Suicide: 6 ವರ್ಷ ಹಿಂದೆ ತಂದೆ ಸೂಸೈಡ್, ಈಗ ತಾಯಿ ಮಗಳು ಆತ್ಮಹತ್ಯೆ! ಪರೀಕ್ಷೆ ಫೇಲ್ ಆಗಿದ್ದಕ್ಕೆ ದುಡುಕಿನ ನಿರ್ಧಾರ

ಮಲಗಿದ್ದ ಮಗಳನ್ನು ಎಬ್ಬಿಸಿದ ಆಕೆ, ಮೊದಲು ಮಗಳ ಕುತ್ತಿಗೆಗೆ ನೇಣು ಬಿಗಿದು ಕೊಂದಿದ್ದಾಳೆ. ಬಳಿಕ ತನ್ನ ರೂಮಲ್ಲೇ ಫ್ಯಾನ್‌ಗೆ ಸೀರೆ ಕಟ್ಟಿಕೊಂಡು, ತನ್ನ ಕುತ್ತಿಗೆಗೆ ಕುಣಿಕೆಯಂತೆ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಆತ್ಮಹತ್ಯೆ ಮಾಡಿಕೊಂಡ ಮಹಿಳೆ

  • Share this:
ತಮಿಳುನಾಡು: ತಿರುಪ್ಪೂರ್ ದಲ್ಲಿ (Tiruppur) ಮಹಿಳೆಯೊಬ್ಬರು (Women) ತನ್ನ 10 ವರ್ಷದ ಮಗಳೊಂದಿಗೆ (Daughter) ನೇಣು ಹಾಕಿಕೊಂಡು (Hanging) ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ತಿರುಪ್ಪೂರ್ ಜಿಲ್ಲೆಯ ಧರ್ಮಪುರಂ (Dharmapuram) ಬಳಿಯ ಅಲಂಗಿಯಂ ಕಾಮರಾಜರ್ ಪಟ್ಟಣದಲ್ಲಿ ಘಟನೆ ನಡೆದಿದೆ. 28 ವರ್ಷದ ಪೂಂಗೋಡಿ ಎಂಬಾಕೆಯೇ ಆತ್ಮಹತ್ಯೆಗೆ ಶರಣಾದ ಮಹಿಳೆ. ಈಕೆ 5ನೇ ತರಗತಿಯಲ್ಲಿ (5th Class) ಓದುತ್ತಿದ್ದ ತನ್ನ ಪುಟ್ಟ ಮಗಳೊಂದಿಗೆ ತಮ್ಮ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮೊದಲು ಪುಟ್ಟ ಮಗಳ ಕೊರಳಿಗೆ ನೇಣು ಬಿಗಿದು, ಅವಳನ್ನು ಕೊಂದಿದ್ದಾಳೆ. ಬಳಿಕ ತಾನೂ ಕೂಡ ಕೊರಳಿಗೆ ಸೀರೆ ಸುತ್ತುಕೊಂಡು, ನೇಣು ಹಾಕಿಕೊಂಡಿದ್ದಾಳೆ ಅಂತ ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

 6 ವರ್ಷಗಳ ಹಿಂದೆ ಮಹಿಳೆಯ ಪತಿ ಆತ್ಮಹತ್ಯೆ

ಪೂಂಗೋಡಿ ಅವರಿಗೆ ಕಾಳಿದಾಸ್ ಎಂಬುವರ ಜೊತೆ ಮದುವೆಯಾಗಿತ್ತು. ಅವರಿಗೆ ವರ್ಷಾ ಎಂಬ ಒಂದು ಹೆಣ್ಣು ಮಗಳೂ ಇದ್ದು, ಸದ್ಯ 5ನೇ ತರಗತಿ ಓದುತ್ತಿದ್ದಳು. ಇನ್ನು ಪತಿ ಕಾಳಿದಾಸ್ ವೈಯಕ್ತಿಕ ಕಾರಣಗಳಿಂದ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು. ಅದಾದ ಬಳಿಕ ಏಕಾಂಗಿಯಾಗಿದ್ದ ಪುಂಗೋಡಿ, ತನ್ನ ಮಗಳು ವರ್ಷಾ ಜೊತೆ ತನ್ನ ವೃದ್ಧ ತಾಯಿ ಸರಸ್ವತಿ ಎಂಬುವರ ಜೊತೆ ವಾಸಿಸುತ್ತಿದ್ದರು.

ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ತಯಾರಿ ನಡೆಸಿದ್ದ ಮಹಿಳೆ

ಪೂಂಗೋಡಿ ಧಾರಾಪುರಂ ಎಂಬ ಪ್ರದೇಶದ ಖಾಸಗಿ ಬಟ್ಟೆ ತಯಾರಿಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆಕೆಯ ಮಗಳು ವರ್ಷಾ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದಳು. ಪೂಂಗೋಡಿ 2 ತಿಂಗಳ ಹಿಂದೆ ತನ್ನ ಕೆಲಸವನ್ನು ತೊರೆದು ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ (TNPSC) ಪರೀಕ್ಷೆಗೆ ತಯಾರಿ ಆರಂಭಿಸಿದ್ದರು. ಅವರು ಜುಲೈ 24ರಂದು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಅವರಿಗೆ ಪರೀಕ್ಷೆಯನ್ನು ಚೆನ್ನಾಗಿ ಬರೆಯಲು ಸಾಧ್ಯವಾಗಿರಲಿಲ್ಲ. ಪರೀಕ್ಷೆಯಲ್ಲಿ ಪ್ರಶ್ನೆಗಳು ಕಠಿಣವಾಗಿತ್ತು ಎಂದು ಎಲ್ಲರ ಬಳಿ ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಬೇಸರ ಮಾಡಿಕೊಂಡಿದ್ದರು ಎನ್ನಲಾಗಿದೆ.

ಇದನ್ನೂ ಓದಿ: Mother's Death: ಮಗುವಿಗೆ ಹಾಲುಣಿಸುತ್ತಿದ್ದಾಗಲೇ ತಾಯಿ ಸಾವು! ಕ್ರೂರಿ ವಿಧಿಯೇ ನಿನಗೆ ಕರುಣೆ ಇಲ್ಲವೇ?

ಸರಿಯಾಗಿ ಕೆಲಸ ಸಿಗುತ್ತಿಲ್ಲ ಅಂತ ನೊಂದು ಆತ್ಮಹತ್ಯೆ

ಇರೋ ಕೆಲಸವನ್ನು ಬಿಟ್ಟಿದ್ದ ಪುಂಗೋಡಿ, ಪರೀಕ್ಷೆಯಲ್ಲೂ ಚೆನ್ನಾಗಿ ಬರೆದಿರಲಿಲ್ಲ., ಹೀಗಾಗಿ ಮುಂದೆ ಏನು ಮಾಡುವುದು ಅಂತ ತೋಚದೇ ಆತಂಕಕ್ಕೆ ಒಳಗಾಗಿದ್ದರು. ಇದೇ ಕಾರಣದಿಂದ ಆತ್ಮಹತ್ಯೆಗೆ ಯೋಚಿಸಿದ್ದಾರೆ ಎನ್ನಲಾಗಿದೆ.

ಮಲಗಿದ್ದ ಮಗಳನ್ನು ಎಬ್ಬಿಸಿ ಕೊಲೆ

ಬೆಳಗ್ಗೆ ಮನೆಯಲ್ಲಿ ಮಗಳು ವರ್ಷಾ ಜೊತೆ ಒಬ್ಬಳೇ ಇದ್ದಳು. ಮಲಗಿದ್ದ ವರ್ಷಾಳನ್ನು ಎಬ್ಬಿಸಿದ ಆಕೆ ಮೊದಲು ಮಗಳ ಕುತ್ತಿಗೆಗೆ ನೇಣು ಬಿಗಿದು ಕೊಂದಿದ್ದಾಳೆ. ಬಳಿಕ ತನ್ನ ರೂಮಲ್ಲೇ ಫ್ಯಾನ್‌ಗೆ ಸೀರೆ ಕಟ್ಟಿಕೊಂಡು, ತನ್ನ ಕುತ್ತಿಗೆಗೆ ಕುಣಿಕೆಯಂತೆ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ: Heart Attack: ಆರತಕ್ಷತೆ ವೇಳೆಯೇ ಹೃದಯಾಘಾತಕ್ಕೆ ಮದುಮಗ ಬಲಿ! ಸಂಭ್ರಮ ತುಂಬಿದ ಮನೆಯಲ್ಲಿ ಈಗ ಸೂತಕ

ತಾಯಿ ಮನೆಗೆ ಬಂದಾಗ ಘಟನೆ ಬೆಳಕಿಗೆ

ಪೂಂಗೋಡಿ ಅವರ ತಾಯಿ ಸರಸ್ವತಿ ಮನೆಗೆ ಹಿಂದಿರುಗಿದಾಗ ಮಗಳು ಮತ್ತು ಮೊಮ್ಮಗಳು ಮೃತಪಟ್ಟಿರುವುದನ್ನು ಕಂಡು ಆಘಾತಗೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಅಲಂಗಿಯಂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೃತದೇಹಗಳನ್ನ ಶವಪರೀಕ್ಷೆಗಾಗಿ ಅಧಿಕಾರಿಗಳು ತಿರುಪ್ಪೂರು ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Published by:Annappa Achari
First published: