ನಾಯಿ ಹೆಸರಲ್ಲಿದೆ 2,700 ಕೋಟಿ!; ಇವು ವಿಶ್ವದ ಶ್ರೀಮಂತ ಪ್ರಾಣಿಗಳು

Rajesh Duggumane | news18
Updated:November 2, 2018, 2:57 PM IST
ನಾಯಿ ಹೆಸರಲ್ಲಿದೆ 2,700 ಕೋಟಿ!; ಇವು ವಿಶ್ವದ ಶ್ರೀಮಂತ ಪ್ರಾಣಿಗಳು
Rajesh Duggumane | news18
Updated: November 2, 2018, 2:57 PM IST
ನ್ಯೂಸ್​18 ಕನ್ನಡ

ದೊಡ್ಡ ದೊಡ್ಡ ಉದ್ಯಮಿಗಳು ಮಕ್ಕಳ ಹೆಸರಿನಲ್ಲಿ ಆಸ್ತಿ ಬರೆದಿಡುವುದು ಸಾಮಾನ್ಯ. ಇನ್ನು, ಸಮಾಜದ ಬಗ್ಗೆ ಕಾಳಜಿ ಇದ್ದವರು ಎನ್​ಜಿಒಗಳಿಗೆ ಒಂದಷ್ಟು ದೇಣಿಗೆ ನೀಡುತ್ತಾರೆ. ಇವರ ಮಧ್ಯೆ ಸಾಕಿದ ಪ್ರಾಣಿಯ ಹೆಸರಿಗೆ ಕೋಟ್ಯಾಂತರ ರೂಪಾಯಿ ಆಸ್ತಿ ಬರೆದಿಟ್ಟವರೂ ಇದ್ದಾರೆ. ಇತ್ತೀಚೆಗೆ ಶ್ರೀಮಂತ ಪ್ರಾಣಿಗಳ ಪಟ್ಟಿ ಬಿಡುಗಡೆ ಆಗಿದೆ. ಈ ಸಾಲಿನಲ್ಲಿ ಜರ್ಮನಿಯ ನಾಯಿ ಮೊದಲಿದ್ದು, ಇದರ ಹೆಸರಲ್ಲಿ ಬರೋಬ್ಬರಿ 2,700 ಕೋಟಿ ರೂ. ಮೌಲ್ಯದ ಆಸ್ತಿ ಇದೆ.

ಈ ನಾಯಿಯ ಹೆಸರು ಗಂಥರ್​ 4. ಇದು ಜರ್ಮನ್​ ಶಫರ್ಡ್​​ ತಳಿಯ ನಾಯಿ. ಇದರ ಹೆಸರಿನಲ್ಲಿ ಫ್ಲ್ಯಾಟ್​, ಮನೆ ಸೇರಿ ಒಟ್ಟು 2,725 ಕೋಟಿ ರೂ. ಮೌಲ್ಯದ ಆಸ್ತಿ ಬರೆದಿಡಲಾಗಿದೆ. ಎರಡನೇ ಸ್ಥಾನದಲ್ಲಿರು ಟಾರ್ಡಾರ್​ ಸಾಸ್​ ಎಂಬ ಬೆಕ್ಕಿನ ಹೆಸರಿನಲ್ಲಿ ಅದರ ಮಾಲೀಕ 723 ಕೋಟಿ ರೂ. ಆಸ್ತಿ ಬರೆದಿಟ್ಟಿದ್ದಾರೆ.

ಖ್ಯಾತ ಪಾಪ್​ ಸಿಂಗರ್​ ಟೈಲರ್​ ಸ್ವಿಫ್ಟ್​ ಪ್ರಾಣಿ ಪ್ರಿಯೆ. ಇವರು ಒಲಿವಿಯಾ ಬೆನ್​​ಸನ್​ ಹೆಸರಿನ ಬೆಕ್ಕನ್ನು ಸಾಕಿದ್ದಾರೆ. ಈಗಾಗಲೇ ಅನೇಕ ಜಾಹೀರಾತುಗಳಲ್ಲಿ ಈ ಬೆಕ್ಕು ಕಾಣಿಸಿಕೊಂಡಿದೆ. ಈ ಬೆಕ್ಕಿನ ಮೌಲ್ಯ 704 ಕೋಟಿ ರೂಪಾಯಿ!
 
Loading...

View this post on Instagram
 

Olivia just realized I’m wearing earrings of her face.


A post shared by Taylor Swift (@taylorswift) on


ಇದನ್ನೂ ಓದಿ: ನೀರಿನ ಅಭಾವ: ಟಾಯ್ಲೆಟ್​ ನೀರನ್ನು ಕುಡಿಯುತ್ತಿದ್ದಾರೆ ಈ ದೇಶದ ಜನರು..!

ನಾಯಿ ಹಾಗೂ ಬೆಕ್ಕಿನ ಜತೆಗೆ ಈ ಸಾಲಿನಲ್ಲಿ ಕೋಳಿ ಕೂಡ ಇದೆ ಎಂದರೆ ನೀವು ನಂಬುತ್ತೀರಾ? ಹೌದು, ಶ್ರೀಮಂತ ಜೀವಿಯ ಸಾಲಿನಲ್ಲಿ ಗಿಗೂ ಹೆಸರಿನ ಕೋಳಿ ಕೂಡ ಇದೆ. ಮೈಲ್ಸ್​ ಬ್ಲ್ಯಾಕ್​ವೆಲ್​ ಎಂಬುವವರು ಇದನ್ನು ಸಾಕಿದ್ದರು. ಸಾಯುವುದಕ್ಕೂ ಮೊದಲು ಈ ಕೋಳಿ ಹೆಸರಿನಲ್ಲಿ 123 ಕೋಟಿ ರೂ. ಬರೆದಿಟ್ಟಿದ್ದರು. 

First published:November 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...