ಈ ಹೂಡಿಕೆಯಿಂದ ಸಿಗುತ್ತೆ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿದರ

ಇಲ್ಲಿ ಹೂಡಿಕೆ ಮಾಡಿದರೆ 10.75 ರಿಂದ 11 ಪ್ರತಿಶತದವರೆಗೆ ಬಡ್ಡಿದರ ಸಿಗಲಿದೆ. ಮಾಸಿಕ, ವಾರ್ಷಿಕ ಮತ್ತು ಮೆಚುರಿಟಿ ಆಧಾರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ.

zahir | news18
Updated:February 7, 2019, 3:59 PM IST
ಈ ಹೂಡಿಕೆಯಿಂದ ಸಿಗುತ್ತೆ ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿದರ
ಸಾಂದರ್ಭಿಕ ಚಿತ್ರ
zahir | news18
Updated: February 7, 2019, 3:59 PM IST
ಸಾಮಾನ್ಯವಾಗಿ ಬ್ಯಾಂಕುಗಳ ಸ್ಥಿರ ಠೇವಣಿ ಖಾತೆಗಳ ಮೇಲೆ ಸಿಗುವ ಬಡ್ಡಿದರಕ್ಕಿಂತ ಈ ವಾರ ಹೆಚ್ಚಿನ ಬಡ್ಡಿದರ ಪಡೆಯಬಹುದು. ಇಂಡಿಯಾಬುಲ್ಸ್​ ಕನ್ಸ್ಯೂಮರ್​ ಫೈನಾನ್ಸ್​ನ ಎನ್​ಸಿಡಿ ಹೂಡಿಕೆಗಾಗಿ ಅವಕಾಶವನ್ನು ಒದಗಿಸುತ್ತಿದೆ. ಕಂಪೆನಿಯು 250 ಕೋಟಿ ಹೂಡಿಕೆಯ ನಿರೀಕ್ಷೆಯಲ್ಲಿದ್ದು, ಇದರ ಎನ್​ಸಿಡಿ ಬಡ್ಡಿದರಗಳು ಶೇ.10.75 ರಿಂದ 11% ಇರಲಿದೆ. ಅಂದರೆ ನಿಮ್ಮ ಉಳಿತಾಯ ಖಾತೆಗೆ ಸಿಗುವ ಬಡ್ಡಿಗಿಂತ ಈ ಹೂಡಿಕೆಗೆ ಮೂರು ಪಟ್ಟು ಹೆಚ್ಚು ಬಡ್ಡಿದರ ಸಿಗಲಿದೆ. ಇಂಡಿಯಾಬುಲ್ಸ್​ ಕನ್ಸ್ಯೂಮರ್​ ಫೈನಾನ್ಸ್​ನ ಎನ್​ಸಿಡಿಯು ಮಾರ್ಚ್ 4 ರವರೆಗೆ ತೆರೆದಿರಲಿದ್ದು, ಇಲ್ಲಿ ಎನ್​ಸಿಡಿ ಅನ್ನು ಮೊದಲ ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದಲ್ಲಿ ನೀಡಲಾಗುತ್ತದೆ.

ಎನ್​​ಸಿಡಿ ಎಂದರೇನು?: ನೀವು ನಿಯಮಿತವಾದ ಆದಾಯವನ್ನು ಬಯಸುತ್ತಿದ್ದರೆ, ನಾನ್ ಕನ್ವರ್ಟಬಲ್ ಡಿಬೆಂಚರ್​(ಎನ್​ಸಿಡಿ)ಯನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಯಾವುದಾದರೂ ಕಂಪೆಯಿಯ ಬಾಂಡ್​ ಆಗಿದ್ದು, ಇಲ್ಲಿ ನಿಮಗೆ ಹೂಡಿಕೆಗೆ ನಿಯಮಿತ ಆದಾಯ ಸಿಗಲಿದೆ. ಕನ್ವರ್ಟಬಲ್ ಡಿಬೆಂಚರ್ ಹೂಡಿಕೆಗಳಿಗಿಂತ ಹೆಚ್ಚು ಬಡ್ಡಿದರ ಇಲ್ಲಿ ಸಿಗುವುದರಿಂದ ನಿಮ್ಮ ಹೂಡಿಕೆಯ ಲಾಭ ಕೂಡ ಸ್ಥಿರವಾಗಿರುತ್ತದೆ.

ಹೂಡಿಕೆಗೆ ಅವಕಾಶ: ಇಂಡಿಯಾಬುಲ್ಸ್​ ಸಂಸ್ಥೆಯ ನಾನ್ ಕನ್ವರ್ಟಬಲ್ ಡಿಬೆಂಚರ್​ ಹೂಡಿಕೆಯು ಫೆಬ್ರವರಿ 4, 2019 ರಿಂದ ಪ್ರಾರಂಭವಾಗಿದೆ. ಹಾಗೆಯೇ ಇದರ ಕೊನೆಯ ದಿನಾಂಕ ಮಾರ್ಚ್​ 4. ಆದರೆ ಅದಕ್ಕಿಂತಲೂ ಮುಂಚಿತವಾಗಿ ಹೂಡಿಕೆಯ ಮೊತ್ತ ಸಂಗ್ರಹವಾದರೆ, ಕೊನೆಯ ದಿನಾಂಕಕ್ಕಿಂತಲೂ ಮುನ್ನ ಹೂಡಿಕೆ ಅವಕಾಶವನ್ನು ನಿಲ್ಲಿಸಬಹುದು.

ಹೂಡಿಕೆ ಅವಧಿ: ಇಂಡಿಯಾಬುಲ್ಸ್​ ಗ್ರಾಹಕರ ಹಣಕಾಸು ಎನ್​ಸಿಡಿಯಿಂದ 250 ಕೋಟಿ ರೂ.ಗಳನ್ನು ಹೆಚ್ಚಿಸಿಕೊಳ್ಳಲು ಬಯಸಿದೆ. ಇದರೊಂದಿಗೆ ಕಂಪೆನಿಯು 2750 ಕೋಟಿ ರೂ. ಹೂಡಿಕೆ ಮತ್ತೊಂದು ಎನ್​ಸಿಡಿಯನ್ನು ಪರಿಚಯಿಸಿದೆ. ಇಲ್ಲಿ 26 ತಿಂಗಳ, 38 ಮತ್ತು 60 ತಿಂಗಳುಗಳ ಎನ್​ಸಿಡಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದು.

ಎಷ್ಟು ಹೂಡಿಕೆ ಮಾಡಬಹುದು: ಈ ಎನ್​ಸಿಡಿಯಲ್ಲಿ ಕನಿಷ್ಠ 10 ಸಾವಿರ ರೂ. ಹೂಡಿಕೆ ಮಾಡಬಹುದು. ಇದರ ನಂತರ 1000 ರೂ. ಗುಣಾಂಕಗಳಲ್ಲಿ ಹೂಡಿಕೆ ಮಾಡಬಹುದಾಗಿದೆ. ಈ ಎನ್​ಸಿಡಿ ಪಟ್ಟಿಯಲ್ಲಿ ಬಿಎಸ್ಇ ಮತ್ತು ಎನ್​ಎಸ್​ಇಗಳಲ್ಲಿ ಮಾಡಲಾಗುತ್ತದೆ. ಈ ಎನ್​ಸಿಡಿಗೆ ಎಎ ಕ್ರೆಡಿಟ್ ರೇಟಿಂಗ್ ಮೂಲಕ ನೀಡಲಾಗಿದೆ. ಇದನ್ನು ಮೊದಲು ಬಂದವರಿಗೆ ಆದ್ಯತೆಯ ಆಧಾರದ ಮೇಲೆ ಹಂಚಿಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಚಿಟ್​ ಫಂಡ್​ ಚೀಟಿಂಗ್: ನೀವು ಹೂಡಿಕೆ ಮಾಡಿದ್ದೀರಾ? ಹಾಗಿದ್ರೆ ನಿಮ್ಮ ಸಂಶಯಗಳಿಗೆ ಇಲ್ಲಿದೆ ಉತ್ತರ

ಉಳಿತಾಯ ಖಾತೆಗಿಂತ ಹೆಚ್ಚಿನ ಬಡ್ಡಿದರ: ಇಲ್ಲಿ ಹೂಡಿಕೆ ಮಾಡಿದರೆ 10.75 ರಿಂದ 11 ಪ್ರತಿಶತದವರೆಗೆ ಬಡ್ಡಿದರ ಸಿಗಲಿದೆ. ಮಾಸಿಕ, ವಾರ್ಷಿಕ ಮತ್ತು ಮೆಚುರಿಟಿ ಆಧಾರದಲ್ಲಿ ಬಡ್ಡಿಯನ್ನು ನೀಡಲಾಗುತ್ತದೆ. ಈ ಎನ್​ಸಿಡಿಯ ಹೂಡಿಕೆದಾರರಿಗೆ ಸಿಗುವ ಬಡ್ಡಿದರವು ಆದಾಯ ತೆರಿಗೆ ನಿಯಮಗಳ ಪ್ರಕಾರ ವಿಧಿಸಲಾಗುತ್ತದೆ.
Loading...

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ