್ದಾರೆ

 ತಬಲಾ ವಾದಕ ತೃಪ್ತ್​ರಾಜ್​ ಪಾಂಡ್ಯ, ಸ್ಕೇಟರ್​ ತಿಲಕ್​ ಕೀಸಮ್​

ತಬಲಾ ವಾದಕ ತೃಪ್ತ್​ರಾಜ್​ ಪಾಂಡ್ಯ, ಸ್ಕೇಟರ್​ ತಿಲಕ್​ ಕೀಸಮ್​

  • Share this:
    ಮಕ್ಕಳಲ್ಲಿ ಅದ್ಭುತ ಕಲೆಗಳ ಅನಾವರಣಕ್ಕೆ ಇರುವ ಬೈಜುಸ್​ ಯಂಗ್​ ಜೀನಿಯಸ್​ ಕಾರ್ಯಕ್ರಮ ಯಶಸ್ವಿಯಾಗಿದೆ. ಈ ಕಾರ್ಯಕ್ರಮದ 9ನೇ ಕಂತಿನಲ್ಲಿ ತಬಲಾ ಜೀನಿಯಸ್​ ತೃಪ್ತ್​ರಾಜ್​ ಮತ್ತು ಪ್ರಶಸ್ತಿ ವಿಜೇತ ಸ್ಕೇಟರ್​ ತಿಲಕ್​ ಕೀಸಮ್​ ಭಾಗಿಯಾಗುತ್ತಿದ್ದಾರೆ. ಮುಂಬೈನ 13 ವರ್ಷದ ತೃಪ್ತ್​ರಾಜ್ 2019-20ಸಾಲಿನಲ್ಲಿ ಕಲೆ ಮತ್ತು ಸಂಸ್ಕೃತಿ ವಿಭಾಗದಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ್​ ಪುರಸ್ಕಾರ್​ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮೂರು ವರ್ಷದವನಾಗಿದ್ದಲೇ ತೃಪ್ತ್​ ರಾಜ್​ ಆಲ್​ ಇಂಡಿಯಾ ರೇಡಿಯೋದಲ್ಲಿ ಪ್ರದರ್ಶನ ನೀಡಿ ಪ್ರಶಂಸೆಗೆ ಭಾಜನರಾಗಿದ್ದರು. ನಾಲ್ಕು ವರ್ಷದಲ್ಲಿ ದೂರದರ್ಶನದಲ್ಲಿ ತಬಲಾ ನುಡಿಸಿ ಗಮನೆ ಸೆಳೆದರು, ಆರನೇ ವರ್ಷದಲ್ಲಿ ಗಿನ್ನಿಸ್​ ಬುಕ್​ ದಾಖಲಾಗುವು ಮೂಲಕ ಅತ್ಯಂತ ಕಿರಿಯ ತಬಲಾ ಮಾಸ್ಟರ್​ ಆದರು.

    ತಬಲಾ ಕಲಿಯಲು ಒಂದು ಜೀವನ ಕಡಿಮೆ ಆದರೆ, ನೀವು ಅದನ್ನು ಸಾಧಿಸಬೇಕು ಎಂದರೆ ನಿಮಗೆ ತಾಳ್ಮೆ ಮತ್ತು ಅಭ್ಯಾಸ ಬೇಕು ಎನ್ನುತ್ತಾರೆ ಆನಂದ್​ ನರಸಿಂಹನ್​ ತೃಪ್ತ್​ರಾಜ್​. ತೃಪ್ತ್​ ರಾಜ್​ ಕನಸು ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ತಬಲಾ ವಾದಕನಾಗಿ ಗುರುತಿಸಿಕೊಳ್ಳುವುದಾಗಿದೆ.

    ಇನ್ನು ತಬಲಾ ಹವ್ಯಾಸ ಆರಂಭವಾಗಿರುವ ಕುರಿತು ಮಾತನಾಡಿರುವ ತೃಪ್ತ್​ರಾಜ್​, ನಾನು ಒಂದೂವರೆ ವರ್ಷದ ಮಗು ಇದ್ದಾಗ, ಅಜ್ಜಿ ಅಡುಗೆ ಮನೆಯಲ್ಲಿ ಹಾಡುತ್ತಿದ್ದರು. ಆಗ ನಾನು ತೆವಳುತ್ತಲೇ ಪಾತ್ರೆಗಳನ್ನು ತಬಲಾದಂತೆ ತಕ್ಕಂತೆ ಬಡಿಯುತ್ತಿದೆ. ನನ್ನ ಬಡಿತದಲ್ಲಿ ತಾಳ ಇದೆ ಎಂದ ಅರಿತ ಅವರು ಈ ಕುರಿತು ನನ್ನ ತಂದೆಗೆ ಹೇಳಿದರು ಎಂದು ಅವರು ನನ್ನ ಈ ಆಸಕ್ತಿ ಬೆಳೆದ ಬಗ್ಗೆ ಹೇಳುತ್ತಾರೆ. ಜೀವನದಲ್ಲಿ ತಾಳ ಎಂಬುದು ಬಹುಮುಖ್ಯ ಎನ್ನುತ್ತಾರೆ.

    ಕಾರ್ಯಕ್ರಮದಲ್ಲಿ ತೃಪ್ತ್​ರಾಜ್​ ಮೆಂಟರ್​ ಆಗಿ ಸೋನುಸೂದ್​ ಇದ್ದರು. ಈ ವೇಳೆ ನಟ ಸೋನು ಸೂದ್​ ತಾವು ಕಾಲೇಜಿನಲ್ಲಿ ಗಿಟಾರ್ ನುಡಿಸಲು ಪ್ರಾರಂಭಿಸಿದ್ದು, ಅದನ್ನು ಮುಂದುವರೆಸದ ಬಗ್ಗೆ ತಿಳಿಸಿದರು.



    ಎರಡನೇ ಭಾಗದಲ್ಲಿ ಸ್ಕೇಟರ್​ ತಿಲಕ್​ ಕೀಸಮ್​ ಕಾಣಿಸಿಕೊಂಡಿದ್ದಾರೆ. 12 ವರ್ಷದ ತಿಲಕ್​ ಸ್ನೇಟಿಂಗ್​ನಲ್ಲಿ ಗಿನ್ನೆಸ್​ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ ತಮ್ಮ ದಾಖಲೆಯನ್ನು ಅವರೇ ಮುರಿದು ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಲಾಂಗೆಸ್ಟ್​ ಸ್ಲಾಲೋಮ್​ ವೇವ್​ನಲ್ಲಿ ಲಿಮ್ಕಾ ಬುಕ್​ ಆಫ್​ ರೆಕಾರ್ಡ್​ ದಾಖಲೆ ಪುಟದಲ್ಲಿ ಕೂಡ ಈತನ ಹೆಸರಿದೆ.

    ಸ್ಕೇಟಿಂಗ್​ ಮಾಡುವಾಗ ನನಗೆ ಕಾರಿನಲ್ಲಿರುವಂತೆ ಭಾಸವಾಗುತ್ತದೆ ಎಂದು ತಿಲಕ್​ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ತಿಲಕ್​ ಪ್ರೇಕ್ಷಕರಿಗೆ ಸ್ಕೇಟಿಂಗ್​ ಪ್ರದರ್ಶನ ನೀಡಲಿದ್ದಾರೆ. ತನ್ನ ಕನಸಿನ ಬಗ್ಗೆ ಮಅತನಾಡಿರುವ ತಿಲಕ್​, ನಾನು ಒಬ್ಬ ಒಳ್ಳೆಯ ಮನುಷ್ಯನಾಗಬೇಕು. ನನ್ನ ದೇಶಕ್ಕಾಗಿ ಚಳಿಗಾಲ ಒಲಿಂಪಿಕ್ಸ್​ನಲ್ಲಿ ಚಿನ್ನ ಗೆಲ್ಲಬೇಕು ಎನ್ನುತ್ತಾರೆ.

    ತಿಲಕ್​ ಕನಸು ನನಸಾಗಲಿ ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಕಿರಣ್​ ರಿಜು ಕೂಡ ನೀಡಲಿದ್ದಾರೆ. ನಾಲ್ಕು ವರ್ಷದವನಿಗದ್ದಾಗ ತಿಲಕ್​ ಸ್ಕೇಟಿಂಗ್​ ಕಲಿಯಲು ಪ್ರಾರಂಭಿಸಿದ್ದಾಗಿ ತಿಳಿಸಿದ್ದಾರೆ. ಸ್ಕೇಟಿಂಗ್​ನಲ್ಲಿ ನಿಪುಣತೆ ಪಡೆದ ಬಳಿಕ ಲಿಂಬೊ ಸ್ನೇಟಿಂಗ್​, ಸ್ಲವೊಮೊ ವೇವ್​ ಅಲ್ಲಿ ತಿಲಕ್​ ದಾಖಲೆ ನಿರ್ಮಿಸಿದ್ದು, ಇದೀಗ ಐಸ್​ ಸ್ಕೇಟಿಂಗ್​ ಆಡಲು ಯೋಜಿಸುತ್ತಿದ್ದಾರೆ.
    Published by:Seema R
    First published: