Mother's Death: ಮಗುವಿಗೆ ಹಾಲುಣಿಸುತ್ತಿದ್ದಾಗಲೇ ತಾಯಿ ಸಾವು! ಕ್ರೂರಿ ವಿಧಿಯೇ ನಿನಗೆ ಕರುಣೆ ಇಲ್ಲವೇ?

ಮುಂಜಾನೆ 5.30ರ ಸುಮಾರಿಗೆ ಜಯಶ್ರೀ ತಮ್ಮ ಮಗುವಿಗೆ ಎದೆಹಾಲು ಕುಡಿಸುತ್ತಾ ಇದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಆಗ ಕುಳಿತಲ್ಲಿಂದಲೇ ಕುಸಿದು ಬಿದ್ದಿದ್ದಾರೆ. ತಾಯಿ ಸಾವಿನ ಬಗ್ಗೆ ಏನೂ ಅರಿಯದ ಕಂದಮ್ಮ ಎದೆಹಾಲು ಕುಡಿದು, ತಾಯಿ ಮಡಿಲಲ್ಲೇ ಮಲಗಿಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ತೆಲಂಗಾಣ: ವಿಧಿ ಎಷ್ಟು ಕ್ರೂರಿ ನೋಡಿ. ಒಮ್ಮೆಮ್ಮೊ ಆತ ಮಾಡುವ ಕೆಲಸ, ಆಡುವ ಆಟ (Game) ಎಂಥವರನ್ನೂ ನೋವಿನ ಪ್ರಪಾತಕ್ಕೆ ತಳ್ಳಿ ಬಿಡುತ್ತದೆ. ಇಲ್ಲಿ ಇನ್ನೂ ಜಗತ್ತನ್ನು ಸರಿಯಾಗಿ ಕಾಣದ ಮಗು (Child) ಹಾಗೂ ಮಗುವಿನ ಭವಿಷ್ಯದ (Future) ಬಗ್ಗೆ ನೂರಾರು ಕನಸು (Dreams) ಕಂಡಿದ್ದ ತಾಯಿ (Mother) ಇಬ್ಬರ ಬಾಳಲ್ಲೂ ವಿಧಿ ಆಟ ಆಡಿದೆ. ಹೆತ್ತ ಮಗುವಿಗೆ ಹಾಲು ಕುಡಿಸುತ್ತಿದ್ದಾಗಲೇ (Milk Feeding) ತಾಯಿ ಮೃತಪಟ್ಟಿದ್ದಾಳೆ. ಇಂತಹ ಹೃದಯ ವಿದ್ರಾವಕ ಘಟನೆಯೊಂದು ತೆಲಂಗಾಣ (Telangana) ರಾಜ್ಯದ ನಾಗರಕರ್ನೂಲ್ ಜಿಲ್ಲೆಯ ತಿಮ್ಮರಾಜ ಮಂಡಲ್ ನ ನೆರೆಲ್ಲಪಲ್ಲಿಯಲ್ಲಿ. ಇದೀಗ ತಾಯಿ ಇಲ್ಲ ಎನ್ನುವ ಬಗ್ಗೆ ಏನೂ ತಿಳಿಯದ ಕಂದಮ್ಮ ಅಳುತ್ತಿದ್ದರೆ, ಆಕೆಯನ್ನು ಕಳೆದುಕೊಂಡ ಮನೆಯವರೆಲ್ಲ ದುಃಖದಲ್ಲಿ ಮುಳುಗಿದ್ದಾರೆ.    

 ಮಗುವಿಗೆ ಎದೆಹಾಲು ಉಣ್ಣಿಸುತ್ತಿರುವಾಗಲೇ ತಾಯಿ ಸಾವು

ರಾಜಾಪುರ ಮಂಡಲದ ತಿರುಮಲಾಪುರ ಗ್ರಾಮದ ನಿವಾಸಿ, 25 ವರ್ಷದ ಜಯಶ್ರೀ ಎಂಬುವರೇ ಮೃತಪಟ್ಟ ತಾಯಿ. ಪ್ರಶಾಂತ್ ಎಂಬುವರನ್ನು ಮದುವೆಯಾಗಿದ್ದ ಜಯಶ್ರೀ, ಇತ್ತೀಚಿಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗುವಿಗೆ ಎದೆಹಾಲು ಕುಡಿಸುತ್ತಾ ಇರುವಾಗಲೇ ಜಯಶ್ರೀ ಮೃತಪಟ್ಟಿದ್ದಾರೆ.

ಮೃತ ಜಯಶ್ರೀ


ಹೃದಯಾಘಾತಕ್ಕೆ ಒಳಗಾಗಿ ಜಯಶ್ರೀ ಸಾವು

ಮುಂಜಾನೆ 5.30ರ ಸುಮಾರಿಗೆ ಜಯಶ್ರೀ ತಮ್ಮ ಮಗುವಿಗೆ ಎದೆಹಾಲು ಕುಡಿಸುತ್ತಾ ಇದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಆಗ ಕುಳಿತಲ್ಲಿಂದಲೇ ಕುಸಿದು ಬಿದ್ದಿದ್ದಾರೆ. ತಾಯಿ ಸಾವಿನ ಬಗ್ಗೆ ಏನೂ ಅರಿಯದ ಕಂದಮ್ಮ ಎದೆಹಾಲು ಕುಡಿದು, ತಾಯಿ ಮಡಿಲಲ್ಲೇ ಮಲಗಿಕೊಂಡಿದೆ.

ಇದನ್ನೂ ಓದಿ: Heart Attack: ಆರತಕ್ಷತೆ ವೇಳೆಯೇ ಹೃದಯಾಘಾತಕ್ಕೆ ಮದುಮಗ ಬಲಿ! ಸಂಭ್ರಮ ತುಂಬಿದ ಮನೆಯಲ್ಲಿ ಈಗ ಸೂತಕ

ತೀರ್ಥಯಾತ್ರೆಗೆ ಹೊರಟಿದ್ದ ಮಹಿಳೆಯ ಅಪ್ಪ, ಅಮ್ಮ

ಜಯಶ್ರೀ ಹೆರಿಗೆಗಾಗಿ ತವರು ಮನೆಯಲ್ಲೇ ಇದ್ದರು ಎನ್ನಲಾಗಿದೆ. ಇನ್ನು ಅವರ ಅಪ್ಪ ಅಮ್ಮ ತಮ್ಮ ಸಂಬಂಧಿಕರೊಂದಿಗೆ ತಮಿಳುನಾಡಿನ ತೀರ್ಥ ಕ್ಷೇತ್ರಗಳಿಗೆ ಯಾತ್ರೆಗೆ ತೆರಳಿದ್ದರು ಎನ್ನಲಾಗಿದೆ. ಹೀಗಾಗಿ ಮನೆಯಲ್ಲಿ ಅಜ್ಜ ಅಜ್ಜಿ ಜೊತೆ ಜಯಶ್ರೀ ಹಾಗೂ ಪುಟ್ಟ ಮಗು ಇದ್ದರು.

ಅಜ್ಜ, ಅಜ್ಜಿ ಬಂದು ನೋಡಿದಾಗ ಘಟನೆ ಬೆಳಕಿಗೆ

ಇಲ್ಲಿ ಮನೆಯಲ್ಲಿದ್ದ ಜಯಶ್ರೀ ಮಗುವಿಗೆ ಹಾಲು ಕುಡಿಸುತ್ತಿದ್ದಾಳೆ ಅಂತ ಮನೆಯಲ್ಲಿದ್ದ ಅಜ್ಜ, ಅಜ್ಜಿ ತಮ್ಮ ತಮ್ಮ ಬೆಳಗ್ಗಿನ ಕೆಲಸದಲ್ಲಿ ನಿರತರಾಗಿದ್ದಾರೆ. ಇದಾದ ಬಳಿಕ ಎಷ್ಟೇ ಹೊತ್ತಾದರೂ ಜಯಶ್ರೀ ರೂಮಿನಿಂದ ಹೊರಕ್ಕೆ ಬರಲಿಲ್ಲ. ಅಲ್ಲದೇ ಬೆಳಗ್ಗಿನ ಉಪಹಾರಕ್ಕೂ ಬರಲಿಲ್ಲ. ಇದರಿಂದ ಗಾಬರಿಯಾದ ಅಜ್ಜ ಅಜ್ಜಿ ಕೋಣೆಗೆ ಹೋಗಿ ನೋಡಿದಾಗ ಜಯಶ್ರೀ ಕುಸಿದು ಬಿದ್ದಿರುವುದು ಬೆಳಕಿಗೆ ಬಂದಿದೆ.

ಈ ಹಿಂದೆಯೂ ಜಯಶ್ರೀಗೆ ಅನಾರೋಗ್ಯ

ಜಯಶ್ರೀಗೆ ಇತ್ತೀಚೆಗೆ ಒಂಚೂರು ಅನಾರೋಗ್ಯ ಕಾಣಿಸಿಕೊಂಡಿತ್ತು. ಆಗ ಪತಿ ಪ್ರಶಾಂತ್, ಜಯಶ್ರೀ ಅವರನ್ನು ಚಿಕಿತ್ಸೆಗಾಗಿ ಮಹಬೂಬ್​ ನಗರದ ಆಸ್ಪತ್ರೆಯೊಂದಕ್ಕೆ ಕರೆದುಕೊಂಡ ಹೋಗಿದ್ದರು. ಅವರ ಹೃದಯನಾಳದಲ್ಲಿ ಸ್ವಲ್ಪ ಸಮಸ್ಯೆ ಇದ್ದು, ಔಷಧದಿಂದ ಗುಣವಾಗುತ್ತದೆ ಎಂದು ವೈದ್ಯರು ಹೇಳಿದ್ದರಿಂದ ಅವರನ್ನು ಮರಳಿ ನೆರೆಲ್ಲಪಲ್ಲಿಗೆ ಕರೆದುಕೊಂಡು ಬರಲಾಗಿತ್ತು. ಆಗಿನಿಂದ ಹೃದಯ ಸಮಸ್ಯೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Yoga for Fitness: ಕೇವಲ 10 ನಿಮಿಷ ಯೋಗ ಮಾಡಿ, ರೋಗದಿಂದ ದೂರ ಇರಿ!

ಆರತಕ್ಷತೆ ವೇಳೆಯೇ ಹೃದಯಾಘಾತಕ್ಕೆ ಮದುಮಗ ಬಲಿ!

ಕಳೆದ ಕೆಲ ದಿನಗಳ ಹಿಂದೆ ಮದುವೆ ಆರತಕ್ಷತೆ ವೇಳೆಯೇ ಹೃದಯಾಘಾತದಿಂದ ವರ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿತ್ತು. 26 ವರ್ಷದ ಹೊನ್ನೂರ ಸ್ವಾಮಿ ಎಂಬಾತನೇ ಮೃತ ದುರ್ದೈವಿ. ಆರತಕ್ಷತೆ ವೇಳೆಯೇ ವೇದಿಕೆ ಮೇಲೆ ಕುಸಿದು ಬಿದ್ದು, ಹೊನ್ನುರ ಸ್ವಾಮಿ ಮೃತಪಟ್ಟಿದ್ದರು.
Published by:Annappa Achari
First published: