ಇಂಧೋರ್, ಮಧ್ಯಪ್ರದೇಶ: ಅತ್ಯಾಚಾರ ಎಂಬ ಶಬ್ದ ಕೇಳುವುದಕ್ಕೇ ಕಠೋರವಾಗಿರುತ್ತದೆ. ಇನ್ನು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತರ (victims) ಮಾನಸಿಕ ಸ್ಥಿತಿ (mental state) ಹೇಗಿರಬೇಡ ಯೋಚಿಸಿ. ಹೀಗೆ ಅತ್ಯಾಚಾರ ಮಾಡಿದವರಿಗೆ ಶಿಕ್ಷೆ (punishment) ಕೊಡಬೇಕು, ಗಲ್ಲಿಗೆ ಏರಿಸಬೇಕು (hang) ಅಂತ ಎಲ್ಲೆಡೆ ಕೂಗು ಕೇಳಿ ಬರುತ್ತದೆ. ಆದರೆ ಇದೊಂದು ಪ್ರಕರಣದಲ್ಲಿ ಉಚ್ಛ ನ್ಯಾಯಾಲಯ (High Court) ನೀಡಿದ ತೀರ್ಪು (Judgment) ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ. 4 ವರ್ಷದ ಪುಟ್ಟ ಬಾಲಕಿ (Girl) ಮೇಲಿನ ಅತ್ಯಾಚಾರ ಪ್ರಕರಣವೊಂದರ ವಿಚಾರಣೆ ನಡೆಸಿದ ಮಧ್ಯ ಪ್ರದೇಶ ಹೈಕೋರ್ಟ್ (Madhya Pradesh High Court), ಆರೋಪಿಯ (accused) ಶಿಕ್ಷೆಯನ್ನು ಕಡಿತಗೊಳಿಸಿದೆ. ಇದಕ್ಕಿಂತ ಆಘಾತಕಾರಿ ವಿಚಾರ ಅಂದ್ರೆ ಆರೋಪಿ ಸಂತ್ರಸ್ತೆಯನ್ನು ಕೊಂದಿಲ್ಲ, ಹೀಗಾಗಿ ಶಿಕ್ಷೆ ಕಡಿತಗೊಳಿಸುವುದಾಗಿ ನ್ಯಾಯಪೀಠ ಹೇಳಿದೆ ಅಂತ ಮಾಧ್ಯಮಗಳು ವರದಿ ಮಾಡಿವೆ.
ಹೈಕೋರ್ಟ್ ತೀರ್ಪಿನ ಬಗ್ಗೆ ತೀವ್ರ ಚರ್ಚೆ
4 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿದಂತೆ ಮಧ್ಯ ಪ್ರದೇಶ ಹೈಕೋರ್ಟ್ ನೀಡಿದ ತೀರ್ಪು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅತ್ಯಾಚಾರದ ಬಳಿಕ ಆರೋಪಿ ಸಂತ್ರಸ್ತ ಬಾಲಕಿಯನ್ನು ಕೊಲ್ಲದೇ ಹಾಗೆ ಬಿಟ್ಟಿದ್ದಾನೆ ಅಂತ ನ್ಯಾಯಪೀಠ ಹೇಳಿದ್ದು, ಇದೇ ಕಾರಣಕ್ಕೆ ಶಿಕ್ಷೆಯನ್ನು ಕಡಿತಗೊಳಿಸಿದೆ.
ಶಿಕ್ಷೆ ಪ್ರಮಾಣ ತಗ್ಗಿಸಿದ ನ್ಯಾಯಪೀಠ
ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿಗಳಾದ ಸುಬೋಧ್ ಅಭಯಂಕರ್ ಮತ್ತು ಎಸ್ಕೆ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠವು ಈ ಅರ್ಜಿಯ ವಿಚಾರಣೆ ನಡೆಸಿದೆ. 4 ವರ್ಷದ ಬಾಲಕಿಯ ಅತ್ಯಾಚಾರ ಆರೋಪಿಗೆ ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು 20 ವರ್ಷಕ್ಕೆ ತಗ್ಗಿಸಿದೆ.
ಇದನ್ನೂ ಓದಿ: President: ನನ್ನನ್ನೂ ಭಾರತದ ರಾಷ್ಟ್ರಪತಿ ಮಾಡಿ! ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ವ್ಯಕ್ತಿ
ಕೋರ್ಟ್ ತೀರ್ಪಿನಲ್ಲಿ ನ್ಯಾಯಪೀಠ ಹೇಳಿದ್ದೇನು?
ಇಂತಹ ಸನ್ನಿವೇಶಗಳಲ್ಲಿ, ವಿಚಾರಣಾ ನ್ಯಾಯಾಲಯವು ಪುರಾವೆಗಳ ಅನ್ವಯಿಸುವಿಕೆಯಲ್ಲಿ ಯಾವುದೇ ಪ್ರಮಾದ ಎಸಗಿರುವುದು ಈ ನ್ಯಾಯಾಲಯಕ್ಕೆ ಕಂಡುಬಂದಿಲ್ಲ. ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯು ಎಸಗಿರುವ ರಾಕ್ಷಸೀಯ ಕೃತ್ಯವನ್ನು ಗಮನಿಸಿದಾಗ ಆತ ಮಹಿಳೆಯರ ಘನತೆ ಬಗ್ಗೆ ಯಾವುದೇ ಗೌರವ ಹೊಂದಿರುವುದು ಕಂಡುಬಂದಿಲ್ಲ. ಮತ್ತು ಆತ ನಾಲ್ಕು ವರ್ಷದ ಹೆಣ್ಣು ಮಗುವಿನ ಮೇಲೆ ಕೂಡ ಲೈಂಗಿಕ ಅಪರಾಧಗಳನ್ನು ಎಸಗುವಷ್ಟು ನೀಚನಾಗಿದ್ದಾನೆ. ಆತ ಈಗಾಗಲೇ ಅನುಭವಿಸುತ್ತಿರುವ ಸಜೆಯನ್ನು ತಗ್ಗಿಸಲು ಸೂಕ್ತವಾದ ಪ್ರಕರಣ ಇದು ಎನ್ನುವಂತಹ ಅಂಶಗಳು ನ್ಯಾಯಾಲಯಕ್ಕೆ ಕಾಣಿಸುತ್ತಿಲ್ಲ" ಎಂದು ಕೋರ್ಟ್ ಹೇಳಿದೆ.
ಆತ ಸಂತ್ರಸ್ತೆಯನ್ನು ಕೊಂದಿಲ್ಲ ಎಂದ ನ್ಯಾಯಪೀಠ!
ಇನ್ನು ಮುಂದುವರೆದು "ಆತ ಈ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಸಜೀವವಾಗಿ ಬಿಡುವಷ್ಟು ದಯಾಳು ಆಗಿರುವ ಸಂಗತಿಯನ್ನು ಪರಿಗಣಿಸಿ, ಆತನ ಜೀವಾವಧಿ ಶಿಕ್ಷೆಯನ್ನು 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನಾಗಿ ತಗ್ಗಿಸಬಹುದು ಎಂಬ ಅಭಿಪ್ರಾಯವನ್ನು ಕೋರ್ಟ್ ವ್ಯಕ್ತಪಡಿಸುತ್ತದೆ" ಎಂದು ನ್ಯಾಯಮೂರ್ತಿಗಳು ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ ಅಂತ ಮಾಧ್ಯಮಗಳು ವರದಿ ಮಾಡಿವೆ.
ನನ್ನನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದಿದ್ದ ಆರೋಪಿ
ಇನ್ನು ಈ ಪ್ರಕರಣದಲ್ಲಿ ಮೇಲ್ಮನವಿದಾರನು 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಕ್ಕಾಗಿ ಸೆಕ್ಷನ್ 376(2)(ಎಫ್) ಐಪಿಸಿ ಅಡಿಯಲ್ಲಿ ಆರೋಪಿಯಾಗಿದ್ದಾನೆ ಮತ್ತು ನಂತರ ದೋಷಿ ಎಂದು ತೀರ್ಪು ನೀಡಲಾಯಿತು. ಈ ತೀರ್ಪಿನಿಂದ ಅಸಮಾಧಾನಗೊಂಡ ಆರೋಪಿಯು ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಈ ಅತ್ಯಾಚಾರ ಪ್ರಕರಣದಲ್ಲಿ ತನ್ನನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಅರ್ಜಿದಾರರು ನ್ಯಾಯಾಲಯದ ಮುಂದೆ ಮನವಿ ಸಲ್ಲಿಸಿದ್ದ.
ಇದನ್ನೂ ಓದಿ: POK: ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಭಾಗ ಅಂತ ತೋರಿಸಿದ ರಷ್ಯಾ ನಕಾಶೆ! ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗ!
ಶಿಕ್ಷೆ ಕಡಿತಗೊಳಿಸಲು ಮನವಿ
ಎಫ್ಎಸ್ಎಲ್ ವರದಿಯನ್ನು ಪ್ರಾಸಿಕ್ಯೂಷನ್ ದಾಖಲೆಗೆ ತಂದಿಲ್ಲ ಎಂದು ಅವರು ಸೂಚಿಸಿದರು. ಇದು ಜೀವಾವಧಿ ಶಿಕ್ಷೆಗೆ ಅರ್ಹವಾದ ಪ್ರಕರಣವಲ್ಲ ಎಂದೂ ವಾದಿಸಲಾಯಿತು. ಹೀಗಾಗಿ, ಈಗಾಗಲೇ ಜೈಲಿನಲ್ಲಿ ಕಳೆದ ಅವಧಿಗೆ ಶಿಕ್ಷೆಯನ್ನು ಕಡಿಮೆ ಮಾಡಬೇಕೆಂದು ಆರೋಪಿ ಮನವಿ ಮಾಡಿದ್ದ. ಇದೀಗ ಹೈಕೋರ್ಟ್ ತೀರ್ಪು ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ