Viral Video: ಆಗಸದಲ್ಲಿ ಏನದು ಬೆಂಕಿ ಉಂಡೆಗಳು? ವೈರಲ್ ಆಯ್ತು ಅಪರೂಪದ ದೃಶ್ಯ

ಆಗಸದ ಕತ್ತಲೆಯಲ್ಲಿ ದಪ್ಪನೆಯ ಬೆಂಕಿಯ ಸಾಲಿನಂತಹ ವಿಸ್ಮಯಕಾರಿ ದೃಶ್ಯ ಕಂಡುಬಂದಿದೆ. ಇದು ಉಲ್ಕಾಪಾತ ಎನ್ನಲಾಗಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶಗಳಲ್ಲಿ ಅನೇಕರು ಈ ಅಪರೂಪದ ದೃಶ್ಯ ಕಂಡು ಅಚ್ಚರಿಗೊಂಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಈ ನಭೋಮಂಡಲ ಅಂದರೆ ಅದ್ಭುತಗಳ ಆಗರ, ಕೌತುಕಗಳ ಕಣಜ. ಸೂರ್ಯ (Sun), ಚಂದ್ರ (Moon), ಗ್ರಹ (Planet), ನಕ್ಷತ್ರದ (Stars) ಜೊತೆಗೆ ಅದೆಷ್ಟೋ ಆಕಾಶ ಕಾಯಗಳು ನಭೋಮಂಡಲದ ಒಡಲಲ್ಲಿ ಇವೆ. ಕೆಲವೊಮ್ಮೆ ಅಲ್ಲಿನ ಕೌತುಕಗಳ ದರ್ಶನ ಮನುಷ್ಯರಿಗೂ ಆಗುತ್ತವೆ. ನಿನ್ನೆ ಯುಗಾದಿ ಹಬ್ಬ (Ugadi Festival) ಅಂತ ಚಂದ್ರ ದರ್ಶನ ಮಾಡಬೇಕು ಅಂತಿದ್ದವರಿಗೆ ಆಕಾಶದಲ್ಲಿ (Sky) ಮತ್ತೊಂದು ವಿಸ್ಮಯದ ದರ್ಶನವಾಗಿದೆ. ಆಗಸದ ಕತ್ತಲೆಯಲ್ಲಿ ದಪ್ಪನೆಯ ಬೆಂಕಿಯ ಸಾಲಿನಂತಹ ವಿಸ್ಮಯಕಾರಿ ದೃಶ್ಯ ಕಂಡುಬಂದಿದೆ. ಇದು ಉಲ್ಕಾಪಾತ (meteor) ಎನ್ನಲಾಗಿದೆ. ಮಹಾರಾಷ್ಟ್ರ (Maharashtra) ಮತ್ತು ಮಧ್ಯಪ್ರದೇಶಗಳಲ್ಲಿ (Madhya Pradesh) ಅನೇಕರು ಈ ಅಪರೂಪದ ದೃಶ್ಯ ಕಂಡು ಅಚ್ಚರಿಗೊಂಡಿದ್ದಾರೆ. ಹಲವರ ಮೊಬೈಲ್‌ನಲ್ಲಿ (Mobile) ಇದು ಸೆರೆಯಾಗಿದ್ದು (Record), ಆ ವಿಡಿಯೋಗಳೀಗ (Video) ವೈರಲ್ (Viral) ಆಗಿವೆ.

ಅಪರೂಪದ ದೃಶ್ಯ ಕಾಣಿಸಿದ್ದು ಎಲ್ಲಿ?

ಮಹಾರಾಷ್ಟ್ರ ರಾಜ್ಯದ ನಾಗಪುರ, ಅಮರಾವತಿ ಹಾಗೂ ಮಧ್ಯಪ್ರದೇಶದ ಬರ್ವಾನಿ, ಭೂಪಾಲ್, ಇಂದೋರ್, ಬೆಟುಲ್, ಧಾರ್ ಮತ್ತು ಝಬೂವಾ ಜಿಲ್ಲೆಗಳ ಕೆಲವು ಹಳ್ಳಿಗಳು ಸೇರಿದಂತೆ ಕೆಲವೇ ಕೆಲವು ಪ್ರದೇಶಗಳಲ್ಲಿ ಉಲ್ಕಾಪಾತವಾಗಿದೆ. ರಾತ್ರಿ ಸುಮಾರು 8 ಗಂಟೆಗೆ ಮೂರ್ನಾಲ್ಕು ಮಿಂಚಿನ ಸರಳುಗಳ ರೀತಿಯಲ್ಲಿ ಭಾಸವಾಗುವಂತೆ ಉಲ್ಕೆಗಳು ಕಾಣಿಸಿಕೊಂಡಿವೆ. ಮಹಾರಾಷ್ಟ್ರದ ಅರ್ಹಾದ್ ಗ್ರಾಮದ ರೈತ ಪ್ರಕಾಶ್ ಎಂಬಾತ ಮೊಬೈಲ್ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಹಿಡಿದಿದ್ದಾರೆ.

ಈ ಬಗ್ಗೆ ತಜ್ಞರು ಹೇಳುವುದೇನು?

ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಉಲ್ಕಾಪಾತಕ್ಕಿಂತ ಭಿನ್ನವಾಗಿ ಮತ್ತು ವಿಚಿತ್ರವಾಗಿ ಈ ಉಲ್ಕಾಪಾತ ಕಾಣಿಸಿಕೊಂಡಿರುವುದು ಜನರಲ್ಲಿ ಮತ್ತು ತಜ್ಞರಲ್ಲಿ ಅಚ್ಚರಿ  ಉಂಟುಮಾಡಿದೆ. ರಾತ್ರಿ ವೇಳೆ ಉಲ್ಕೆಗಳು ಪ್ರಕಾಶಮಾನ ಬೆಳಕನ್ನು ಹೊಮ್ಮಿಸುತ್ತವೆ. ಹಲವು ಉಲ್ಕೆಗಳು ಒಂದೇ ದಿಕ್ಕಿನಲ್ಲಿ ಸಾಗುವ ಈ ವಿದ್ಯಮಾನ ತೀರಾ ಸಾಮಾನ್ಯವಾಗಿದೆ ಎಂದು ಉಜ್ಜಯಿನಿ ಮೂಲದ 300 ವರ್ಷಗಳು ಹಳೆಯದಾದ ಜಿವಾಜಿ ವೀಕ್ಷಣಾ ಕೇಂದ್ರದ ಹಿರಿಯ ಅಧಿಕಾರಿ ರಾಜೇಂದ್ರ ಗುಪ್ತಾ ತಿಳಿಸಿದ್ದಾರೆ. ಇವು ಉಲ್ಕಾ ಶಿಲೆಗಳು ಅಂತ ಕಾಣಿಸುತ್ತದೆ. ಅವುಗಳ ಪತನ ಸಾಮಾನ್ಯವಾಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: Viral Video: ಪಾರ್ಕ್‌ನಲ್ಲಿ ಪ್ರೇಮಿಗಳ ಹೊಡೆದಾಟ! ತಪ್ಪಿಸೋಕೆ ಬಂದ ಈ ಮಹಾನುಭಾವ ಏನು ಮಾಡಿದ ನೋಡಿ...ವ್ಯಕ್ತವಾಯ್ತು ವಿವಿಧ ಅಭಿಪ್ರಾಯ

ಖಗೋಳಶಾಸ್ತ್ರಜ್ಞ ಜೊನಾಥನ್ ಮೆಕ್‌ಡೊವೆಲ್ ಮಹಾರಾಷ್ಟ್ರದಲ್ಲಿ ಕಂಡುಬರುವ ದೃಶ್ಯಗಳನ್ನು ಅನ್ನು ಫೆಬ್ರವರಿ 2021 ರಲ್ಲಿ ಉಡಾವಣೆಯಾದ "ಚೀನೀ ರಾಕೆಟ್ ಹಂತದ ಮರು-ಪ್ರವೇಶ" ಎಂದು ಉಲ್ಲೇಖಿಸಿದ್ದಾರೆ.

"ಇದು ಚೀನೀ ರಾಕೆಟ್ ಹಂತದ ಮರುಪ್ರವೇಶವಾಗಿದೆ ಎಂದು ನಾನು ನಂಬುತ್ತೇನೆ, ಫೆಬ್ರವರಿ 2021 ರಲ್ಲಿ ಪ್ರಾರಂಭಿಸಲಾದ ಚಾಂಗ್ ಝೆಂಗ್ 3B ಸರಣಿ ಸಂಖ್ಯೆ Y77 ನ ಮೂರನೇ ಹಂತ - ಇದು ಮುಂದಿನ ಒಂದು ಗಂಟೆಯಲ್ಲಿ ಮರುಪ್ರವೇಶಿಸುವ ನಿರೀಕ್ಷೆಯಿದೆ ಮತ್ತು ಟ್ರ್ಯಾಕ್ ಉತ್ತಮ ಹೊಂದಾಣಿಕೆಯಾಗಿದೆ, " ಸೆಂಟರ್ ಫಾರ್ ಆಸ್ಟ್ರೋಫಿಸಿಕ್ಸ್‌ನಲ್ಲಿ ಖಗೋಳಶಾಸ್ತ್ರಜ್ಞರಾಗಿರುವ ಮೆಕ್‌ಡೊವೆಲ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಇದು ಉಪಗ್ರಹದ ಬೆಳಕು

ನಾಗ್ಪುರದ ಸ್ಕೈವಾಚ್ ಗ್ರೂಪ್‌ನ ಅಧ್ಯಕ್ಷ ಸುರೇಶ್ ಚೋಪಡೆ ಮಾತನಾಡಿ, ಅಪರೂಪದ ಘಟನೆಯನ್ನು ಮಹಾರಾಷ್ಟ್ರದ ಹಲವಾರು ಜನರು ವೀಕ್ಷಿಸಿದ್ದಾರೆ ಮತ್ತು ಈ ಘಟನೆಯು ಉಪಗ್ರಹಕ್ಕೆ ಸಂಬಂಧಿಸಿದೆ ಎಂದು ತೋರುತ್ತದೆ.

ಇದು ಉಲ್ಕಾಪಾತವಲ್ಲ ಎಂದ ತಜ್ಞರು

"ಯಾವುದೋ ರಾಷ್ಟ್ರದ ಉಪಗ್ರಹವು ಆಕಸ್ಮಿಕವಾಗಿ ಬಿದ್ದಿರಬಹುದು ಅಥವಾ ಉದ್ದೇಶಪೂರ್ವಕವಾಗಿ ಬೀಳಲು ಕಾರಣವಾಗಿರಬಹುದು ಎಂದು ತೋರುತ್ತಿದೆ. ಇದು ಉಲ್ಕಾಪಾತ ಅಥವಾ ಬೆಂಕಿಯ ಚೆಂಡು ಎಂದು ತೋರುತ್ತಿಲ್ಲ" ಎಂದು ಚೋಪಾಡೆ ಹೇಳಿದ್ದಾರೆ.ಉಲ್ಕೆಗಳು ಸೃಷ್ಟಿಯಾಗುವುದು ಹೇಗೆ?

ಉಲ್ಕೆಗಳು ಕಲ್ಲಿನಂತಹ ವಸ್ತುಗಳಾಗಿದ್ದು, ಅತೀವ ವೇಗದಲ್ಲಿ ಭೂಮಿಯ ವಾತಾವರಣದತ್ತ ನುಗ್ಗುತ್ತವೆ. ಬಾಹ್ಯಾಕಾಶದಲ್ಲಿನ ದೂಳಿನ ಪ್ರದೇಶವನ್ನು ಹಾದು ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ. ಈ ವೇಳೆ ಸಣ್ಣ ಕಲ್ಲಿನಂತಹ ವಸ್ತುಗಳು ಸೆಕೆಂಡಿಗೆ 30 ರಿಂದ 60 ಕಿಮೀ ವೇಗದಲ್ಲಿ ವಾತಾವರಣ ಪ್ರವೇಶಿಸುತ್ತವೆ. ಆಗ ಉಲ್ಕಾಪಾತ ಎನ್ನಲಾಗುವ ಬೆಳಕಿನ ಗೆರೆಗಳು ಸೃಷ್ಟಿಯಾಗುತ್ತವೆ. ಈ ಉಲ್ಕೆಗಳು ಅತಿ ವೇಗದಿಂದ ಭೂಮಿಯ ವಾತಾವರಣವನ್ನು ಪ್ರವೇಶಿಸುವಾಗಲೇ ಜೋರಾಗಿ ಉರಿದು ಆರಿ ಹೋಗುತ್ತವೆ.

ಇದನ್ನೂ ಓದಿ: Viral Video: ಮೊದಲ ಬಾರಿಗೆ ಕನ್ನಡಿಯಲ್ಲಿ ಮುಖ ನೋಡಿಕೊಂಡ ನಾಯಿ ಮಾಡಿದ್ದೇನು ಗೊತ್ತಾ? ವಿಡಿಯೋ ನೋಡಿ

ಏಪ್ರಿಲ್‌ನಲ್ಲಿ ಉಲ್ಕಾಪಾತ ಸಾಮಾನ್ಯವೇ?

ಸಾಮಾನ್ಯವಾಗಿ ಪ್ರತಿವರ್ಷ ಏಪ್ರಿಲ್ 15ರಿಂದ ಏಪ್ರಿಲ್ 25ರವರಗೆ ಉಲ್ಕಾಪಾತವಾಗುತ್ತದೆ ಎಂದು ತಜ್ಞರು ಹೇಳುವ ಮಾತು. ಒಂದೊಂದೇ ನಕ್ಷತ್ರಗಳು ಭೂಮಿಯ ಕಡೆಗೆ ಬರುವಂತೆ ಸಾಮಾನ್ಯವಾಗಿ ಉಲ್ಕಾಪಾತ ಕಾಣಿಸಿಕೊಳ್ಳುತ್ತದೆ. ಆದರೆ ಈಗ ದೊಡ್ಡ ಆಕಾರದಲ್ಲಿ ನಿಗದಿತ ಸಮಯಕ್ಕೂ ಮುಂದೆಯೇ ಉಲ್ಕಾಪಾತ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.
Published by:Annappa Achari
First published: