'ಬೆಟ್ಟದ ಮನುಷ್ಯ' ಎಂದೇ ಖ್ಯಾತರಾಗಿದ್ದಂತಹ ಬಿಹಾರದ ದಶರಥ ಮಾಂಜಿ ಕತೆಯನ್ನು ಎಲ್ಲರೂ ಕೇಳಿರುತ್ತಾರೆ ಮತ್ತು ಅವರ ಜೀವನಾಧಾರಿತವಾದ ಹಿಂದಿ ಚಲನಚಿತ್ರವನ್ನು ಹಲವರು ನೋಡಿರುತ್ತಾರೆ. ಇನ್ನೊಬ್ಬ ವ್ಯಕ್ತಿಯು ಸಹ ದಶರಥ ಮಾಂಜಿ ಅವರ ಹಾಗೆ ಬೆಟ್ಟ ತುಂಡರಿಸಿ ಅದರ ಮಧ್ಯದಿಂದ ತಮ್ಮ ಊರಿಗೆ 2 ಕಿಲೋ ಮೀಟರ್ ಉದ್ದದ ರಸ್ತೆಯೊಂದನ್ನು ಮಾಡಿಕೊಂಡಿದ್ದಾರೆ.
ಸ್ಥಳೀಯ ಅಧಿಕಾರಿಗಳಿಗೆ ಎಷ್ಟು ಬಾರಿ ತಮ್ಮ ಊರಿಗೆ ಒಂದು ರಸ್ತೆ ನಿರ್ಮಿಸಿ ಕೊಡುವಂತೆ ಕೇಳಿದರೂ ಅವರು ತಮ್ಮ ಕಿವಿಯ ಮೇಲೆ ಹಾಕಿಕೊಳ್ಳದೆ ಇರುವುದರಿಂದ ಬೇಸತ್ತು ಓಡಿಶಾ ಬುಡಕಟ್ಟು ಜನಾಂಗದವರಾದ ಹರಿಹರ್ ಬೆಹರಾ ಎಂಬುವವರು ತಮ್ಮ ಸಹೋದರನೊಡನೆ ಜೊತೆಗೂಡಿ 30 ವರ್ಷಗಳ ಕಾಲ ಎಷ್ಟೇ ಅಡ್ಡಿ ಆತಂಕಗಳು ಎದುರಾದರೂ ಮುನ್ನುಗ್ಗಿ ಇಂದು ನಯಾಘರ್ ಜಿಲ್ಲೆಯ ಓಡ್ಗಾಂವ್ ಬ್ಲಾಕಿನಲ್ಲಿ ಇರುವಂತಹ ತುಲುಬಿ ಗ್ರಾಮಕ್ಕೆ ಹೋಗಲು ರಸ್ತೆ ನಿರ್ಮಾಣ ಮಾಡಿದ್ದಾರೆ.
ಈ ಕೆಲಸ ಮಾಡಿ ಮುಗಿಸಿದ ಹರಿಹರ್ರನ್ನು ಅಲ್ಲಿನ ಜನರು "ಮೌಂಟೇನ್ ಮ್ಯಾನ್ ಹರಿಹರ್" ಎಂದು ಕರೆಯುತ್ತಿದ್ದಾರೆ. ಮುಂಚೆ ಈ ಹಳ್ಳಿಗೆ ಪಟ್ಟಣದಿಂದ ಬರಬೇಕಾದರೆ ಅರಣ್ಯ ಪ್ರದೇಶವನ್ನು ದಾಟಿಕೊಂಡು ಬೆಟ್ಟಗುಡ್ಡಗಳನ್ನು ಹತ್ತಿ ಬರಬೇಕಾಗುತ್ತಿತ್ತು. ಯಾರಿಗಾದರೂ ಈ ಹಳ್ಳಿಯವರಿಗೆ ಅರೋಗ್ಯ ಸರಿ ಇಲ್ಲ ಎಂದರೂ ನಡೆದುಕೊಂಡೇ ಹೋಗುವಂತಹ ಪರಿಸ್ಥಿತಿ ಇತ್ತು. ಅದನ್ನು ಅರಿತ ಹರಿಹರ್ ತಮ್ಮ ಹಳ್ಳಿಗೆ ರಸ್ತೆಯನ್ನು ನಿರ್ಮಾಣ ಮಾಡುವುದಕ್ಕೆ ಅವರ 30 ವರ್ಷಗಳನ್ನು ಮೀಸಲಿಟ್ಟಿದ್ದು ಇವರು ನಿಜಕ್ಕೂ ಮತ್ತೊಬ್ಬ ದಶರಥ ಮಾಂಜಿ ಎಂದರೆ ಅತಿಶಯೋಕ್ತಿಯಲ್ಲ.
ಮೊದಲಿಗೆ ತನ್ನ ಸಹೋದರನ ಜೊತೆಗೂಡಿ ಬೆಟ್ಟಗುಡ್ಡಗಳ ಮಧ್ಯೆ ಇರುವಂತಹ ಎಲ್ಲವನ್ನು ತೆಗೆದುಹಾಕಿ ನಂತರ ಬೆಟ್ಟಗುಡ್ಡವನ್ನು ಸ್ಪೋಟಿಸುವುದರ ಮೂಲಕ ಒಡೆಯಲು ಪ್ರಾರಂಭಿಸಿದ್ದು, ಈ ಸ್ಫೋಟಗಳಿಂದ ಸುತ್ತಮುತ್ತಲಿನಲ್ಲಿರುವಂತಹ ಊರುಗಳಿಗೆ ಸಮಸ್ಯೆ ಆಗುತ್ತಿದ್ದು, ನಂತರ ಕೆಲ ಕಾಲದವರೆಗೆ ಕೆಲಸ ನಿಲ್ಲಿಸಿದರು.
ನಂತರ ಮತ್ತೆ ಊರಿನವರ ಸಹಾಯದಿಂದ ಕೆಲಸವನ್ನು ಬೇರೆ ರೀತಿಯಲ್ಲಿ ಪ್ರಾರಂಭಿಸಿದರು."ನಮ್ಮ ಹಳ್ಳಿಗೆ ಬರಲು ಒಂದು ಸಾಧಾರಣವಾದ ರಸ್ತೆಯು ಇರಲಿಲ್ಲ ಮತ್ತು ನಾವೆಲ್ಲಾ ನಮ್ಮ ಹಳ್ಳಿಯಿಂದ ಪಟ್ಟಣಕ್ಕೆ ಹೋಗಲು ಹರಸಾಹಸ ಪಡಬೇಕಾಗಿತ್ತು ಮತ್ತು ಅಧಿಕಾರಿಗಳಿಗೆ ಎಷ್ಟೋ ಬಾರಿ ಹೇಳಿದರೂ ಪ್ರಯೋಜನವಾಗಲಿಲ್ಲ, 30 ವರ್ಷಗಳ ಕಠಿಣ ಪರಿಶ್ರಮದಿಂದ ಇಂದು ನಮ್ಮ ಊರಿಗೆ ರಸ್ತೆಯನ್ನು ನಿರ್ಮಾಣ ಮಾಡಿಕೊಂಡಿದ್ದು ತುಂಬಾ ಸಂತೋಷವಾಗಿದೆ. ಇಂದು ನಮ್ಮ ಹಳ್ಳಿಗೆ ಬೇರೆ ಹಳ್ಳಿಗಳಿಂದ ಜನರು ಬಂದು ಹೇಗೆ ರಸ್ತೆಯನ್ನು ಮಾಡಿಕೊಂಡಿದ್ದೇವೆ ಎಂದು ನೋಡಿಕೊಂಡು ಹೋಗುತ್ತಿದ್ದಾರೆ" ಎಂದು ಹರಿಹರ್ ತಿಳಿಸಿದರು.
ಇದನ್ನು ನೋಡಿದ ಸ್ಥಳೀಯ ಅಧಿಕಾರಿಗಳು ಆ ರಸ್ತೆಯನ್ನು ಇನ್ನಷ್ಟು ಚೆನ್ನಾಗಿ ನಿರ್ಮಾಣ ಮಾಡಲು ಕೆಲಸ ಕೈಗೆತ್ತಿಕೊಂಡಿದ್ದು, ಈ ಪ್ರದೇಶದಲ್ಲಿ ಇನ್ನೂ ಅನೇಕ ಬುಡಕಟ್ಟು ಜನಾಂಗದವರ ಹಳ್ಳಿಗಳಿಗೆ ರಸ್ತೆಗಳೇ ಇಲ್ಲ. ಸ್ವತಃ ಜಿಲ್ಲೆಯ ಜಿಲ್ಲಾಧಿಕಾರಿಗಳು ಈ ರಸ್ತೆಯ ಕಾಮಗಾರಿ ನೋಡಿ, ಬೇರೆ ಹಳ್ಳಿಗಳಿಂದ ಈ ತುಲುಬಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಶೀಘ್ರದಲ್ಲಿಯೇ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ