• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • United Airlines: ಏರ್‌ಲೈನ್ಸ್‌ನ ತೃತೀಯ ಲಿಂಗಿ ಉದ್ಯೋಗಿ ನಿಗೂಢ ಸಾವು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಬೆನ್ನಲ್ಲೇ ಶವ ಪತ್ತೆ!

United Airlines: ಏರ್‌ಲೈನ್ಸ್‌ನ ತೃತೀಯ ಲಿಂಗಿ ಉದ್ಯೋಗಿ ನಿಗೂಢ ಸಾವು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ ಬೆನ್ನಲ್ಲೇ ಶವ ಪತ್ತೆ!

ಕೀಲೀ ಸ್ಕಾಟ್​

ಕೀಲೀ ಸ್ಕಾಟ್​

ಯುನೈಟೆಡ್ ಏರ್‌ಲೈನ್ಸ್ ಜಾಹೀರಾತಿನಲ್ಲಿ ಕಾಣಿಸಿಕೊಂಡು ತುಂಬಾನೇ ಹೆಸರು ಗಳಿಸಿದ್ದ ತೃತೀಯ ಲಿಂಗಿ ಎಂದರೆ ಟ್ರಾನ್ಸ್ಜೆಂಡರ್ ಫ್ಲೈಟ್ ಅಟೆಂಡೆಂಟ್ ಕೇಲೀ ಸ್ಕಾಟ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯ ಪುಟದಲ್ಲಿ ಭಾವನಾತ್ಮಕ ಟಿಪ್ಪಣಿಯನ್ನು ಪೋಸ್ಟ್ ಮಾಡಿದ ನಂತರ ನಿಧನರಾಗಿದ್ದಾರೆ.

  • Share this:

ಯುನೈಟೆಡ್ ಏರ್‌ಲೈನ್ಸ್ (United Airlines) ಜಾಹೀರಾತಿನಲ್ಲಿ ಕಾಣಿಸಿಕೊಂಡು ತುಂಬಾನೇ ಹೆಸರು ಗಳಿಸಿದ್ದ ತೃತೀಯ ಲಿಂಗಿ ಎಂದರೆ ಟ್ರಾನ್ಸ್ಜೆಂಡರ್ ಫ್ಲೈಟ್ ಅಟೆಂಡೆಂಟ್ ಕೇಲೀ ಸ್ಕಾಟ್ (Kayleigh Scott) ತನ್ನ ಸಾಮಾಜಿಕ ಮಾಧ್ಯಮ ಖಾತೆಯ ಪುಟದಲ್ಲಿ ಭಾವನಾತ್ಮಕ ಟಿಪ್ಪಣಿಯನ್ನು ಪೋಸ್ಟ್ ಮಾಡಿದ ನಂತರ ನಿಧನರಾಗಿದ್ದಾರೆ. ಹೌದು.. ದಿ ಇಂಡಿಪೆಂಡೆಂಟ್ ಪ್ರಕಾರ, 25 ವರ್ಷದ ಈ ಫ್ಲೈಟ್ ಅಟೆಂಡೆಂಟ್ (Flight Attendent) ಸೋಮವಾರ ತನ್ನ ಕೊಲೊರಾಡೊ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.


ಅವರು ನಿಧನರಾಗುವುದಕ್ಕೂ ಮುಂಚಿತವಾಗಿ ತಮ್ಮ ಸಾಮಾಜಿಕ ಮಾಧ್ಯಮಗಳಾದ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಪೋಸ್ಟ್ ಗಳಲ್ಲಿ ಅವರು ತಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಹೃದಯ ವಿದ್ರಾವಕ ಪತ್ರವನ್ನು ಬರೆದಿದ್ದಾರೆ.


ಕೇಲೀ ಸ್ಕಾಟ್ ಬರೆದ ಭಾವನಾತ್ಮಕ ಪೋಸ್ಟ್ ನಲ್ಲಿ ಏನಿತ್ತು?


"ನಾನು ನನ್ನ ಕೊನೆಯ ಉಸಿರನ್ನು ತೆಗೆದುಕೊಂಡು ಈ ಭೂಮಿಯಿಂದ ನಿರ್ಗಮಿಸುವಾಗ, ನಾನು ಕಳೆದುಕೊಂಡ ಎಲ್ಲರಿಗೂ ಕ್ಷಮೆಯಾಚಿಸಲು ಬಯಸುತ್ತೇನೆ" ಎಂದು ಸ್ಕಾಟ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.


"ಕ್ಷಮಿಸಿ, ನಾನು ಜೀವನದಲ್ಲಿ ಬಹಳಷ್ಟು ಸಾಧಿಸಲು ಪ್ರಯತ್ನಿಸಿದೆ, ಆದರೆ ಯಾವುದು ಸಾಧ್ಯವಾಗಲಿಲ್ಲ. ನನ್ನನ್ನು ಪ್ರೀತಿಸಿದವರಲ್ಲಿ ಕ್ಷಮೆ ಕೇಳಲೇಬೇಕು. ನಾನು ಸಮಾಜದಲ್ಲಿ ಬದುಕಲು ಇನ್ನೂ ಬಲಶಾಲಿಯಾಗಲು ಸಾಧ್ಯವಾಗಲಿಲ್ಲ.


ಇದನ್ನೂ ಓದಿ: ಸಂತೋಷವಾಗಿರೋದನ್ನ ಕಲಿಯೋಕೆ ಫ್ರೀ ಟ್ರಿಪ್, ಫಿನ್‌ಲ್ಯಾಂಡ್‌ನಿಂದ ಹೊಸ ಆಫರ್


ನನಗೆ ಬೆಂಬಲ ನೀಡಿ ಎಲ್ಲವನ್ನೂ ನೀಡಿದವರಿಗೆ, ನನ್ನ ಪ್ರಯತ್ನಕ್ಕೆ ಪ್ರತಿಫಲ ಸಿಗಲಿಲ್ಲ ಎಂದು ಹೇಳಲು ವಿಷಾದಿಸುತ್ತೇನೆ. ದಯವಿಟ್ಟು ಅರ್ಥಮಾಡಿಕೊಳ್ಳಿ, ನಾನು ಹೋಗಿದ್ದು ನಿಮ್ಮ ಮೇಲಿನ ಕೋಪದಿಂದ ಅಲ್ಲ, ಬದಲಾಗಿ ಅದು ನನ್ನ ಅಸಮರ್ಥತೆಯ ಪರಿಣಾಮವಾಗಿದೆ" ಎಂದು ಫ್ಲೈಟ್ ಅಟೆಂಡೆಂಟ್ ತಮ್ಮ ಪೋಸ್ಟ್ ನಲ್ಲಿ ಬರೆದಿದ್ದಾರೆ.


ತನ್ನ ಪೋಸ್ಟ್ ನಲ್ಲಿ ಸ್ಕಾಟ್ ತನ್ನ ಕೆಲವು ಪ್ರೀತಿಪಾತ್ರರ ಹೆಸರನ್ನು ಸಹ ಬರೆದಿದ್ದಾರೆ ಮತ್ತು ಅವರಿಗೆಲ್ಲಾ ಕ್ಷಮೆಯಾಚಿಸಿದ್ದಾರೆ.


ಕೇಲೀ ಸಾವನ್ನು ದೃಢಪಡಿಸಿದ ತಾಯಿ ಆಂಡ್ರಿಯಾ


ಕೇಲೀ ಸ್ಕಾಟ್ ಅವರ ತಾಯಿ ಆಂಡ್ರಿಯಾ ಸಿಲ್ವೆಸ್ಟ್ರೋ ಅವರು ಈ ಭಾವನಾತ್ಮಕವಾದ ಪತ್ರವನ್ನು ಪೋಸ್ಟ್ ಮಾಡಿದ ನಂತರ ತಮ್ಮ ಮಗಳು ಮೃತಪಟ್ಟಿರುವುದನ್ನು ದೃಢಪಡಿಸಿದರು. ಫೇಸ್‌ಬುಕ್ ಪೋಸ್ಟ್ ನಲ್ಲಿ ಸಿಲ್ವೆಸ್ಟ್ರೋ ಅವರು "ಕೇಲೀ ಸ್ಕಾಟ್ ... ನಿನ್ನನ್ನು ನನ್ನ ಮಗಳಾಗಿ ಪಡೆದಿದ್ದು ನನಗೆ ನಂಬಲಾಗದಷ್ಟು ಹೆಮ್ಮೆಯಿದೆ, ನಿಮ್ಮ ಜೀವನದಲ್ಲಿ ಸಾಧಿಸಿದ ಪ್ರತಿಯೊಂದು ಕೆಲಸದ ಬಗ್ಗೆ ನನಗೆ ಹೆಮ್ಮೆ ಇದೆ.


ಕೀಲೀ ಸ್ಕಾಟ್​


ನಿನ್ನ ನಗು ತುಂಬಾನೇ ಸುಂದರವಾಗಿತ್ತು, ನಿನ್ನ ನಗು ಎಲ್ಲರನ್ನು ನಗಿಸುತ್ತಿತ್ತು, ನಿನ್ನ ಮನಸ್ಸು ಸಹ ತುಂಬಾನೇ ವಿಶಾಲವಾಗಿತ್ತು ಎಂದು ತಾಯಿ ತಮ್ಮ ಮಗಳ ಬಗ್ಗೆ ಹೇಳಿದ್ದಾರೆ. ದಿ ಇಂಡಿಪೆಂಡೆಂಟ್ ಪ್ರಕಾರ, ಡೆನ್ವರ್ ಪೊಲೀಸ್ ಇಲಾಖೆ ಈಗ ಸ್ಕಾಟ್ ಸಾವಿನ ಬಗ್ಗೆ ತನಿಖೆ ನಡೆಸುತ್ತಿದೆ. ಸಾವಿನ ಹಿಂದಿನ ಕಾರಣದ ಬಗ್ಗೆ ಅಂತಿಮ ನಿರ್ಧಾರವನ್ನು ಡೆನ್ವರ್ ವೈದ್ಯಕೀಯ ಪರೀಕ್ಷಕರ ಕಚೇರಿಯಿಂದ ಮಾಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.


ಕೇಲೀ ಸಾವಿಗೆ ಸಂತಾಪ ಸೂಚಿಸಿದ ಯುನೈಟೆಡ್ ಏರ್‌ಲೈನ್ಸ್


ಅತ್ತ ಯುನೈಟೆಡ್ ಏರ್‌ಲೈನ್ಸ್ ಸಹ ಕೇಲೀ ಸ್ಕಾಟ್ ಅವರ ನಿಧನದಿಂದ ತುಂಬಾನೇ ದುಃಖಿತವಾಗಿದೆ ಎಂದು ಹೇಳಿದೆ. "ಕೇಲೀ ಸ್ಕಾಟ್ ಅವರ ದುರಂತ ನಷ್ಟದಿಂದ ನಾವು ತುಂಬಾನೇ ದುಃಖಿತರಾಗಿದ್ದೇವೆ ಮತ್ತು ಅವರ ಕುಟುಂಬ, ಸ್ನೇಹಿತರು ಮತ್ತು ಸಹೋದ್ಯೋಗಿಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ" ಎಂದು ಕಂಪನಿ ಹೇಳಿದೆ.


ಕೇಲೀ ಸ್ಕಾಟ್, 2020 ರಲ್ಲಿ ಯುನೈಟೆಡ್ ತನ್ನ ವೈವಿಧ್ಯತೆಯ ಅಭಿಯಾನದ ಭಾಗವಾಗಿ ಕಾಣಿಸಿಕೊಂಡಾಗ ಸುದ್ದಿಯಾಯಿತು. ಟ್ರಾನ್ಸ್ ಡೇ ಆಫ್ ವಿಸಿಬಲಿಟಿಯ ಕ್ಲಿಪ್ ನಲ್ಲಿ ಅವರು ಮನೆಯಿಂದ ಹೊರ ಬಂದು ಬದುಕುವ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು.




"ಟ್ರಾನ್ಸ್ ಆಗಿರುವುದರ ಬಗ್ಗೆ ನನಗೆ ತುಂಬಾ ಮುಜುಗರವಾಗುತ್ತಿತ್ತು" ಎಂದು ಅವರು ಹೇಳಿದ್ದರು. "ನಾನು ಸಹ ಎಲ್ಲರಂತೆ ಎಲ್ಲರೊಂದಿಗೆ ಬೆರೆತುಕೊಂಡು ಇರಲು ಬಯಸಿದ್ದೆ" ಅಂತ ಕೇಲೀ ಹೇಳಿದ್ದರು. ಸ್ಕಾಟ್ ಅವರು ಟ್ರಾನ್ಸ್ಜೆಂಡರ್ ಆಗಿ ಸಾರ್ವಜನಿಕವಾಗಿ ಹೊರಬಂದಾಗಿನಿಂದ ತಮ್ಮ ಪ್ರಗತಿಯ ಬಗ್ಗೆ ಮಾತನಾಡಿದರು. ಅವಳು ಖಿನ್ನತೆಯೊಂದಿಗೆ ಹೋರಾಡುತ್ತಿರುವುದಾಗಿ ಹೇಳಿಕೊಂಡಿದ್ದರು.


"ಸಂತೋಷ ಮತ್ತು ಭರವಸೆಯನ್ನು ಹುಡುಕಲು ನಾನು ನಿಜವಾಗಿಯೂ ಹೆಣಗಾಡುತ್ತಿದ್ದೇನೆ. 2023 ರ ವರ್ಷ ನನಗೆ ಒಳ್ಳೆಯ ವರ್ಷವಾಗಿರಲಿ ಅಂತ ಕೇಳಿ ಕೊಳ್ಳುತ್ತಿದ್ದೇನೆ" ಎಂದು ಅವರು ಹಿಂದೊಮ್ಮೆ ಪೋಸ್ಟ್ ನಲ್ಲಿ ಬರೆದಿದ್ದರು.

top videos
    First published: