ಭಾರತದ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಮಾತುಕತೆ ಫಲಪ್ರದ: ಚೀನಾ ವಿದೇಶಾಂಗ ಸಚಿವ

ಇನ್ನು ವುಹಾನ್ ಎಂಬಲ್ಲಿ ಮೊದಲ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಅಂದಿನ ಶೃಂಗಶಭೆ ನಮ್ಮ ಸಂಬಂಧಗಳ ಸ್ಥಿರತೆ ಹೆಚ್ಚಿಸಿತ್ತು. ಎರಡು ರಾಷ್ಟ್ರಗಳ ಸಂವಹನ ತಂತ್ರಗಳೂ ಕೂಡ ಹೆಚ್ಚಾಗಿತ್ತು ಎಂದರು ಪ್ರಧಾನಿ ನರೇಂದ್ರ ಮೋದಿ. 

news18-kannada
Updated:October 14, 2019, 9:22 AM IST
ಭಾರತದ ಪ್ರಧಾನಿ ಮೋದಿ-ಕ್ಸಿ ಜಿನ್​ಪಿಂಗ್​ ಮಾತುಕತೆ ಫಲಪ್ರದ: ಚೀನಾ ವಿದೇಶಾಂಗ ಸಚಿವ
ನರೇಂದ್ರ ಮೋದಿ ಮತ್ತು ಕ್ಸಿ ಜಿನ್​ಪಿಂಗ್.
  • Share this:
ನವದೆಹಲಿ(ಅ.13): ಭಾರತದ ಪ್ರಧಾನಿ ನರೇಂದ್ರ ಮೋದಿ ಜತೆಗಿನ ಅಧ್ಯಕ್ಷ ಕ್ಸಿ ಜಿನ್​​ಪಿಂಗ್ ನಡುವಿನ  ಅನೌಪಚಾರಿಕ ಶೃಂಗ ಸಭೆ ಮಾತುಕತೆ ಫಲಪ್ರದವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವ ಲುವೋ ಝಹೋಯಿ ತಿಳಿಸಿದ್ದಾರೆ. ಭಾರತ ಮತ್ತು ಚೀನಾ ದೇಶವೂ ಅನೇಕ ವರ್ಷಗಳಿಂದ ಉತ್ತಮ ಸ್ನೇಹ ಹೊಂದಿದೆ. ಉಭಯ ದೇಶಗಳ ನಡುವಿನ ಈ ಸ್ನೇಹ ಸಂಬಂಧ ಮತ್ತಷ್ಟು ಬಲಪಡಿಸಬೇಕು ಎನ್ನುತ್ತಾರೆ ಲುವೋ.

ಇತ್ತೀಚೆಗೆ ಚೀನಾ ಅಧ್ಯಕ್ಷ ಕ್ಸಿ- ಜಿನ್​ಪಿಂಗ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ತಮಿಳುನಾಡಿನ ಮಹಾಬಲಿಪುರಂನಲ್ಲಿ ಅನೌಪಚಾರಿಕ ಮಾತುಕತೆ ನಡೆಸಿದ್ದರು. ಸಭೆ ಬಳಿಕ ಮಾತಾಡಿದ ಪ್ರಧಾನಿ ಮೋದಿ, ಚೆನ್ನೈ ಮೂಲಕ ಭಾರತ ಹಾಗೂ ಚೀನಾ ಸಂಬಂಧಗಳ ಹೊಸ ಯುಗ ಆರಂಭಗೊಂಡಿದೆ ಹೇಳಿದ್ದರು. ಅಲ್ಲದೇ ಹಿಂದಿನ ವುಹಾನ್ ಶೃಂಗಸಭೆ ಉಭಯ ರಾಷ್ಟ್ರಗಳ ಸಂಬಂಧಗಳಲ್ಲಿ ಹೊಸ ನಂಬಿಕೆ ಹುಟ್ಟು ಹಾಕಿತ್ತು. ಹಾಗಾಗಿ ಮತ್ತೆ ಚೆನ್ನೈನಲ್ಲಿ ಮಹತ್ವದ ಮಾತುಕತೆ ನಡೆಸಿದ್ದೇವೆ ಎಂದರು.

ಇನ್ನು ವುಹಾನ್ ಎಂಬಲ್ಲಿ ಮೊದಲ ಅನೌಪಚಾರಿಕ ಶೃಂಗಸಭೆ ನಡೆದಿತ್ತು. ಅಂದಿನ ಶೃಂಗಶಭೆ ನಮ್ಮ ಸಂಬಂಧಗಳ ಸ್ಥಿರತೆ ಹೆಚ್ಚಿಸಿತ್ತು. ಎರಡು ರಾಷ್ಟ್ರಗಳ ಸಂವಹನ ತಂತ್ರಗಳೂ ಕೂಡ ಹೆಚ್ಚಾಗಿತ್ತು ಎಂದು ಹೇಳಿದ್ದರು ಪ್ರಧಾನಿ ನರೇಂದ್ರ ಮೋದಿ.

ಇದನ್ನೂ ಓದಿ: ಐತಿಹಾಸಿಕ ದಾಖಲೆ: ಇನ್ಸ್​ಸ್ಟಾಗ್ರಾಂನಲ್ಲಿ 30 ಮಿಲಿಯನ್ ಫಾಲೋವರ್ಸ್ ದಾಟಿದ ಜಾಗತಿಕ ನಾಯಕ ಪ್ರಧಾನಿ ಮೋದಿ

ಇದೇ ವೇಳೆ ಚೀನಾ ಹಾಗೂ ಭಾರತ ನಡುವೆ ವ್ಯಾಪಾರ ಸಂಬಂಧಗಳಿವೆ. ನಾವು ಅನೇಕ ವರ್ಷಗಳಿಂದ ಆರ್ಥಿಕ ಶಕ್ತಿ ಹೊಂದಿದ್ದೇವೆ. ಭಿನ್ನಾಭಿಪ್ರಾಯಗಳನ್ನು ಪಕ್ಕಕಿಟ್ಟು ಒಟ್ಟಿಗೆ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಉಭಯ ರಾಷ್ಟ್ರಗಳ ಸಂಬಂಧ ವಿಶ್ವದ ಶಾಂತಿ ಮತ್ತು ಸ್ಥಿರತೆಗೆ ಕೊಡುಗೆ ನೀಡುತ್ತದೆ ಎಂದು ತಿಳಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಬಳಿಕ ಮಾತನಾಡಿದ್ದ ಚೀನಾ ಅಧ್ಯಕ್ಷ ಕ್ಸಿಜಿನ್'ಪಿಂಗ್, ನಾವು ಸ್ನೇಹಪೂರ್ವಕವಾಗಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದೇವೆ. ನಿಮ್ಮ ಆತಿಥ್ಯ ಬಹಳ ಸಂತೋಷ ತಂದಿದೆ. ನಾವು ಉಭಯ ದೇಶಗಳ ಸಂಬಂಧ ಬಲಪಡಿಸಲು ಪ್ರಯತ್ನಿಸುತ್ತೇವೆ ಭರವಸೆ ನೀಡಿದ್ದರು.
---------
First published: October 13, 2019, 9:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading