Murder: "ಮನೆಗೆ ಬಾ" ಅಂತ ಕರೆಸಿಕೊಂಡಳು ಆಂಟಿ! ಅಲ್ಲಿ ಅವಳೊಬ್ಬಳೇ ಇರಲಿಲ್ಲ! ಮುಂದೇನಾಯ್ತು ಗೊತ್ತಾ?

"ಗಂಡ ಮನೆಯಲ್ಲಿ ಇಲ್ಲ, ನಾನು ಒಬ್ಬಳೇ ಇದ್ದೀನಿ" ಅಂತ ಆಕೆ ಅವನನ್ನು ಕರೆಸಿಕೊಂಡಳು. ಅವಳು ಕರೆದಿದ್ದಾಳೆ ಅಂತ ಆತ ಮನಸ್ಸಲ್ಲೇ ಮಂಡಿಗೆ ತಿನ್ನುತ್ತಾ ಹೋದ! ಆದ್ರೆ ಅಲ್ಲಿ ಆಕೆ ಒಬ್ಬಳೇ ಇರಲಿಲ್ಲ. ಹೀಗೆ ಕುಣಿಯುತ್ತಾ ಹೋದವ ಹೆಣವಾಗಿ ಬಂದ!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಉತ್ತರ ಪ್ರದೇಶ: ಮೊದಲು ಅವರಿಬ್ಬರು ಪ್ರೀತಿಸುತ್ತಾ (Love) ಇದ್ದರು. ಆದ್ರೆ ಅದ್ಯಾಕೋ ಏನೋ ಇಬ್ಬರೂ ಮದುವೆ (Marriage) ಆಗದೇ ದೂರ ದೂರ ಆಗಿದ್ದರು. ಆದರೂ ಅವರ ಪ್ರೀತಿ, ಪ್ರೇಮ, ಪ್ರಣಯ ಮುಂದುವರೆದಿತ್ತು. ಗಂಡನ (Husband) ಕಣ್ತಪ್ಪಿಸಿ, ಆಕೆ ಆತನನ್ನು ಆಗಾಗ ಭೇಟಿಯಾಗುತ್ತಾ (Meet) ಇದ್ದಳು. ಇಬ್ಬರೂ ಅನೈತಿಕ ಸಂಬಂಧದಲ್ಲಿ (Illegal Relationship) ತೊಡಗಿದ್ದರು. ಆಕೆ ಯಾರೂ ಇಲ್ಲದಿದ್ದಾಗ ಕಾಲ್ (Call) ಮಾಡಿ ಆತನನ್ನು ಮನೆಗೆ ಕರೆಸಿಕೊಳ್ಳುವುದು ಕಾಮನ್ ಆಗಿತ್ತು. ಅಂದೂ ಹಾಗೇ, "ಗಂಡ ಮನೆಯಲ್ಲಿ ಇಲ್ಲ, ನಾನು ಒಬ್ಬಳೇ ಇದ್ದೀನಿ" ಅಂತ ಆಕೆ ಅವನನ್ನು ಕರೆಸಿಕೊಂಡಳು. ಅವಳು ಕರೆದಿದ್ದಾಳೆ ಅಂತ ಆತ ಮನಸ್ಸಲ್ಲೇ ಮಂಡಿಗೆ ತಿನ್ನುತ್ತಾ ಹೋದ! ಆದ್ರೆ ಅಲ್ಲಿ ಆಕೆ ಒಬ್ಬಳೇ ಇರಲಿಲ್ಲ. ಹೀಗೆ ಕುಣಿಯುತ್ತಾ ಹೋದವ ಹೆಣವಾಗಿ ಬಂದ!

 ಘಟನೆ ನಡೆದಿರುವುದು ಎಲ್ಲಿ?

 ಉತ್ತರ ಪ್ರದೇಶದ ನೋಯ್ಡಾದಲ್ಲಿ ಇಂಥದ್ದೊಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. 28 ವರ್ಷದ ರಾಬಿನ್ ಎಂಬಾತನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಆತನನ್ನು ಕೊಂದ ಆರೋಪದ ಮೇಲೆ ಮೋನಿಕಾ ಹಾಗೂ ಆಕೆಯ ತಾಯಿ ಅಂಜು ಅಂತ ಗುರುತಿಸಲಾಗಿದೆ. ಇನ್ನು ಇದೇ ಕೇಸ್‌ಗೆ ಸಂಬಂಧಿಸಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ರಾಬಿನ್, ಮೋನಿಕಾ ನಡುವೆ ಪ್ರೀತಿ, ಪ್ರೇಮ, ಪ್ರಣಯ

ಸೂರಜ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಪಾಲಿ ಗ್ರಾಮದಲ್ಲಿ ಘಟನೆ ನಡೆದಿದೆ. ಕೊಲೆಯಾದ ರಾಬಿನ್ ಹಾಗೂ ಆರೋಪಿ ಮೋನಿಕಾ ನಡುವೆ ಪ್ರೀತಿ ಇತ್ತು. ಸುಮಾರು ವರ್ಷಗಳ ಕಾಲ ಪ್ರೀತಿಯ ಹೆಸರಲ್ಲಿ ಇಬ್ಬರೂ ಸುತ್ತಾಡಿದ್ದರು. ಬಳಿಕ ಯಾವುದೋ ಕಾರಣಕ್ಕೆ ದೂರಾಗಿದ್ದರು. ಬಳಿಕ 2018ರಲ್ಲಿ ಆಕೆ ಬೇರೆ ವಿವಾಹವಾಗಿದ್ದಳು.

ಇದನ್ನೂ ಓದಿ: Death: ಮನೆಗೆ ಬಿದ್ದ ಬೆಂಕಿ ಐವರನ್ನು ಬಲಿ ಪಡೆಯಿತು! ನೋಡ ನೋಡುತ್ತಿದ್ದಂತೆ ಸುಟ್ಟು ಹೋದ ಕಂದಮ್ಮ

 ವಿವಾಹ ಆದ ಮೇಲೂ ಇಬ್ಬರ ನಡುವೆ ಅನೈತಿಕ ಸಂಬಂಧ

ಮೋನಿಕಾ ಬೇರೆಯವರನ್ನು ವಿವಾಹವಾಗಿದ್ದರೂ ರಾಬಿನ್ ಜೊತೆ ಪ್ರೀತಿ, ಪ್ರೇಮ, ಪ್ರಣಯ ಮುಂದುವರೆಸಿದ್ಗಳು. ಇಬ್ಬರೂ ಆಗಾಗ ಭೇಟಿಯಾಗುತ್ತಾ ಇದ್ದರು. ಇನ್ನು ಒಂದೇ ವರ್ಷಕ್ಕೆ ಆಕೆ ಗಂಡನಿಂದ ಬೇರೆಯಾಗಿದ್ದಳು.

ಫೆಬ್ರವರಿ 27ರಂದು ಮನೆಗೆ ಕರೆಸಿ ಹತ್ಯೆ

ಆರೋಪಿ ಮೋನಿಕಾ ಫೆಬ್ರವರಿ 27ರಂದು ಕಾಲ್ ಮಾಡಿ ರಾಬಿನ್‌ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆಕೆ ಒಬ್ಬಳೇ ಇದ್ದಾಳೆ ಅಂತ ಮನೆಗೆ ಬಂದಿದ್ದ ರಾಬಿನ್‌ಗೆ ಶಾಕ್ ಆಗಿದೆ. ಯಾಕೆಂದ್ರೆ ಅಲ್ಲಿ ಆಕೆಯ ತಾಯಿ ಅಂಜು ಹಾಗೂ ಆಕೆಯ ಸಹೋದರರು ಇದ್ದರು. ಮನೆಗೆ ಬಂದ ರಾಬಿನ್ ಜೊತೆ ಅಂಜು ಹಾಗೂ ಕುಟುಂಬಸ್ಥರು ಜಗಳ ತೆಗೆದಿದ್ದಾರೆ. ಬಳಿಕ ಜಗಳ ವಿಪರೀತಕ್ಕೆ ಹೋಗಿದೆ.

ಶವವನ್ನು ಕಾಲುವೆಗೆ ಎಸೆದ ದುಷ್ಕರ್ಮಿಗಳು

ಆರೋಪಿ ಮೋನಿಕಾ ಅವರ ಮೂವರು ಸಹೋದರರಾದ ರವಿ, ಸಾಗರ್ ಮತ್ತು ಸುಬೋಧ್ ರಾಬಿನ್ ಮೇಲೆ ಹಲ್ಲೆ ಮಾಡಿದ್ದಾರೆ, ಆತನ ಕತ್ತು ಹಿಸುಕಿ ಕೊಂದಿದ್ದಾರೆ. ನಂತರ ಮೃತದೇಹವನ್ನು ಎಸೆದು ಶವವನ್ನು ಸ್ನೇಹಿತರೊಬ್ಬರ ಕಾರಿನಲ್ಲಿ ತೆಗೆದುಕೊಂಡು ಹೋಗಿ ಕಾಲುವೆಗೆ ಎಸೆದಿದ್ದಾರೆ.

ರಾಬಿನ್ ಮನೆಯವರಿಂದ ಮಿಸ್ಸಿಂಗ್ ಕಂಪ್ಲೇಂಟ್

ರಾಬಿನ್ ಮನೆಯಿಂದ ಕಾಣದೇ ಇದ್ದಾಗ ಆತನ ಮನೆಯವರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿದ್ದಾರೆ. ಪೊಲೀಸರು ಆತನ ಮೊಬೈಲ್ ಟ್ರ್ಯಾಕ್ ಮಾಡಿದಾಗ, ಲಾಸ್ಟ್ ಕಾಲ್ ಮೋನಿಕಾಗೆ ಹೋಗಿದೆ. ಅದೇ ಆಧಾರದ ಮೇಲೆ ಮೋನಿಕಾಳನ್ನು ವಿಚಾರಿಸಿದಾಗ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

ಇದನ್ನೂ ಓದಿ: Viral News: 5 ವರ್ಷದ ವಿದ್ಯಾರ್ಥಿ ಹೊಡೆದಿದ್ದಕ್ಕೆ ಶಿಕ್ಷಕಿ ಪ್ರಜ್ಞೆ ತಪ್ಪಿ ಬಿದ್ದೇ ಹೋದ್ರಂತೆ! ಯಾರಪ್ಪ ಆ ಶಿಷ್ಯ?

ಇದೇ ಏಪ್ರಿಲ್‌ನಲ್ಲಿ ಮದುವೆಯಾಗಬೇಕಿದ್ದ ರಾಬಿನ್

ಇನ್ನು ಮೃತ ರಾಬೀನ್‌ಗೂ ಸಹ ಮದುವೆ ನಿಶ್ಚಯವಾಗಿತ್ತು. ಇದೇ ಏಪ್ರಿಲ್ 18ರಂದು ಮದುವೆ ನಡೆಸಲು ಕುಟುಂಬಸ್ಥರು ನಿಶ್ಚಯಿಸಿದ್ದರು. ಅಷ್ಟರಲ್ಲಾಗಲೇ ರಾಬಿನ್ ಕೊಲೆಯಾಗಿದೆ. ಇನ್ನು ಆರೋಪಿಗಳ ವಿಚಾರಣೆ ನಡೆದಿದ್ದು, ಕೊಲೆಗೆ ಕಾರಣ ಏನು ಎನ್ನುವುದು ಬಯಲಾಗಲಿದೆ.
Published by:Annappa Achari
First published: